HOME » NEWS » State » BENGALURU URBAN CONGRESS MLA ZAMEER LASHED OUT AN MP TEJASVI SURYA FOR TARGETTING MUSLIMS KVD

ತೇಜಸ್ವಿ ಸೂರ್ಯ ಉಲ್ಲೇಖಿಸಿರುವ 17 ಮಂದಿ ಮುಸ್ಲಿಮರಿಗೆ ನಾನು ಕೆಲಸ ಕೊಡ್ತೀನಿ: ಶಾಸಕ ಜಮೀರ್

ಬಹರೈನ್​​ ರಾಷ್ಟ್ರದಿಂದ ನಿನ್ನೆ ಆಕ್ಸಿಜನ್​ ಬಂದಿದೆ. ಅದು ಮುಸ್ಲಿಂ ರಾಷ್ಟ್ರ ಅಲ್ಲವೇ ಮತ್ತೇಕೆ ಅಲ್ಲಿಂದ ಆಕ್ಸಿಜನ್​ ತರಿಸಿಕೊಂಡಿದ್ದೀರ. ನಾವು ಕಳುಹಿಸಿದ ಆಕ್ಸಿಜನ್​​ನ ಮುಸ್ಲಿಮರಿಗೆ ಮಾತ್ರ ಬಳಸಿ ಎಂದು ಅಲ್ಲಿನವರು ಹೇಳಿದ್ದಾರಾ? ಎಂದು ಎಂಪಿ ತೇಜಸ್ವಿ ಸೂರ್ಯಗೆ ಶಾಸಕ ಜಮೀರ್​ ಪ್ರಶ್ನಿಸಿದ್ದಾರೆ.

Kavya V | news18-kannada
Updated:May 6, 2021, 3:32 PM IST
ತೇಜಸ್ವಿ ಸೂರ್ಯ ಉಲ್ಲೇಖಿಸಿರುವ 17 ಮಂದಿ ಮುಸ್ಲಿಮರಿಗೆ ನಾನು ಕೆಲಸ ಕೊಡ್ತೀನಿ: ಶಾಸಕ ಜಮೀರ್
ಶಾಸಕ ಜಮೀರ್​, ಸಂಸದ ತೇಜಸ್ವಿ ಸೂರ್ಯ
  • Share this:
ಬೆಂಗಳೂರು: ಬೆಡ್​​ ಬ್ಲಾಕಿಂಗ್​ ಪ್ರಕರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್​​ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್​, 205 ಸಿಬ್ಬಂದಿಯಲ್ಲಿ ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖಿಸಿರೋದು ಎಷ್ಟು ಸರಿ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದರು. ಭಾವೋದ್ವೇಗಕ್ಕೆ ಒಳಗಾದ ಜಮೀರ್​ ಅವರು ರಂಜಾನ್​ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ  ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಲ್ವಾ? 

ತೇಜಸ್ವಿ ಸೂರ್ಯ ಬೆಡ್​​ ಬ್ಲಾಕಿಂಗ್​ ದಂಧೆ ಬಯಲಿಗೆಳೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ನಿಮ್ಮಗೆ ಧನ್ಯವಾದ ಹೇಳ್ತಿನಿ. ಆದರೆ ನಿಮ್ಮ ಸರ್ಕಾರದ ಆಡಳಿತದಲ್ಲೇ ಈ ಬೆಡ್ ಆಕ್ರಮ ನಡೆದಿದೆ. ಹಾಗಾದರೆ ನೀವು  ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಬೇಕು ಅಲ್ವಾ. ಏಕೆ ತೇಜಸ್ವಿ ಅವರೇ ಸಿಎಂ  ರಾಜೀನಾಮೆ ಕೇಳುತ್ತಿಲ್ಲ ಎಂದು ಜಮೀರ್​ ಪ್ರಶ್ನಿಸಿದರು. ನೀವು ಆಕ್ರಮಣದಲ್ಲಿ ಭಾಗಿಯಾದವರ ಹೆಸರು ಹೇಳಿದ್ರಿ. ಎಲ್ಲಾ ಮುಸ್ಲಿಂ ಯವಕರ ಹೆಸರನ್ನು ಹೇಳಿದ್ದೀರ ಏಕೆ ಬೇರೆ ಯಾರು ಹೆಸರು ಸಿಕ್ಕಿಲ್ವಾ. ಇಂತಹ ಪ್ಲಬಿಕ್ ಸಿಟಿ ಬೇಕಾ ತೇಜಸ್ವಿ ಅವರೇ. ಇಂತಹ ಹೀನ ಕೃತ್ಯವನ್ನು ಮೊದಲು ನಿಲ್ಲಿಸಿ ಎಂದು ಕುಟುಕಿದರು.

ಅವರನ್ನು ತೆಗೆದು ಹಾಕಿದ್ರೆ, ನಾನು ಕೆಲಸ ಕೊಡ್ತೀನಿ..

ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್​ ರೆಡ್ಡಿ ಪಿಎ ಹರೀಶ್​ ಎಂಬುವರು ಶಾಮೀಲಾಗಿದ್ದಾರೆ ಎಂದು ಪೇಪರ್​ ತೋರಿಸಿದ ಜಮೀರ್​ ಇದಕ್ಕೆ ತೇಜಸ್ವಿ ಸೂರ್ಯ ಏನ್​ ಹೇಳ್ತಾರೆ ಎಂದು ಪ್ರಶ್ನಿಸಿದರು. ಸಂಸದರು ಉಲ್ಲೇಖಿಸಿರುವ 17 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರೆ ನಾನು ಅವರಿಗೆಲ್ಲಾ ಕೆಲಸ ಕೊಡುತ್ತೇನೆ ಎಂದು ಜಮೀರ್​ ಇದೇ ವೇಳೆ ಘೋಷಿಸಿದರು.

ರಂಜಾನ್​ ಸಮಯದಲ್ಲಿ ಹೀಗೆಲ್ಲಾ ನೋಯಿಸಬೇಡಿ

ಈ ಹಿಂದೆ ಸಂಸದರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ, ಮುಸ್ಲಿಂ ಅಂತ ನೋಡದೆ ನಾವು ಅಂತ್ಯ ಸಂಸ್ಕಾರದ ಮಾಡಿದ್ದೀವಿ. ಅವಾಗ ನೀವು ಎಲ್ಲಿ ಹೋಗಿದ್ರಿ ತೇಜಸ್ವಿ ಅವರೇ. ನಾವು ಯಾವ ಧರ್ಮ ಯಾವ ಜಾತಿ ಅಂತ ಕೇಳಿ ಅಂತ್ಯಸಂಸ್ಕಾರ ಮಾಡಿಲ್ಲ. ನೀವು ಜಾತಿ-ಧರ್ಮ ನೋಡದನ್ನು ಬಿಡಿ. ಇದೇ ಕೊನೆ ಈ ರೀತಿ ಮಾತನಾಡಬೇಡಿ ಎಂದು ಜಮೀರ್​ ಎಚ್ಚರಿಕೆ ನೀಡಿದರು. ಇದು ನಮ್ಮ ದೇಶ. ರಂಜಾನ್​ ವೇಳೆ ಹೀಗೆಲ್ಲಾ ನೋಯಿಸಬೇಡಿ ಎಂದು ಜಮೀರ್​ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.ಮುಸ್ಲಿಮರಿಗೆ ಮಾತ್ರ ಆಕ್ಸಿಜನ್​ ಕೊಡಿ ಎಂದು ಅವರು ಹೇಳಿದ್ದಾರಾ? 

ಬಹರೈನ್​​ ರಾಷ್ಟ್ರದಿಂದ ನಿನ್ನೆ ಆಕ್ಸಿಜನ್​ ಬಂದಿದೆ. ಅದು ಮುಸ್ಲಿಂ ರಾಷ್ಟ್ರ ಅಲ್ಲವೇ ಮತ್ತೇಕೆ ಅಲ್ಲಿಂದ ಆಕ್ಸಿಜನ್​ ತರಿಸಿಕೊಂಡಿದ್ದೀರ. ನಾವು ಕಳುಹಿಸಿದ ಆಕ್ಸಿಜನ್​​ನ ಮುಸ್ಲಿಮರಿಗೆ ಮಾತ್ರ ಬಳಸಿ ಎಂದು ಅಲ್ಲಿನವರು ಹೇಳಿದ್ದಾರಾ? ಪರಿಸ್ಥಿತಿ ಹೀಗಿರುವಾಗ ಸಂಸದರಾದ ತೇಜಸ್ವಿ ಸೂರ್ಯ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಜಮೀರ್​​ ತಿರುಗೇಟು ನೀಡಿದರು.

ಸಿದ್ದರಾಮಯ್ಯರಿಂದ ಕಲಿಯಿರಿ..

ಸಿದ್ದರಾಮಯ್ಯ ೫ ವರ್ಷ ಸಿಎಂ ಅಗಿದ್ದರು. ಅವರ ಹತ್ತಿರ ಟ್ಯೂಷನ್ ತಗೊಳ್ಳಿ ಸರ್ಕಾರ ಹೇಗೆ ನಡೆಸಬೇಕು ಅಂತ ಅವರ ಸಲಹೆ ತಗೊಳ್ಳಿ. ನಮ್ಮ ದುರಂತ ಇಂಥ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇಲ್ಲ. ಅವರು ಸಿಎಂ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
Published by: Kavya V
First published: May 6, 2021, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories