Congress, BJP Tweet War - ವಾಸ್ತವದ ಬಗ್ಗೆ ಮಾತನಾಡದ ಪ್ರಧಾನಿಗಳು ಮೌನೇಂದ್ರ ಮೋದಿ ಎಂದು ಹೆಸರು ಬದಲಿಸಿಕೊಳ್ಳಲಿ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ಟ್ವೀಟ್ ಸಮರ ನಿಲ್ಲುವಂತೆ ಕಾಣಿಸುತ್ತಿಲ್ಲ. ಚುನಾವಣೆ ಪ್ರಚಾರ ವೇಳೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು (Former CM Siddaramaiah) ಏಕವಚನದಲ್ಲಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯನವರ ಹೇಳಿಕೆಗಳಿಗೆ ಬಿಜೆಪಿ ಸಹ ತಿರುಗೇಟು ನೀಡಿತ್ತು. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ವಾಸ್ತವದ ಬಗ್ಗೆ ಮಾತನಾಡದ ಪ್ರಧಾನಿಗಳು ತಮ್ಮ ಹೆಸರು ಬದಲಿಸಿಕೊಳ್ಳಲಿ ಎಂದು ಹೇಳಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ (Petrol Price) 66 ರೂ ಮತ್ತು ಡೀಸೆಲ್ (Diesel Price) 55 ರೂಪಾಯಿಗೆ ದೊರಕುತ್ತಿತ್ತು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಸರ್ಕಾರದ ತೆರಿಗೆ ಭಯೋತ್ಪಾದನೆ

ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ (tax) ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ ಹೆಬ್ಬೆಟ್ ಗಿರಾಕಿ ಮೋದಿಯಿಂದ ದೇಶ ನಲುಗುತ್ತಿದೆ. ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ.
ಬೆಲೆ ಏರಿಕೆಯ ಬಗ್ಗೆ -ಮೌನ
ಕಾಶ್ಮೀರದ ದಳ್ಳುರಿಗೆ -ಮೌನ
ಚೀನಾ ಅತಿಕ್ರಮಣಕ್ಕೆ -ಮೌನ
ರೈತರ ಹತ್ಯೆಗೆ -ಮೌನ
ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ
ನಿರುದ್ಯೋಗದ ಬಗ್ಗೆ -ಮೌನ
ಪತ್ರಿಕಾಗೋಷ್ಠಿಗೆ -ಮೌನ

ಸಿಕ್ಕ ಕಿಕ್ ಬ್ಯಾಕ್ ಎಷ್ಟು?

ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ನರೇಂದ್ರ ಮೋದಿಯವರು ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ. ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್‍ಗಿರಾಕಿಮೋದಿ ಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.



ಇದನ್ನೂ ಓದಿ:  Operation Congress: ಬೆಳಗಾವಿಯಲ್ಲಿ ಆಪರೇಷನ್ ಕಾಂಗ್ರೆಸ್; ರಮೇಶ್​​ ಜಾರಕಿಹೊಳಿಗೆ‌ ಫೈಟ್‌ ಕೊಡಲು ಪೂಜಾರಿಗೆ ಗಾಳ..!



ಸರ್ಕಾರದ ಆದಾಯ ಯಾರ ಜೇಬಿಗೆ?

ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಕರ್ನಾಟಕ ಬಿಜೆಪಿ ನಾಯಕರಿಗಾದ ಹಂಚಿಕೆ ಎಷ್ಟು? ಇಂಧನ ತೈಲಗಳಲ್ಲಿ ಏರಿದ ಸರಕಾರದ ಆದಾಯ. 2014 = ರೂ. 75 ಸಾವಿರ ಕೋಟಿ ಮತ್ತು 2021 = ರೂ. 3.25 ಲಕ್ಷ ಕೋಟಿ. Right pointing backhand indexeಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿತ. 2014ರಲ್ಲಿ 55ನೇ ಸ್ಥಾನದಲ್ಲಿದ್ದ ಭಾರತ 2021ರಲ್ಲಿ 101ನೇ ಸ್ಥಾನಕ್ಕೆ ಬಂದಿದೆ. ಸರ್ಕಾರದ ಆದಾಯ ಹೆಚ್ಚಿದಂತೆ, ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. ಮೋದಿ ಸರ್ಕಾರದ (Modi Government) ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ?\

ಇದನ್ನೂ ಓದಿ: Siddaramaiah V/s CM Bommai: ಪೊಲೀಸರ ಕೈಗೆ ತ್ರಿಶೂಲ ನೀಡಿ ಹಿಂಸೆಯ ದೀಕ್ಷೆ ಕೊಟ್ಟು ಬಿಡಿ: ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Published by:Mahmadrafik K
First published: