Congress: ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ; ನಿಮ್ಮನ್ನು ಕುಡುಕ ಅಂತಾರೆ: ಡಿಕೆಶಿ ಕಾಲೆಳೆದ ತೇಜಸ್ವಿನಿ ಗೌಡ

ಡಿಕೆಶಿ ಅವರು ತಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಏನು ಮಾಡುತ್ತಾರೆ ನೋಡೋಣ. ನಿಮ್ಮದೆ ಪಕ್ಷದರು ಭ್ರಷ್ಟಾಚಾರ, ಕುಡುಕ ಅಂತೆಲ್ಲ ಹೇಳಿದ್ದಾರೆ. ಉಗ್ರಪ್ಪ ಅವರ ಮಾತು ಕೇಳಿ ಸಲೀಂ ಖುಷಿ ಪಡುತ್ತಿದ್ದರು. ಇದಕ್ಕೆ ‌ನಿಮ್ಮ ಉತ್ತರ ಏನು, ಡಿಕೆಶಿ ಹೇಳಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

 • Share this:
  ಮುಖ್ಯಮಂತ್ರಿಯಾಗ ಬೇಕು ಎನ್ನುವ ದುರಾಸೆ ಇಟ್ಟುಕೊಂಡು ಚಿಕ್ಕ ಮಕ್ಕಳಂತೆ ಹಠ ಮಾಡಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರು. ಆದರೆ ಇವತ್ತು ಅವರ ಪಕ್ಷದವರೇ ಅವರ ಮುಖವಾಡವನ್ನು ಬಿಚ್ಚಿಟ್ಡಿದ್ದಾರೆ ಎಂದು ಬಿಜೆಪಿ ಮುಖಂಡೆ ತೇಜಸ್ವಿನಿಗೌಡ ವ್ಯಂಗ್ಯವಾಡಿದರು.

  ಮಾಜಿ ಸಂಸದ ಉಗ್ರಪ್ಪ ಕಮಿಷನ್ ಗಿರಾಕಿ ಎಂದು ಹೇಳಿದ್ದಾರೆ. ನೀವು ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೇ..? ನಿಮ್ಮ ಮೇಲಿನ ಭ್ರಷ್ಟಾಚಾರದ ಬಗ್ಗೆ ನಿಮ್ಮವರೇ ಹೇಳಿದ್ದಾರಲ್ಲ, ಅವರ ವಿರುದ್ದ ಯಾಕೆ ನೀವು ಕ್ರಮ ಕೈಗೊಂಡಿಲ್ಲ. ನೀವು ಬಿಜೆಪಿ ವಿರುದ್ಧ ಫೈಟ್ ಮಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಫೈಟ್ ಮಾಡಿ. ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಬೇಜಬ್ದಾರಿ ಹೇಳಿಕೆ ವಾಪಸ್ ಪಡೆಯಿರಿ ಎಂದು ಕುಟುಕಿದರು.

  ಐಟಿ , ಇಡಿ ದಾಳಿ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ನಿಮ್ಮ ಬಗ್ಗೆಯೇ ನಿಮ್ಮ ಪಕ್ಷದವರೇ ಆರೋಪ‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ. ನಿಮ್ಮನ್ನು ಕುಡುಕ ಎಂದು ಆಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

  ಡಿಕೆಶಿ ಕಾಂಗ್ರೆಸ್ ಗೆ ಬಲ ತುಂಬಿಲ್ಲ. ಸಾಮಾನ್ಯ ಕಾರ್ಯಕರ್ತ ಕೂಡ ಡಿ.ಕೆ ಶಿವಕುಮಾರ್ ಹಿಡಿದು ಅಲ್ಲಾಡಿಸಬಹುದು. ಆದರೆ ನಮ್ಮ ಬಿಜೆಪಿ ಅತ್ಯುತ್ತಮವಾದ ಪಕ್ಷ ಬಿಜೆಪಿಯಿಂದಲೇ ಜನರು, ಜನರಿಗಾಗೀ ಬಿಜೆಪಿ. ಆದರೆ ನೀವು ಅಧ್ಯಕ್ಷರಾಗಿದ್ದರೂ ಸಹ ನಿಮ್ಮದೇ ಪಕ್ಷದ ಜಮೀರ್ ನಿಮ್ಮ ವಿರುದ್ಧ ಮಾತಾಡಿದರು.  ನಿಮ್ಮದೇ ಅನುಯಾಯಿಗಳು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಶಿಸ್ತು ಸಮಿತಿ ಏನಕ್ಕೆ ಇದೇ ಎಂದರು.

  ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಸಲು ಆಗಲ್ಲ. ಡಿಕೆಶಿ ಅವರು ಕನಸಿನಲ್ಲೂ ಬಿಜೆಪಿ ಹತ್ತಿರ ಬರಲು ಸಾಧ್ಯವಿಲ್ಲ. ಡಿಕೆಶಿ  ಬಿಲ್ಡಪ್ ಕೋಡೋ ಬದಲು ಮೊದಲು ಕ್ರಮ ತೆಗೆದುಕೊಳ್ಳಿ. ನೀವು ಬಿಜೆಪಿ ಬಗ್ಗೆ ಮಾತನಾಡಲು ನೈತಿಕ ಶಕ್ತಿ ಇಲ್ಲ, ನಿಮ್ಮ ಬಗ್ಗೆ ಮಾತಾಡೋಕೆ ನಿಮಗೆ ವಕ್ತಾರರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

  ಸಂಚಾರಿ ವಿಜಯ್ ನಟಿಸಿದ ನಾನು ಅವನಲ್ಲ ಅವಳು ಚಲನಚಿತ್ರದಂತೆ ನಾವು ಅವರಲ್ಲ ಎಂದು ಎಸ್ಕೇಪ್ ಆಗುವ ಕೆಲಸ ಕಾಂಗ್ರೆಸ್ ಅವರು ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಕಾಂಗ್ರೆಸ್ ಗೆ ಬಲ ತುಂಬಿಸಿಲ್ಲ, ಬಿಜೆಪಿ ಸೋಲಿಸುವ ಶಕ್ತಿಯೂ ಡಿಕೆಶಿಗೆ ಇಲ್ಲ. ಕಾರ್ಯಕರ್ತರೇ ಅಧ್ಯಕ್ಷರನ್ನ ಹಿಡಿದು ಅಲ್ಲಾಡಿಸುವ ಕೆಲಸ ಆಗುತ್ತಿದೆ.

  Also read: Lakhimpur Kheri violence: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

  ನಮ್ಮ ಬಿಜೆಪಿ ಕೇಂದ್ರ ನಾಯಕರ ಮೇಲೆ ಡಿಕೆಶಿ ಮಾಡಿರುವ ಆಪಾದನೆ ವಾಪಸ್ ಪಡೆಯಬೇಕು. ನಮ್ಮ ಬಿಜೆಪಿ ಪಕ್ಷದಲ್ಲಿ ಎಲ್ಲರಿಗೂ ಒಂದೇ ನ್ಯಾಯ. ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಅಂತ ನಮ್ಮ ನಾಯಕರು ಹೇಳುತ್ತಲೇ ಬಂದಿದ್ದಾರೆ.

  ಯಡಿಯೂರಪ್ಪ ಅವರ ಪಿಎ‌ ಆಗಿದ್ದವರ ಮೇಲೆ ಐಟಿ ದಾಳಿ ಆಗಿದೆ ಅಂದರೆ, ನಾವು ಯಾವುದನ್ನ ಬೆಂಬಲ ಮಾಡುವುದಿಲ್ಲ ಎಂದರ್ಥ. ಯತ್ನಾಳ್, ವಿಶ್ವನಾಥ್ ಸೇರಿದಂತೆ ನಮ್ಮ ನಾಯಕರನ್ನ ಕಂಟ್ರೋಲ್ ಮಾಡುವ ಕೆಲಸವನ್ನು ಹಿರಿಯ ನಾಯಕರು ಮಾಡಿದ್ದಾರೆ. ಅವರಿಗೆ ನೊಟೀಸ್ ನೀಡಿದ್ದಾರೆ‌‌‌. ಅವರನ್ನು ನಮ್ಮ ಪಕ್ಷದ ಅಧ್ಯಕ್ಷರು ಕಂಟ್ರೋಲ್ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದವರೇ ಕಂಟ್ರೋಲ್ ಕಳೆದುಕೊಂಡಿದ್ದಾರೆ. ನಮ್ಮ ಪಕ್ಷ, ಕಾಂಗ್ರೆಸ್ ಪಕ್ಷಕ್ಕೂ ತುಂಬಾ ವ್ಯತ್ಯಾಸ ಇದೆ ಎಂದರು.

  ಕಾಂಗ್ರೆಸ್ ನಾಯಕತ್ವ ಸ್ಥಿರವಾಗಿಲ್ಲ. ಕಾಂಗ್ರೆಸ್ ಯಾವತ್ತು ಕೂಡಾ ಡಿಕೆಶಿ ನೇತೃತ್ವದಲ್ಲಿ ಉತ್ತಮವಾಗಿ ನಡೆಯಲು ಸಾಧ್ಯವಿಲ್ಲ. 24 ಗಂಟೆ ಕಾಲಾವಕಾಶವನ್ನ ಅವರಿಗೆ ಕೊಡುತ್ತೇನೆ.

  ಡಿಕೆಶಿ ಅವರು ತಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಏನು ಮಾಡುತ್ತಾರೆ ನೋಡೋಣ. ನಿಮ್ಮದೇ ಪಕ್ಷದರು ಭ್ರಷ್ಟ, ಕುಡುಕ ಅಂತೆಲ್ಲ ಹೇಳಿದ್ದಾರೆ. ಉಗ್ರಪ್ಪ ಅವರ ಮಾತು ಕೇಳಿ ಸಲೀಂ ಖುಷಿ ಪಡುತ್ತಿದ್ದರು, ಇದಕ್ಕೆ ‌ನಿಮ್ಮ ಉತ್ತರ ಏನು, ಡಿಕೆಶಿ ಹೇಳಬೇಕು ಎಂದು ಆಗ್ರಹಿಸಿದರು.

  Also read: Digital age: ಈ ಡಿಜಿಟಲ್‌ ಯುಗದಲ್ಲಿ ನಾವು ನಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ..?

  ಸಿದ್ದರಾಮಯ್ಯ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ.  ಮಂಡ್ಯಕ್ಕೆ ಒಂದು ಚಕ್ರ, ಬೆಳಗಾವಿಗೆ ಇನ್ನೊಂದು ಚಕ್ರ ಹೋಗ್ತಿದೆ. ಯಾವತ್ತು ಇವರುಗಳು ಒಟ್ಟಾಗಿ ಹೋಗೋಕೆ ಸಾಧ್ಯವಿಲ್ಲ. ಬಿಜೆಪಿಗೆ ಪರ್ಯಾಯ ಸರ್ಕಾರ ಕೊಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಲಂಗೂ ಲಗಾಮು ಇಲ್ಲದ ಪಕ್ಷ, ಬಿಜೆಪಿ ಅನೇಕ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: