ಬೆಂಗಳೂರು ನಗರದಲ್ಲಿ ‌ಲಸಿಕೆ ಕೊರತೆ:  ಐದಾರು ದಿನ ಕಾದರೂ ಸಿಗ್ತಿಲ್ಲ ವಾಕ್ಸಿನ್​

ಸದ್ಯ ನಗರದಲ್ಲಿ ಮೈಕ್ರೋ ಕಂಟೈನ್ಮೆಟ್ ‌ಝೋನ್‌ಗಳ ಸಂಖ್ಯೆ ಶತಕ ದಾಟಿದ್ದು ಸೋಂಕು ಹೆಚ್ಚಳವಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು (ಜು. 30 ): ಕೊರೋನಾ ಎರಡನೇ ಅಲೆ ಸೋಂಕು ತಗ್ಗಿತು ಎನ್ನುವ ಹೊತ್ತಿನಲ್ಲೇ ರೆ ಇದೀಗ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಭೀತಿ‌ ಹುಟ್ಟಿಸಿದೆ. ಜೊತೆಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಇದರ ನಡುವೆ ಮೂರನೇ ಅಲೆಗೂ ಮುಂಚಿತವಾಗಿ ನಗರದ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ಕೊಟ್ಟು ಮುಗಿಸುವ ಪಣ ತೊಟ್ಟಿದ್ದ ಬಿಬಿಎಂಪಿ ಗುರಿಯೂ ವಿಫಲವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಹಲವು ಲಸಿಕಾ ಕೇಂದ್ರಗಳಲ್ಲಿ ಸರತಿ ಸಾಲು ಸಾಮಾನ್ಯವಾಗಿ ಹೋಗಿದೆ.

ನೆರೆಯ ರಾಜ್ಯಗಳಾದ ಕೇರಳ,‌ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನಲೆ ರಾಜ್ಯದಲ್ಲೂ ಕೂಡ ಆತಂಕ ಮನೆ ಮಾಡಿದೆ. ಈಗಾಗಲೇ ದಕ್ಷಿಣ ಕನ್ನಡ, ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡು ಬಂದಿದೆ,  ಮೂರನೇ ಅಲೆಯ ಭೀತಿಯೂ ಸಿಲಿಕಾನ್ ಸಿಟಿಗಿದೆ. ಇದರ ನಡುವೆ ಲಸಿಕೆ ನೀಡುವ  ಯೋಜನೆ ಹಾಕಿಕೊಂಡಿದ್ದ ಬಿಬಿಎಂಪಿಗೆ ಈಗ ಹಿನ್ನಡೆಯಾಗಿದೆ. ಸದ್ಯ ನಗರದಲ್ಲಿ ಮೈಕ್ರೋ ಕಂಟೈನ್ಮೆಟ್ ‌ಝೋನ್‌ಗಳ ಸಂಖ್ಯೆ ಶತಕ ದಾಟಿದ್ದು ಸೋಂಕು ಹೆಚ್ಚಳವಾಗುತ್ತಿರುವುದು ದಿಟವಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ನಗರದಲ್ಲಿ ಲಸಿಕೆಗೆ ಹಾಹಾಕಾರ ಉಂಟಾಗಿದೆ.‌ ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ನಗರದ ಕೆಸಿ‌ ಜನರಲ್ ಆಸ್ಪತ್ರೆಯ ಲಸಿಕೆ ಹಂಚಿಕಾ‌ ಕೇಂದ್ರದಲ್ಲಿ ಜನ ಜಾತ್ರೆ ಇತ್ತು.‌ ಬೆಳಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತುಕೊಂಡು ಜನರು ಲಸಿಕೆಗಾಗಿ ಕಾಯುತ್ತಿದ್ದರು. ಸತತ 4 ಗಂಟೆಯಿಂದ ಉರಿ ಬಸಿಲಿನಲ್ಲಿ ವ್ಯಾಕ್ಸಿನ್ ಗಾಗಿ ಜನರು ಕಾದು ನಿಂತಿದ್ದರು. ಈ ಹಿಂದೆಯೇ ಪಾಲಿಕೆ, ಕೇಂದ್ರ ಸರ್ಕಾರದಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಲಭಿಸುತ್ತಿಲ್ಲ ಎಂದಿತ್ತು. ಪಾಲಿಕೆ ಲಸಿಕೆ ಅಭಾವ ಎದುರಿಸುತ್ತಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇರವಾಗೇ‌ ಒಪ್ಪಿಕೊಂಡಿದ್ದರು. ಇದೀಗ ಅದೇ ಪಾಡು ನಗರದಲ್ಲಿ ‌ಮುಂದುವರೆದಿದೆ. ಈ ಬಗ್ಗೆ ಕೆಸಿ ಜನರಲ್ ಲಸಿಕಾ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಸತತ ಐದು ದಿನಗಳಿಂದ ಓಡಾಡುತ್ತಿರುವ ಒಬ್ಬ ಮಹಿಳೆ ಲಸಿಕೆ ಸಿಗದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಸೋಂಕು; ಕೇರಳ ಗಡಿಯಲ್ಲಿ ಬಿಗಿ ಕ್ರಮ

ಕಳೆದ ಐದು ದಿನದಲ್ಲಿ ನಗರದಲ್ಲಾದ ವ್ಯಾಕ್ಸಿನೇಷನ್‌ ವಿವರ

24/07/21-67,428
25/07/21- 32,807
26/07/21- 44,226
27/07/21- 54,903
28/07/21- 39,171

ನಗರದಲ್ಲಿ ಈವರೆಗೆ ಒಟ್ಟು ಮೊದಲ‌ ಡೋಸ್ ಪಡೆದವರು

18-44 : 29,95,505
44 ಪ್ಲಸ್ :  20,78,718
ಒಟ್ಟು : 50,74,223

ನಗರದಲ್ಲಿ ಈವರೆಗೆ ಒಟ್ಟು ಎರಡನೇ ಡೋಸ್ ಪಡೆದವರು

18 - 44 : 2,70,037
44 ಪ್ಲಸ್ : 10,31,537
ಒಟ್ಟು : 13,01,574

ಒಟ್ಟಾರೆಯಾಗಿ ನಗರದಲ್ಲಿ ದಿನದಿಂದ ದಿ‌ನಕ್ಕೆ ಲಸಿಕೆ‌ ಕೊರತೆ ಹೆಚ್ಚಾಗುತ್ತಿದೆ. ಇದಕ್ಕೆ ನಿದರ್ಶನದಂತೆ ಕೆಸಿ‌ ಜನರಲ್ ಆಸ್ಪತ್ರೆ ಮುಂಭಾಗದಲ್ಲಿ ಸರತಿ‌ ಸಾಲಲ್ಲಿ ಲಸಿಕೆಗಾಗಿ ನಿಂತಿರುವ ಜನ ಪರದಾಡುತ್ತಿದ್ದಾರೆ. ಕೇವಲ‌ ಕೆಸಿ ಜನರಲ್ ಮಾತ್ರವಲ್ಲ ಲಸಿಕೆಗಾಗಿ ಈ ರೀತಿಯ ಸರತಿ ಸಾಲುಗಳು ನಗರದ ಬಹುತೇಕ‌ ಲಸಿಕಾ ಕೇಂದ್ರಗಳಲ್ಲಿ ಕಾಣಬಹುದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: