Congress ಅಹೋರಾತ್ರಿ ಧರಣಿ.. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ಬಂದ ‘ಆ ಸಂದೇಶ’ವೇನು?

ರಾಷ್ಟ್ರಮಟ್ಟದಲ್ಲಿ ಈ ವಿಚಾರ ಮುನ್ನೆಲೆಗೆ ಬರಬೇಕು. ದೇಶಾದ್ಯಂತ ಬಿಜೆಪಿ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗೊತ್ತಾಗಲಿ.

ಸಿದ್ದರಾಮಯ್ಯ ಮನವೊಲಿಕೆಗೆ ಆಗಮಿಸಿದ್ದ ಸಿಎಂ, ಬಿಎಸ್​ವೈ

ಸಿದ್ದರಾಮಯ್ಯ ಮನವೊಲಿಕೆಗೆ ಆಗಮಿಸಿದ್ದ ಸಿಎಂ, ಬಿಎಸ್​ವೈ

  • Share this:
ಬೆಂಗಳೂರು: ಒಂದಲ್ಲ ಒಂದು ದಿನ ಕೆಂಪು ಕೋಟೆಯ(Red Fort) ಮೇಲೆ ಭಾಗವಾಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪ (Minister KS Eshwarappa) ಹೇಳಿಕೆಯನ್ನು ಖಂಡಿಸಿ, ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್​​ ಸದನದಲ್ಲಿ ಅಹೋರಾತ್ರಿ ಧರಣಿ (Congress overnight Protest in Karnataka Assembly) ನಡೆಸಿದೆ. ಈ ವಿಚಾರಕ್ಕೆ ಈಗ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯೋದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್​ ಸೂಚನೆ ನೀಡಿದೆ. ಸದನದ ಒಳಗೂ ಹೊರಗೂ ಹೋರಾಟ ಮಾಡಿ. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಮುನ್ನೆಲೆಗೆ ಬರಬೇಕು. ದೇಶಾದ್ಯಂತ ಬಿಜೆಪಿ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗೊತ್ತಾಗಲಿ. ಪಕ್ಷದ ವತಿಯಿಂದಲೂ ರಾಜ್ಯಾದ್ಯಂತ ಹೋರಾಟ ಮಾಡಿ ಎಂದು ಸೂಚಿಸಿದೆ. ಜೊತೆಗೆ ಅಹೋರಾತ್ರಿ ಧರಣಿ ಕೈ ಬಿಡಬೇಡಿ ಎನ್ನುವ ಮೂಲಕ  ಇದನ್ನು ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ಮಾಡಿ ರಾಜ್ಯ ನಾಯಕರಿಗೆ ಈ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

ಹಿಜಾಬ್​ ಧಾರಣೆ ಹೊಸದೇನು ಅಲ್ಲ

ಇದರ ಬೆನ್ನಲ್ಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅನಗತ್ಯವಾಗಿ ಸಂಘ ಪರಿವಾರದವರು ಹಿಜಾಬ್ ಬಗ್ಗೆ ವಿವಾದವನ್ನ ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿದರು. ಹಿಜಾಬ್ ಧರಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಅದು ಆ ಧರ್ಮದ ಸಂಪ್ರದಾಯಗಳು. ಹಿಂದೂ ,ಮುಸ್ಲಿಂ, ಸಿಕ್ ರ ಸಂಪ್ರದಾಯಗಳು ಇರ್ತಾವೆ. ಸಂಪ್ರದಾಯ, ಆಚಾರ ವಿಚಾರಗಳನ್ನ ಆಚರಣೆ ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಇದು ಸಂವಿಧಾನದ ಹಕ್ಕು, ಇದಕ್ಕೆ ಯಾರು ಅಡ್ಡಿಪಡಿಸಬಾರದು. ಅಲ್ಪಸಂಖ್ಯಾತರು ವಿಷೇಶವಾಗಿ ಮುಸ್ಲಿಮರು ಇತ್ತಿಚೆಗೆ ಶಿಕ್ಷಣಕ್ಕೆ ಹೋಗ್ತಿದ್ದಾರೆ. ಇತ್ತೀಚಿನ ದಿನದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿಜಾಬ್ ವಿಚಾರ ಎತ್ತಿಕೊಂಡು ಸಂಘ ಪರಿವಾರದವರು ಹೆಣ್ಣು ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಅಪಾದಿಸಿದರು.

ಸಂಘ ಪರಿವಾರದಿಂದಲೇ ವಿವಾದ

ಯಾವುದೋ ನೆಪದಲ್ಲಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಯಾವುದೇ ಧರ್ಮಕ್ಕೆ ಸೇರಿದವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಪ್ರತಿ ಮಗು ಕೂಡ ಶಿಕ್ಷಣ ಪಡೆಯಬೇಕು. ನಾವು ರೈಟ್ ಟು ಎಜುಕೇಶನ್ ಅಂತಾ ಕಾನೂನು ಮಾಡಿದ್ವಿ. ಈಗ ಯಾವುದೋ ಒಂದು ನೆಪದಲ್ಲಿ ವಂಚಿತರನ್ನಾಗಿ ಮಾಡುವುದು ಸಂವಿಧಾನಕ್ಕೆ ವಿರೋಧ. ಸಂಘ ಪರಿವಾರ ಈ ವಿವಾದವನ್ನು ಹುಟ್ಟು ಹಾಕಿದ್ದಾವೆ. ವಿವಾದ ಆದ ಮೇಲೆ ಕೋರ್ಟ್ ಮಧ್ಯಂತರ ಆದೇಶ ಆಗಿದೆ. ಎಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಇದೆಯೋ ಅಲ್ಲಿ ಮಾತ್ರ ಎಂದು ಆದೇಶದಲ್ಲಿ ಇದೆ, ಎಲ್ಲರಿಗೂ ಅಲ್ಲ.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ; ನಾಯಕರಿಗೆ ಭರ್ಜರಿ ಭೋಜನ, ಬೆಡ್​ ವ್ಯವಸ್ಥೆ

ಯಾರಿಗೆ ಕೋರ್ಟ್​ ಆದೇಶ ಅನ್ವಯ ಆಗಲ್ಲ?

ಸಚಿವ ಅಶ್ವಥ್ ನಾರಾಯಣ್ ಚಾಮರಾಜನಗರದಲ್ಲಿ ಮಾತನಾಡಿದ್ದಾರೆ. ಕೋರ್ಟ್​ ಮಧ್ಯಂತರ ಆದೇಶ ಡಿಗ್ರಿ ಕಾಲೇಜ್ ಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಸಿಎಂ ಕಾನೂನು ಆದೇಶದ ಪ್ರಕಾರ ನಡೆದುಕೊಳ್ತೇವೆ ಎಂದಿದ್ದಾರೆ. ಆದರೆ ಅಲ್ಪ ಸಂಖ್ಯಾತ ಮಣಿವಣ್ಣನ್ ಆದೇಶ ಮಾಡಿದಾರೆ.. ಅವರು ಶಿಕ್ಷಣ ಇಲಾಖೆ ಅವರಲ್ಲ.. ಅಲ್ಪಸಂಖ್ಯಾತ ಇಲಾಖೆ ಶಾಲೆಯಲ್ಲಿ ಅಭಿವೃದ್ಧಿ ಸಮಿತಿಯೇ ಇಲ್ಲ. ಹೀಗಿದ್ದಾಗ ಅಂತಹ ಶಾಲೆಗಳಲ್ಲಿ ಸಮವಸ್ತ್ರ ವನ್ನ ಯಾರು ನಿರ್ಧಾರ ಮಾಡ್ತಾರೆ. ಇದಕ್ಕಾಗಿಯೇ ನಾನು ಹೇಳಿದ್ದು ಕೋರ್ಟ್ ಆದೇಶಕ್ಕೆ ವಿರುದ್ದ ಇದು ಎಂದರು.

ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ರಾಜ್ಯದಲ್ಲೂ ಕಾಂಗ್ರೆಸ್ ದಿವಾಳಿ ಆಗುತ್ತೆ ಎಂಬ ಸಿಎಂ ಬಸವರಾಜ ಬೊಮ್ಮಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ರೈತರ, ಮಕ್ಕಳ ವಿರೋಧಿ ಕಾಂಗ್ರೆಸ್ ಎಂಬ ಸಿಎಂ ಹೇಳಿಕೆಗೆ ಕಿಡಿಕಾರಿದರು. ದೆಹಲಿಯಲ್ಲಿ ರೈತರು ಹೋರಾಟ ಮಾಡಿದ್ರು ಅಲ್ವಾ, ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದು. ಇದೇ ಮೋದಿ ವಿರುದ್ದ ಅಲ್ಲವೇ..ಮೋದಿ ಸರ್ಕಾರದ ವಿರುದ್ಧ ಅಲ್ವೇ.. ಒಂದು ವರ್ಷ ಹೋರಾಟ ಮಾಡಿದ್ರು.. 716 ರೈತರು ಸಾವನ್ನಪ್ಪಿದರು. ಕಾಯ್ದೆಗಳನ್ನು ವಾಪಸ್​ ಪಡೆಯುವಾಗ ಕ್ಷಮೆ ಕೇಳಿದ್ರು, ಯಾವ ಕಾರಣಕ್ಕೆ ವಿತ್ ಡ್ರಾ ಮಾಡಿದ್ದು. ತಪ್ಪು ಮಾಡಿದ್ದೇವೆ ಎಂದು ತಾನೇ ವಿತ್ ಡ್ರಾ ಮಾಡಿದ್ದು. ಇದು ಬಸವರಾಜ ಬೊಮ್ಮಯಿ ಗೆ ಗೊತ್ತಿಲ್ಲವೇ ಎಂದು ಕಿಡಿಕಾರಿದರು.
Published by:Kavya V
First published: