HOME » NEWS » State » BENGALURU URBAN CM BS YEDIYURAPPA CREATED COVID WAR ROOM GIVEN IN CHARGE TO MINISTERS SESR

ಸುಧಾಕರ್ ಬಿಟ್ಟು ಉಳಿದ ಸಚಿವರಿಗೆ ಕೋವಿಡ್​​ ನಿರ್ವಹಣೆ ಉಸ್ತುವಾರಿ; ನಾಳೆಯಿಂದಲೇ ಫೀಲ್ಡ್​ಗೆ ಇಳಿಯುವಂತೆ ಸಿಎಂ ಸೂಚನೆ

ಚಾಮರಾಜನರ ಘಟನೆ ಹಿನ್ನಲೆ ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆ ಅವರಿಗೆ ಯಾವುದೇ ವಿಶೇಷ ಜವಾಬ್ದಾರಿಯನ್ನು ನೀಡಿಲ್ಲ.

news18-kannada
Updated:May 4, 2021, 6:52 PM IST
ಸುಧಾಕರ್ ಬಿಟ್ಟು ಉಳಿದ ಸಚಿವರಿಗೆ ಕೋವಿಡ್​​ ನಿರ್ವಹಣೆ ಉಸ್ತುವಾರಿ; ನಾಳೆಯಿಂದಲೇ ಫೀಲ್ಡ್​ಗೆ ಇಳಿಯುವಂತೆ ಸಿಎಂ ಸೂಚನೆ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಮೇ. 4): ರಾಜ್ಯದಲ್ಲಿ ಕೊರೋನಾ ಸೋಂಕು ಮೂರು ನಾಲ್ಕು ಪಟ್ಟು ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿರಬೇಕು ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಕಟ್ಟಾಜ್ಞೆ ಹೊರಡಿಸಿದ್ದಾರೆ. ಕೋವಿಡ್​ ನಿರ್ವಹಣೆ ಸಂಬಂಧ ನಡೆಸಲಾದ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಚಾಮರಾಜನಗರ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ ಕೋವಿಡ್​ ಹೆಚ್ಚಳದ ಹಿನ್ನಲೆ ಸಚಿವರೊಂದಿಗೆ ಸವಿಸ್ತರವಾಗಿ ಚರ್ಚೆ ಮಾಡಲಾಗಿದೆ. ಆಕ್ಸಿಜನ್ ಬಗ್ಗೆ ರೆಮಿಡಿಸಿವರ್​, ಹಾಸಿಗೆ  ಸೇರಿದಂತೆ ಕೋವಿಡ್​ ನಿರ್ವಹಣೆ ಕುರಿತು ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ನಾಳೆಯೇ ಉಸ್ತುವಾರಿ ಸಚಿವರು ಸ್ಥಳದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ ಎಂದರು

ಕೋವಿಡ್​ ವಾರ್ ರೂಂ ಉಸ್ತುವಾರಿಗಳ ನೇಮಕ ಕೂಡ ಮಾಡಲಾಗಿದ್ದು, ಜಗದೀಶ್ ಶೆಟ್ಟರ್​ಗೆ ಆಕ್ಸಿಜನ್​ ಹಂಚಿಕೆ ಹೊಣೆ ನೀಡಲಾಗಿದೆ. ಮಾನವ ಸಂಪನ್ಮೂಲ, ರೆಮಿಡಿಸಿವಿರ್​ ಸೇರಿದಂತೆ ಔಷಧ ಸರಬರಾಜು ಕಂಪನಿ ಗಳ ಜೊತೆಗೆ ಅಶ್ವತ್ಥ್ ನಾರಾಯಣ್ ಸಂಪರ್ಕದಲ್ಲಿ ಇರುತ್ತಾರೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಬೆಡ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಇಂಧನ ಸಚಿವ ಆರ್​ಅಶೋಕ್, ಗೃಹ ಸಚಿವ ಬಸವರಾಜ್​ ಬೊಮ್ಮಯಿಗೆ ನೀಡಲಾಗಿದೆ. ವಾರ್ ರೂಮ್ ಕಾಲ್ ಸೆಂಟರ್ ನಿರ್ವಹಣೆಯನ್ನು ಅರವಿಂದ್ ‌ಲಿಂಬಾವಳಿಗೆ ವಹಿಸಲಾಗಿದೆ.

ಇನ್ನು ಆರೋಗ್ಯ ಸಚಿವರಾದ ಕೆ ಸುಧಾಕರ್​ಗೆ ಯಾವುದೇ ಉಸ್ತುವಾರಿಯನ್ನು ಸಿಎಂ ನೀಡಿರುವುದು ಗಮನಸೆಳೆದಿದೆ. ಚಾಮರಾಜನರ ಘಟನೆ ಹಿನ್ನಲೆ ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆ ಅವರಿಗೆ ಯಾವುದೇ ವಿಶೇಷ ಜವಾಬ್ದಾರಿಯನ್ನು ನೀಡಿಲ್ಲ.

ಇದನ್ನು ಓದಿ: ಪ್ರಕಾಶ್​ ಪಡುಕೋಣೆಗೆ ಕೋವಿಡ್​ ಸೋಂಕು; ಆಸ್ಪತ್ರೆಗೆ ದಾಖಲಾದ ಬ್ಯಾಡ್ಮಿಂಟನ್​ ದಿಗ್ಗಜ

ಲಾಕ್​ಡೌನ್​ ಜಾರಿಯಲ್ಲಿದ್ದರೂ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಪರ್ಯಾಯ ಕ್ರಮದ ಕುರಿತು ಮಾತನಾಡಿದ ಅವರು, ಮೇ 12ರವರೆಗೆ ಲಾಕ್​ಡೌನ್​ ಮುಂದುವರೆಯಲಿದ್ದು, ಬಳಿಕ ಮುಂದೇನು ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು

ರಾಜ್ಯದಲ್ಲಿ ಆಕ್ಸಿಜನ್​ ಸಮಸ್ಯೆಗೆ ಕಾರಣ ಹೊರ ರಾಜ್ಯದಿಂದ ಆಕ್ಸಿಜನ್ ತಡವಾಗಿ ಬರುತ್ತಿರುವುದಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕು ಕಡಿಮೆ ಆಗುತ್ತಿದೆ. ಈ ಹಿನ್ನಲೆ ಜಿಂದಾಲ್ ಅವರು ನೀಡುತ್ತಿರುವ ಆಕ್ಸಿಜನ್ ರಾಜ್ಯಕ್ಕೆ ನೀಡಿ ಎಂದು ಕೇಳಿದ್ದೇವೆ. ಈ ಬಹ್ಹೆ ಕೇಂದ್ರದ ಜೊತೆಗೆ ಮಾತಾಡಿದ್ದೇವೆ ಸಹಕಾರ ಕೊಡುವುದಾಗಿ ಹೇಳಿದ್ದಾರೆ ಎಂದರು
ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ನರ್ಸಿಂಗ್​ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ. ರೆಮಿಡಿಸಿವರ್​ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಇದೇ ವೇಳೆ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಫ್ರಂಟ್​ ಲೈನ್​ ವರ್ಕಸ್​ ಎಂದು ಪರಿಗಣಿಸಿ ಅವರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು
Published by: Seema R
First published: May 4, 2021, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories