Corona Effect: ಕೊರೋನಾ ಹೊಡೆತಕ್ಕೆ ನಲುಗಿದ ಹೋಟೆಲ್ ಉದ್ಯಮ; ಆಸ್ಪತ್ರೆಗಳಾಗಿ ಕನ್ವರ್ಟ್ ಆಗ್ತಿವೆ ಹೋಟೆಲ್​ಗಳು..!

ಹತ್ತು ಹೋಟೆಲ್‌ಗಳು ಆಸ್ಪತ್ರೆಗಳಾಗಲು ಸಿದ್ಧವಾಗ್ತಿದೆ. ಇನ್ನಾದ್ರೂ ಆರ್ಥಿಕ ಸಂಕಷ್ಟದಿಂದ ಹೊರಬರೋಣ ಅಂತ ಹೋಟೆಲ್ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಟ್ರಿನಿಟಿ ಆಸ್ಪತ್ರೆಯಾಗಿ ಬದಲಾಗಿರುವ ಹೋಟೆಲ್

ಟ್ರಿನಿಟಿ ಆಸ್ಪತ್ರೆಯಾಗಿ ಬದಲಾಗಿರುವ ಹೋಟೆಲ್

  • Share this:
ಬೆಂಗಳೂರು(ಜು.15): ಕೊರೋನಾ ಕಾಟ ಕಡಿಮೆಯಾದ್ರೂ, ಸಂಕಷ್ಟ ನಿಂತಿಲ್ಲ. ಅನ್‌ಲಾಕ್ ಆದ್ರೂ ನಷ್ಟದಲ್ಲಿ ಸಿಲುಕಿರುವ ಉದ್ಯಮ ಇನ್ನು ಮೇಲೇಳಲು ಆಗ್ತಿಲ್ಲ‌. ಅದ್ರಲ್ಲೂ ದೊಡ್ಡ ದೊಡ್ಡ ಹೋಟೆಲ್​ಗಳಂತೂ ನೆಲಕ್ಕೆ ಬಿದ್ದಿವೆ. ಇದೀಗ ಕೊರೋನಾ ಮೂರನೇ ಅಲೆ ಆತಂಕದಿಂದ ಬೆಂಗಳೂರಿನಲ್ಲಿ ಹೋಟೆಲ್​​ಗಳು ಆಸ್ಪತ್ರೆಗಳಾಗಿ ಕನ್ವರ್ಟ್ ಆಗ್ತಿವೆ. ಕೊರೋನಾ ಹೊಡೆತದಿಂದ ಅನೇಕ ಉದ್ಯಮಗಳು ನೆಲಕ್ಕುರುಳಿವೆ. ಎಷ್ಟೋ ಹೋಟೆಲ್ ಶಾಶ್ವತವಾಗಿ ಕ್ಲೋಸ್ ಆಗಿದ್ರೆ, ಇನ್ನು ಕೆಲವು ಹೋಟೆಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಹೋಟೆಲ್ ಗಳ ಪಕ್ಕದಲ್ಲಿರುವ ಆಸ್ಪತ್ರೆಗಳಿಗೆ ಮರ್ಜ್ ಮಾಡಲಾಗ್ತಿದೆ. ಕೋವಿಡ್‌ ಹೊಡೆತ ಹೋಟೆಲ್ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲೇ ಹೊಡೆತ ಬಿದ್ದಿದೆ.

ಒಂದೂವರೆ ವರ್ಷದಿಂದ ಹೋಟೆಲ್‌ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಬೆಂಗಳೂರಲ್ಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಮಾರಾಟಕ್ಕೆ ಸಜ್ಜಾಗಿವೆ. ಕೆಲವು ಹೋಟೆಲ್‌ಗಳು ಆಸ್ಪತ್ರೆಗಳಾಗಿಯೂ ಮಾರ್ಪಾಡಾಗಿವೆ. ಬೆಂಗಳೂರಿನಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಹೋಟೆಲ್ ಗಳು ಆಸ್ಪತ್ರೆಗಳಾಗ್ತಿವೆ. ಶೇಷಾದ್ರಿಪುರಂ ಸರ್ಕಲ್ ನಲ್ಲಿದ್ದ ಹೋಟೆಲ್ ಈಗ ಟ್ರಿನಿಟಿ ಆಸ್ಪತ್ರೆಯಾಗಿದೆ‌. ಎರಡನೇ ಅಲೆಯ ವೇಳೆ ಇಲ್ಲಿ ಚಿಕಿತ್ಸೆ ಕೂಡ ನೀಡಲಾಗಿದೆ. ಜೊತೆಗೆ ಇನ್ಫಾಂಟ್ರಿ ರಸ್ತೆಯಲ್ಲಿದ್ದ ಮಿಂಟ್‌ ಮಸಾಲಾ ಹೋಟೆಲ್‌ ಕೂಡ ಆಸ್ಪತ್ರೆಯ ರೂಪ ಪಡೆಯುತ್ತಿದೆ.

ಇದನ್ನೂ ಓದಿ:Astrology: ವೃಷಭ ರಾಶಿಯವರಿಗೆ ಈ ದಿನ ಹೇಗಿದೆ ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಸ್ಪರ್ಶ್ ಆಸ್ಪತ್ರೆಯ ಆಡಳಿತ ಮಂಡಳಿ ಹೋಟೆಲ್ ಖರೀದಿಸಿ ನವೀಕರಣ ಮಾಡ್ತಿದ್ದಾರೆ. ಮಲ್ಲೇಶ್ವರಂನ ಮಂತ್ರಿ ಮಾಲ್‌ ಬಳಿ ಇದ್ದ ಎಂಟಿಆರ್‌ ಹೋಟೆಲ್‌ ಪಕ್ಕದ ವಸತಿ ಗೃಹ ಆಸ್ಪತ್ರೆಯಾಗಿ ಬದಲಾಗ್ತಿದೆ. ಎರಡನೇ ಅಲೆಯ ವೇಳೆ ಇಲ್ಲಿ ಚಿಕಿತ್ಸೆ ಕೂಡ ನೀಡಲಾಗಿದೆ. ಹತ್ತು ಹೋಟೆಲ್‌ಗಳು ಆಸ್ಪತ್ರೆಗಳಾಗಲು ಸಿದ್ಧವಾಗ್ತಿದೆ. ಇನ್ನಾದ್ರೂ ಆರ್ಥಿಕ ಸಂಕಷ್ಟದಿಂದ ಹೊರಬರೋಣ ಅಂತ ಹೋಟೆಲ್ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನು  ಖಾಸಗಿ ಆಸ್ಪತ್ರೆಗಳ ಸಂಘ ಅಧ್ಯಕ್ಷ ಡಾ ಪ್ರಸನ್ನ ಒಪ್ಪಿಕೊಂಡರು.

ಇದರ ಜೊತೆಗೆ ಸಾಕಷ್ಟು ಹೋಟೆಲ್ ಗಳು ಕಾರ್ಯಾರಂಭ ಮಾಡದೇ ಕ್ಲೋಸ್ ಆಗಿವೆ. ಐಟಿ ಕಚೇರಿಗಳ ಬಳಿಯಿದ್ದ ಬಹುತೇಕ ಹೋಟೆಲ್‌ಗಳು ಸ್ಥಗಿತಗೊಂಡಿವೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ ಬಳಿಯ ಸಣ್ಣ ಹೋಟೆಲ್‌ಗಳು ಬಂದ್ ಆಗಿವೆ. ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಇರುವುದರಿಂದ ಗ್ರಾಹಕರ ಕೊರತೆ ಇದೆ‌. ಇನ್‌ಫೋಸಿಸ್‌ ಪಕ್ಕದಲ್ಲೇ ಇದ್ದ 15-20 ಹೋಟೆಲ್‌ಗಳು ಕ್ಲೋಸ್ ಅಗಿವೆ.

ಇದನ್ನೂ ಓದಿ:ಇಂದು ದೆಹಲಿಗೆ ಸಿಎಂ ಬಿಎಸ್ ವೈ ಭೇಟಿ; ಕುತೂಹಲ ಮೂಡಿಸಿದ ಯಡಿಯೂರಪ್ಪ ನಡೆ!

ವಿಪ್ರೋ ಕಂಪನಿ ಬಳಿಯಿದ್ದ ಸುಮಾರು 15 ಹೋಟೆಲ್‌ಗಳು ಇದೀಗ ಸ್ಥಗಿತಗೊಂಡಿವೆ. ಕಟ್ಟಡ ಬಾಡಿಗೆ, ತೆರಿಗೆ, ಕಾರ್ಮಿಕರಿಗೆ ವೇತನ ಕಟ್ಟಲಾಗದೆ ನಷ್ಟದಲ್ಲಿರುವ ಒಂದು ಸಾವಿರ ಹೋಟೆಲ್‌ಗಳು ಮಾರಾಟಕ್ಕಿವೆ. ಈಗ ಹೋಟೆಲ್ ಉದ್ಯಮ ಪುನಾರಂಭ ಮಾಡಿದವವರಿಗೂ ಖರ್ಚು ಸರಿದೂಗಿದರೆ ಸಾಕು ಎನ್ನುತ್ತಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘ ಪ್ರಧಾನ ಕಾರ್ಯದರ್ಶಿ ಮಧುಕರ ಎಂ ಶೆಟ್ಟಿ.

ಒಟ್ಟಿನಲ್ಲಿ ಎಲ್ಲ ಉದ್ಯಮಗಳಿಗೂ ಹೊಡೆತ ಕೊಟ್ಟಿರೋ ಕೊರೊನಾ, ಇನ್ನು ಮೂರನೇ ಅಲೆ ವೇಳೆ ಮತ್ತಷ್ಟು ರೌದ್ರ ನರ್ತನ ತೋರಲಿದೆ. ಸದ್ಯ ಸಂಕಷ್ಟಕ್ಕೆ ಸಿಲುಕಿದವರ ಬದುಕಂತೂ ಮೂರಾಬಟ್ಟೆಯಾಗಿದೆ‌.
Published by:Latha CG
First published: