• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೋಮ್ ಐಸೋಲೇಷನ್ ಸಾವು ತಡೆಗಟ್ಟಲು ಪಾಲಿಕೆ ಮೆಗಾ ಪ್ಲ್ಯಾನ್; ಕೊರೋನಾ ಸೋಂಕಿತರ ಮನೆ ಬಾಗಿಲಿಗೆ ಬಿಬಿಎಂಪಿಯ MTU ಟೀಂ.!!

ಹೋಮ್ ಐಸೋಲೇಷನ್ ಸಾವು ತಡೆಗಟ್ಟಲು ಪಾಲಿಕೆ ಮೆಗಾ ಪ್ಲ್ಯಾನ್; ಕೊರೋನಾ ಸೋಂಕಿತರ ಮನೆ ಬಾಗಿಲಿಗೆ ಬಿಬಿಎಂಪಿಯ MTU ಟೀಂ.!!

ಬಿಬಿಎಂಪಿ

ಬಿಬಿಎಂಪಿ

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನಸಂಖ್ಯೆ, ವಾರ್ಡ್ ಸಂಖ್ಯೆ, ಆ್ಯಕ್ಟಿವ್ ಪಾಸಿಟಿವ್ ಪ್ರಕರಣ ಆಧರಿಸಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಬೈಲ್ ಟ್ರಯಾಜ್ ಯೂನಿಟ್ ನೇಮಕ ಪಾಲಿಕೆ ನೇಮಕ ಮಾಡಲಿದೆ.

  • Share this:

ಬೆಂಗಳೂರು(ಜು.01): ಹೋಂ ಐಸೂಲೇಷನ್ ಡೆತ್ ರಿಪೋರ್ಟ್ ನಿಂದ ಬಿಬಿಎಂಪಿ ಎಚ್ಚೆತ್ತುಕೊಂಡಂತಿದೆ. ಹೀಗಾಗಿ ಮೂರನೇ ಅಲೆಗೆ ಮುಂಚಿತವಾಗಿ ಪಾಲಿಕೆ 100% ರಷ್ಟು ಟ್ರಯಾಜ್ ಮೊಬೈಲ್ ಟೀಂ ರೆಡಿ ಮಾಡಿಕೊಂಡಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಕಟ್ಟಿ ಹಾಕಲು ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದೆ. 


ಕೊರೋನಾ ಕಂಟ್ರೋಲ್‌ಗಾಗಿ 100% ರಷ್ಟು ಫಿಜಿಕಲ್ ಟ್ರಯಾಜ್ ಟೀಂ ರಚನೆ.!!


ಎರಡನೇ ಅಲೆಯಲ್ಲಿ ಕೊರೋನಾದಿಂದ ಹೋಮ್ ಐಸೋಲೇಷನ್ ಡೆತ್ ಹೆಚ್ಚಾದ ಹಿನ್ನೆಲೆ ಈ ಬಾರಿ ಸಮರ್ಪಕವಾದ ಸೇವೆ ಒದಗಿಸಲು ಪಾಲಿಕೆ ಮೆಗಾ ಪ್ಲ್ಯಾನ್ ಮಾಡಿಕೊಂಡಿದೆ. ಮೊಬೈಲ್ ಟ್ರಯಾಜ್ ಟೀಂ ಅನ್ನು ಬಿಬಿಎಂಪಿ ರಚಿಸಿದೆ. ಈ MTU ಟೀಂ ಖುದ್ದಾಗಿ ಸೋಂಕಿತರನ್ನು ಭೇಟಿ ಮಾಡಿ ಅವರ ಮಾಹಿತಿಯನ್ನು ಪಡೆದುಕೊಳ್ಳಲಿದೆ. ಈ ಮೊದಲು ಫೋನ್ ಮಾಡಿ ಸೋಂಕಿತರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಈ ವೇಳೆ ಆಸ್ಪತ್ರೆ ಸೇರುವ ಭಯದಿಂದ ಸೋಂಕಿತರು ಸುಳ್ಳು ಮಾಹಿತಿ ಕೊಟ್ಟು ಮನೆಯಲ್ಲೇ ಐಸೋಲೇಟ್ ಆಗುತ್ತಿದ್ದರು. ಆದ್ರೆ ಹೀಗೆ ಮಾಡಿ ಪ್ರಾಣ ಕಳೆದುಕೊಂಡವರಿದ್ದಾರೆ. ಹೀಗಾಗಿ ಈ ಬಾರಿ ಇಂಥಾ ಅನಾಹುತಗಳನ್ನು ತಪ್ಪಿಸಲು ಪಾಲಿಕೆ ನೇರವಾಗಿ ಮನೆಗೆ MTU ತಂಡವನ್ನು ಕಳುಹಿಸಲಿದೆ.


MTU ನಲ್ಲಿ ಯಾರ್ಯಾರು ಇರಲಿದ್ದಾರೆ..!? 


- ಇಡೀ ಬೆಂಗಳೂರು ನಗರಕ್ಕೆ ಒಟ್ಟು 1128 ಜನರ ತಂಡ ರಚನೆ


- ಎರಡು ಶಿಫ್ಟ್ ಗಳಲ್ಲಿ ತಲಾ 282 ವೈದ್ಯರು, ಹೌಸ್ ಸರ್ಜನ್ (ಫೈನಲ್ ಇಯರ್ ಮೆಡಿಕಲ್ ಸ್ಟೂಡೆಂಟ್), ನರ್ಸ್ ಗಳು , ಆ್ಯಂಬುಲೆನ್ಸ್ ಚಾಲಕರು ಇರಲಿದ್ದಾರೆ


- ಒಬ್ಬೊಬ್ಬ ವೈದ್ಯರು, ಹೌಸ್ ಸರ್ಜನ್, ನರ್ಸ್, ಆ್ಯಂಬುಲೆನ್ಸ್ ಡ್ರೈವರ್ ಸೇರಿ ನಾಲ್ಕು ಜನರ ಒಂದು ತಂಡ


ಇದನ್ನೂ ಓದಿ:Astrology: ಕನ್ಯಾ ರಾಶಿಯವರಿಗೆ ಹೇಗಿರಲಿದೆ ಈ ದಿನ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ


MTU ಹೇಗೆ ಕೆಲಸ ಮಾಡಲಿದೆ.!?


- ಐಸಿಎಂಆರ್ ಪೋರ್ಟಲ್ ನಲ್ಲಿ ಸೋಂಕು ದೃಢವಾಗುತ್ತಿದ್ದಂತೆ ಆ ಸೋಂಕಿತನ ಮನೆಗೆ ಈ ಟೀಂ ಭೇಟಿ


- ರೋಗ ಲಕ್ಷಣ ಗಮನಿಸಿ ಕ್ಲಿನಿಕಲ್ ಚೆಕ್ ಅಪ್ ಮಾಡಿ ಕೋಮರ್ಬಿಟ್ ಬಗ್ಗೆ ಮಾಹಿತಿ ಪ್ರತ್ಯೇಕವಾಗಿ ಕಲೆ


- ರೋಗಿಗೆ 8 ತರಹದ ಲಕ್ಷಣಗಳು ಇವೆಯಾ ಅಂತ ಮಾಹಿತಿ ಪಡೆಯುವುದು


- ಬಿಪಿ, ಶುಗರ್, ಆಕ್ಸಿಜನ್ ಪ್ರಮಾಣ, ನಾಡಿ ಮಿಡಿತ, ಕೊಮಾರ್ಬಿಟ್, ಪ್ರೆಗ್ನೆನ್ಸಿ, ಡಯಾಬಿಟಿಸ್ ಇವುಗಳ ಬಗ್ಗೆ ಮಾಹಿತಿ ಪಡೆಯುವುದು


ಹೇಗೆ MTU ವ್ಯವಸ್ಥೆ ಪ್ರಯೋಜನಕಾರಿ.!?


- ಸೋಂಕಿತನ ಸ್ಥಿತಿಗತಿ ಬಗ್ಗೆ ಭೌತಿಕವಾಗಿ ಮಾಹಿತಿ ಕಲೆಹಾಕಿ, ನಿಖರ ಮಾಹಿತಿ ಪಡೆಯುವುದು


- ಸೋಂಕಿತನಿಗೆ ಯಾವ ರೀತಿಯ ಬೆಡ್ ಬೇಕು ಎಂದು ನಿರ್ಧರಿಸುವುದು


- ಹೋಂ ಐಸೂಲೇಷನ್ ಸಾಕಾ.? ಕೋವಿಡ್ ಕೇರ್ ಸೆಂಟರ್ ಬೇಕಾ.? ಅಥವಾ ಆಸ್ಪತ್ರೆಗೆ ರವಾನಿಸ ಬೇಕು ಎಂದು ತೀರ್ಮಾನ


- ಈ ಟ್ರಯಾಜ್ ಟೀಂ ರೋಗಿಗೆ ಅಗತ್ಯವಿರುವ ಬೆಡ್ ಯಾವುದು ಎಂದು ನಿಖರವಾಗಿ ನಿರ್ಧಾರ ಮಾಡಲಿದೆ


- ಆಸ್ಪತ್ರೆಯಾದರೆ ICU, HDU, ಆಕ್ಸಿಜನ್ ಬೆಡ್, ನಾರ್ಮಲ್ ಬೆಡ್ ಬೇಕಾ ಎಂದು ನಿರ್ಧಾರ


- ಹೀಗೆ ಮಾಡುವುದರಿಂದ ಡೆತ್ ರೇಟ್ ಕಡಿಮೆ ಮಾಡಲು ಹೊರಟ ಪಾಲಿಕೆ


- ಅಗತ್ಯ ಇದ್ದವರಿಗೆ ಮಾತ್ರ ಬೆಡ್.. ಬೇಕಾ ಬಿಟ್ಟಿ ಬೆಡ್ ಬ್ಲಾಕಿಂಗ್ ಇದರಿಂದ ತಪ್ಪಲಿದೆ


- ಗಂಭೀರವಾಗಿದ್ದರೂ ಹೋಮ್ ಐಸೋಲೇಷನ್ ಆಗುವವರನ್ನು ಇದರಿಂದ ಗುರುತಿಸಬಹುದು


ಇದನ್ನೂ ಓದಿ:White Tea: ಅಬ್ಬಾ..! ಒಂದು ಕೆಜಿ ಬಿಳಿ ಚಹಾ ಪುಡಿ 16 ಸಾವಿರಕ್ಕೆ ಹರಾಜು: ಏನಿದರ ವಿಶೇಷತೆ ?


ಇನ್ನು ಮೊಬೈಲ್ ಟ್ರಯಾಜ್ ಯೂನಿಟ್ ಗೆ ತನ್ನದೇ ಆದ ಕೆಲವು ನಿಯಮಗಳಿವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಫಿಸಿಕಲ್ ಟ್ರಯಾಜ್ ಸೆಂಟರ್ ಆಗಿ ಈ ಮೂಲಕ ಬದಲಾಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನಸಂಖ್ಯೆ, ವಾರ್ಡ್ ಸಂಖ್ಯೆ, ಆ್ಯಕ್ಟಿವ್ ಪಾಸಿಟಿವ್ ಪ್ರಕರಣ ಆಧರಿಸಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಬೈಲ್ ಟ್ರಯಾಜ್ ಯೂನಿಟ್ ನೇಮಕ ಪಾಲಿಕೆ ನೇಮಕ ಮಾಡಲಿದೆ.

top videos


    ಎಲ್ಲಾ MTUಗಳು ವಲಯವಾರು ನೋಡೆಲ್ ಫಿಜಿಕಲ್ ಸೆಂಟರ್‌ಗೆ ಮ್ಯಾಪಿಂಗ್ ಆಗಿರುತ್ತದೆ. ಈ ಯೂನಿಟ್ ಎಲ್ಲೆಲ್ಲಿ ಹೋಗಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಸೋಂಕಿತನ ಭೇಟಿ ಬಳಿಕ MTU ತಂಡ ಇದಕ್ಕಂತಲೇ ಸಿದ್ದ ಪಡಿಸಿಕೊಂಡಿರುವ CHBMS - MTU ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಫಾರಂ ತುಂಬಲಿದೆ. ಆ್ಯಪ್ ನಲ್ಲಿ ಹಾಕಿದ ಮಾಹಿತಿಯ ಆಧಾರದಲ್ಲಿ CHBMS - PTC ಮಾಡ್ಯೂಲ್ ಮೂಲಕ ಸೋಂಕಿತನಿಗೆ ಬೆಡ್ ಬ್ಲಾಕ್ ಆಗಲಿದೆ. ವಲಯ ನೋಡಲ್ ಫಿಜಿಕಲ್ ಟ್ರಯಾಜ್ ಸೆಂಟರ್ ಮೂಲಕ ಆಸ್ಪತ್ರೆ ಬೆಡ್ ಬುಕ್, ರೋಗಿ ಸ್ಥಳಾಂತರ ಜವಾಬ್ದಾರಿ ಹೊಂದಿರುತ್ತಾರೆ.


    ಪ್ರತಿ ವಲಯಕ್ಕೆ ಆ ವ್ಯಾಪ್ತಿಯ ಆಸ್ಪತ್ರೆಯ ಮಾಹಿತಿಗಳು ಮ್ಯಾಪಿಂಗ್ ಆಗಿರುತ್ತದೆ. ನೋಡೆಲ್ ಪಿಟಿಸಿ ಡಾಕ್ಟರ್ ಗಳಿಗೆ ಮಾತ್ರ ಮ್ಯಾಪಿಂಗ್ ಮಾಡಿರುವ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಲು ಲಾಗ್ ಇನ್ ಮಾಡುವ ಅವಕಾಶ ಇರುತ್ತದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಒಂದು ಅಂಬುಲೆನ್ಸ್ ಇರುವುದು ಕಡ್ಡಾಯವಾಗಿದೆ. ಇನ್ನು ಈ ಎಲ್ಲಾ MTU ಸಿಬ್ಬಂದಿಗಳಿಗೆ ಸೆಂಟ್ರಲ್ ವಾರ್ ರೂಂ ನಿಂದ ತರಬೇತಿ ಸಿಗಲಿದೆ.‌

    First published: