BS Yediyurappa: ತಮ್ಮ ಪರ ಸಹಿ ಸಂಗ್ರಹ ಮಾಡದಂತೆ ಸಿಎಂ ತಾಕೀತು; ಆಪ್ತ ಶಾಸಕನಿಗೆ ಬಿಎಸ್​ವೈ ಎಚ್ಚರಿಕೆ

ಯಾರೂ ಕೂಡ ಸಹಿ ಸಂಗ್ರಹಿಸಬಾರದು. ರಾಜಕೀಯ ಹೇಳಿಕೆಯನ್ನು ನೀಡಬಾರದು ಎಂದು ಶಾಸಕರಿಗೆ, ಸಚಿವರಿಗೆ ಎಚ್ಚರಿಸಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ.

ಸಿಎಂ ಬಿಎಸ್​ ಯಡಿಯೂರಪ್ಪ.

  • Share this:
     ಬೆಂಗಳೂರು (ಜೂ. 7): ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪಕ್ಷದಲ್ಲಿಯೇ ಅಪಸ್ವರಗಳು ಎದ್ದಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಕೂಡ ಹೈ ಕಮಾಂಡ್​ ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದರು. ಇದರ ಬೆನ್ನಲ್ಲೇ ಸಿಎಂ ಪರ - ವಿರೋಧವಾಗಿ ಸಹಿ ಸಂಗ್ರಹ ಕಾರ್ಯ ಆರಂಭಗೊಂಡಿದೆ. ಸಿಎಂ ಪರ ಶಾಸಕರ ಸಹಿ ಸಂಗ್ರಹ ಕಾರ್ಯವನ್ನು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನಡೆಸಿದ್ದಾರೆ. ಎಂಪಿ ರೇಣುಕಾಚಾರ್ಯ ಸಹಿ ಸಂಗ್ರಹಕ್ಕೆ ಹಲವು ಬಿಜೆಪಿ ನಾಯಕರು ಸಿಡಿಮಿಡಿ ಗೊಂಡಿದ್ದಾರೆ. ಬಿಜೆಪಿಯಲ್ಲಿ ಹೈ ಕಮಾಂಡ್​ ಸುಪ್ರೀಂ. ಹೈ ಕಮಾಂಡ್​ ಎಲ್ಲೂ ಸಹಿ ಸಂಗ್ರಹ ಕಾರ್ಯಕ್ಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದರು.

    ನಾಯಕತ್ವ ವಿಚಾರಣೆಯಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಈ ಸಹಿ ಸಂಗ್ರಹ ಅಭಿಯಾನ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಅವರಿಗೆ ಮುಜುಗರವನ್ನು ಮೂಡಿಸಿದ್ದು, ಈ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತು ತಿಳಿಸಿರುವ ಬಿಎಸ್​ ಯಡಿಯೂರಪ್ಪ, ಯಾರೂ ಕೂಡ ಸಹಿ ಸಂಗ್ರಹಿಸಬಾರದು. ರಾಜಕೀಯ ಹೇಳಿಕೆಯನ್ನು ನೀಡಬಾರದು ಎಂದು ಶಾಸಕರಿಗೆ, ಸಚಿವರಿಗೆ ಎಚ್ಚರಿಸಿದ್ದಾರೆ.

    ಇದನ್ನು ಓದಿ: ಸಿಎಂ ಪರ ರೇಣುಕಾಚಾರ್ಯ ಸಹಿ ಸಂಗ್ರಹ; ಶಾಸಕರ ಪಟ್ಟಿ ಬಹಿರಂಗಪಡಿಸುವಂತೆ ಡಿಕೆಶಿ ಸವಾಲ್​

    ಸಿಎಂ ವಿರುದ್ಧ ಹಾದಿ ಬೀದಿಯಲ್ಲಿ ನಿಂತು ಹೇಳಿಕೆ ನೀಡದಂತೆ ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದೆ. ಇದರಿಂದಾಗಿ ಸರ್ಕಾರದ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬರಲಿದೆ. ಕೋವಿಡ್​ ಸಂದರ್ಭದಲ್ಲಿನ ಈ ರಾಜಕೀಯ ಚಟುವಟಿಕೆ ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಲಿದೆ ಎಂದು ಈಗಾಗಲೆ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
    ಈ ಮಾತುಗಳ ಹೊರತಾಗಿಯೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಿಎಂ ಪರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡುವ ಮೂಲಕ ಮತ್ತಷ್ಟು ಗೊಜುಲು ಮಾಡುವ ಪ್ರಕ್ರಿಯೆ ಮುಂದಾಗಿದ್ದಾರೆ. ಇದೇ ಹಿನ್ನಲೆಯಲ್ಲಿ ಆಪ್ತ ಶಾಸಕನಿಗೂ ಯಡಿಯೂರಪ್ಪ ಈ ಮೂಲಕ ತಾಕೀತು ಮಾಡಿದ್ದಾರೆ. ಇದೇ ವೇಳೆ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಈ ಮೂಲಕ ಈ ರಾಜಕೀಯ ಚಟುವಟಿಕೆಗಳಿಗೆಲ್ಲಾ ಅಂತಿಮ ಹಾಡಬೇಕು ಎಂದು ಎಚ್ಚರಿಸಿದ್ದಾರೆ

    ಸಿಎಂ ಬಿಎಸ್​ ಯಡಿಯೂರಪ್ಪ ಪರ ಸಹಿ ಸಂಗ್ರಹ ಕಾರ್ಯಕ್ಕೆ ಮುಂದಾಗಿರುವ ರೇಣುಕಾಚಾರ್ಯ ನಡೆಗೆ ಸಚಿವ ಕೆ ಎಸ್​ ಈಶ್ವರಪ್ಪ, ಪ್ರಲ್ಹಾದ್​​ ಜೋಶಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿಯಲ್ಲಿ ಸಹಿ ಸಂಗ್ರಹ ವ್ಯವಸ್ಥೆ ಇಲ್ಲ. ರೇಣುಕಾಚಾರ್ಯಗೆ ಹತ್ತು ಬಾರಿ ಹೇಳಿದ್ದನ್ನೇ ಹೇಳುತ್ತಾನೆ. ಸಹಿ ಸಂಗ್ರಹಕ್ಕೆ ಬಿಜೆಪಿಯಲ್ಲಿ ಬೆಲೆ ಇಲ್ಲ. ಅಲ್ಲದೇ ಬಿಎಸ್​ ಯಡಿಯೂರಪ್ಪ ಪರ ಸಹಿ ಸಂಗ್ರಹ ಮಾಡಿ ಎಂದು ಯಾರು ಹೇಳಿಲ್ಲ. ಬಿಜೆಪಿಯಲ್ಲಿ ಹೈ ಕಮಾಂಡ್​ ನಿರ್ಣಯವೇ ಅಂತಿಮ. ನಮ್ಮದು ಶಿಸ್ತಿನ ಪಕ್ಷ, ಕೇಂದ್ರ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ಧ ಎಂದಿದ್ದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: