Bengaluru Car Accident: ಕಾರು ರಭಸವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ; ಕಾಂಗ್ರೆಸ್​ ಶಾಸಕ ರಾಮಲಿಂಗಾರೆಡ್ಡಿ

Bengaluru Car Accident: ವೈ.ಪ್ರಕಾಶ್ ನಮಗೆಲ್ಲಾ ಚಿರಪರಿಚಿತರು. ವೈ.ಪ್ರಕಾಶ್ ಅವರ ಮಗ ಸೇರಿ 6 ಸ್ನೇಹಿತರು ರಾತ್ರಿ 1.30 ರ ಸಮಯಕ್ಕೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸದ್ಯ ವೈ.ಪ್ರಕಾಶ್ ಚೆನೈನಲ್ಲಿ ಇದ್ದಾರೆ.

ಕಾರು ನಜ್ಜುಗುಜ್ಜಾಗಿರುವ ದೃಶ್ಯ

ಕಾರು ನಜ್ಜುಗುಜ್ಜಾಗಿರುವ ದೃಶ್ಯ

 • Share this:
  ಬೆಂಗಳೂರು(ಆ.31): ಬೆಂಗಳೂರಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ತಮಿಳುನಾಡಿನ ಹೊಸೂರು ಶಾಸಕ ವೈ.ಪ್ರಕಾಶ್​ ಮಗ ಕರುಣಾ ಸಾಗರ್ ಕೂಡ ಸಾವನ್ನಪ್ಪಿದ್ದಾನೆ. ಮೃತ ಕರುಣಾ ಸಾಗರ್ ತಂದೆ ವೈ. ಪ್ರಕಾಶ್​​ ಬಗ್ಗೆ ಕಾಂಗ್ರೆಸ್​ ಶಾಸಕ ರಾಮಲಿಂಗಾರೆಡ್ಡಿ ನ್ಯೂಸ್​ 18 ಜೊತೆ ಮಾತನಾಡಿದ್ದಾರೆ. ಪ್ರಕಾಶ್ ಹೊಸೂರು ಶಾಸಕರಾಗಿದ್ದರು. ಎರಡು ಬಾರಿ ಸ್ಥಳೀಯ ಚುನಾವಣೆಯಲ್ಲಿ ಗೆದ್ದಿದ್ದರು. ಮೊನ್ನೆಯಷ್ಟೆ ಹೊಸೂರಿನಿಂದ ಚುನಾವಣೆಗೆ ನಿಂತಿದ್ದರು.  ಆ ವೇಳೆ ನಾನು, ಸಿದ್ಧರಾಮಯ್ಯನವರು ಸೇರಿ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರಕ್ಕೆ ಜೊತೆಯಾಗಿದ್ದವು ಎಂದರು.

  ವೈ.ಪ್ರಕಾಶ್ ನಮಗೆಲ್ಲಾ ಚಿರಪರಿಚಿತರು. ವೈ.ಪ್ರಕಾಶ್ ಅವರ ಮಗ ಸೇರಿ 6 ಸ್ನೇಹಿತರು ರಾತ್ರಿ 1.30 ರ ಸಮಯಕ್ಕೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸದ್ಯ ವೈ.ಪ್ರಕಾಶ್ ಚೆನೈನಲ್ಲಿ ಇದ್ದಾರೆ. ಹೊಸೂರು ಮಾಜಿ ಶಾಸಕ ಸತ್ಯ ಅವರು ಸೇರಿ ಆಪ್ತರು ಇಲ್ಲಿಗೆ ಬಂದಿದ್ದಾರೆ. ನಿನ್ನೆ ರಾತ್ರಿ  ರಭಸವಾಗಿ ಕಾರು ಗುದ್ದಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರು ವಿದ್ಯುತ್ ಕಂಬಕ್ಕೆ ಹೊಡೆದು, ಬಳಿಕ ಬಿಲ್ಡಿಂಗ್​​ಗೆ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ ಎಂದು ಹೇಳಿದರು.

  ಕರುಣಾ ಸಾಗರ ಜೊತೆ ಇದ್ದವರು ಬೆಂಗಳೂರಿನ ಸ್ನೇಹಿತರು ಇರಬೇಕು.  ಕರುಣಾ ಸಾಗರ್‌ - ಮೃತ ಯುವತಿ ಬಿಂದು ಅವರಿಗೆ ಎಂಗೇಜ್ ಮೆಂಟ್ ಆಗಿತ್ತಾ? ಎಂಬ‌ ವಿಚಾರವಾಗಿ, ಯುವತಿ ಬಿಂದು ಬಗ್ಗೆ ಮಾಹಿತಿಯಿಲ್ಲ. ಅವರೆಲ್ಲ ಫ್ರೆಂಡ್ಸ್ ಇರಬೇಕು. ಉಳಿದ ಮೃತದೇಹಗಳನ್ನು ರವಾನಿಸಲು ವ್ಯವಸ್ಥೆ ಮಾಡಿ ಎಂದು ಸೆಂಟ್ ಜಾನ್ಸ್ ಆಸ್ಪತ್ರೆಗೆ ಹೇಳಲಾಗಿದೆ ಎಂದರು.

  ಇದನ್ನೂ ಓದಿ:Bengaluru Accident: ಆಕ್ಸಿಡೆಂಟ್​​ನಲ್ಲಿ ತಮಿಳುನಾಡು ಶಾಸಕರ ಮಗನೂ ಸಾವು; ಬೆಂಗಳೂರಿಗೆ ದೌಡಾಯಿಸಿದ ಕುಟುಂಬಸ್ಥರು

  ಕಾರಿನಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದು, 3 ಜನ ಯುವರಿಯರು ಹಾಗೂ 4 ಜನ ಹುಡುಗರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಮಧ್ಯರಾತ್ರಿ ಸುಮಾರು 1.30ಕ್ಕೆ ನಡೆದಿದ್ದು, ಸ್ಥಳಕ್ಕೆ ಆಡುಗೋಡಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಬಿಂದು (28) - ದಂಪತಿ, ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತರು ಎಂದು ತಿಳಿದು ಬಂದಿದೆ.

  ಅಪಘಾತಕ್ಕೀಡಾದ ಕಾರು ಆಡಿ ಕ್ಯೂ ಎನ್ನಲಾಗಿದ್ದು, ವೇಗವಾಗಿ ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ತಡರಾತ್ರಿ ಬಹಳ ವೇಗವಾಗಿ ಬಂದ ಕಾರು ಫುಟ್​​ಪಾತ್​​ಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

  ಹೊಸೂರು ಕ್ಷೇತ್ರದ ಶಾಸಕ Y. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ ಸಾವಿನ ಸುದ್ದಿ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕರುಣಾ ಸಾಗರ್ 28ರ ಹರೆಯದ ಯುವಕ, ಬ್ಯುಸಿನೆಸ್ ಮಾಡುತ್ತಿದ್ದ. ನಿನ್ನೆ ಸಂಜೆ ಮೆಡಿಸಿನ್ ಹಾಕಿಸಿಕೊಳ್ಳುತ್ತೇನೆಂದು ಹೊಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ. ಆಡಿ ಕಾರಿನಲ್ಲಿ ಆರು ಸ್ನೇಹಿತರ ಜೊತೆ ಬೆಂಗಳೂರಿಗೆ ಬಂದಿದ್ದ. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಅತೀ ವೇಗವಾಗಿ ಬಂದ ಆಡಿ ಕಾರು ಫುಟ್​​ಪಾತ್​​ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ 7 ಜನರೂ ದುರಂತ ಅಂತ್ಯ ಕಂಡಿದ್ದರು.

  ಇದನ್ನೂ ಓದಿ:Accident in Bengaluru: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕಾರಿನಲ್ಲಿದ್ದ 7 ಮಂದಿ ದಾರುಣ ಸಾವು

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
  Published by:Latha CG
  First published: