Gangrape Update: ಹೆಣ್ಮಕ್ಕಳ ಶೋಷಣೆ ಮಾಡಿ ಕಾಮುಕರು ಎಷ್ಟು ಸಂಪಾದಿಸುತ್ತಿದ್ರು ಗೊತ್ತಾ? ಕೇಳಿ ಪೊಲೀಸರೇ ಶಾಕ್ !

ಅತ್ಯಾಚಾರ ಪ್ರಕರಣದ ಆರೋಪಿಗಳು ಹೆಣ್ಮಕ್ಕಳ ಶೋಷಣೆ ಮಾಡುವುದರ ಜೊತೆಗೆ, ಮಾಂಸ ದಂಧೆಯನ್ನು ಮಾಡುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರು, ಹೈದ್ರಾಬಾದ್ ಹಾಗೂ ಕೇರಳದಲ್ಲಿ ಮಾಂಸ ದಂಧೆಯನ್ನು ವಿಸ್ತರಿಸಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣದ ಆರೋಪಿಗಳು

ಪ್ರಕರಣದ ಆರೋಪಿಗಳು

 • Share this:
  ಬೆಂಗಳೂರು(ಜೂ.04): ಬಾಂಗ್ಲಾ ಯುವತಿ ಮೇಲಿನ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುರಿತಾಗಿ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ವಿಚಾರಣೆ ವೇಳೆ ಆರೋಪಿಗಳು ಹೇಳಿದ ಮಾತು ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಗಳು ಹೆಣ್ಮಕ್ಕಳ ಶೋಷಣೆ ಮಾಡುವುದರ ಜೊತೆಗೆ, ಮಾಂಸ ದಂಧೆಯನ್ನು ಮಾಡುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರು, ಹೈದ್ರಾಬಾದ್ ಹಾಗೂ ಕೇರಳದಲ್ಲಿ ಮಾಂಸ ದಂಧೆಯನ್ನು ವಿಸ್ತರಿಸಿದ್ದರು ಎಂದು ತಿಳಿದು ಬಂದಿದೆ. ಮಾನವ ಕಳ್ಳ ಸಾಗಾಣಿಕೆ ಜೊತೆಗೆ ಮಾಂಸ ದಂಧೆಯನ್ನೂ ಮಾಡುತ್ತಿದ್ದ ಆರೋಪಿಗಳು ಇನ್ನೂ ಯಾವ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೋ ಎಂದು ಬಾಯಿ ಬಿಡಿಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  ಇಷ್ಟು ಮಾತ್ರವಲ್ಲೇ ತನಿಖೆ ವೇಳೆ ಆರೋಪಿಗಳ ಆದಾಯವೂ ಬಯಲಾಗಿದೆ. ಈ ಕಾಮುಕರ ಆದಾಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹೆಣ್ಮಕ್ಕಳ ಶೋಷಣೆ ಮಾಡಿ ದಿನಕ್ಕೆ ಏನಿಲ್ಲವೆಂದರೂ ಲಕ್ಷ-ಲಕ್ಷ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಆರೋಪಿಗಳು ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಕಲಿ ಮಾಹಿತಿ ನೀಡಿ ಆಧಾರ್ ಕಾರ್ಡ್​​ ಕೂಡ ಪಡೆದಿದ್ದರು.

  ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್ ! ಬಂಗಾರದ ಬೆಲೆ ಇವತ್ತು ಜಾಸ್ತಿ ಆಗಿಲ್ಲ

  ಬುಧವಾರ ಪ್ರಕರಣದ ಪ್ರಮುಖ ಆರೋಪಿ ಶಬೂಜ್​ ಮೇಲೆ ಬೆಂಗಳೂರು ಪೊಲೀಸರು ಫೈರಿಂಗ್​ ನಡೆಸಿದ್ದರು. ಈತ ಯುವತಿ ಮೇಲೆ ಕ್ರೂರವಾಗಿ ದೌರ್ಜನ್ಯವೆಸಗಿ ಬಳಿಕ ತಲೆಮರೆಸಿಕೊಂಡಿದ್ದ. ಆತ ಚಿಂದಿ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ, ಆತನನ್ನು ಪೊಲೀಸ್ ಜೀಪ್​ನಲ್ಲಿ ಕೂರಿಸಿಕೊಂಡಾಗ ಅರ್ಜೆಂಟಾಗಿ ಮೂತ್ರ ವಿಸರ್ಜನೆ ಮಾಡಬೇಕೆಂದು ಕತೆ ಕಟ್ಟಿದ್ದ. ಜೀಪ್ ನಿಲ್ಲಿಸದಿದ್ದರೆ ಗಾಡಿಯೊಳಗೇ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರಿಂದ ಜೀಪ್ ನಿಲ್ಲಿಸಲಾಗಿತ್ತು.

  ಆದರೆ, ಜೀಪಿನಿಂದ ಇಳಿದ ನಂತರ ಹೈಡ್ರಾಮಾ ಶುರು ಮಾಡಿದ ಆರೋಪಿ ಶೂಬೂಜ್ ತನ್ನ ಬಳಿಯೇ ಒಂದು ಚಾಕು ಇಟ್ಟುಕೊಂಡಿದ್ದ. ಜೀಪ್​ನಿಂದ ಕೆಳಗೆ ಇಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಹೆಡ್ ಕಾನ್ಸ್​ಟೇಬಲ್ ದೇವೇಂದರ್ ನಾಯಕ್ ಮತ್ತು ಸಬ್ ಇನ್​ಸ್ಪೆಕ್ಟರ್ ಶಿವರಾಜ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ನೋಡಿದ್ದ. ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯವಾಗಿತ್ತು. ಹೀಗಾಗಿ, ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್ಐ ಶಿವರಾಜ್ ಬಳಿಕ ಆರೋಪಿ ಶೂಬೂಜ್​ನ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

  ಇದನ್ನೂ ಓದಿ:Morning Digest: ಬಿಎಸ್​ವೈ ಕುರ್ಚಿ ಸದ್ಯಕ್ಕೆ ಸೇಫ್?, SSLC, PUC ಪರೀಕ್ಷೆ ಬಗ್ಗೆ ಇಂದು ನಿರ್ಧಾರ; ಪ್ರಮುಖ ಸುದ್ದಿಗಳತ್ತ ಒಂದು ನೋಟ

  ಮಂಗಳವಾರ ಈ ಗ್ಯಾಂಗ್​ರೇಪ್​ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈಗೆ ಪರಾರಿಯಾಗಿದ್ದ ಆರೋಪಿಗಳು ಘಟನೆ ನಡೆದ ದಿನ ಸ್ಥಳದಲ್ಲೇ ಇದ್ದು ಅತ್ಯಾಚಾರಕ್ಕೆ ಪ್ರಚೋದನೆ ಕೊಟ್ಟಿದ್ದರು. ಅವರನ್ನು ರಾಮಮೂರ್ತಿನಗರದ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮೂವರು ಆರೋಪಿಗಳು ಚೆನ್ನೈಗೆ ಪಲಾಯನ ಮಾಡಿದ್ದರು.ಮೂವರು ಆರೋಪಿಗಳು ಬಾಂಗ್ಲಾ ದೇಶದವರಾಗಿದ್ದು, ಭಾರತದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ. ಈ ಆರೋಪಿಗಳು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಲಭಿಸಿದೆ. ಈ ಪ್ರಮುಖ ಆರೋಪಿಗಳು ಬೆಂಗಳೂರಿನಿಂದ ಕಾಲ್ಕಿತ್ತಿದ್ದು, ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದರು.

  ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದ ಬಳಿಕ ಬೃಹತ್ ಮಾನವ ಕಳ್ಳಸಾಗಣೆಯ ವಿಚಾರವೂ ಪತ್ತೆಯಾಗಿದೆ. ವೀಸಾ, ಪಾಸ್​ಪೋರ್ಟ್​ ಇಲ್ಲದೆ ಯುವತಿಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿದ್ದಾರೆ.

  ಆರೋಪಿಗಳು ಯುವತಿ ಮೇಲಿನ ದ್ವೇಷಕ್ಕೆ ಆಕೆಯ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಚಿತ್ರೀಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದಲೂ ವಿಡಿಯೋ ಕುರಿತಾಗಿ ತನಿಖೆ ನಡೆದಿತ್ತು. ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನು ಪತ್ತೆ ಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಮಾಹಿತಿ ನೀಡಿದ್ದರು.
  Published by:Latha CG
  First published: