ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಪೋಷಕರ ಕಾಟ: 4 ತಿಂಗಳ ಹಿಂದೆ ವಿವಾಹವಾಗಿದ್ದವರ ದುರಂತ ಅಂತ್ಯ!

ರೋಸಿ ಹೋದ ಹರ್ಷಿತಾ ಪ್ರೀತಿಸಿ ಮದುವೆಯಾದ ಪುನೀತ್​ ಬಗ್ಗೆಯೂ ಯೋಚನೆ ಮಾಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುನೀತ್​ ಆಕೆಯನ್ನೇ ಹಿಂಬಾಲಿಸಿದ್ದಾನೆ.

ಪುನೀತ್​-ಹರ್ಷಿತಾ

ಪುನೀತ್​-ಹರ್ಷಿತಾ

 • Share this:
  ಬೆಂಗಳೂರು: ಅವರಿಬ್ಬರದ್ದು 6 ವರ್ಷಗಳ ಒಲವು. ಒಬ್ಬರನ್ನೊಬ್ಬರು 6 ವರ್ಷಗಳ ಕಾಲ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿದ್ದರು. ಜೊತೆಯಾಗಿ ಜೀವನವನ್ನು ಕಳೆಯಲು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಜೋಡಿಯಕ್ಕಿ ಆಸೆಗಳೆಲ್ಲಾ ನೇಣಿನ ಕುಣಿಕೆಯಲ್ಲಿ ಕೊನೆಯಾಗಿದೆ. ಈ ದುರಂತ ಪ್ರೇಮ ಕಥೆಯ ನಾಯಕ ಮಾಗಡಿ ಚೆನ್ನೇನಹಳ್ಳಿ ನಿವಾಸಿ ಪುನೀತ್(21)​, ದುರಂತ ನಾಯಕಿ ಅದೇ ಗ್ರಾಮದ ಹರ್ಷಿತಾ(19). ಆರು ವರ್ಷಗಳ ಹಿಂದೆ ಅಂದರೆ ಹರ್ಷಿತಾಗಿನ್ನೂ 13 ವರ್ಷದ ಹರೆಯ. ಪುನೀತ್​ಗೆ ಜಸ್ಟ್​​ 15 ವರ್ಷವಷ್ಟೇ. ಆಡುವ ವಯಸ್ಸಲ್ಲಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದರು.

  ಆಗಷ್ಟೇ ಹರೆಯದ ಹುಚ್ಚು ಆಸೆಗಳು ಗರಿಗೆದುರುವಾಗ ಹರ್ಷಿತಾ, ಪುನೀತ್​ ಮದುವೆಯ ಕನಸು ಕಂಡಿದ್ದರು. ವರ್ಷಗಳು ಉರುಳಿ ಹರ್ಷಿತಾಗೆ 18 ವರ್ಷ ತುಂಬುತ್ತಲೇ ಪ್ರೀತಿಯ ವಿಷಯವನ್ನು ಮನೆಯವರಿಗೆ ಹೇಳಿದ್ದಾರೆ. ಆದರೆ ಪೋಷಕರು ಸುತರಾಮ್​​  ಒಪ್ಪಿಲ್ಲ. ಪ್ರೀತಿ-ಗೀತಿ ಏನು ಬೇಡ ಎಂದು ವಿರೋಧಿಸಿದ್ದಾರೆ. ಒಪ್ಪಿಸಿ ಮದುವೆಯಾಗಲು ಬಯಸಿದ್ದ ಹರ್ಷಿತಾ, ಪುನೀತ್​ ಪೋಷಕರನ್ನು ಬೇಡಿಕೊಂಡಿದ್ದರು. ಆದರೆ ಹರ್ಷಿತಾ ಮನೆಯವರ ಮನಸ್ಸು ಕರಗಲೇ ಇಲ್ಲ.

  ಹೀಗೆ ಸಮಯ ಕಳೆದರೆ ಪ್ರಯೋಜವಿಲ್ಲ ಅಂದುಕೊಂಡ ಪ್ರೇಮಿಗಳಿಬ್ಬರು 4 ತಿಂಗಳುಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿ ಬಿಟ್ಟರು. ಚೂಡಿದಾರ ಧರಿಸಿಯೇ ತಾಳಿಗೆ ಹರ್ಷಿತಾ ಕೊರಳೊಡ್ಡಿದ್ದಳು. ಏಳೇಳು ಜನ್ಮ ಜೊತೆಯಾಗಿ ಇರುವುದಾಗಿ ಆಣೆ ಮಾಡಿಕೊಂಡಿದ್ದರು. ಆದರೆ ಮದುವೆ ಆಗುವಾಗ ಇದ್ದ ಧೈರ್ಯ ನಾಲ್ಕೇ ತಿಂಗಳಿಗೆ ಮರೆಯಾಗಿತ್ತು. ಮದುವೆಯಾಗಿ ಹೋದ ಮಗಳನ್ನು ಪೋಷಕರು ಬಿಡದೇ ಕಾಡಿದ್ದಾರೆ. ಅದೇನು ಕಾಟ ಕೊಟ್ಟಿದ್ದಾರೋ ಗೊತ್ತಿಲ್ಲ.

  ಇದನ್ನೂ ಓದಿ: ರಾತ್ರಿ ಇಡೀ ಗಂಡ ಹೇಗೆಲ್ಲಾ ಕಾಟ ಕೊಡ್ತಾನೆ ಅಂತ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ!

  ರೋಸಿ ಹೋದ ಹರ್ಷಿತಾ ಪ್ರೀತಿಸಿ ಮದುವೆಯಾದ ಪುನೀತ್​ ಬಗ್ಗೆಯೂ ಯೋಚನೆ ಮಾಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೋಹಳ್ಳಿಯಲ್ಲಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಡೆತ್​​ನೋಟ್​ ಬರೆದಿರುವ ಹರ್ಷಿತಾ, ಮನೆಯವರ ಕಿರುಕುಳ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.

  ಮನೆಗೆ ಬಂದ ಪುನೀತ್​​ಗೆ ಕಂಡಿದ್ದು ನೇತಾಡುತ್ತಿದ್ದ ಹರ್ಷಿತಾಳ ದೇಹ. ಕೂಡಲೇ ಸ್ಥಳೀಯರ ಸಹಾಯದಿಂದ ಹರ್ಷಿತಾನ ಆಸ್ಪತ್ರೆಗೆ ಸಾಗಿಸಿದ್ದ ಪುನೀತ್. ಆದರೆ ಪ್ರಯೋಜನವಾಗಿಲ್ಲ, ಅಷ್ಟರಲ್ಲಿ ಆಗಲೇ ಹರ್ಷಿತಾ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹರ್ಷಿತಾ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

  ಶವವಾಗಿ ಮಲಗಿದ್ದ ಪ್ರೀತಿಯನ್ನು ನೋಡಿದ್ದೇ ತಡ ಪುನೀತ್​​ ನೇರವಾಗಿ ಮನೆಗೆ ಬಂದಿದ್ದಾನೆ. ಹರ್ಷಿತಾಳನ್ನೇ ಹಿಂಬಾಲಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಪುನೀತ್ ಪತ್ನಿಯ ಸಾವಿನ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಡರಹಳ್ಳಿ  ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಇನ್ನು ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ  1,86,364 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,75,55,457ಕ್ಕೆ ಏರಿಕೆ ಆಗಿದೆ.‌ ಗುರುವಾರ 3,660 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,18,895ಕ್ಕೆ ಏರಿಕೆ ಆಗಿದೆ. ಈವರೆಗೆ 2,48,93,410 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 23,43,152 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ.‌ ಈವರೆಗೆ 20,57,20,660 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: