Corona ವಿಚಾರದಲ್ಲಿ ಸೇಫ್ ಜೋನ್ ನಲ್ಲಿದ್ಯಾ ಕರ್ನಾಟಕ? ಟಫ್ ರೂಲ್ಸ್‌ನಿಂದ ಮುಕ್ತಿ ಸಿಗುತ್ತಾ?

ಟಫ್ ರೂಲ್ಸ್ ಇನ್ನೆಷ್ಟು ದಿನ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಕೊರೊನಾ ವಿಚಾರದಲ್ಲಿ ಕರ್ನಾಟಕ (Karnataka) ಸೇಫ್ ಝೋನ್ (Safe Zone) ನಲ್ಲಿರೋದನ್ನು ಅಂಕಿ ಅಂಶಗಳು ಹೇಳುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು (Corona Case) ಬೆಳಕಿಗೆ ಬರುತ್ತಿವೆ. ಕೊರೊನಾ ಮತ್ತು ಓಮೈಕ್ರಾನ್ (Corona Virus and Omicron Variant) ನಿಯಂತ್ರಣಕ್ಕಾಗಿ ಸರ್ಕಾರ ಟಫ್ ರೂಲ್ಸ್ (Tuff Rules) ಮತ್ತು ವೀಕೆಂಡ್ ಕರ್ಫ್ಯೂ (Weekend Curfew) ಜಾರಿಗೆ ತಂದಿದೆ. ಈ ನಡುವೆ ಟಫ್ ರೂಲ್ಸ್ ಇನ್ನೆಷ್ಟು ದಿನ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಕೊರೊನಾ ವಿಚಾರದಲ್ಲಿ ಕರ್ನಾಟಕ (Karnataka) ಸೇಫ್ ಝೋನ್ (Safe Zone) ನಲ್ಲಿರೋದನ್ನು ಅಂಕಿ ಅಂಶಗಳು ಹೇಳುತ್ತಿವೆ. ಕೊರೊನಾ ಪ್ರಕರಣಗಳು 20 ಸಾವಿರದಂತೆ ಬರುರತ್ತಿದ್ರೂ, ಆಸ್ಪತ್ರೆಗೆ ದಾಖಲಾಗುವವರು ಸಂಖ್ಯೆ ಕಡಿಮೆ ಇರೋದು ಒಳ್ಳೆಯ ಸುದ್ದಿ, ಇದೇ ರೀತಿ ಮುಂದುವರಿದ್ದಲ್ಲಿ ಕರ್ನಾಟಕ ಕೊರೊನಾ ಮೂರನೇ ಅಲೆಯನ್ನು (Corona Third Wave) ಸಲೀಸಾಗಿ ಎದುರಿಸಲಿದೆ ಎಂದು ಹೇಳಲಾಗುತ್ತಿದೆ.

ಹೇಗಿದೆ ಎರಡು ವಾರದ ಆಸ್ಪತ್ರೆಯ ದಾಖಲಾತಿ..?

>> ರಾಜ್ಯದ ಒಟ್ಟಾರೆ ಸಕ್ರಿಯ ಪ್ರಕರಣ 1,41,337

>> ಈ ಪೈಕಿ ಆಸ್ಪತ್ರೆಗೆ ದಾಖಲಾದವರು ಕೇವಲ 2,195

>> ಆಕ್ಸಿಜನ್/HDU ಬೆಡ್ ಗೆ ದಾಖಲಾದವರು 538

>>  ICU ಗೆ ದಾಖಲಾದವರ ಸಂಖ್ಯೆ 105

>> ICU-V ನಲ್ಲಿ ದಾಖಲಾದವರ ಸಂಖ್ಯೆ 35

>> ಜನರಲ್ ಬೆಡ್ ಗೆ ದಾಖಲಾದವರ ಸಂಖ್ಯೆ 1157

>> ಶೇ. 52.71 ರಷ್ಟು ಸೋಂಕಿತರು ಜನರಲ್ ಬೆಡ್ ನಲ್ಲೇ ದಾಖಲಾಗ್ತಿದ್ದಾರೆ

>> 0.38% ಜನ ಮಾತ್ರ ಆಕ್ಸಿಜನ್/HDU ಬೆಡ್ ಗೆ ದಾಖಲಾಗ್ತಿದಾರೆ

>> 0.07% ಜನ ಮಾತ್ರ ICU ಗೆ ದಾಖಲಾಗ್ತಿದ್ದಾರೆ
> 0.02% ಜನ ಮಾತ್ರ ವೆಂಟಿಲೇಟರ್ ಗೆ ಹೋಗ್ತಿದ್ದಾರೆ.

ಇದನ್ನೂ ಓದಿ:  COVID-19 Karnataka: ಗ್ರಾಮಗಳಲ್ಲಿ ವೇಗವಾಗಿ ಹರಡ್ತಿದೆ ಕೊರೋನಾ 3ನೇ ಅಲೆ! ಟಾಪ್ 20 ಡೇಂಜರ್ ಹಳ್ಳಿಗಳ ಪಟ್ಟಿ ಇಲ್ಲಿದೆ

ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

ಇಂದು ಎರಡನೇ ವಾರದ ವೀಕೆಂಡ್ ಕರ್ಫ್ಯೂ ಎರಡನೇ ದಿನವಾಗಿದೆ. ಬೆಂಗಳೂರಿನಲ್ಲಿ BMTC, KSRTC ಬಸ್ ಗಳು ರಸ್ತೆಗೆ ಇಳಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ನಗರದಲ್ಲಿ ಶೇ.10ರಷ್ಟು ಬಸ್ ಗಳು ಮಾತ್ರ ಸಂಚರಿಸುತ್ತಿವೆ.

ಇಂದು ಕೂಡ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆಗಳಿವೆ. ಇಂದು 21,092 ಕೋವಿಡ್ ಕೇಸ್‌ಗಳು ಪತ್ತೆ ಸಾಧ್ಯತೆಗಳಿವೆ. ಬೊಮ್ಮನಹಳ್ಳಿ - 2,352, ದಾಸರಹಳ್ಳಿ- 545, ಪೂರ್ವ ಪಲಯ - 3,290, ಮಹಾದೇವಪುರ - 2,833, ಆರ್.ಆರ್.ನಗರ - 1,352, ದಕ್ಷಿಣ ವಲಯ - 3,382, ಪಶ್ಚಿಮ ವಲಯ - 2,389, ಯಲಹಂಕ - 1,411, ಆನೇಕಲ್ – 894, ಪೂರ್ವ ತಾಲ್ಲೂಕು – 408, ಉತ್ತರ ತಾಲ್ಲೂಕು – 236, ದಕ್ಷಿಣ ತಾಲೂಕು – 564 ಪ್ರಕರಣಗಳು ವರದಿಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಪೊಲೀಸರ ಸರ್ಪಗಾವಲು

ಇನ್ನು ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಪರಿಶೀಲನೆ ನಡೆಸುತ್ತಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ನಗರದ ಎಲ್ಲಾ ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗಿದ್ದು, ಸೋಮವಾರ ಬೆಳಗ್ಗೆ 5 ಗಂಟೆಗೆ ವೀಕೆಂಡ್ ಕರ್ಫ್ಯೂ ಅಂತ್ಯವಾಗಲಿದೆ. ಇಂದು ಬೆಳಗ್ಗೆಯಿಂದ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ 250ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಜೆಪಿ ನಾಯಕರಿಂದ ಕೊರೊನಾ ನಿಯಮ ಉಲ್ಲಂಘನೆ

ಜನರು ಹೆಚ್ಚಾಗಿ ಸೇರುವ ಕಾರ್ಯಕ್ರಮಗಳಿಗೆ ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಆದರೆ ಬಿಜೆಪಿ ನಾಯಕ, ಮಾಜಿ ಕಾರ್ಪೋರೇಟರ್ ಎನ್ ಆರ್ ರಮೇಶ್ ಜನವರಿ 14ರಂದು ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ರಾಯಪುರ ವಾರ್ಡ್ ನಲ್ಲಿ ಅದ್ದೂರಿ ಬರ್ತ್ ಡೇ ಸಂಭ್ರಮಾಚರಣೆ ಮಾಡಲಾಗಿದೆ.

ಇದನ್ನೂ ಓದಿ:  Weekend Curfew: ಮಾಸ್ಕ್ ಹಾಕಲ್ಲ ಏನ್ ಮಾಡ್ತೀಯಾ ಎಂದ ಯುವಕನಿಗೆ ಕಪಾಳಮೋಕ್ಷ

ಆರೋಗ್ಯ ಇಲಾಖೆಯ ಈ  ರಿಪೋರ್ಟ್ ಪ್ರಕಾರ ರಾಜ್ಯದ‌ 30 ಜಿಲ್ಲೆಗಳ ಪೈಕಿ ಸುಮಾರು 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗ್ತಿದೆ. ಕಳೆದ‌ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆ ಕಂಡು ಬಂದಿದ್ದು, ರಾಜ್ಯದಲ್ಲಿ 274 ನಗರ-ಪಟ್ಟಣಗಳಿದ್ದು 148 ನಗರ ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಹೆಚ್ಚಿದ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗ್ತಿವೆ. ಇವುಗಳ ಪೈಕಿ ಟಾಪ್ 20 ಹಳ್ಳಿಗಳ ಲಿಸ್ಟ್ ಮಾಡಿದ್ದು ಇವುಗಳು ಡೇಂಜರ್ ಹಂತದಲ್ಲಿವೆ ಎಂದು ಹೇಳಲಾಗ್ತಿದೆ.
Published by:Mahmadrafik K
First published: