ಬೆಂಗಳೂರು (ಮೇ 5): ದೇಶದಾದ್ಯಂತ ಕೊರೊನಾ (Corona) 4ನೇ ಅಲೆ ಭಯ ಆವರಿಸಿದ್ದು, ಕೊರೊನಾ ಹರಡದಂತೆ ತಡೆಯಲು ಸರ್ಕಾರ (Government) ಸಹ ಮುಂಜಾಗ್ರತ ಕ್ರಮಗಳನ್ನು (Precautionary Measures) ಕೈಗೊಂಡಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲೂ (Bengaluru) ಸಹ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಕೋವಿಡ್ ನಾಲ್ಕನೇ ಅಲೆಯ ವಿರುದ್ಧ ಹೋರಾಡಲು ಬಿಬಿಎಂಪಿ (BBMP) ಮುಂದಾಗಿದೆ. ಇಂದಿನಿಂದ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ ಎಂದು ತಿಳಿಸಿದೆ. ಈಗಾಗಲೇ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಹಾಕದಿದ್ರೆ 250 ರೂಪಾಯಿ ದಂಡ ವಿಧಿಸಿಸುವುದಾಗಿ ಘೋಷಿಸಿದೆ.
ಮಾಸ್ಕ್ ಕಡ್ಡಾಯ, ಮಾಸ್ಕ್ ಹಾಕದಿದ್ರೆ ದಂಡ
3ನೇ ಅಲೆ ಕಡಿಮೆಯಾಗ್ತಿದ್ದಂತೆ ನಗರದಲ್ಲಿ ಜನರು ಮಾಸ್ಕ್ ಹಾಕೋದನ್ನೇ ಮರೆತು ಹೋಗಿದ್ರು, ಹೀಗಾಗಿ ಬೆಂಗಳೂರಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆರೋಗ್ಯ ಸಚಿವರೇ ಆದೇಶ ಹೊರಡಿಸಿದ್ರು. ನಗರದ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ 250 ರೂ. ದಂಡ ತೆರಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿತರ ಪಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜನಸಂದಣಿಯಿರುವ ವ್ಯಾಪಾರ ಪ್ರದೇಶಗಳಲ್ಲಿ ಮಾರ್ಷಲ್ಗಳು ಗಸ್ತು ತಿರುಗುತ್ತಿದ್ದು, ಮಾಸ್ಕ್ ಮತ್ತು ವ್ಯಕ್ತಿಗತ ಅಂತರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಾಲ್ ಅಂಡ್ ರೆಸ್ಟೋರೆಂಟ್ಗಳಲ್ಲೂಅಂತರ
ಚಿತ್ರಮಂದಿರಗಳು, ಮಾಲ್, ರೆಸ್ಟೋರೆಂಟ್, ಹೋಟೆಲ್ ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ತೆರಳುವವರು ಮಾಸ್ಕ್ ಮತ್ತು ವ್ಯಕ್ತಿಗತ ಅಂತರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಾಲಿಕೆ ಸೂಚಿಸಿದೆ. ಪ್ರವೇಶ ದ್ವಾರಗಳಲ್ಲಿ ಜನರ ದೈಹಿಕ ಉಷ್ಣಾಂಶಗಳನ್ನು ತಪಾಸಣೆ ನಡೆಸಲು ಸೂಚಿಸಲಾಗಿದೆ.
ಇದನ್ನೂ ಓದಿ: Corona Virus: ರಾಜ್ಯದಲ್ಲಿ ರೂಪಾಂತರಿ BA.2.12 ಪತ್ತೆ, ಕೊರೊನಾ 4ನೇ ಅಲೆ ಆತಂಕ
ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲು
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಗಳಿಗೆ ಆಗಮಿಸುವ ಹೊರ ರೋಗಿಗಳಿಗೆ ಐಎಲ್ಐ ಹಾಗೂ ಸಾರಿ ಪರೀಕ್ಷೆ ಹಾಗೂ ಒಳರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಈ ಹಿಂದೆ ನೀಡಿದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.10 ಹಾಸಿಗೆಯನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ. ಹಾಸಿಗೆ ಲಭ್ಯದ ಬಗ್ಗೆ ಪೋರ್ಟಲ್ನಲ್ಲಿ ದಾಖಲಿಸಲು ನಿರ್ದೇಶಿಸಲಾಗಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿಕೊಳ್ಳಲಾಗಿದ್ದು, ಬೂಸ್ಟರ್ ಡೋಸ್ ಹಾಗೂ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್
ಹಲವು ದೇಶಗಳಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆ ದೇಶದಲ್ಲೂ 4ನೇ ಆತಂಕ ಹೆಚ್ಚಾಗಿದೆ. ದಕ್ಷಿಣ ಕೊರಿಯಾ, ಜಪಾನ್, ಥೈಲ್ಯಾಂಡ್, ಆಸ್ಟ್ರೇಲಿಯಾ, ವಿಯೆಟ್ನಾಂ, ನ್ಯೂಜಿಲೆಂಡ್ ಗಳಲ್ಲಿ ಕೇಸ್ ಹೆಚ್ಚಳವಾಗುತ್ತಿದ್ದು, ಹಲವೆಡೆ ಲಾಕ್ಡೌನ್ ಕೂಡ ಮಾಡಲಾಗಿದೆ. ಕೊರೊನಾ 2ನೇ ಅಲೆ ದೇಶದ ಜನರನ್ನೇ ನಡುಗಿಸುತ್ತು ಮತ್ತೆ ಅಂತಹ ಸ್ಥಿತಿ ಬರದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡಿದೆ.
ವಿದೇಶದಿಂದ ಬರುವವರಿಗೆ ಟಫ್ ರೂಲ್ಸ್
ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಭಾರತಕ್ಕೆ ಬರೋ ವಿದೇಶಿಗರ ಮೇಲೆ ಕಣ್ಣಿಡಲಾಗಿದೆ. ಕೊರೊನಾ ಹರಡದಂತೆ ತಡೆಯಲು , ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್ ನೀಡಲಾಗಿದೆ.
Coal Crisis: ರಾಜ್ಯದಲ್ಲಿ ಕಲ್ಲಿದ್ದಲ ಅಭಾವ ಇಲ್ಲ; ಸಿದ್ದರಾಮಯ್ಯಗೆ ಸುನೀಲ್ ಕುಮಾರ್ ತಿರುಗೇಟು
ಜಪಾನ್ ಹಾಗೂ ಥೈಲ್ಯಾಂಡ್ನಿಂದ ಬರುವ ಪ್ರಯಾಣಿಕರಿಗೆ ಮಾರ್ಗಸೂಚಿ
ಜಪಾನ್, ಥೈಲ್ಯಾಂಡ್ ಇಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಕೋವಿಡ್ ಲಕ್ಷಣಗಳಿರುವ ಪ್ರಯಾಣಿಕರ ಸ್ಯಾಂಪಲ್ ಏರ್ ಪೋರ್ಟ್ ಲ್ಯಾಬ್ ನಲ್ಲೇ ಪರೀಕ್ಷೆ ಮಾಡುವುದು. ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್ ಕಳಿಸುವುದು. ಜಪಾನ್, ಥೈಲ್ಯಾಂಡ್ ಇಂದ ಬರುವ ಪ್ರಯಾಣಿಕರನ್ನ 14 ದಿನಗಳ ಕಾಲ ಟೆಲಿ ಮಾನಿಟರಿಂಗ್ ಮಾಡುವುದು ಕಡ್ಡಾಯ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ