ಆನೇಕಲ್ (ಜೂ. 17): ಫೇಸ್ಬುಕ್ ಮೂಲಕ ಪರಿಚಿತವಾದ ವಿವಾಹಿತ ಮಹಿಳೆಯೊಬ್ಬರಿಗೆ ತಾನು ಗ್ರಾಮ ಪಂಚಾಯತಿ ಸದಸ್ಯ ನಿಮಗೆ ಏನು ಬೇಕಾದರೂ ಸಹಾಯ ಮಾಡುತ್ತೇನೆ ಎಂದು ಆಮಿಷವೊಡ್ಡಿ ಆಕೆಯನ್ನು ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬಿಲ್ವಾರದಹಳ್ಳಿ ನಿವಾಸಿ ಅಹ್ಮದ್ ಪಾಷ ಮೋಸ ಮಾಡಿದ ಆರೋಪಿಯಾಗಿದ್ದಾನೆ. ಮಹಿಳೆಯರ ಅಸಹಾಯಕತನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಂತ್ರಸ್ತೆಗೆ ಕೆಲದಿನಗಳ ಹಿಂದೆ ಈತ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದು, ಈತನ ಮೋಸದ ಮಾತಿಗೆ ಬಲಿಯಾಗಿದ್ದಾಳೆ ಎಂಬುದು ತಿಳಿದು ಬಂದಿದೆ.
ಏನಿದು ಘಟನೆ?
ಅಹ್ಮದ್ ಪಾಷಾ ಎಂಬಾಂತನಿಗೆ ಕಳೆದ ಕೆಲವು ದಿನಗಳ ಹಿಂದೆ ಫೇಸ್ಬುಕ್ ಮೂಲಕ 30 ವರ್ಷದ ವಿವಾಹಿತ ಮಹಿಳೆ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿದಾಗ ಮಹಿಳೆ ತನಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವುದಾಗಿ ತಿಳಿಸಿದ್ದಾಳೆ. ಈ ವೇಳೆ ಅಹ್ಮದ್ ಪಾಷಾ ತಾನು ಕಾರ್ಪೊರೇಟರ್ ಆಗಿದ್ದು, ನನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಇದೆ. ನಿಮಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೊಡಿಸುತ್ತೇನೆ. ಜೊತೆಗೆ ಅರ್ಥಿಕವಾಗಿ ಸಹಾಯ ಸಹ ಮಾಡುವುದಾಗಿ ಸಂತ್ರಸ್ತ ಮಹಿಳೆಗೆ ಭರವಸೆಗಳನ್ನು ನೀಡಿದ್ದಾನೆ. ಇದರ ನಡುವೆ ಒಮ್ಮೆ ಮನೆಗೆ ಬರುವಂತೆ ಆಹ್ವಾನಿಸಿದ್ದಾನೆ.
ಇವನ ಬಣ್ಣದ ಮಾತುಗಳಿಗೆ ಮರುಳಾದ ನಗರದ ಹೆಬ್ಬಾಳ ನಿವಾಸಿಯಾದ ಸಂತ್ರಸ್ತ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಕಳೆದ ಸೋಮವಾರ ಆರೋಪಿ ಅಹ್ಮದ್ ಪಾಷ ಮನೆಗೆ ಕ್ಯಾಬ್ ಮೂಲಕ ಬರುತ್ತಿರುವುದಾಗಿ ತಿಳಿಸುದ್ದಾಳೆ. ಆದರೆ, ಆರೋಪಿ ಅಹ್ಮದ್ ಕ್ಯಾಬ್ನಲ್ಲಿ ಬರುವುದು ಬೇಡ. ತನ್ನ ಕಾರನ್ನು ಕಳುಹಿಸುವುದಾಗಿ ಹೇಳಿ ಮಾರ್ಗ ಮಧ್ಯೆ ತನ್ನ ಡ್ರೈವರ್ ನನ್ನು ಕಳುಹಿಸಿ ಮನೆಗೆ ಸಂತ್ರಸ್ತೆ ಮತ್ತು ಮಕ್ಕಳನ್ನು ಕರೆಸಿಕೊಂಡಿದ್ದಾನೆ.
ಇದನ್ನು ಓದಿ: ದೇಸಿ ತುಪ್ಪವನ್ನು ಇನ್ನಾದ್ರೂ ತಿನ್ನಿ: ಅಮೆರಿಕವೇ ಕಿವಿಹಿಂಡಿ ಹೇಳುತ್ತಿದೆ!
ಮನೆಗೆ ಬಂದ ಅತಿಥಿಗಳಿಗೆ ಭರ್ಜರಿ ಊಟ ವ್ಯವಸ್ಥೆ ಮಾಡಿದ ಆರೋಪಿ ಮಕ್ಕಳಿಗೆ ಆಟವಾಡಲು ಕಳುಹಿಸಿ, ಸಂತ್ರಸ್ತೆಗೆ ಮನೆ ತೋರಿಸಲು ಒಳಗಡೆ ಕರೆದೊಯ್ಯುತ್ತಾನೆ. ಮನೆ ಒಳಾಂಗಣ ತೋರಿಸುವ ಬದಲು ಸೀದಾ ಬೆಡ್ ರೂಮಿಗೆ ಕರೆದೊಯ್ದ ಆರೋಪಿ ತನ್ನ ಕಾಮತೃಷೆ ಪೂರೈಸುವಂತೆ ಒತ್ತಾಯಿಸುತ್ತಾನೆ. ಜೊತೆಗೆ ನಿನಗೆ ಸಕಲ ರೀತಿಯ ನೆರವು ನೀಡುವುದಾಗಿ ಅಮಿಷವೊಡ್ಡಿದ್ದಾನೆ. ಯಾವುದಕ್ಕೂ ಸಂತ್ರಸ್ತ ಮಹಿಳೆ ಒಪ್ಪದಿದ್ದಾಗ ಗನ್ ತೋರಿಸಿ ಆರೋಪಿ ಅಹ್ಮದ್ ಅತ್ಯಾಚಾರವೆಸಗುತ್ತಾನೆ ಎಂದು ಸಂತ್ರಸ್ತ ಮಹಿಳೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸರು ಆರೋಪಿಗಳಾದ ಅಹ್ಮದ್ ಪಾಷ ಮತ್ತು ಆತನ ಚಾಲಕ ವಾಹದ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದೂರುದಾರ ಮಹಿಳೆ ನನಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾಗಿ ತಿಳಿಸಿದ್ದಾಳೆ.
ಇದನ್ನು ಓದಿ: ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಡಿತ
ಸಂತ್ರಸ್ತೆ, ತನ್ನ ಗಂಡನಿಗೆ ಇಬ್ಬರು ಹೆಂಡತಿಯರು ನಾನು ಎರಡನೇಯವಳು. ನನಗೆ ಇಬ್ಬರು ಮಕ್ಕಳಿದ್ದು, ಬಡತನದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇದ್ದು ಕೆಲಸ ಕೊಡಿಸುವಂತೆ ಕೇಳಿಕೊಂಡಳು. ಜೊತೆಗೆ ಇಬ್ಬರ ನಡುವೆ ಪೋನ್ ಕಾಲ್ ಚಾಟಿಂಗ್ ಮೂಲಕ ಸಲುಗೆ ಬೆಳೆಯಿತು. ಆರೋಪಿ ಸಂತ್ರಸ್ತ ಮಹಿಳೆ ಒಪ್ಪಿಗೆ ಮೇರೆಗೆ ಎಲ್ಲವೂ ನಡೆದಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮಾತ್ರವಲ್ಲದೆ ಸಂತ್ರಸ್ತ ಮಹಿಳೆಯೇ ತನ್ನ ಮೊಬೈಲ್ ಮೂಲಕ ಇಬ್ಬರು ನಗ್ನವಾಗಿರುವ ಪೋಟೋಗಳನ್ನು ತೆಗೆದುಕೊಂಡಿದ್ದಾಳೆ. ಜೊತೆಗೆ ನನ್ನ ಬಳಿಯಿದ್ದ ಡೂಪ್ಲಿಕೇಟ್ ಗನ್ ಸಹ ಆಕೆಯೇ ಹಿಡಿದುಕೊಂಡು ಪೋಟೋ ತೆಗೆದುಕೊಂಡಿದ್ದಾಳೆ. ಬಳಿಕ ಲಕ್ಷಾಂತರ ಹಣ ನೀಡುವಂತೆ ಬೇಡಿಕೆಯಿಟ್ಟಲು. ಆಕೆಯ ಬೇಡಿಕೆಯನ್ನು ನಿರಾಕರಿಸಿದಾಗ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರ ಬಳಿ ಆರೋಪಿ ಅಹ್ಮದ್ ಅವಲತ್ತುಕೊಂಡಿದ್ದಾನೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ