HOME » NEWS » State » BENGALURU URBAN COVID INFECTED MAN COMMITTED SUICIDE IN BANGALORE VICTORIA HOSPITAL SESR

ಕೋವಿಡ್​ ಭಯ: ವಿಕ್ಟೋರಿಯಾ ಆಸ್ಪತ್ರೆ ಕಟ್ಟಡದಿಂದ ಜಿಗಿದು ಸೋಂಕಿತ ಯುವಕ ಆತ್ಮಹತ್ಯೆ

ಸೋಂಕಿಗೆ ತುತ್ತಾಗಿದ್ದ ಯುವಕ ಕಳೆದ ಮೂರುದಿನಗಳ ಹಿಂದೆ ವಿಕ್ಟೋರಿಯಾ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ.

news18-kannada
Updated:April 28, 2021, 4:51 PM IST
ಕೋವಿಡ್​ ಭಯ: ವಿಕ್ಟೋರಿಯಾ ಆಸ್ಪತ್ರೆ ಕಟ್ಟಡದಿಂದ ಜಿಗಿದು ಸೋಂಕಿತ ಯುವಕ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 28): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊರ್ವ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವರ್ಷ ಕುಮಾರ್​ ಎಂಬ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಂಕಿಗೆ ತುತ್ತಾಗಿದ್ದ ಯುವಕ ಕಳೆದ ಮೂರುದಿನಗಳ ಹಿಂದೆ ವಿಕ್ಟೋರಿಯಾ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ಮಧ್ಯಾಹ್ನ ಈತ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿವಿ ಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಕೊರೋನಾ ಸೋಕು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಹಿನ್ನಲೆ ಅನೇಕ ಸೋಂಕಿತರು ಆತ್ಮಹತ್ಯೆ ಪ್ರಯತ್ನ ನಡೆಸುತ್ತಿದ್ದಾರೆ. ನಿನ್ನೆ ಅಂದರೆ ಏ. 27 ಮಂಗಳವಾರದಂದು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೀಮಪ್ಪ ಯಲ್ಲಪ್ಪ ಕಮತರ ಎಂಬ 67 ವರ್ಷದ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋಂಕು ದೃಢವಾದ ಹಿನ್ನಲೆ ಅವರು ತಾವಿದ್ದ ವಾರ್ಡ್​ನ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

Youtube Video

ಕಳೆದೆರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೂಡ ಜಯಕುಮಾರ್​ ಎಂಬ 48 ವರ್ಷದ ಸೋಂಕಿತರು ಮನನೊಂದು ಆಸ್ಪತ್ರೆಯ ಹೊರಗಿನ ಮರಕ್ಕೆ ತಮ್ಮ ಲುಂಗಿಯಿಂದಲೇ ನೇಣು ಹಾಕಿಕೊಂಡಿದ್ದರು.
Published by: Seema R
First published: April 28, 2021, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories