Bitcoin Scamನಲ್ಲಿ ಇಬ್ಬರೂ ಇದ್ದೇವೆ, ಸೆಟಲ್ ಮಾಡಿಕೊಳ್ಳೋಣ ಎಂಬರ್ಥದಲ್ಲಿದೆ CM ಮಾತು: Priyank Kharge

ಕಾಂಗ್ರೆಸ್​​​ನವರು ಹಗರಣದಲ್ಲಿ ಇದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಅವರ ಮಾತಿನ ದಾಟಿ ನೋಡಿದರೆ ಬೇರೆ ಅರ್ಥ ಬರುತ್ತೆ. ನೀವು-ನಾವು ಇಬ್ಬರೂ ಇದರಲ್ಲಿ ಇದ್ದೇವೆ,  ಸೆಟಲ್ ಮಾಡಿಕೊಳ್ಳೋಣ ಎನ್ನುವಂತಿತ್ತು ಅವರ ಹೇಳಿಕೆ ಎಂದು ತಿರುಗೇಟು ನೀಡಿದರು.

ಪ್ರಿಯಾಂಕ್​ ಖರ್ಗೆ, ಸಿಎಂ ಬೊಮ್ಮಾಯಿ

ಪ್ರಿಯಾಂಕ್​ ಖರ್ಗೆ, ಸಿಎಂ ಬೊಮ್ಮಾಯಿ

  • Share this:
ಬೆಂಗಳೂರು: ಬಿಟ್​​ ಕಾಯಿನ್​​ ಹಗರಣದಲ್ಲಿ (Bitcoin Scam) ಪ್ರಭಾವಿಗಳು ಭಾಗಿಯಾಗಿದ್ದು ಸರ್ಕಾರಕ್ಕೆ ಉರುಳಾಗಬಹುದು. ಬಿಜೆಪಿಯಿಂದ (BJP) 3ನೇ ಸಿಎಂ ನೋಡಬಹುದು ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ (Priyank Kharge) ಮೊನ್ನೆ ಆರೋಪಿಸಿದ್ದರು. ಇದಕ್ಕೆ ಬಿಜೆಪಿಯಿಂದ ಸಾಕಷ್ಟು ಆಕ್ಷೇಪಗಳು, ಲೇವಡಿ ಕೇಳಿ ಬಂದಿತ್ತು. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಖರ್ಗೆ, ಬಿಜೆಪಿಗರಿಗೆ ತಿರುಗೇಟು ನೀಡಿದರು. ಜೊತೆಗೆ ಹ್ಯಾಕರ್​​ ಶ್ರೀಕಿ (Hacker Sriki) ಬಂಧನ, ತನಿಖೆ ಬಗ್ಗೆ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದರು. ಬಿಟ್​​ ಕಾಯಿನ್​ ಹಗರಣದ ಬಗ್ಗೆ ನಾನು ಮಾತನಾಡಿದ್ದಕ್ಕೆ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಾರೆ. ಬಿಜೆಪಿಯವರಿಗೆ ಮಾತನಾಡಲು ವಿಷಯಗಳೇ ಇಲ್ಲ. ಪ್ರಿಯಾಂಕ್​​ ಖರ್ಗೆಗೆ ಮಾಹಿತಿ ಇಲ್ಲ ಎಂದಿದ್ದರು. ಕಾಂಗ್ರೆಸ್​​​ನವರು ಹಗರಣದಲ್ಲಿ ಇದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಅವರ ಮಾತಿನ ದಾಟಿ ನೋಡಿದರೆ ಬೇರೆ ಅರ್ಥ ಬರುತ್ತೆ. ನೀವು-ನಾವು ಇಬ್ಬರೂ ಇದರಲ್ಲಿ ಇದ್ದೇವೆ,  ಸೆಟಲ್ ಮಾಡಿಕೊಳ್ಳೋಣ ಎನ್ನುವಂತಿತ್ತು ಅವರ ಹೇಳಿಕೆ ಎಂದು ತಿರುಗೇಟು ನೀಡಿದರು.

ಇದು ಹಾಸ್ಯಾಸ್ಪದವಲ್ಲವೇ..?

ಕಾಂಗ್ರೆಸ್​​​​ನವರಿದ್ದರೆ ಕೇಸ್ ದಾಖಲಿಸಲಿ, ಯಾಕೆ ಕೇಸ್ ದಾಖಲಿಸಲಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಬಹಳ ದೊಡ್ಡ ಹಗರಣ ಇದು. 2020ರ ನವೆಂಬರ್ 14ರಲ್ಲಿ ಶ್ರೀಕಿ, ರಾಬಿನ್ ಖಂಡೆವಾಲಾ ಹೊಟೆಲ್ ಮೌರ್ಯದಲ್ಲಿ ಸರೆಂಡರ್ ಆಗುತ್ತಾರೆ. ಇದರ ಬಗ್ಗೆ ಯಾವುದೇ ತನಿಖೆ ಮಾಡಲ್ಲ. ಬಿಟ್ ಕಾಯಿನ್ ಸಿಕ್ಕಿದೆ ಎಂದು ಪಂಚನಾಮೆಯಲ್ಲಿ ಹೇಳ್ತಾರೆ, 9 ಕೋಟಿ ಬಿಟ್ ಕಾಯಿನ್ ಪಂಚನಾಮೆ ಮಾಡಿದ್ದಾರೆ. ಪಂಚನಾಮೆಗೆ ಪೊಲೀಸರು ಕರೆಸೋದು ಲೈನ್ ಮನ್ ಗಳನ್ನಾ? ಸಾಕ್ಷಿಗಳನ್ನಾಗಿ ಲೈನ್ ಮನ್ ಗಳನ್ನ ಕರೆಸುತ್ತಾರೆ, ಪಾಪ ಲೈನ್ ಮನ್ ಗಳಿಗೆ ಏನು ಗೊತ್ತಿರುತ್ತದೆ. ಇದು ಹಾಸ್ಯಾಸ್ಪದವಲ್ಲವೇ ಎಂದು ಸಿಸಿಬಿ ಪೊಲೀಸರ ತನಿಖೆಯ ಬಗ್ಗೆ ಪ್ರಿಯಾಂಕ ಹೇಳಿಕೆ ನೀಡಿದ್ದಾರೆ.

ಶ್ರೀಕಿಗೆ ಡ್ರಗ್ಸ್​​ ಕೊಟ್ಟವರು ಯಾರು?

ಪೊಲೀಸರು ಪುತ್ರನಿಗೆ ಮಾದಕವಸ್ತು ನೀಡ್ತಿದ್ದಾರೆಂದು ಶ್ರೀಕಿ ‌ತಂದೆ ದೂರು ದಾಖಲಿಸಿದ್ದಾರೆ. ಮೈಂಡ್ ಆರ್ಡಿಂಗ್ ಡ್ರಗ್ಸ್ ಕೊಡ್ತಿದ್ದಾರೆಂದು ಮ್ಯಾಜಿಸ್ಟೇಟರ್ ಮುಂದೆ ಶ್ರೀಕಿ ತಂದೆ ಗೋಪಾಲ್ ಆರೋಪಿಸಿದ್ದಾರೆ. ಕಸ್ಟಡಿಯಲ್ಲಿದ್ದಾಗ ಡ್ರಗ್ಸ್ ಕೊಟ್ಟಿದ್ದೇಗೆ? ಕೊಟ್ಟವರು ಯಾರು,ತನಿಖಾಧಿಕಾರಿಗಳೇ ಕೊಟ್ರಾ? ಈ ಡ್ರಗ್ ಆಘಾತಕಾರಿ ರಾಸಾಯನಿಕ. ಮ್ಯಾಜಿಸ್ಟೇಟರ್ ಬ್ಲಡ್,ಯೂರಿನ್ ಸ್ಯಾಂಪಲ್ ಕೇಳ್ತಾರೆ. ಆಗ ಪೊಲೀಸರು ಸ್ಯಾಂಪಲ್ ಗೆ ಬೆಂಗಳೂರು ಮೆಡಿಕಲ್ ಕಾಲೇಜಿಗೆ ಕಳಿಸ್ತಾರೆ, ನಂತರ ವಿಕ್ಟೋರಿಯಾಗೆ ಕಳಿಸ್ತಾರೆ. ಆಗ ಸ್ಟಮಕ್ ವಾಶ್(ಹೊಟ್ಟೆ ಕ್ಲೀನ್​​) ಆಗಿದ್ದು ಹೇಗೆಂದು ವೈದ್ಯರು ಕೇಳ್ತಾರೆ. ಪ್ರೂವ್ ಗೊತ್ತಾಗದಂತೆ ಪೊಲೀಸರು ಏನ್ ಮಾಡಿದ್ರು? ತಪಾಸಣೆಗೂ ಮುನ್ನ ಸ್ಟಮಕ್ ವಾಶ್ ಮಾಡಿದ್ದು‌ ಹೇಗೆ ಎಂದು ಪೊಲೀಸರ ಮೇಲೆಯೇ ಪ್ರಿಯಾಂಕ ಅನುಮಾನ ವ್ಯಕ್ತಪಡಿಸಿದರು. ರಿಪೋರ್ಟ್ ಕೋರ್ಟ್ ಗೆ ಸಬ್ಮಿಟ್ ಕೂಡ ಮಾಡಲ್ಲ. ಇದು ಮತ್ತಷ್ಟು ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.

ಇದನ್ನೂ ಓದಿ: ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್​​ಮೈಂಡ್​​ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!

ತನಿಖೆ ಬಗ್ಗೆ ಖರ್ಗೆ ಅನುಮಾನು

ಶ್ರೀಕಿ‌ ವಾಲೆಟ್ ನಲ್ಲಿ 31 ಬಿಟ್ ಕಾಯಿನ್ ಇರುತ್ತೆ. ಹ್ಯಾಕ್ ಮಾಡಿದ ಬಿಟ್ ಕಾಯಿನ್ ಇರುತ್ತೆ. ಈ ಬಿಟ್ ಕಾಯಿನ್ ಬೇರೆ ವಾಲೆಟ್​​​​ಗೆ ವರ್ಗಾಯಿಸುವ ಪ್ರಯತ್ನ ಆಗುತ್ತೆ. ಅದಕ್ಕೆ ಪೊಲೀಸ್ ವಾಲೆಟ್ ಅಂತ ಪ್ರತ್ಯೇಕವಾಗಿ ಕ್ರಿಯೇಟ್ ಮಾಡಿಕೊಳ್ತಾರೆ. ಶ್ರೀಕಿ ವಾಲೆಟ್ ನಲ್ಲಿರುವುದನ್ನ ಟ್ರಾನ್ಸಫರ್ ಮಾಡೋಕೆ ಪ್ರಯತ್ನ ಮಾಡ್ತಾರೆ. ಇದಕ್ಕೆ ಸೈಬರ್ ಟೆಕ್ ನವರನ್ನ ಕರೆಸ್ತಾರೆ. ಶ್ರೀಕಿಯಲ್ಲಿರುವುದನ್ನ ರಿಕವರಿ ಮಾಡೋಕೆ ಕರೆಸ್ತಾರೆ. ಪಾಸ್ ವರ್ಡ್  ತೆಗೆದು ವಾಲೆಟ್ ನೋಡ್ತಾರೆ. ಅಲ್ಲಿ 186 ಬಿಟ್ ಕಾಯಿನ್ ಇರೋದು ಗೊತ್ತಾಗುತ್ತೆ. 31 ಬಿಟ್ ಕಾಯಿನ್ ಇಲ್ಲಿ 186 ಆಗಿದ್ದು ಹೇಗೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಯಾರು ಬೇಕಾದರೂ 3ನೇ ಸಿಎಂ ಆಗಲಿ

ಈ ಸರ್ಕಾರದಿಂದ ಸ್ಪಷ್ಟ ಸತ್ಯಾಂಶ ಹೊರಬರಲ್ಲ, ಯಾಕೆಂದರೆ ಎಲ್ಲರೂ ಇದರಲ್ಲಿ ಇದ್ದಾರೆ. ಪೊಲೀಸ್, ಸರ್ಕಾರ ಎಲ್ಲರೂ ಇದ್ದಾರೆ. ಇಲ್ಲಿ ಯಾರು ತನಿಖೆ ಮಾಡಿದರೂ ಸತ್ಯಾಂಶ ಹೊರಬರಲ್ಲ. ಸುಪ್ರೀಂ ಕೋರ್ಟ್ ಜಡ್ಜ್ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬರಲಿದೆ. ಸತ್ಯಾಂಶ ಹೊರಬಂದ ನಂತರ ಕ್ರಮ ಆಗಲಿದೆ. ಮೂರನೇ ಸಿಎಂ ಯಾರು ಬೇಕಾದರೂ ಆಗಲಿ. ನಾನು ಯಾರ ಹೆಸರನ್ನೂ ಇಲ್ಲಿ ‌ಹೇಳಲ್ಲ. ಮಾಜಿ ಗೃಹ ಸಚಿವರು, ಹಾಲಿ ಸಿಎಂ ಸರ್ವಜ್ಞರಿದ್ದಾರೆ. ಅವರು ಇದರ ಬಗ್ಗೆ ನಿಜಾಂಶ ಹೇಳಲಿ ಬಿಡಿ ಎಂದು ಲೇವಡಿ ಮಾಡಿದರು.
Published by:Kavya V
First published: