HOME » NEWS » State » BENGALURU URBAN CM YEDIYURAPPA SON VIJAYENDRA TRAVEL TO DELHI PRESSURIZING HIGH COMMAND TO CENTRAL MINISTRY FOR BY RAGHAVENDRA KVD

ದೆಹಲಿಗೆ ಬಿ.ವೈ.ವಿಜಯೇಂದ್ರ ದಿಢೀರ್ ಪ್ರಯಾಣ: ಬಿ.ವೈ.ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ?

ಸುದೀರ್ಘವಾಗಿ ಕುಟುಂಬದ ಜೊತೆ ಭವಿಷ್ಯದ ರಾಜಕೀಯ ಆಗುಹೋಗುಗಳ ಬಗ್ಗೆ ಸಿಎಂ ಬಿಎಸ್​​ವೈ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ದೆಹಲಿಗೆ ಬಿ ವೈ ವಿಜಯೇಂದ್ರ ತೆರಳಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Kavya V | news18-kannada
Updated:June 24, 2021, 6:14 PM IST
ದೆಹಲಿಗೆ ಬಿ.ವೈ.ವಿಜಯೇಂದ್ರ ದಿಢೀರ್ ಪ್ರಯಾಣ: ಬಿ.ವೈ.ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಬಿಜೆಪಿ ಒಳ ರಾಜಕೀಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಬಿ.ಎಸ್​.ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಭೇಟಿ ನೀಡಿದ ಬಳಿ ಬಿಎಸ್​ವೈ ಕುಟುಂಬ ರಾಜಕಾರಣ ಬಿರುಸುಗೊಂಡಿದೆ. ನಿನ್ನೆ ರಾತ್ರಿ ಕುಟುಂಬಸ್ಥರು ಸೇರಿದಂತೆ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆ ಯಡಿಯೂರಪ್ಪ ಅವರು ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಚರ್ಚೆ ಬಳಿಕ ಇಂದು ವಿಜಯೇಂದ್ರ ದೆಹಲಿಗೆ ದಿಢೀರ್​​ ಪ್ರಯಾಣ ಕೈಗೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಸಿಎಂ ಬಿ.ಎಸ್​.ಯಡಿಯೂರಪ್ಪ ನಿನ್ನೆ ತಡರಾತ್ರಿವರೆಗೂ ಡಿನ್ನರ್ ಮೀಟಿಂಗ್ ಮಾಡಿದ್ದರು. ಇಲ್ಲಿ ಸಿಎಂ ತಮ್ಮ ಪುತ್ರರೊಂದಿಗೆ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅವು ಯಾವುವು ಎಂದರೆ..


  1. ನಾಯಕತ್ವ ಗೊಂದಲ

  2. ಬಿಜೆಪಿಯೊಳಗಿನ ಬೆಳವಣಿಗೆ

  3. ಹೈಕಮಾಂಡ್​​ಗೆ ಸಿಎಂ ಬಿಎಸ್​ವೈ ವಿಚಾರದಲ್ಲಿ ಇರುವ ಅಭಿಪ್ರಾಯ

  4. ಅರುಣ್ ಸಿಂಗ್ ರಾಜ್ಯ ಭೇಟಿ ನಂತರ ನಡೆದಿರೋ ಬೆಳವಣಿಗೆ
  5. ಸಂಸದ ಬಿ.ವೈ. ರಾಘವೇಂದ್ರರಿಂದ ಕೇಂದ್ರ ಸಚಿವ ಸ್ಥಾನಕ್ಕಾಗಿ ಸಿಎಂ ಮೇಲೆ ತರುತ್ತಿರುವ ಒತ್ತಡ

  6. ಬಿಜೆಪಿಯೊಳಗೆ ಬಿ.ವೈ.ವಿಜಯೇಂದ್ರ ಮುಂದಿನ ರಾಜಕೀಯ ಭವಿಷ್ಯ

  7. ಜುಲೈ ೧೦ಕ್ಕೆ ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷ ಪೂರೈಕೆ ಕಾರ್ಯಕ್ರಮ

  8. ಮತ್ತಿತರ ಕುಟುಂಬದ ಆಂತriಕ ವಿಚಾರ ಚರ್ಚೆ ನಡೆಸಿದ್ದಾರೆ
ಸುದೀರ್ಘವಾಗಿ ಕುಟುಂಬದ ಜೊತೆ ಭವಿಷ್ಯದ ರಾಜಕೀಯ ಆಗುಹೋಗುಗಳ ಬಗ್ಗೆ ಸಿಎಂ ಬಿಎಸ್​​ವೈ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ದೆಹಲಿಗೆ ಬಿ ವೈ ವಿಜಯೇಂದ್ರ ತೆರಳಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಕೆಲಸದ ಮೇಲೆ ದೆಹಲಿ ಭೇಟಿ ಎ‌ನ್ನುತ್ತಿರುವ ವಿಜಯೇಂದ್ರ, ರಾತ್ರಿಯೇ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 24, 2021, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories