Fraud Case: ಗಂಡ ಸತ್ತ ಮೇಲೆ ಖತರ್ನಾಕ್​​ ಐಡಿಯಾ ಮಾಡಿ ₹3 ಕೋಟಿ ಪಡೆದ ಹೆಂಡತಿ.. ಮುಂದೇನಾಯ್ತು?

ಸುಪ್ರಿಯಾ ತನ್ನ ಗಂಡ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಮಾ ಕಂಪನಿಗೆ ದಾಖಲೆ ಸಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ಮಹಿಳೆಯೊಬ್ಬಳು (Women) ಮೃತಪಟ್ಟ (Dead) ಗಂಡನ (Husband) ವಿಮಾ ಪಾಲಿಸಿಯ (Insurance Policy) ನಕಲಿ ( Duplicate) ದಾಖಲೆಯನ್ನು(Record) ಸೃಷ್ಟಿಸಿ, ಮೂರು ಕೋಟಿ ರೂಪಾಯಿ ವಿಮೆ ಕ್ಲೈಮ್ (Claim) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯ ಗಂಡ ತನಗಿದ್ದ ಕಾಯಿಲೆಯನ್ನು ಮುಚ್ಚಿಟ್ಟು ನಕಲಿ ದಾಖಲೆ ಸೃಷ್ಟಿಸಿ ಮೊದಲು ವಿಮಾ ಪಾಲಿಸಿ ಪಡೆದಿದ್ದ. ಗಂಡ ಸತ್ತ ನಂತರ ಪತ್ನಿ ಮತ್ತೆ ನಕಲಿ ದಾಖಲೆಯನ್ನು ನೀಡಿ ಬರೋಬ್ಬರಿ 3 ಕೋಟಿ ರೂ. ವಿಮೆ ಕ್ಲೈಮ್ ಮಾಡಿದ್ದಾಳೆ. ಈ ವಿಷಯ ಕಂಡು ಬಂದ ನಂತರ ಆರೋಪಿ ಪತ್ನಿಯ ವಿರುದ್ದ ಇನ್ಶ್ಯೂರೆನ್ಸ್ ಕಂಪನಿಯು ಕೋರಮಂಗಲ ಠಾಣೆಯಲ್ಲಿ ಎಫ್ ಐ ಆರ್ (FIR) ದಾಖಲು (Registered) ಮಾಡಿದೆ.

  ಆನ್​ ಲೈನ್ ನಲ್ಲಿ ಡೆತ್ ಕ್ಲೈಮ್ ಮಾಡಿದ್ದ ಪತ್ನಿ ಸುಪ್ರಿಯಾ

  ಮೃತ ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವವರು ಟಾಟಾ ಎ ಐ ಎ ಲೈಫ್​ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕ 51,777 ರೂ. ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮೊದಲೇ ಕೃಷ್ಣ ಪ್ರಸಾದ್ ತೀರಿ ಹೋದರು. ವಿಮೆಯ ನಾಮಿನಿಯನ್ನು ಕೃಷ್ಣ ಪ್ರಸಾದ್ ತಮ್ಮ ಪತ್ನಿ ಸುಪ್ರಿಯಾ ಅವರ ಹೆಸರಿಗೆ ಮಾಡಿಸಿದ್ದರು. ಈ ಬಾಬತ್ತಿನಲ್ಲಿ ಕೃಷ್ಣ ಪ್ರಸಾದ್ ಪತ್ನಿ ಸುಪ್ರಿಯಾ ಆನ್​ ಲೈನ್ ನಲ್ಲಿ ಡೆತ್ ಕ್ಲೈಮ್ ಮಾಡಿದ್ದರು. ಇನ್ಸ್ಯೂರೆನ್ಸ್ ಕಂಪನಿ‌ಯೂ ಮೂರು ಕೋಟಿ ರೂಪಾಯಿ ಹಣವನ್ನ ಸುಪ್ರಿಯಾ ಖಾತೆಗೆ ವರ್ಗಾವಣೆ ಮಾಡಿತ್ತು.

  ಇದನ್ನೂ ಓದಿ: ಐವರ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್​; ತಂಗಿಯ ಗಂಡನ ಮೋಹಕ್ಕೆ ಬಿದ್ದ ಅಕ್ಕನಿಂದಲೇ ಕೃತ್ಯ


  ಪತಿ ಹೃದಯಾಘಾತದಿಂದ ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಟಿ

  ಸುಪ್ರಿಯಾ ತಮ್ಮ ಗಂಡ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಮಾ ಕಂಪನಿಗೆ ದಾಖಲೆ ಸಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗುವುದಿಲ್ಲ. ಈ ವಿಷಯ ಗೊತ್ತಿದ್ದ ಸುಪ್ರಿಯಾ ತನ್ನ ಪತಿ ಕೃಷ್ಣ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ನಂತರ ಸುಳ್ಳು ದಾಖಲೆಗಳನ್ನು ನೀಡಿ ಸುಪ್ರಿಯಾ ವಿಮೆ ಕ್ಲೈಮ್ ಮಾಡಿರುವುದು ಗೊತ್ತಾಗಿದೆ.

  ಸುಪ್ರಿಯಾ ವಿರುದ್ಧ ಎಫ್ ಐ ಆರ್ ದಾಖಲು

  ವಿಷಯ ಕಂಡು ಬಂದ ಬಳೀಕ ಖಾಸಗಿ ವಿಮಾ ಕಂಪನಿ ಕಾನೂನು ವ್ಯವಸ್ಥಾಪಕ ಪಿ.ಎಸ್.ಗಣಪತಿ ಎಂಬುವವರು ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸುಪ್ರಿಯಾ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇನ್ನು ಬೆಂಗಳೂರಿನ ವಿಟ್ಟಸಂದ್ರದ ಅಪಾರ್ಟ್ ಮೆಂಟ್ ನಲ್ಲಿ ಮೃತ ಕೃಷ್ಣ ಪ್ರಸಾದ್ ನೆಲೆಸಿದ್ದರು. ಕೃಷ್ಣ ಪ್ರಸಾದ್ ತಾನು ಆಂಧ್ರಪ್ರದೇಶದ ಪ್ರತಿಷ್ಠಿತ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ವಿಮೆ ಕಂಪನಿಗ ತಿಳಿಸಿದ್ದ. ಕಳೆದ ವರ್ಷ ಮಾ. 3ರಂದು ಆನ್ ಲೈನ್ ನಲ್ಲಿ ಮಹಾ ರಕ್ಷ ಸುಪ್ರೀಂ ಪಾಲಿಸಿಗೆ ಅರ್ಜಿ ಸಲ್ಲಿಸಿ, ಫೋಟೋ, ಪ್ಯಾನ್, ಆಧಾರ್ ಮತ್ತು 3 ತಿಂಗಳ ವೇತನ ಪ್ರಮಾಣ, ವೈದ್ಯಕೀಯ ಪ್ರಮಾಣ ಪತ್ರವನ್ನೂ ನೀಡಿದ್ದ.

  ಇದನ್ನೂ ಓದಿ: ರಾತ್ರೋರಾತ್ರಿ ಇತಿಹಾಸದ ಪುಟ ಸೇರಿದ ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ

  ದಾಖಲೆ ಪರಿಶೀಲನೆ ನಂತರ ವಿಮಾ ಕಂಪನಿ ಮಾ.5 2021ರಲ್ಲಿ ಕೃಷ್ಣಪ್ರಸಾದ್  ಗೆಪಾಲಿಸಿ ನೀಡಿತ್ತು. ಅದರಂತೆ ವಾರ್ಷಿಕ ಪ್ರೀಮಿಯಂ 51, 777 ರೂ., ಪಾಲಿಸಿ, 28 ವರ್ಷದ ಅವಧಿಗೆ 3 ಕೋಟಿ ಆಗುತ್ತಿತ್ತು. 12 ವರ್ಷ ಪ್ರೀಮಿಯಂ ಪಾವತಿ ಮಾಡಬೇಕಿತ್ತು. ಕೃಷ್ಣ ಪ್ರಸಾದ್ ನಿಧನದ ನಂತರ ಸುಪ್ರಿಯಾ  ತನ್ನ ಪತಿ ಕೃಷ್ಣ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಕಲಿ ದಾಖಲೆಗಳನ್ನು ನೀಡಿ ಸುಪ್ರಿಯಾ ವಿಮೆ ಕ್ಲೈಮ್ ಮಾಡಿದ್ದರು. ಈಗ ಸುಪ್ರಿಯಾಗಾಗಿ ಕೋರಮಂಗಲ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
  Published by:renukadariyannavar
  First published: