ಲಾಕ್​ಡೌನ್​ ವೇಳೆ ಬಡವರಿಗೆ ಕನಿಷ್ಠ 5ಸಾವಿರ ಸಹಾಯಧನ ನೀಡಬೇಕು; ಕಾಂಗ್ರೆಸ್​ ಆಗ್ರಹ

ಲಾಕ್​ಡೌನ್​ ಸಮಯದಲ್ಲಿ ಬಡವರಿಗೆ ತೊಂದರೆಯಾಗದಂತೆ ಉಚಿತ ಆಹಾರ ವಿತರಣೆಯಾಗಬೇಕು

ವಿ.ಎಸ್.​ ಉಗ್ರಪ್ಪ.

ವಿ.ಎಸ್.​ ಉಗ್ರಪ್ಪ.

 • Share this:
  ಬೆಂಗಳೂರು (ಮೇ. 7): ಕೊರೋನಾ ಎರಡನೇ ಅಲೆಗೆ ರಾಜ್ಯ ತತ್ತರಿಸಿದೆ. ಕಳೆದೆರಡು ದಿನಗಳಿಂದ 50 ಸಾವಿರ ಪ್ರಕರಣಗಳು ದಿನವೊಂದಕ್ಕೆ ದಾಖಲಾಗುವ ಮೂಲಕ ಇನ್ನಷ್ಟು ಆತಂಕ ಹೆಚ್ಚಿಸಿದೆ. ಜನತಾ ಕರ್ಫ್ಯೂ ಜಾರಿ ಮಧ್ಯೆಯೂ ಸೋಂಕಿನ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ. ಈ ಹಿನ್ನಲೆ ಈಗ ಲಾಕ್​ಡೌನ್​ ಜಾರಿ ಮಾಡುವುದೊಂದೇ ಈಗಿರುವ ಮಾರ್ಗ ಎಂಬಂತೆ ಕಂಡು ಬಂದಿದೆ. ಕೋವಿಡ್​ ಸೋಂಕಿನ ಸರಪಳಿ ಮುರಿಯಲು ಲಾಕ್​ಡೌನ್​ ಜಾರಿ ಮಾಡುವುದು ಅನಿವಾರ್ಯ ಎಂಬ ಸಲಹೆಯನ್ನು ಈಗಾಗಲೇ ಹಲವು ತಜ್ಞರು ಮುಂದಿರಿಸಿದ್ದಾರೆ. ಇದೇ ಹಿನ್ನಲೆ ಇಂದು ಮುಖ್ಯಮಂತ್ರಿಗಳು ಸಭೆ ನಡೆಸಿದ್ದು, ಮಹತ್ವ ಪೂರ್ಣ ನಿರ್ಧಾರ ಕೈಗೊಳ್ಳಲಿದ್ದಾರೆ. ಲಾಕ್​ಡೌನ್​ ಜಾರಿ ಮಾಡಿದರೆ ಇದರಿಂದ ಸಂಕಷ್ಟಕ್ಕೆ ಒಳಗಾಗುವವರು ಬಡವರು ಈ ಹಿನ್ನಲೆ ಸರ್ಕಾರ ಈ ಸಮಯದಲ್ಲಿ ಅವರ ನೆರವಿಗೆ ಧಾವಿಸಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.

  ಈ ಕುರಿತು ಇಂದು ಮಾಜಿ ಸಂಸದ ಉಗ್ರಪ್ಪ ಹಾಗೂ ಹೆಚ್​ ಎಂ ರೇವಣ್ಣ ಸುದ್ದಿಗೋಷ್ಟಿ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್​ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಮಾಡುವಂತೆ ನ್ಯಾಯಾಲಯ ಸಲಹೆ ನೀಡಿದೆ. ಸರ್ಕಾರದ ಕೂಡ ಲಾಕ್​ಡೌನ್​ ಮಾಡಲು ಹೊರಟಿದೆ. ಇದಕ್ಕೆ ಕಾಂಗ್ರೆಸ್​ ಕೂಡ ಸಹಕಾರ ನೀಡಲಿದೆ. ಆದರೆ, ಲಾಕ್​ಡೌನ್​ ಸಮಯದಲ್ಲಿ ಬಡವರಿಗೆ, ಕಾರ್ಮಿಕರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ತಿಳಿಸಿದ್ದಾರೆ. ಸೋಂಕು ನಿಯಂತ್ರಣ ದೃಷ್ಟಿಯಿಂದ ಸರ್ಕಾರ ಲಾಕ್​ಡೌನ್​ ಮಾಡಲು ಹೊರಟಿದೆ. ಈ ಸಮುದಲ್ಲಿ ಜನರು ಮನೆಯಲ್ಲೇ ಇರುವುದರಿಂದ ಅವರಿಗೆ ಸಾಕಷ್ಟು ತೊಂದರೆಯಾಗಲಿದ್ದು, ಬಡ ವರ್ಗದವರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಈ ಹಿನ್ನಲೆ ಬಿಪಿಎಲ್​ ಕಾರ್ಡ್​ವೊಂದಿರುವವರಿಗೆ ಕನಿಷ್ಠ ಐದು ಸಾವಿರ ಸಹಾಯ ಧನವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

  ಲಾಕ್​ಡೌನ್​ ಸಮಯದಲ್ಲಿ ಬಡವರಿಗೆ ತೊಂದರೆಯಾಗದಂತೆ ಇಂದಿರಾ ಕ್ಯಾಂಟಿನ್ ಮೂಲಕ ಆಹಾರ ಒದಗಿಸುವ ಕಾರ್ಯವಾಗಬೇಕು. ಬಿಪಿಎಲ್​ ಕಾರ್ಡ್​ದಾರರಿಗೆ ಉಚಿತ ಆಹಾರ ವಿತರಣೆಯಾಗಬೇಕು ಎಂದರು.

  ಇದನ್ನು ಓದಿ: ಯಾವುದೇ ಸಮುದಾಯಕ್ಕೆ ನೋವು ಮಾಡುವುದು ಉದ್ದೇಶವಾಗಿರಲಿಲ್ಲ; ಕೋವಿಡ್​ ವಾರ್​ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ ತೇಜಸ್ವಿ ಸೂರ್ಯ

  ರಾಜ್ಯ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಡಬೇಕು. ಈ ಕೆಲಸವನ್ನ ತ್ವರಿತವಾಗಿ ಸರ್ಕಾರ ಮಾಡಬೇಕು. ಅವಶ್ಯಕತೆ ಇರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

  ಮುಖ್ಯವಾಗಿ ಈ ಲಾಕ್​ಡೌನ್​ ಟೈಂನಲ್ಲಿ ರೈತರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು . ರೈತರು ಬೆಳದ ಎಲ್ಲಾ ರೀತಿಯ ಬೆಳೆಗಳನ್ನು ಸರ್ಕಾರ ಖರೀದಿಸಬೇಕು
  ಮೂರನೇ ಅಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನಲೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಬೇಕು. ನಗರಪಾಲಿಕೆ ಇರುವ ಕಡೆ 1 ರಿಂದ 10 ಸಾವಿರ ಬೇಡ ರೆಡಿ ಮಾಡಬೇಕು. ಒಟ್ಟಾರೆ ರಾಜ್ಯದಲ್ಲಿ ಜನರಿಗೆ ತೊಂದರೆ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು
  Published by:Seema R
  First published: