ಬೆಂಗಳೂರು: ಹೊಟ್ಟೆಪಾಡಿಗಾಗಿ ದಲಿತ (Dalit) ನಾಯಕರು ಬಿಜೆಪಿಯಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ಸಂಬಂಧ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಮಧ್ಯೆ ತೀವ್ರ ವಾಕ್ಸಮರ ಏರ್ಪಡಿದೆ. ಇಂದು ಸುದ್ದಿಗೋಷ್ಠಿ (BJP Pressmeet) ನಡೆಸಿದ ಬಿಜೆಪಿ ಮುಖಂಡರು, ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು. ಇಲ್ಲವಾದರಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ (Ramalinga Reddy)ಅವರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ (Congress Pressmeet) ನಡೆಸಿ, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಹೊಟ್ಟೆಪಾಡಿಗಾಗಿ ದಲಿತರು ಹೋಗಿದ್ದಾರೆ ಎಂದಿಲ್ಲ, ಸಿದ್ದರಾಮಯ್ಯ ಅಂತ ಹೇಳಿಕೆ ನೀಡಿಲ್ಲ ಎಂದು ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯರನ್ನು ಸಮರ್ಥಿಸಿಕೊಂಡರು.
ಅಷ್ಟೆಲ್ಲಾ ಮಾಡಿರುವ ಸಿದ್ದರಾಮಯ್ಯ ದಲಿತ ವಿರೋಧಿಯೇ?
ಏನೂ ಇಲ್ಲದಾಗ ವಿಷಯಾಂತರ ಮಾಡಲು, ಬಿಜೆಪಿಯವರು ಇಂತ ಸುಳ್ಳುಗಳನ್ನ ಹೇಳ್ತಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಏನೇನು ತಂದ್ರು ಗೊತ್ತಿದ್ಯಾ? ವಸತಿ ನಿಲಯ ಕಟ್ಟಡಕ್ಕೆ ₹1498 ಕೋಟಿ, ವಸತಿ ಸಂಕೀರ್ಣಗಳಿಗೆ ₹1573 ಕೋಟಿ, SC-ST ನಡೆಸುವ ಧಾರ್ಮಿಕ ಸಂಸ್ಥೆಗಳಿಗೆ ₹58 ಕೋಟಿ, ಅಲೆಮಾರಿ ಶೈಕ್ಷಣಿಕ ಅಭಿವೃದ್ಧಿಗೆ ₹222 ಕೋಟಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ₹35 ಸಾವಿರ ಕೋಟಿ, ಸ್ಕಾಲರ್ ಶಿಪ್ ಗಾಗಿ ₹1843 ಕೋಟಿ, ಸ್ಮಶಾನ ಭೂಮಿಗಾಗಿ ₹53.65 ಕೋಟಿ, ಅಂಬೇಡ್ಕರ್,ಜಗಜೀವನ್ ರಾಂ ಭವನಕ್ಕೆ ₹233 ಕೋಟಿ ಹಾಗೂ ಗಂಗಾಕಲ್ಯಾಣ ಯೋಜನೆಯಲ್ಲಿ 67600 ಕೊಳವೆ ಬಾವಿಗಳನ್ನು ನೀಡಿದ್ದಾರೆ. ಇದೆಲ್ಲವೂ ಪರಿಶಿಷ್ಟರಿಗಾಗಿ ಸಿದ್ದರಾಮಯ್ಯ ಕೊಟ್ಟಿದ್ದಾರೆ. ದಲಿತರ ಬಗ್ಗೆ ಎಲ್ಲಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಟ್ಕಾಯಿನ್ ಹಗರಣ ಮುಚ್ಚಿ ಹಾಕುವ ಪ್ಲಾನ್
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪ ಮಾಡ್ತಿದ್ದಂತೆ ದಲಿತ ವಿರೋಧಿ ವಿಚಾರ ಹೊರಗೆ ಬಂದಿದೆ. ಸಿದ್ದರಾಮಯ್ಯ ಅವರ ವಿರುದ್ಧ ದಲಿತ ವಿರೋಧಿ ಅಸ್ತ್ರ ಪ್ರಯೋಗ ಆಗ್ತಿದೆ. ವಿಷಯಾಂತರ ಮಾಡಲು ಈ ವಿಚಾರವನ್ನು ಬಿಜೆಪಿ ಪ್ರಸ್ತಾಪ ಮಾಡ್ತಿದೆ. ಆಡಳಿತ ಪಕ್ಷದ ಪ್ರಭಾವಿಗಳು ಈ ಹಗರಣದಲ್ಲಿ ಇದ್ದಾರೆ ಅದಕ್ಕೆ ವಿಷಯಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾವು ವಿರೋಧ ಪಕ್ಷದವರು, ವಿರೋಧ ಪಕ್ಷದವರು ಪ್ರಭಾವಿ ಆಗಿರುವುದಿಲ್ಲ. ಪ್ರಭಾವಿ ಮಗ ಇದರಲ್ಲಿ ಇದ್ದಾನೆ ಅನ್ನೋ ಮಾಹಿತಿ ಇದೆ. ತನಿಖೆ ಆದಾಗ ಎಲ್ಲಾ ವಿಚಾರ ಗೊತ್ತಾಗಲಿದೆ ಎಂದರು.
ಯಾರು ಆ ಪ್ರಭಾವಿಯ ಪುತ್ರ?
ಬಿಟ್ ಕಾಯಿನ್ ಹಗರಣದ ಬಗ್ಗೆ ಇಡಿ ಗೆ ತನಿಖೆಗೆ ಒಪ್ಪಿಸಲಾಗಿದೆ ಅಂತಿದ್ದಾರೆ. ಯಾವಾಗ ಇಡಿ ತನಿಖೆಗೆ ಒಳಪಡಿಸಲಾಯಿತು? ಈ ಬಗ್ಗೆ ಸದನದಲ್ಲೂ ಸಹ ಸರ್ಕಾರ ಎನೂ ಹೇಳಿರಲಿಲ್ಲ. ಪ್ರಧಾನಿ ಕಚೇರಿಯಿಂದ ಪತ್ರ ಬಂದಿರೋದಾಗಿ ಗೊತ್ತಾಗಿದೆ. ನ್ಯಾಯಾಂಗ ತನಿಖೆಯಾದರೆ ಎಲ್ಲಾ ಬಹಿರಂಗ ಆಗಲಿದೆ. ಬಿಟ್ ಕಾಯಿನ್ ಹಗರಣದಿಂದ ರಾಜ್ಯ ಸರ್ಕಾರಕ್ಕೆ ಕಂಟಕ ಇದೆ ಎಂದು ಹಿಂದಿನ ಆರೋಪವನ್ನು ಪುನರುಚ್ಛರಿಸಿದರು. ಆದರೆ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿಗಳ ಮಗ ಯಾರು ಅಂತ ಮಾಹಿತಿ ನೀಡಲು ರಾಮಲಿಂಗರೆಡ್ಡಿ ನಿರಾಕರಿಸಿದರು.
ಇದನ್ನೂ ಓದಿ: ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ Siddaramaiah ಕಾಂಗ್ರೆಸ್ ಸೇರಿಕೊಂಡರು: ಛಲವಾದಿ ನಾರಾಯಣಸ್ವಾಮಿ
ಸಿದ್ದರಾಮಯ್ಯ ಕ್ಷಮೆಗೆ ಆಗ್ರಹಿಸಿದ ಬಿಜೆಪಿ
ಇದನ್ನು ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ಮುಖಂಡರಾದ ಎಂಎಲ್ಸಿ ಎನ್.ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಕಟುವಾಗಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನಲ್ಲಿ ದಲಿತರನ್ನು, ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ನುಂಗಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ದಲಿತರು ಕಾಂಗ್ರೆಸ್ ಗೆ ಹೋಗಬೇಡಿ ಅಂದಿದ್ರು. ದಲಿತರು ಕಾಂಗ್ರೆಸ್ ಗೆ ಹೋದ್ರೆ ಅದು ಆತ್ಮಹತ್ಯೆಗೆ ಸಮ ಅಂದಿದ್ರು ಸಿದ್ದರಾಮಯ್ಯ. ನಂತರ ಸಿದ್ದರಾಮಯ್ಯನವರೂ ವಲಸೆ ಹೋದವರೇ ಅಲ್ಲವೇ? ನೀವು ಕಾಂಗ್ರೆಸ್ಗೆ ಹೋದ ಮೇಲೆ ದೊಡ್ಡ ದೊಡ್ಡ ದಲಿತ ನಾಯಕರು ಕಾಣೆಯಾದರು. ಖರ್ಗೆಯವರನ್ನ ರಾಜ್ಯದಿಂದ ದೆಹಲಿಗೆ ಓಡಿಸಿದಿರಿ ಎಂದು ಆರೋಪಿಸಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ