Coronavirus: ಬೆಂಗಳೂರಿನಲ್ಲಿ ಹೆಚ್ಚಾದ ಕೊರೋನಾ ಭೀತಿ; ಮತ್ತಷ್ಟು ಟಫ್ ರೂಲ್ಸ್ ಜಾರಿ? ಬಿಬಿಎಂಪಿ ಚಿಂತನೆ

ರಾಜ್ಯದಲ್ಲಿ ಸೋಮವಾರ(ನಿನ್ನೆ) 673 ಕೊರೊನಾ ಕೇಸ್​​ಗಳು ಪತ್ತೆಯಾಗಿವೆ.  13 ಜನ ಕೊರೋನಾಗೆ ಬಲಿಯಾಗಿದ್ದಾರೆ. 1074 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 214 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಕೊರೋನಾ ವೈರಸ್.

ಕೊರೋನಾ ವೈರಸ್.

 • Share this:
  ಬೆಂಗಳೂರು(ಸೆ.14): ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ(Corona Virus) ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ(Bengaluru) ದಿನೇ ದಿನೇ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆ, ಆತಂಕ ಶುರುವಾಗಿದೆ. ಹೀಗಾಗಿ ನಾಳೆ ಬಿಬಿಎಂಪಿ(BBMP) ವತಿಯಿಂದ ಕೋವಿಡ್ ಟೆಕ್ನಿಕಲ್ ಸಭೆ ನಡೆಯಲಿದೆ. ಶಾಲಾ-ಕಾಲೇಜು ಆರಂಭವಾಗಿರುವ ಹಿನ್ನೆಲೆ, ಹಬ್ಬಗಳನ್ನು ಆಚರಣೆ ಮಾಡಿದ ಹಿನ್ನೆಲೆ, ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಶಂಕೆ ವ್ಯಕ್ತವಾಗಿದೆ.  ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಜೊತೆಗೆ ಮತ್ತಷ್ಟು ಟಫ್​ ರೂಲ್ಸ್​ ಜಾರಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.

  ಬೆಂಗಳೂರಲ್ಲಿ ಮತ್ತೆ ಕೊರೋನಾ ಕಂಟ್ರೋಲ್ ತಪ್ಪುವ ಆತಂಕ ಎದುರಾಗಿದೆ. ನಗರದಲ್ಲಿ ಮತ್ತೆ ಪ್ರತಿಭಟನೆ ರ್ಯಾಲಿಗಳೂ ಆಯೋಜನೆಗೊಳ್ಳುತ್ತಿರುವ ಹಿನ್ನೆಲೆ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿವೆ ಎನ್ನಲಾಗುತ್ತಿದೆ.  ಈ ಹಿನ್ನಲೆ ಬಿಬಿಎಂಗೆ ಟೆನ್ಶನ್ ಶುರುವಾಗಿದೆ.  ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಬಿಬಿಎಂಪಿ ಕೋವಿಡ್ ಟೆಕ್ನಿಕಲ್ ಕಮಿಟಿ ಸಭೆ ನಡೆಸಲಿದೆ.

  ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಾಳೆ ಬಿಬಿಎಂಪಿ ಟೆಕ್ನಿಕಲ್ ಕಮಿಟಿ ಸಭೆ ಸೇರಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ 18 ವರ್ಷ ವಯೋಮಿತಿವರೆಗೆ ಕೊರೋನಾ ಟೆಸ್ಟ್ ಮಾಡಿಸಬೇಕು. ಸಭೆ ಸಮಾರಂಭ ಆಯೋಜನೆಯಿಂದ ಎದುರಾಗುವ ಕೋವಿಡ್ ಆತಂಕದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಈ ಎಲ್ಲಾ ವಿಚಾರವಾಗಿ ಪಾಲಿಕೆಯು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆಯಲಿದೆ.

  ಇದನ್ನೂ ಓದಿ:Corona in Kids: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕೋವಿಡ್‌ ಪ್ರಕರಣಗಳು; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ತಜ್ಞರು..!

  ನಿನ್ನೆ ರಾಜ್ಯದಲ್ಲಿ ಪತ್ತೆಯಾದ ಕೊರೋನಾ ಕೇಸ್

  ರಾಜ್ಯದಲ್ಲಿ ಸೋಮವಾರ(ನಿನ್ನೆ) 673 ಕೊರೊನಾ ಕೇಸ್​​ಗಳು ಪತ್ತೆಯಾಗಿವೆ.  13 ಜನ ಕೊರೋನಾಗೆ ಬಲಿಯಾಗಿದ್ದಾರೆ. 1074 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 214 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 3 ಸಾವು ದಾಖಲಾಗಿವೆ. ಸೋಮವಾರ ಪಾಸಿಟಿವಿಟಿ ದರ 0.56 %ರಷ್ಟಿದೆ.  ಸಾವಿನ ಪ್ರಮಾಣ 1.93 %ರಷ್ಟಿದೆ.

  ನೈಟ್​ ಕರ್ಫ್ಯೂ ಜಾರಿ

  ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​​ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸೆ.27 ರ ಮಧ್ಯರಾತ್ರಿ ವರೆಗೂ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಆದೇಶದಂತೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ.

  ಸೆಕ್ಷನ್ 144 ಜಾರಿ

  ನೈಟ್ ಕರ್ಫ್ಯೂ ಜೊತೆಗೆ 144 ಸೆಕ್ಷನ್ ಸಹ ಜಾರಿ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ 4 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ಮಾತ್ರ 144 ಸೆಕ್ಷನ್ ಗೆ ವಿನಾಯತಿ ನೀಡಲಾಗಿದೆ. ಉಳಿದಂತೆ ಕರ್ಫ್ಯೂ ವೇಳೆ ಅನಾವಶ್ಯಕವಾಗಿ ಓಡಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

  ಇದನ್ನೂ ಓದಿ:Gold Price Today: ಬಂಗಾರ ಕೊಳ್ಳುವವರಿಗೆ ಶುಭಸುದ್ದಿ; ಚಿನ್ನದ ಬೆಲೆ ಕಡಿಮೆಯಾಗಿದೆ ನೋಡಿ..!

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: