Assembly Joint session: ನಾಳೆ ಜಂಟಿ ಸದನ ಉದ್ದೇಶಿಸಿ ಲೋಕಸಭಾ ಸ್ಪೀಕರ್​ ಭಾಷಣ; ಬಾಯ್ಕಟ್​ ಮಾಡಲು ಕಾಂಗ್ರೆಸ್​ ನಿರ್ಧಾರ

ಜಂಟಿ ಸದನ ಉದ್ದೇಶಿಸಿ ಲೋಕಸಭಾ ಸ್ಪೀಕರ್ ಮಾತನಾಡಲು ಬರಲ್ಲ. ಇದಕ್ಕೆ ಅವಕಾಶ ಕೂಡ ಇಲ್ಲ. ಜಂಟಿ ಸದನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು,ರಾಷ್ಟ್ರಪತಿಗಳಿಗೆ ಮಾತ್ರ ಅವಕಾಶವಿದೆ.

ಸಿದ್ದರಾಮಯ್ಯ (ಫೈಲ್​ ಫೋಟೋ)

ಸಿದ್ದರಾಮಯ್ಯ (ಫೈಲ್​ ಫೋಟೋ)

 • Share this:
  ಬೆಂಗಳೂರು (ಸೆ. 23): ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ನಾಳೆ ಜಂಟಿ ಸದನವನ್ನು(Joint session )  ಉದ್ದೇಶಿಸಿ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ (Loksabha speaker OM Birla) ಭಾಷಣ ಮಾಡಲಿದ್ದಾರೆ. ಹೀಗಾಗಿ ಎಲ್ಲ ಸದಸ್ಯರು ಹಾಜರಿರುವಂತೆ ಈ ಸದನದ ಆರಂಭದಲ್ಲಿಯೇ ಸ್ಪೀಕರ್​ ಸದಸ್ಯರಿಗೆ ತಿಳಿಸಿದ್ದರು. ಆದರೆ,  ಜಂಟಿ ಅಧಿವೇಶನವನ್ನು ಕಾಂಗ್ರೆಸ್ ​ ಬಾಯ್ಕಟ್​ ಮಾಡಲು ಮುಂದಾಗಿದೆ. ಜಂಟಿ ಸದನ ಉದ್ದೇಶಿಸಿ ಲೋಕಸಭಾ ಸ್ಪೀಕರ್​ ಮಾತನಾಡುವುದಕ್ಕೆ ಕಾಂಗ್ರೆಸ್​ ವಿರೋಧವಿದೆ. ಈ ಹಿನ್ನಲೆಯಲ್ಲಿ ತಾವು ಇದನ್ನು ಬಾಯ್ಕಟ್​ ಮಾಡಲು ಮುಂದಾಗಿರುವುದಾಗಿ ಪ್ರತಿಪಕ್ಷ ಕಾಂಗ್ರೆಸ್ (opposition Party congress​) ನಾಯಕರು ತಿಳಿಸಿದ್ದಾರೆ

  ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಲೋಕಸಭಾ ಸ್ಪೀಕರ್​ ಆಗಮಿಸುತ್ತಿರುವ ಹಿನ್ನಲೆ ಆಹ್ವಾನ ಪತ್ರಿಕೆ ಮುದ್ರಣ ಮಾಡಲಾಗಿದೆ. ಇದು ಹೊಸ ಸಂಪ್ರದಾಯವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಉಭಯ ಸದನ ಉದ್ಧೇಶಿಸಿ ಇದೇ ಮೊದಲ ಬಾರಿ ಲೋಕಸಭಾ ಸ್ಪೀಕರ್​ ಭಾಷಣ ಮಾಡುತ್ತಿದ್ದಾರೆ. ಈ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ಲೋಕಸಭೆ ಸ್ಪೀಕರ್ ಜಂಟಿ ಸದನ ನಡೆಸೋಕೆ ಬರಲ್ಲ. ನನ್ನ ರಾಜಕೀಯದಲ್ಲೇ ಇದನ್ನು ನೋಡಿಲ್ಲ. ಇದು ಸಂಪ್ರದಾಯಕ್ಕೆ ವಿರೋಧವಾಗಿದೆ. ಜಂಟಿ ಸದನ ಉದ್ದೇಶಿಸಿ ಲೋಕಸಭಾ ಸ್ಪೀಕರ್ ಮಾತನಾಡಲು ಬರಲ್ಲ. ಇದಕ್ಕೆ ಅವಕಾಶ ಕೂಡ ಇಲ್ಲ. ಜಂಟಿ ಸದನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು,ರಾಷ್ಟ್ರಪತಿಗಳಿಗೆ ಮಾತ್ರ ಅವಕಾಶವಿದೆ. ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ ಎಂದೆವು. ಅದಕ್ಕೂ ಅವರು ತಯಾರಿಲ್ಲ. ವಿಧಾನಸಭೆಯಲ್ಲಿ ಭಾಷಣ ನಡೆಸಲು ಬರುವುದಿಲ್ಲ. ಹಾಗಾಗಿ ಬಾಯ್ಕಾಟ್ ಮಾಡ್ತಿದ್ದೇವೆ ಎಂದರು.

  ಇದನ್ನು ಓದಿ: ಸಿದ್ದರಾಮಯ್ಯ ಪಂಚೆ ಕಳಚಿಕೊಂಡಿದ್ದು, ಸುಧಾಕರ್, ಅರಗ ಜ್ಞಾನೇಂದ್ರ ಪೇಚಿಗೀಡಾಗಿದ್ದು…

  ಕಳೆದ ಆರು ತಿಂಗಳ ನಂತರ ಅಸೆಂಬ್ಲಿಮಾಡ್ತಿದ್ದಾರೆ. ಇಲ್ಲಿ ಜನಸಾಮಾನ್ಯರ ಸಮಸ್ಯೆ ಚರ್ಚೆಯಾಗಬೇಕು. 4 ವಾರ ಕಲಾಪ ನಡೆಸೋಕೆ ಹೇಳಿದ್ದೆವು. ಬಿಎಸಿಸಭೆಯಲ್ಲಿ ಹೇಳಿದ್ದೆವು. ಕನಿಷ್ಟ 1 ವಾರ ಕಲಾಪ ವಿಸ್ತರಣೆಗೆ ಹೇಳಿದ್ದೆವು. ಸರ್ಕಾರ ಒಪ್ತಿಲ್ಲ. ಕೇಳಿದರೆ ನಾನೇನು ಮಾಡ್ಲಿ ಅಂತ ಸ್ಪೀಕರ್ ಕಾಗೇರಿ ಹೇಳುತ್ತಾರೆ. ಜನರ ಸಮಸ್ಯೆ ಎಲ್ಲಿ ಚರ್ಚಿಸೋಕೆ ಸಾಧ್ಯ ಎಂದು ಇದೇ ವೇಳೆ ತಿಳಿಸಿದರು.

  ಇದನ್ನು ಓದಿ: ಸಾಫ್ಟ್​ವೇರ್​ ಕೆಲಸ​ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ವರ್ಷಕ್ಕೆ 10 ಲಕ್ಷ ರೂ ಪ್ಯಾಕೇಜ್​​

  ಜನರ ಸಮಸ್ಯೆಗಳನ್ನು ನಾವು ಇಲ್ಲೇ ಚರ್ಚೆ ಮಾಡಬೇಕು. ನಮ್ಮ ಒತ್ತಾಯಕ್ಕೆ ಸ್ಪೀಕರ್ ಒಪ್ಪುತ್ತಿಲ್ಲ. ನಾಳೆ ನಡೆಯಲಿರುವ ಜಂಟಿ ಅಧಿವೇಶನ ಸಭೆ ಕುರಿತು ಬಿಎಸಿಯಲ್ಲೂ ಮಾಡಿಲ್ಲ,ಕೌನ್ಸಿಲ್​ನಲ್ಲೂ ಚರ್ಚಿಸಿಲ್ಲ ಎಂದು ಇದೇ ವೇಳೆ ಆರೋಪಿಸಿದರು.

  ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಾಳೆ ಲೋಕಸಭಾ ಸಭಾ ಸ್ಪೀಕರ್​ ಅವರನ್ನು ಕರೆಸಿ ಸರ್ಕಾರ ಈ ಕಾರ್ಯಕ್ರಮ ಮಾಡುತ್ತಿದೆ. ಪಾರ್ಲಿಮೆಂಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ಸಂಬಂಧ ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಮೀಟಿಂಗ್ ನಲ್ಲಿ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ.

  ಅಲ್ಲದೇ ಈ ಕುರಿತು ವಿರೋಧ ಪಕ್ಷದ ನಾಯಕರಿಗೆ ಇದುವರೆಗೂ ಮಾಹಿತಿ ನೀಡಿರಲಿಲ್ಲ.ನಾವು ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಮಾಡಬೇಕು ಅಂತ ಸಿಎಂ ಪಟ್ಟು ಹಿಡಿದಿದ್ದಾರೆ. ಬ್ಯಾಂಕ್ವೆಟ್ ಹಾಲ್ ಇದೆ, ಅಲ್ಲೇ ಮಾಡಬಹುದು. ಆದರೂ ಈ ರೀತಿಯ ಕೆಟ್ಟ ಪದ್ದತಿ ಮಾಡುತ್ತಿದ್ದಾರೆ. ಇದಕ್ಕೆ ವಿಧಾನಸಭೆ ಬಳಸಿಕೊಳ್ಳುವುದು ಸರಿಯಲ್ಲ. ನಾವೆಲ್ಲ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ನಾವು ಈ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುತ್ತೇವೆ ಎಂದರು
  Published by:Seema R
  First published: