Covid 19: ಬೆಂಗಳೂರಿಗರೇ ಬೀದಿಗಿಳಿಯೋ ಮುನ್ನ ಎಚ್ಚರ! ಗಲ್ಲಿ ಗಲ್ಲಿಯಲ್ಲೂ ಕೊರೋನಾ ನರ್ತನ

ಬೆಂಗಳೂರಿನ ಹಲವು ನಗರಗಳು ಡೇಂಜರ್ ಹಂತದಲ್ಲಿದೆ. ಗಲ್ಲಿ, ಗಲ್ಲಿಗಳಲ್ಲೂ ಕೊರೋನಾ ಸೋಂಕು ಹರಡುತ್ತಿದ್ದು, ಅನೇಕ ವಾರ್ಡ್ ಸೋಂಕಿತರಿಂದ ತುಂಬಿ ಹೋಗಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರು (Bangalore) ಈಗ ಕೊರೋನಾ (Corona) ಹಾಟ್​ ಸ್ಪಾಟ್​ ಆಗಿದೆ. ರಾಜ್ಯದಲ್ಲಿ ಕೋವಿಡ್​ 19 ಮೂರನೇ ಅಲೆಯ (Covid 3rd wave) ಅಬ್ಬರ ದಿನೇ ದಿನೇ ಹೆಚ್ಚುತ್ತಲಿದೆ. ಅದರಲ್ಲೂ ಬೆಂಗಳೂರಲ್ಲಿ ನಿತ್ಯ ಅಧಿಕ ಕೊರೋನಾ ಪಾಸಿಟಿವ್​ ಕೇಸ್​ ದಾಖಲಾಗ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿ. ವೀಕೆಂಡ್​ ಲಾಕ್​ಡೌನ್​ (Weekend lockdown) ರದ್ದಾಯ್ತು ಅಂತ ಬೇಕಾಬಿಟ್ಟಿ ತಿರುಗಾಡಬೇಡಿ. ಬೆಂಗಳೂರಿನ ಹಲವು ನಗರಗಳು ಡೇಂಜರ್ ಹಂತದಲ್ಲಿದೆ. ಗಲ್ಲಿ, ಗಲ್ಲಿಗಳಲ್ಲೂ ಸೋಂಕ ಹರಡುತ್ತಿದ್ದು, ಅನೇಕ ವಾರ್ಡ್ ​(Wards) ಗಳು ಸೋಂಕಿತರಿಂದ ತುಂಬಿ ಹೋಗಿವೆ. ಬೆಂಗಳೂರಿನಲ್ಲಿರೋ 198 ವಾರ್ಡ್​ಗಳ ಪೈಕಿ 101 ವಾರ್ಡ್​ಗಳು ಡೇಂಜರ್ ಹಂತದಲ್ಲಿವೆ. 33 ವಾರ್ಡ್​ಗಳಲ್ಲಿ ಕೊರೋನಾ ಸೋಂಕಿರ ಸಂಖ್ಯೆ ಸಾವಿರದ ಗಡಿ ದಾಟಿದೆ. ನಿತ್ಯ ಈ 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೆ ಇದೆ.

101 ವಾರ್ಡ್​ಗಳಲ್ಲಿ ಕೊರೋನಾ ಸ್ಫೋಟ

ಇಡೀ‌ ಬೆಂಗಳೂರನ್ನ ಕೊರೋನಾ ಸೋಂಕು ಆವರಿಸಿಬಿಟ್ಟಿದೆ. 198 ವಾರ್ಡ್​ಗಳ ಪೈಕಿ 101 ವಾರ್ಡ್ ಡೇಂಜರ್ ಹಂತ ತಲುಪಿದೆ. 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ನಿತ್ಯ ಈ 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. 68 ವಾರ್ಡ್​ಗಳಲ್ಲಿ 500 ರಿಂದ 1000 ಕೊರೋನಾ  ಕೇಸ್ ದಾಖಲಾಗಿದೆ. 64 ವಾರ್ಡ್​ಗಳಲ್ಲಿ ನಿತ್ಯ 250 ರಿಂದ 500 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. 26 ವಾರ್ಡ್​ಗಳಲ್ಲಿ 100 ರಿಂದ‌ 250 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 7 ವಾರ್ಡ್​ಗಳಲ್ಲಿ 1 ರಿಂದ 100 ಕೇಸ್ ದಾಖಲಾಗ್ತಿರೋದು ಬೆಂಗಳೂರಿಗರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ.

ಫಿಜಿಕಲ್​ ಟ್ರಯಾಜಿಂಗ್​ ನಡೆಸಲು ಬಿಬಿಎಂಪಿ ಸಿದ್ಧತೆ

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೆಮ್ಮು, ಶೀತ, ಜ್ವರದಂತಹ ಲಕ್ಷಣಗಳಿರುವವರ ಬಗ್ಗೆ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಲು ಮುಂದಾಗಿದೆ. 198 ವಾರ್ಡ್‍ಗಳಲ್ಲಿ ಫಿಜಿಕಲ್ ಟ್ರಯಾಜಿಂಗ್ ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದೆ.

ಇದನ್ನೂ ಓದಿ: Covid 19: ಮನೆಯಲ್ಲಿದ್ದುಕೊಂಡೆ ಕೊರೊನಾ ಓಡಿಸ್ತೀವಿ, ಆಸ್ಪತ್ರೆವಾಸ ಬೇಡ ಅಂತಿದ್ದಾರೆ ಬೆಂಗಳೂರಿಗರು!

ಕೊರೋನಾ ಎರಡನೆ ಅಲೆ ತೀವ್ರತೆ ಸಂದರ್ಭದಲ್ಲಿ ಟ್ರಯಾಜಿಂಗ್ ಆರಂಭ ಮಾಡಲಾಗಿತ್ತು. ಆದರೆ, ಅಲೆಯ ತೀವ್ರತೆ ಕಡಿಮೆಯಾದಾಗ ಟ್ರಯಾಜಿನ್ ಸ್ಥಗಿತಗೊಂಡಿತ್ತು. ಈಗ ನಗರದಲ್ಲಿ ಕೇಸ್‍ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಫಿಜಿಕಲ್ ಟ್ರಯಾಜಿನ್ ಮಾಡಲು ಆರಂಭಿಸಿದೆ. ನಿತ್ಯ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಫಿಜಿಕಲ್​ ಟ್ರಯಾಜಿನ್​ ಮಾಡೋ ಗುರಿ ಹೊಂದಿದ್ದು, ಹೆಚ್ಚು ಲಕ್ಷಣವಿರೋ  ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸೂಚಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳಿಗೆ ಕೊರೋನಾ

ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್ 19 ಟೆನ್ಷನ್ ಹೆಚ್ಚಾಗಿದೆ. ವೀಕೆಂಡ್ ಕರ್ಫ್ಯೂ ತೆರವು ಬೆನ್ನಲ್ಲೇ ಇದೀಗ ಬಿಬಿಎಂಪಿಗೆ ಕೊರೊನಾ ಕಂಟ್ರೋಲ್ ದೊಡ್ಡ ತಲೆಬಿಸಿಯಾಗಿದೆ. ಮತ್ತೊಂದೆಡೆ ಬಿಬಿಎಂಪಿ ಸಿಬ್ಬಂದಿಗಳನ್ನೇ ಕೊರೋನಾ ಕಾಡುತ್ತಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಬಿಬಿಎಂಪಿ ಜಂಟಿ ಆಯುಕ್ತರು, ಪಾಲಿಕೆ ವೈದ್ಯರು, ನರ್ಸ್, ಸ್ವಾಬ್ ಕಲೆಕ್ಟರ್ಸ್, ಟ್ರಾಯಾಜಿಂಗ್ ಸಿಬ್ಬಂದಿಗಳನ್ನೇ ಕೊರೋನಾ ಕಾಡ್ತಿದೆ.

ಇದನ್ನೂ ಓದಿ: HD Devegowda: ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ; ಆಸ್ಪತ್ರೆಗೆ ದಾಖಲು

ಈವರೆಗೆ ಬಿಬಿಎಂಪಿ 4 ವಲಯ ಜಂಟಿ ಆಯುಕ್ತರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಬಿಬಿಎಂಪಿಯ 300ಕ್ಕೂ ಅಧಿಕ ಅಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ಆಗಿದೆ. ಎಂಟು ವಲಯಗಳಲ್ಲಿ 300ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇವುಗಳ ಪೈಕಿ ಸ್ವಾಬ್​ ಕಲೆಕ್ಟರ್​ಗಳಲ್ಲಿ ಅಧಿಕ ಕೊರೋನಾ ಕೇಸ್​ ದಾಖಲಾಗ್ತಿದೆ.
Published by:Pavana HS
First published: