ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್​ನಲ್ಲೂ ಬದಲಾವಣೆಯ ಪರ್ವ: ಶೀಘ್ರವೇ ರಾಜ್ಯಕ್ಕೆ ಸುರ್ಜೆವಾಲಾ ಭೇಟಿ ಮರ್ಮವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಒಂದು ಕಡೆ ಮುಖ್ಯಮಂತ್ರಿ ಬಿಎಸ್  ಯಡಿಯೂರಪ್ಪ ಬದಲಾವಣೆ ಚರ್ಚೆ ಜೋರಾಗಿ  ನಡೆಯುತ್ತಿದೆ .  ಇದೇ ವೇಳೆ ರಾಜ್ಯ ಕಾಂಗ್ರೆಸ್ ನಲ್ಲೂ ರಾಜಕೀಯ ಚಟುವಟಿಕೆಗಳ ಗರಿಗೆದರಿದೆ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ರಾಜ್ಯಕ್ಕೆ ಎಂಟ್ರಿ ಕೊಡ್ತಾಯಿದ್ದಾರೆ. ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಕೈಗೊಳ್ಳುತ್ತಿದ್ದು ನಾಳೆ ರಾಜ್ಯಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ . ಇದೇ ಮೊದಲ ಭಾರಿಗೆ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಮೂರು ದಿನ ಗಳ ಪ್ರವಾಸವನ್ನು  ಕೈಗೊಂಡಿದ್ದಾರೆ. 

ಕರ್ನಾಟಕಕ್ಕೆ ಆಗಮಿಸಲಿರುವ ರಣದೀಪ್ ಈ ಭಾರಿ ಸಾಕಷ್ಟು ವಿಚಾರಗಳ ಕುರಿತು ವಲಯವಾರು ಸಭೆ ನಡೆಸಲಿರುವ ಸುರ್ಜೆವಾಲಾ , ರಾಜ್ಯದಲ್ಲಿ ಕೆಳಹಂತದದಿಂದ ಪಕ್ಷ ಸಂಘಟನೆ ಮಾಡುವುದು, ರಾಜ್ಯದಲ್ಲಿ ಮುಂಬರುವ  ಜಿಲ್ಲಾ ಪಂಚಾಯತ್ , ತಾಲ್ಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಚುನಾವಣಾ ತಯಾರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಬೆಂಗಳೂರು ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ ಜೊತೆಗೆ ಸ್ಥಳೀಯ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ಕಾರ್ಯಕರ್ತರ ಸಮಸ್ಯೆ ಚರ್ಚೆ ನಡೆಸಿ , ಹಾಗೂ ಪಕ್ಷ ಸಂಘಟನೆ ವಿಚಾರ ಉತ್ಸಾಹ ತುಂಬುವ ಕೆಲಸ ಮಾಡಲಿದ್ದಾರೆ.

ಇವುಗಳ ಜೊತೆಗೆ ಪಕ್ಷದ ವಿಚಾರಕ್ಕೆ ವ ಸಂಬಂಧಿಸಿದಂತೆ  ಕಾರ್ಯಕರ್ತರು ಜೊತೆಗೆ ಸಭೆ ನಡೆಸಲಿರುವ ಸುರ್ಜೆವಾಲಾ. ಮೊದಲ ಹಂತದಲ್ಲಿ  ಮಂಗಳೂರಿನಲ್ಲಿ ದಕ್ಷಿಣ ಕನ್ನಡ, ಉಡುಪಿ,  ಶಿವಮೊಗ್ಗ, ಚಿಕ್ಕಮಗಳೂರು,  ಹಾಸನ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು , ಮಾಜಿ ಸಚಿವರು , ಕಳದ ಚುನಾವಣೆಯಲ್ಲಿ ಸೋತಾ ಅಭ್ಯರ್ಥಿ ಗಳು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರ ಜೊತೆ ಸಭೆ ಸುರ್ಜೆವಾಲಾ ಸಭೆ ನಡೆಸಲಿದ್ದಾರೆ. ಮುಖ್ಯವಾಗಿ ಸಭೆಯಲ್ಲಿ ಪಕ್ಷದಲ್ಲಿ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಲಿರುವ ಸುರ್ಜೆವಾಲಾ ಯಾರು ಸಹ ಸಣ್ಣಪುಟ್ಟ ವಿಚಾರ ಗಲಾಟೆ ಮಾಡಿಕೊಳ್ಳಬಾರದು ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಪಕ್ಷದ ನಾಯಕರಿಗೆ ಸುರ್ಜೆವಾಲಾ ಸೂಚನೆ ನೀಡಲಿದ್ದಾರೆ.

ಮೊದಲು ಸಭೆ ಸಭೆ ನಂತರ ಎರಡನೇ  ತುಮಕೂರಿನಲ್ಲಿ ದಾವಣಗೆರೆ, ಚಿಕ್ಕಮಗಳೂರು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖರ ಸಭೆ ನಡೆಸಲಿರುವ ಸುರ್ಜೇವಾಲ ,ಇಲ್ಲೂ ಪಕ್ಷದ ಸಂಘಟನೆ ಕುರಿತು ಹಾಲಿ ಮಾಜಿ ಶಾಸಕರು, ಮಂತ್ರಿಗಳು,  2018ರ ಪರಾಜಿತ ಅಭ್ಯರ್ಥಿಗಳು ಚರ್ಚೆ ನಡೆಸಲಿದ್ದಾರೆ. ಮತ್ತೊಂದು  ಕಡೆ  ಸಿಎಂ ಯಡಿಯೂರಪ್ಪ ಬದಲಾವಣೆ ಚರ್ಚೆ  ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಲಿಂಗಾಯತ ಸಮುದಾಯದವು ಬಿಜೆಪಿ ವಿರುದ್ಧ ಲಕ್ಷಣಗಳನ್ನು ಕಣ್ತಾಯಿದೆ ಇಂತಹಾ ಸಂದರ್ಭಗಳಲ್ಲಿ ಕಾಂಗ್ರೆಸ್ ಯಾವ ನಡೆ ಅನುಸರಿಸಬೇಕು ಅನ್ನೋ ಬಗ್ಗೆ  ಸುರ್ಜೆವಾಲಾ ಕಾಂಗ್ರೆಸ್ ಲಿಂಗಾಯತ ನಾಯಕರ ಜೊತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: DK Shivakumar: ಸಿದ್ದರಾಮಯ್ಯ ಜೊತೆ ಮುನಿಸಿಲ್ಲ; ಬಿಜೆಪಿ ನಾಯಕತ್ವ ಬದಲಾವಣೆ ಆಗಲಿದೆ; ಡಿಕೆ ಶಿವಕುಮಾರ್​

ಲಿಂಗಾಯತ ಸಮುದಾಯವೂ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿದೆ, ಲಿಂಗಾಯತ ಸಮುದಾಯವನ್ನ ಕಾಂಗ್ರೆಸ್ ಸೆಳೆಯಲು ಯಾವ ರೀತಿಯ ಪ್ರಯತ್ನ ಮಾಡಬೇಕು ಅನ್ನೋ ಚರ್ಚೆಯನ್ನು ಸುರ್ಜೆವಾಲಾ ನಡೆಸಲಿದ್ದಾರೆ .ಜೊತೆಗೆ  ಸದ್ಯದ ಕರ್ನಾಟಕ  ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ಸೇರಿದಂತೆ ಮುಂದಿನ  2023ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ನ್ನು ಈಗಿನಿಂದಲೇ ಯಾವ  ತಯಾರಿ ಆರಂಭಬೇಕು ಅನ್ನೋ ನಿಟ್ಟಿನಲ್ಲಿ ಸುರ್ಜೆವಾಲಾ ರಾಜ್ಯ ಪ್ರಮುಖ ಕಾಂಗ್ರೆಸ್ ನಾಯಕರ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಚುರುಗುಗೊಂಡ ಹಿನ್ನೆಲೆ ಈ ಕಡೆ ಸುರ್ಜೆವಾಲಾ ಕೂಡ ಪುಲ್ ಆಕ್ಟೀವ್ ಆಗಿದ್ದಾರೆ ಕಾಂಗ್ರೆಸ್ ಉಸ್ತುವಾರಿ ಆರ್ ಸಿ ಸುರ್ಜೇವಾಲ ಇದೇ ಮೊದಲ ಭಾರಿಗೆ 3 ದಿನಗಳ ರಾಜ್ಯ ಪ್ರವಾಸಕ್ಕೆ  ಸಜ್ಜುಗೊಂಡ ಉಸ್ತುವಾರಿ ಸುರ್ಜೆವಾಲಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ, ಕಾಂಗ್ರೆಸ್ ಮತ್ತು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ
Published by:Kavya V
First published: