KS Eshwarappa ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿ, ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ; ಕಾಂಗ್ರೆಸ್​​

ಈಶ್ವರಪ್ಪ ವಿರುದ್ಧ ಇನ್ನು ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿಲ್ಲ. ಪ್ರಕರಣ ಸಂಬಂಧ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು

ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಕಾಂಗ್ರೆಸ್​ ನಾಯಕರ ಪ್ರತಿಭಟನೆ

 • Share this:
  ಗುತ್ತಿಗೆದಾರ ಸಂತೋಪ್​ ಪಾಟೀಲ್ (Santosh Patil)​​ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಡೆಗೂ ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ (KS Eshwarappa Resignation) ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಷಡ್ಯಂತ್ರವಿದೆ. ತಾವು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದ ಅವರು ಕಾಂಗ್ರೆಸ್​ ನಾಯಕರ ಪ್ರತಿಭಟನೆ ಜೋರಾದ ಹಿನ್ನಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಈ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಪುನರ್​ಚ್ಚರಿಸಿದ್ದಾರೆ.

  ಫಲ ನೀಡಿದ ಕಾಂಗ್ರೆಸ್​​ ಪ್ರತಿಭಟನೆ
  ಇನ್ನು ಈಶ್ವರಪ್ಪ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ನಿನ್ನೆಯಿಂದ ಬಿಗಿ ಪಟ್ಟು ಹಿಡಿದಿದ್ದ ಕಾಂಗ್ರೆಸ್​ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿತು. ಸಿಎಂ ಮನೆಗೆ ಮುತ್ತಿಗೆ ಸಾಧ್ಯವಾಗದ ಹಿನ್ನಲೆ ವಿಧಾನಸೌಧದಲ್ಲೇ 24 ಗಂಟೆಗಳ ಧರಣಿ ಕುಳಿತಿದ್ದರು. ಅವರ ಧರಣಿ ಒತ್ತಡ ಕಡೆಗೂ ಫಲ ನೀಡಿದೆ.

  ಇದನ್ನು ಓದಿ: ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನಿರ್ಧಾರ, ನಾಳೆಯೇ ರಾಜೀನಾಮೆ ಪತ್ರ ಸಲ್ಲಿಕೆ

  ಭ್ರಷ್ಟಾಚಾರ ಪ್ರಕರಣ ದಾಖಲಾಗುವವರೆಗೂ ನಮ್ಮ ಹೋರಾಟ

  ಇನ್ನು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ನಾವು ಕೇಳುತ್ತಿರುವುದು ಈಶ್ವರಪ್ಪ ಮೇಲೆ ಭ್ರಷ್ಟಾಚಾರ ಮೇಲೆ ಪ್ರಕರಣ ದಾಖಲಿಸಿ, ಬಂಧನಕ್ಕೆ ಆಗ್ರಹಿಸಿ ಎಂದು ಅವರ ವಿರುದ್ದ ಇನ್ನು ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿಲ್ಲ. ಪ್ರಕರಣ ಸಂಬಂಧ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

  ಈಶ್ವರಪ್ಪ ರಾಜೀನಾಮೆ ನನ್ನ ಮತ್ತು ಸಿದ್ದರಾಮಯ್ಯ ಜಯವಲ್ಲ. ಇದು ರಾಜ್ಯ ಜನತೆಯ ಜಯ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಅವರ ಮೇಲೆ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು ಅಲ್ಲಿಯವೆರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

  ಮೊದಲು ಅವರನ್ನು ಬಂಧಿಸಿ ಎಂದ ಡಿಕೆಶಿ

  ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಹರಿಹಾಯ್ದ ಅವರು, ಬರೀ ಸುಳ್ಳು ಹೇಳಿಕೊಂಡು ಹೋಗುತ್ತಿದ್ದೀರಲ್ಲ ಅದೆಲ್ಲ ನಡೆಯುವುದಿಲ್ಲ. ನಿಮ್ಮ ಸರ್ಕಾರ ಕಳಂಕಿತವಲ್ಲ ಎನ್ನುವುದಾದರೆ ಮೊದಲು ಅವರನ್ನು ಬಂಧಿಸಿ ಎಂದು ಸವಾಲು ಹಾಕಿದರು

  ಇದನ್ನು ಓದಿ:  ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್​ನವ್ರಿಂದ, 'ಕೈ' ನಾಯಕರ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

  ಕಡೆಗೂ ಈಶ್ವರಪ್ಪಗೆ ತಪ್ಪಿನ ಅರಿವಾಗಿದೆ

  ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ,  ಈಶ್ವರಪ್ಪನವರು ಇಲ್ಲಿಯವರೆಗೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಅವರು ಸುಳ್ಳಿನ ಅಧ್ಯಕ್ಷರು. ನಮ್ಮ ಹೋರಾಟ ಚುರುಕಾದ ಮೇಲೆ ನಾಳೆ ಸಂಜೆ ರಾಜೀನಾಮೆ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಅದರ ಅರ್ಥ ಸಂತೋಷ್ ಪಾಟೀಲ್ ಅವರ 40 ಪರ್ಸೆಂಟ್​​ ಕಮಿಷನ್ ಆರೋಪದ ತಪ್ಪಿನ ಅರಿವು ಈಶ್ವರಪ್ಪಗೆ ಆಗಿದೆ. ಸಂತೋಷ್ ಯಾರೂ ಅಂತಾ ನಂಗೆ ಗೊತ್ತೆ ಇಲ್ಲ ಅಂತಾ ಹೇಳುತ್ತಿದ್ದರು. ಸಂತೋಷ್​ ಯಾರು ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ. ಸಂತೋಷ್ ಯಾರು ಅಂತಾ ಗೊತ್ತಿಲ್ಲದೆ ಮಾನನಷ್ಠ ಮೊಕದ್ದಮೆ ಹೂಡಿದ್ರಾ ಎಂದು ಪ್ರಶ್ನಿಸಿದರು

  ಈಶ್ವರಪ್ಪ ಹೇಳದ ಹೊರತು ಕೆಲಸ ಮಾಡಲು ಆಗುತ್ತಾ? ಬಿಲ್ ಆಗದೆ ಸಂತೋಷ್ ಮೋದಿಗೆ, ಬಿ ಎಲ್ ಸಂತೋಷ್, ಅರುಣ್ ಸಿಂಗ್ ಗೆ ಹೇಳಿದ್ದಾರೆ. ಬಿಲ್ ಕೊಡದಿದ್ದರೆ ನಂಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಎಂದು ಹೇಳಿದ್ದಾರೆ. ಪತ್ರದಲ್ಲಿ ಹೇಳಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಇವರ ಮೇಲೆ ಪ್ರಕರಣ ದಾಖಲಿಸಲು ಎಂದು ಕೇಳಿದರು

  ಧರಣಿ ಮುಂದುವರೆಯಲಿದೆ

  ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆದರೆ ಸಿಎಂ ಅವರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಈಶ್ವರಪ್ಪ ಬಂಧನವಾಗಬೇಕು. ಇವು ನಮ್ಮ ಪ್ರಮುಖ ಬೇಡಿಕೆಗಳು. ಈ ಹಿನ್ನಲೆ ನಮ್ಮ ಧರಣಿ ನಿಲ್ಲಿಸುವುದಿಲ್ಲ. 24 ಗಂಟೆ ಧರಣೆ ಮಾಡುತ್ತೇವೆ. ಧರಣಿ ಮುಂದುವರೆಯಲಿದೆ. ನಾಳೆ ಮತ್ತೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದರು
  Published by:Seema R
  First published: