ನಿಮ್ಮ ಬಗ್ಗೆ ನಾನು ತಪ್ಪು ತಿಳ್ಕೊಂಡಿಲ್ಲ ಸರ್.. ಮನೆಗೆ ಬಂದ ಸಿದ್ದರಾಮಯ್ಯ ಬಳಿ ನೋವು ತೋಡಿಕೊಂಡ ಜಮೀರ್

siddaramaiah- mla zameer :ನನ್ನ ತಪ್ಪು ತಿಳಿದುಕೊಳ್ಳಬೇಡಿ ಸರ್​ ಎಂದು ಅವಲತ್ತುಕೊಂಡಿದ್ದಾರೆ. ನಾನು ಅಸಮಾಧಾನಕೊಂಡು ಮುನಿಸಿಕೊಂಡಿಲ್ಲ, ನಿನ್ನ ಬಗ್ಗೆ ನಾನು ತಪ್ಪು ತಿಳಿದುಕೊಂಡಿಲ್ಲ. ನೀನು ಟೆನ್ಷನ್ ಲ್ಲಿ ನೀವು ಇರ್ತಿರ ಎಂದು ಕರೆ ಮಾಡಲಿಲ್ಲ ಎಂದು ಜಮೀರ್​ ಹೇಳಿಕೊಂಡಿದ್ದಾರೆ.

ಜಮೀರ್​ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

ಜಮೀರ್​ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

  • Share this:
ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್​​ ಶಾಸಕ ಜಮೀರ್​ ಅಹಮ್ಮದ್​ ಖಾನ್​​ ಮನೆ ಮೇಲೆ ಇಡಿ ದಾಳಿ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಅವರ ಮನೆಗೆ ಭೇಟಿ ನೀಡಿದರು. ಜಮೀರ್​ ಮನೆ ಮೇಲೆ ದಾಳಿಗೆ ಕಾಂಗ್ರೆಸ್​ ನಾಯಕರೇ ಕಾರಣ, ಸಿದ್ದರಾಮಯ್ಯನೇ ಕಾರಣ ಎಂದೆಲ್ಲಾ ಬಿಜೆಪಿ ನಾಯಕರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಂದು ಮನೆಗೆ ಬಂದ ಸಿದ್ದರಾಮಯ್ಯನವರ ಬಳಿ ಜಮೀರ್​ ನನ್ನ ತಪ್ಪು ತಿಳಿದುಕೊಳ್ಳಬೇಡಿ ಸರ್​ ಎಂದು ಮನವಿಕೊಂಡಿದ್ದಾರೆ. ನಾನು ಅಸಮಾಧಾನಕೊಂಡು ಮುನಿಸಿಕೊಂಡಿಲ್ಲ, ನಿನ್ನ ಬಗ್ಗೆ ನಾನು ತಪ್ಪು ತಿಳಿದುಕೊಂಡಿಲ್ಲ. ನೀನು ಟೆನ್ಷನ್ ಲ್ಲಿ ನೀವು ಇರ್ತಿರ ಎಂದು ಕರೆ ಮಾಡಲಿಲ್ಲ ಎಂದು ಜಮೀರ್​ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಯಾವುದೇ ಅಸಮಾಧಾನ ಇಲ್ಲ ಎಂದು ಮೂರನೇ ಬಾರಿ ಹೇಳ್ತಿದ್ದೀಯಾ ನನಗೆ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದ ಜಮೀರ್​ ಅವರನ್ನು ಸಿದ್ದರಾಮಯ್ಯ ಸಂತೈಸಿದ್ದಾರೆ. ಸರ್ ಐಎಂಎ ಕೇಸ್ ಲ್ಲಿ ನನ್ನ ಪಾತ್ರ ಇಲ್ಲ. ನನ್ನ ಮನೆ ಕಟ್ಟಿರುವುದು ಸಹ ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಇದೆಲ್ಲ ಸುಳ್ಳು ಎಂದು ಸಿದ್ದರಾಮಯ್ಯ ಅವರ ಬಳಿ ಜಮೀರ್ ಹೇಳಿಕೊಂಡಿದ್ದಾರೆ.

ನನಗೆ ಗೊತ್ತು ಬಿಡು, ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊ, ತಡ ಮಾಡಬೇಡ. ಬಿಜೆಪಿ ಇಡಿ ಬಳಸಿಕೊಂಡು ನಿನ್ನ ಮೇಲೆ ರೇಡ್ ಮಾಡಿಸಿದೆ. ಎಲ್ಲ ದಾಖಲೆ ಸರಿ ಮಾಡಿಕೊ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಜಮೀರ್ ನಿವಾಸದ ಪ್ರತ್ಯೇಕ ಕೊಠಡಿಯಲ್ಲಿ ಸಿದ್ದರಾಮಯ್ಯ,  ಜಮೀರ್ ಹಾಗೂ ಶಾಸಕ ಭೈರತಿ ಬಸವರಾಜ್​​ ಮಾತುಕತೆ ನಡೆಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಈ ಮನೆ ಗೃಹ ಪ್ರವೇಶಕ್ಕೆ ನಾನು ಬರಲು ಆಗಿರಲಿಲ್ಲ. ಹೀಗಾಗಿ ಇಂದು ಆಹ್ವಾನ ನೀಡಿದ್ದರು. ಜಮೀರ್ ಮನೆಗೆ ಊಟಕ್ಕೆ‌ ಬಂದಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದರು. ಜಮೀರ್​​ ಇಡಿ ದಾಳಿ ಬಗ್ಗೆ ನಾನು ಸಲಹೆ ನೀಡಿಲ್ಲ, ಸಲಹೆ ನೀಡಲು ಅವರ ವಕೀಲರಿದ್ದಾರೆ. ನಮ್ಮ ಪಕ್ಷದ ಕುರಿತು ಮಾತ್ರ ಮಾತನಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಹೊಸ ದಾಖಲೆ ಬರೆದ ಭಾರತೀಯರು: ರಾಷ್ಟ್ರಗೀತೆ ಹಾಡಿರುವ 1.5 ಕೋಟಿಗೂ ಹೆಚ್ಚು ವಿಡಿಯೋ ಅಪ್​​​ಲೋಡ್​​

ಆ.5ರಂದು ಶಾಸಕ ಜಮೀರ್​ ಅಹಮ್ಮದ್​ ಖಾನ್​ ಮನೆ ಮೇಲೆ, ಸಹೋದರರು ಹಾಗೂ ಸಂಬಂಧಿಕರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಜಮೀರ್ ಅಹ್ಮದ್ ಖಾನ್ ಇತ್ತೀಚೆಗಷ್ಟೇ ಭವ್ಯವಾದ ಮನೆಯನ್ನು ಕಟ್ಟಿಸಿದ್ದರು. ಟ್ರಾವೆಲ್ಸ್ ಹೊರತುಪಡಿಸಿ ಜಮೀರ್ ಅಹಮದ್ ಅವರ ಇನ್ನಿತರ ವ್ಯವಹಾರಗಳ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದರು. ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್​ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು.  ಜಮೀರ್​​ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಮಾಹಿತಿಯನ್ನು ಕಲೆ ಹಾಕಿತ್ತು.

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: