ಸಿಎಂ ಬದಲಾವಣೆ ವಿಚಾರ: ಸ್ವಾಮೀಜಿಗಳ ಬಳಿ ಮನದ ಮಾತು ಹೇಳಿಕೊಂಡ ಬಿ.ಎಸ್.ಯಡಿಯೂರಪ್ಪ

ನಾನು ಪುಣ್ಯ ಶಾಲಿ ಇಷ್ಟೊಂದು ಮಠಾಧೀಶರುಗಳು ನನಗೆ ಬೆಂಬಲ ಕೊಡುತ್ತಿದ್ದೀರಾ. ತಾಯಿ ಪಕ್ಷಕ್ಕೆ ನಾನು ಮೋಸ ಮಾಡೋದಿಲ್ಲ‌. ತಾಯಿಗೆ ನಾನು ಬೆಲೆ ಕೊಡಬೇಕಾಗುತ್ತೆ ಎಂದೆಲ್ಲ ಮಾತನಾಡಿರುವ ಸಿಎಂ.

ಸ್ವಾಮೀಜಿಗಳ ಜೊತೆ ಸಿಎಂ ಚರ್ಚೆ

ಸ್ವಾಮೀಜಿಗಳ ಜೊತೆ ಸಿಎಂ ಚರ್ಚೆ

  • Share this:
ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ವಿಚಾರ ಹಿನ್ನೆಲೆಯಲ್ಲಿ ಲಿಂಗಾಯತ ಸ್ವಾಮೀಜಿಗಳ ನಿಯೋಗ ಬಿಎಸ್​ವೈ ಬೆನ್ನಿಗೆ ನಿಂತಿದೆ. ಇಂದು ಸಹ ಸ್ವಾಮೀಜಿಗಳು ಯಡಿಯೂರಪ್ಪರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು. ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಬಿಜೆಪಿ ಹೈಕಮಾಂಡ್​ ಮೇಲೆ ಒತ್ತಡವೇರುವ ಕೆಲಸವನ್ನು ಮಾಡಿದರು. ಆದರೆ ಯಡಿಯೂರಪ್ಪ ಮಾತ್ರ ಸ್ವಾಮೀಜಿಗಳ ಬಳಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರಂತೆ. ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಸಿಎಂ ಭೇಟಿಯಾದ ಸಂದರ್ಭದಲ್ಲಿ ಮಠಾಧೀಶರುಗಳು ಎದುರು ಮಾತನಾಡಿದ ಸಿಎಂ ನಾನು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡೋದಿಲ್ಲ. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದಿದ್ದಾರೆ.

ನಿನ್ನೆ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಬಂದಾಗಲು ಸಿಎಂ ಇದೇ ರೀತಿಯ ಉತ್ತರವನ್ನ ಮಠಾಧೀಶರಿಗೆ ನೀಡಿದ್ದರು. ನಾನು ಪುಣ್ಯ ಶಾಲಿ ಇಷ್ಟೊಂದು ಮಠಾಧೀಶರುಗಳು ನನಗೆ ಬೆಂಬಲ ಕೊಡುತ್ತಿದ್ದೀರಾ. ತಾಯಿ ಪಕ್ಷಕ್ಕೆ ನಾನು ಮೋಸ ಮಾಡೋದಿಲ್ಲ‌. ತಾಯಿಗೆ ನಾನು ಬೆಲೆ ಕೊಡಬೇಕಾಗುತ್ತೆ ಎಂದೆಲ್ಲ ಮಾತನಾಡಿರುವ ಸಿಎಂ.

ಇದೇ ವೇಳೆ ಯಡಿಯೂರಪ್ಪಗೆ ಸ್ವಾಮೀಜಿಗಳ ಬೆಂಬಲವನ್ನು ಟೀಕಿಸಿದ ವಿಶ್ವನಾಥ್ ಹೇಳಿಕೆಗೆ ಸಿದ್ದಗಂಗಾ ಶ್ರೀ ತಿರುಗೇಟು ನೀಡಿದರು. ನಮ್ಮ ಮಠಗಳು ಯಾವುದೇ ರಾಜಕೀಯ ಮಾಡ್ತಿಲ್ಲ. ಯಾವುದೇ ರಾಜಕೀಯ ಪಕ್ಷದ ಜೊತೆ ನಾವು ಇಲ್ಲ. ರಾಜಕಾರಣಿಗಳ ಜೊತೆಯೂ ನಾವು ಇಲ್ಲ. ಎಲ್ಲಾ ಸಿಎಂಗಳಿಗೂ ನಾವು ಬೆಂಬಲ ಕೊಟ್ಟಿದ್ದೇವೆ. ನಾವು ಕೊರೊನಾ ಸಮಯದಲ್ಲಿ ಮಠಗಳನ್ನ ಮುಚ್ಚಿರಲಿಲ್ಲ. ಕೊರೊನಾ ಸಮಯದಲ್ಲಿ ಮಠಗಳು ಕೆಲಸ ಮಾಡಿವೆ. ಕೋವಿಡ್ ಕೇರ್ ಸೆಂಟರ್ ಗಳನ್ನ ಪ್ರಾರಂಭ ಮಾಡಿದ್ವಿ. ನಾವು ಯಾವ ರಾಜಕಾರಣಿ ಪರ ಇಲ್ಲ. ಆದ್ರೆ ಯಡಿಯೂರಪ್ಪ ಅವಧಿ ಪೂರ್ಣ ಮಾಡಲು ಅವಕಾಶ ಕೊಡಬೇಕು ಅನ್ನೋದು ನಮ್ಮ ಅಭಿಪ್ರಾಯ ಎಂದು ಸಿದ್ದಗಂಗಾ ಶ್ರೀಗಳ ತಿಳಿಸಿದರು.

ಈ ಮಧ್ಯೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾದರೆ ಕೆ.ಎಸ್.ಈಶ್ವರಪ್ಪ ರಾಜ್ಯದ ಸಿಎಂ ಆಗಬೇಕು ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒತ್ತಾಯಿಸಿದೆ. ಯಡಿಯೂರಪ್ಪ-ಈಶ್ವರಪ್ಪ ಜೋಡೆತ್ತುಗಳು. ಈಶ್ವರಪ್ಪ ಯಡಿಯೂರಪ್ಪಗೆ ಸರಿಸಮಾನ ನಾಯಕ. ಯಡಿಯೂರಪ್ಪ ಅವರಷ್ಟೇ ಶಕ್ತಿ ಸಾಮರ್ಥ್ಯ ಈಶ್ವರಪ್ಪಗೆ ಇದೆ. ರಾಜ್ಯದ ಮೂಲೆ ಮೂಲೆ ಸುತ್ತಿ ಇಬ್ಬರೂ ಸಂಘಟನೆ ಮಾಡಿದ್ದಾರೆ. ಹಿಂದುಳಿದ ಪ್ರಬಲ ನಾಯಕ ಈಶ್ವರಪ್ಪ. ಈಶ್ವರಪ್ಪಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಈಶ್ವರಪ್ಪ ಅವರನ್ನ ಸಿಎಂ ಎಂದು ಘೋಷಿಸಲಿ. ಹಿಂದುಳಿದ ನಾಯಕ ಸಿಎಂ ಆದರೆ ಪಕ್ಷಕ್ಕೂ ಒಳ್ಳೆಯದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈಶ್ವರಪ್ಪ ಕೂಡ ಕಾರಣ. ಕೇಂದ್ರದ ಸಂಪುಟದಲ್ಲಿ ಹಿಂದುಳಿದ, ದಲಿತರಿಗೆ ಅವಕಾಶ ನೀಡಿದೆ. ರಾಜ್ಯದಲ್ಲೂ ಹಿಂದುಳಿದ ಸಮುದಾಯಕ್ಕೆ ಪ್ರಾತನಿಧ್ಯ ನೀಡಲಿ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆಗ್ರಹಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: