Siddaramaiah ಅನ್ನೋದು ಶಕ್ತಿ, BJPಯಿಂದ ನೈತಿಕವಾಗಿ ಕುಗ್ಗಿಸುವ ಪ್ರಯತ್ನ ಆಗ್ತಿದೆ: Congress ನಾಯಕರ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರನ್ನು ಕುಗ್ಗಿಸಿದರೆ ಕಾಂಗ್ರೆಸ್ ಗೆ ನಷ್ಟ ಮಾಡುವ ಲೆಕ್ಕಾಚಾರ. ಮತ್ತೇ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಭ್ರಮೆಯಲ್ಲಿ ಬಿಜೆಪಿ ಯವರು ಇದ್ದಾರೆ. ಇಂತಹ ಚಿಲ್ಲರೆ ಕೆಲಸ ಬಿಜೆಪಿಯವರು ಮಾಡಬಾರದು ಎಂದು ಬಸವರಾಜ್ ರಾಯರೆಡ್ಡಿ ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ

  • Share this:
ಮಾಜಿ ಸಿಎಂ ಸಿದ್ದರಾಮಯ್ಯ(Former CM Siddaramaiah)ನವರು ಸ್ವಾಮೀಜಿಗಳು ಧರಿಸುವ ವಸ್ತ್ರದ ಕುರಿತ ನೀಡಿದ ಹೇಳಿಕೆ ವಿವಾದಕಕ್ಕೆ ಗುರಿಯಾಗಿತ್ತು. ಈ ಹೇಳಿಕೆ ಸಂಬಂಧ ಬಿಜೆಪಿ (BJP) ಸೇರಿದಂತೆ ವಿವಿಧ ಸ್ವಾಮೀಜಿಗಳು (Swamiji) ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇಂದು ಸಿದ್ದರಾಮಯ್ಯನವರ ಹೇಳಿಕೆ ಸಮರ್ಥಿಸಿಕೊಂಡು ವಿಧಾನಸೌಧದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ (Basavaraj Rayareddy) ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಅಪ್ಪಾಜಿ ನಾಡಗೌಡ, ಪ್ರಕಾಶ್ ರಾಠೋಡ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಬಸವರಾಜ್ ರಾಯರೆಡ್ಡಿ, ಹಿಜಾಬ್ (Hjab) ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ನಾವು ಹೈಕೋರ್ಟ್ (Karnataka High court) ತೀರ್ಪನ್ನು ಗೌರವಿಸುತ್ತೇವೆ. ಹಿಜಾಬ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಶಾಲೆಗೆ ಹೋಗಲಿ. ಆದ್ರೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಮೇಲೆ ದುಪಟ್ಟ ಹಾಕಿಕೊಳ್ಳಲು ಅವಕಾಶ ಕೋಡಿ ಎಂದು ಹೇಳಿದ್ದಾರೆ.  ಮಠದ ಸ್ವಾಮೀಜಿಗಳು ತಲೆ ಮೇಲೆ ಕೂಡ ಶಾಲು ಹಾಕಿಕೊಳ್ತಾರೆ ಎಂದು ಸಿದ್ದರಾಮಯ್ಯ ಹೇಳಿಲ್ಲ. ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಯಾರೋ ಒಬ್ಬ ಯುವಕ ಹಿಂದೆ ನಿಂತು ಸರ್ ಸ್ವಾಮೀಜಿಗಳು ಕೂಡ ತಲೆ ಮೇಲೆ ಶಾಲು ಹಾಕಿಕೊಳ್ತಾರೆ ಎಂದಿದ್ದಾನೆ. ಆಗ ಸಿದ್ದರಾಮಯ್ಯ  ಅವರು ಹೌದು ಎಂದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ನೈತಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗ್ತಿದೆ

ಉತ್ತರ ಕರ್ನಾಟಕ ಭಾಗದಲ್ಲಿ ಹೆಂಗಸರು ಸೆರಗು ಹಾಕುತ್ತಾರೆ. ಅದು ನಮ್ಮ ಸಂಸ್ಕೃತಿಯ ಭಾಗ ಸ್ವಾಮೀಜಿ ಬಗ್ಗೆ ಸಿದ್ದರಾಮಯ್ಯ ಅವಹೇಳನ ಮಾಡಿಲ್ಲ. ಧರ್ಮ ಎತ್ತಿ ಹಿಡಿಯುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಬಿಜೆಪಿಯಿಂದ ಮಾಡಲಾಗುತ್ತಿದೆ.

ಇದನ್ನೂ ಓದಿ:  Karnataka Politics: ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಹಿರಿಯ-ಕಿರಿಯ ಎಂದು ಒಡೆಯುತ್ತಿದ್ದಾರೆ: ಸಚಿವ ಈಶ್ವರಪ್ಪ ಕಿಡಿ

ಸಿದ್ದರಾಮಯ್ಯ ಅವರನ್ನು ಕುಗ್ಗಿಸಿದರೆ ಕಾಂಗ್ರೆಸ್ ಗೆ ನಷ್ಟ ಮಾಡುವ ಲೆಕ್ಕಾಚಾರ. ಮತ್ತೇ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಭ್ರಮೆಯಲ್ಲಿ ಬಿಜೆಪಿ ಯವರು ಇದ್ದಾರೆ. ಇಂತಹ ಚಿಲ್ಲರೆ ಕೆಲಸ ಬಿಜೆಪಿಯವರು ಮಾಡಬಾರದು ಎಂದು ಬಸವರಾಜ್ ರಾಯರೆಡ್ಡಿ ಆಕ್ರೋಶ ಹೊರ ಹಾಕಿದರು.

ಸಿಎಂ ಬೊಮ್ಮಾಯಿ ತಮ್ಮ ಸಚಿವರಿಗೆ ತಾಕೀತು ಮಾಡಲಿ

ಸಿದ್ದರಾಮಯ್ಯ ಅನ್ನೋದು ಅದೊಂದು ಶಕ್ತಿ. ಅವರ ಹಿಂದೆ ಲಕ್ಷಾಂತರ ಜನರು ಇದ್ದಾರೆ. ಬಸವಣ್ಣ ಪೋಟೋ ಹಾಕಿದವರು ಸಿದ್ದರಾಮಯ್ಯ. ಅಕ್ಕಮಹಾದೇವಿ ಹೆಸರು ಬಿಜಾಪುರ ಮಹಿಳಾ ವಿವಿಗೆ ಇಟ್ಟಿದ್ದು ಸಿದ್ದರಾಮಯ್ಯ. ಪಡಿತರ ವ್ಯವಸ್ಥೆ ಎಲ್ಲಾ ಸಮುದಾಯಕ್ಕೆ ಸಿಗಬೇಕು ಅಂತ ಕಾರ್ಯಕ್ರಮ ತಂದವರು ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಯೋಜನೆಗಳನ್ನು ಹೇಳಿದರು.

ಸಿದ್ದರಾಮಯ್ಯ ಅವರ ಬಗ್ಗೆ ಕೆಲ ಸಚಿವರು ನೀಡ್ತಿರುವ ಹೇಳಿಕೆ ವಿಷಾದನೀಯ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಉಳಿಸಿಕೊಳ್ಳಲು ಮೌನ ಆಗಬಾರದು.  ಸಚಿವರಿಗೆ ಕೀಳು ಮಟ್ಟದ ಹೇಳಿಕೆ ನೀಡದಂತೆ ತಾಕೀತು ಮಾಡಬೇಕು ಎಂದು ಬಸವರಾಜ್ ರಾಯರೆಡ್ಡಿ ಮನವಿ ಮಾಡಿಕೊಂಡರು.

ನನಗೆ ಸ್ವಾಮೀಜಿ ಮೇಲೆ ಗೌರವವಿದೆ

ನನಗೆ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಅಪಾರ ಗೌರವವಿದೆ. ನಾನು ಮಠಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ದುಪ್ಪಟ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಅಂತ ಕೇಳಿದ್ದೇನೆ. ನಾನು ಸಮವಸ್ತ್ರದ ವಿರೋಧಿ ಅಲ್ಲ. ಸಮವಸ್ತ್ರದ ಜೊತೆ ಅದೇ ಬಣ್ಣದ ದುಪ್ಪಟಕ್ಕೆ ಅವಕಾಶ ನೀಡಿ ಅಂತ ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಸಲಹೆ ಕೊಟ್ಟಿದ್ದೇನೆ. ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಫುಲ್​ ಗರಂ ಆಗಿದ್ದಾರೆ.

ಇದನ್ನೂ ಓದಿ:  Karnataka Politics: ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೂ ಮುನ್ನವೇ ವಿರೋಧ; '75 ವರ್ಷ ದಾಟಿದ ಕಳಂಕಿತರು ನಮ್ಮ ಪಕ್ಷಕ್ಕೆ ಬೇಕಾ?'

ಟ್ವೀಟ್​ ಮೂಲಕ ಸಿದ್ದರಾಮಯ್ಯ ಸ್ಪಷ್ಟನೆ

ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ವಿರೋಧಿಗಳು ದುರುದ್ದೇಶದಿಂದ ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲ ಶ್ರೀಗಳಿಗೆ ಇದು ಅರ್ಥವಾಗಿರುವ ಕಾರಣ ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.
Published by:Mahmadrafik K
First published: