Bengaluru Crime: ತಂದೆ ಬಳಿ ಕೆಲಸ ಮಾಡುತ್ತಿದ್ದವರನ್ನು ಪಟಾಕಿ ತರಲು ಕರೆದಿದ್ದೇ ತಪ್ಪಾಯ್ತು; ಕೊಂದು ಮೂಟೆ ಕಟ್ಟಿದ್ರು!

ಇನ್ನೇನು ಹೊಸೂರಿನ ಕಡೆ ಹೋಗಬೇಕು ಅಂತ ಮನೆಯಿಂದ ಹೊರ ಬಂದವನು ಅದೇನಾಯಿತೋ ಏನೋ ಅದೊಂದು ತಪ್ಪು ಮಾಡಿದ್ದ. ತಂದೆ ಮಣಿ ಬಳಿಕ ಕೆಲಸ ಮಾಡುತ್ತಿದ್ದವರನ್ನು ಹೊಸೂರಿಗೆ ಪಟಾಕಿ ತಗೊಂಡು ಬರೋಕೆ ಹೋಗುತ್ತಿದ್ದೇನೆ ಬರ್ತಿರಾ ಎಂದು ಕರೆದು ಬಿಟ್ಟ. ಅದೇ ತರಣ್​​​ ಪ್ರಾಣಕ್ಕೆ ಸಂಚಕಾರ ತಂದಿತ್ತು.

ಆರೋಪಿಗಳು

ಆರೋಪಿಗಳು

  • Share this:
ಬೆಂಗಳೂರು: ಸಾವು (Death) ಹೇಗೆ ನಮ್ಮ ಕಣ್ಣ ಮುಂದೆಯೇ ಇರುತ್ತೆ. ಹಣಕ್ಕಾಗಿ(Money) ಜೊತೆಯಲ್ಲೇ ಇರುವವರು ಹೇಗೆ ಕತ್ತು ಹಿಸುಕುತ್ತಾರೆ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ. ನ.2 ಮಂಗಳವಾರದಂದು ಆ ಯುವಕ ದೀಪಾವಳಿಗೆ (Deepavali) ಪಟಾಕಿ (Firecrackers) ಸಿಡಿಸಲು ಉತ್ಸಕನಾಗಿದ್ದ. ಭಾರತಿನಗರದ (Bharathinagar) ನಿವಾಸಿ ಮಣಿ ಎಂಬುವವರ ಮಗ ತರುಣ್ ಕಾಲೇಜು ವಿದ್ಯಾರ್ಥಿ. ಹೊಸೂರಿಗೆ ಹೋಗಿ ಪಟಾಕಿ ತಂದು ಭರ್ಜರಿಯಾಗಿ ದೀಪಾವಳಿ ಹಬ್ಬ ಮಾಡಬೇಕು ಅಂದುಕೊಂಡಿದ್ದ. ಇನ್ನೇನು ಹೊಸೂರಿನ ಕಡೆ ಹೋಗಬೇಕು ಅಂತ ಮನೆಯಿಂದ ಹೊರ ಬಂದವನು ಅದೇನಾಯಿತೋ ಏನೋ ಅದೊಂದು ತಪ್ಪು ಮಾಡಿದ್ದ. ತಂದೆ ಮಣಿ ಬಳಿಕ ಕೆಲಸ ಮಾಡುತ್ತಿದ್ದವರನ್ನು ಹೊಸೂರಿಗೆ ಪಟಾಕಿ ತಗೊಂಡು ಬರೋಕೆ ಹೋಗುತ್ತಿದ್ದೇನೆ ಬರ್ತಿರಾ ಎಂದು ಕರೆದು ಬಿಟ್ಟ. ಅದೇ ತರಣ್​​​ ಪ್ರಾಣಕ್ಕೆ ಸಂಚಕಾರ ತಂದಿತ್ತು.

ಜೊತೆಗೆ ಬರ್ತಿರಾ ಎಂದು ಕರೆದಿದ್ದೇ ತಪ್ಪಾಯ್ತು!

ತಂದೆ ಬಳಿ ಕೆಲಸ ಮಾಡೋರು, ದಿನನಿತ್ಯ ನೋಡೋರನ್ನು ಸಾಮಾನ್ಯವಾಗಿ ಬರ್ತಿರಾ ಅಂತ ಕರೆದು ಪ್ರಾಣಕ್ಕೆ ತರುಣ್​ ಕಂಟಕ ತಂದುಕೊಂಡಿದ್ದಾನೆ. ತರಣ್​​ ತಂದೆ ಬಳಿ ಕೆಲಸ ಮಾಡುತ್ತಿದ್ದ ನಾಸಿರ್ ಮತ್ತು ಸೈಯದ್ ತಜ್ಮುಲ್​ಗೆ ತರಣ್​​ ತನ್ನ ಜೊತೆ ಬರ್ತಿರಾ ಅಂತ ಕರೆದೊಡನೇ ಕೆಟ್ಟ ಆಲೋಚನೆ ಬಂದು ಬಿಟ್ಟಿತ್ತು. ಮಣಿ ಅವರ ಶ್ರೀಮಂತಿಕೆ ಮೇಲೆ ಕಣ್ಣು ಹಾಕಿದ್ದ ಆರೋಪಿಗಳು ಅವರ ಮಗ ತರುಣ್​​ನ ಕಿಡ್ನ್ಯಾಪ್​​ ಮಾಡಿ 50 ಲಕ್ಷ ರೂಪಾಯಿ ವಸೂಲಿ ಮಾಡಲು ಇಳಿದೇ ಬಿಟ್ಟಿದ್ದರು.

ಫೋನ್​ ಮಾಡಿಸಿ 50 ಲಕ್ಷಕ್ಕೆ ಡಿಮ್ಯಾಂಡ್​

ತರುಣ್ ಜೊತೆಗೆ ಹೋಗಿದ್ದ ಅರೋಪಿಗಳು ನಂತರ ಆತನನ್ನು ಕಿಡ್ನಾಪ್ ಮಾಡಿದ್ದರು. ಕಿರುಚಾಡದಂತೆ ತರುಣ್​​ ಬಾಯಿಗೆ ಟೇಪ್ ಸುತ್ತಿದ್ದರು. ತರುಣ್​​ ಕೈಯಲ್ಲಿ ಮನೆಗೆ ಪೋನ್ ಮಾಡಿಸಿ 50 ಲಕ್ಷ ಹಣ ಕಳುಹಿಸಿಕೊಡುವಂತೆ ಧಮ್ಕಿ ಹಾಕಿದ್ದರು. ವಿಚಾರ ಬಹಿರಂಗವಾಗುತ್ತಿದ್ದಂತೆ ತರುಣ್​​ನನ್ನು ಅರೋಪಿಗಳು ಕೊಲೆ ಮಾಡಿದ್ದರು. ನಗರದ ಬೇರೆ ಬೇರೆ ಭಾಗದಲ್ಲಿ ತಲೆಮರೆಸಿಕೊಂಡಿದ್ದ ಅರೋಪಿಗಳನ್ನು ಬಂಧಿಸುವಲ್ಲಿ ಆರ್​.ಆರ್​.ನಗರ ಪೊಲೀಸರು ಯಶಸ್ವಿಯಾಗಿದ್ದರು.

ಊಟಕ್ಕೆ ಕೂತಾಗ ಕೊಲೆ ಮಾಡಿದರು

ಡ್ರಗ್ಸ್ ನಶೆಯಲ್ಲಿ ಹಣ ಸಿಗುತ್ತೆ ಅಂತ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ. ತರಣ್​​ನ ಅಪಹರಿಸಿದ್ದ ನಾಸಿರ್, ಸೈಯದ್ ತಜ್ಮುಲ್ ಸೇರಿದಂತೆ ಮೂವರು ಊಟಕ್ಕಾಗಿ ಸಂಬಂಧಿಕರ ಮನೆಯೊಂದಕ್ಕೆ ಹೋಗಿದ್ದರು. ಆರೋಪಿಗಳಲ್ಲಿ ಒಬ್ಬನ ಅಕ್ಕನ ಮನೆಗೆ ಊಟಕ್ಕೆ ಹೋಗಿದ್ದಾಗ ಗಲಾಟೆ ನಡೆದಿದೆ. ಈ ವೇಳೆ ತರುಣ್ ಕುತ್ತಿಗೆಯನ್ನು ದಾರದಿಂದ ಬಿಗಿದು ಹತ್ಯೆ ಮಾಡಿದ್ದರು. ತರಣ್​ ಮೃತದೇಹವನ್ನು ಚೀಲದಲ್ಲಿ ತುಂಬಿ, ಆಟೋದಲ್ಲಿ ಆರ್ ಆರ್ ನಗರ ರಾಜಕಾಲುವೆ ಬಳಿ ಬಂದು ಕಾಲುವೆಗೆ ಎಸೆದು ಎಸ್ಕೇಪ್ ಆಗಿದ್ದರು.

ಹಣದಾಸೆಗೆ ಹೆಣ ಕೆಡವಿದ್ದರು

ನ.2ರಂದು ಮೂಟೆ ಕಟ್ಟಿ ಶವ ಎಸೆದಿದ್ದರು. ಕೈಕಾಲುಗಳನ್ನ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಕೊಲ್ಲಲಾಗಿತ್ತು. ಈ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗೆ ಪೋಟೊ ರವಾನೆ ಮಾಡಲಾಗಿತ್ತು. ನಂತರ ಭಾರತಿನಗರ ನಿವಾಸಿ ತರುಣ್ ಎಂಬುದು ಗೊತ್ತಾಯ್ತು. ಮೃತರ ಪರಿಚಯದವರ ತಪಾಸಣೆ ಮಾಡಿದಾಗ ಮತ್ತು ಮೃತ ಯುವಕ ಹೋದ ಜಾಗವನ್ನ ಪರಿಶೀಲನೆ ನಡೆಸಲಾಯ್ತು. ಮೊದಲು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ‌. ಎರಡನೇ ಆರೋಪಿ ತಜ್ಮುಲ್ ಮೃತ ತರುಣ್ ತಂದೆಯ ಬಳಿ ಕೆಲಸ ಮಾಡ್ತಿದ್ದ. ಮೃತನ ತಂದೆಯ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ.

ಇದನ್ನೂ ಓದಿ: Kalaburagi: ಜಿಮ್ ಗೆ ಹೊರಟವ ಬಸ್ ನಿಲ್ದಾಣದಲ್ಲಿ ನೂರಾರು ಜನರ ಮುಂದೆಯೇ ಕೊಲೆಯಾದ ಯುವಕ

ಹತ್ಯೆ ನಡೆಸಿ ಹಿಂದಿ ಭಾಷೆಯಲ್ಲಿ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಪೊಲೀಸರಿಗೆ ಬೆಳಗ್ಗೆ ಶವ ಸಿಕ್ಕಿದೆ, ಮಧ್ಯಾಹ್ನ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹತ್ಯೆ ಬಳಿಕ ನಗರದ ವಿವಿಧೆಡೆ ತಿರುಗಾಡಿ ನಂತರ ರಾಜಕಾಲುವೆಗೆ ಎಸೆಯಲಾಗಿದೆ‌ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು.
Published by:Kavya V
First published: