HOME » NEWS » State » BENGALURU URBAN CM BS YEDIYURAPPA CLOSE AIDS MEETING BEFORE ARUN SINGH ARRIVAL SESR

BS Yediyurappa: ಅರುಣ್​​ಸಿಂಗ್​ ಆಗಮನಕ್ಕೂ ಮುನ್ನ ಬಿಎಸ್​ವೈ ಭೇಟಿಯಾದ ಆಪ್ತ ಬಣ; ಕುತೂಹಲ ಮೂಡಿಸಿದ ಸಭೆ

ಅರುಣ್​ ಸಿಂಗ್​ ಆಗಮನಕ್ಕೂ ಮುನ್ನವೇ ಅರುಣ್​ ಕುಮಾರ್​ ಪೂಜಾರ್​, ಗೋಪಾಲಕೃಷ್ಣ , ಪರಣ್ಣ ಮನವಳ್ಳಿ, ನಾಗೇಂದ್ರ, ದೊಡ್ಡನಗೌಡ ಪಾಟೀಲ್​ ಸೇರಿದಂತೆ ಹಲವಾರು ನಾಯಕರು ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ  ಮಾತುಕತೆ ನಡೆಸಿದ್ದಾರೆ.

news18-kannada
Updated:June 14, 2021, 3:08 PM IST
BS Yediyurappa: ಅರುಣ್​​ಸಿಂಗ್​ ಆಗಮನಕ್ಕೂ ಮುನ್ನ ಬಿಎಸ್​ವೈ ಭೇಟಿಯಾದ ಆಪ್ತ ಬಣ; ಕುತೂಹಲ ಮೂಡಿಸಿದ ಸಭೆ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಜೂ. 14): ರಾಜ್ಯದಲ್ಲಿ ಉದ್ಭವಿಸಿರುವ ನಾಯಕತ್ವ ಬಿಕ್ಕಟ್ಟಿನ ಕುರಿತ ಚರ್ಚೆಗೆ ತೆರೆ ಏಳೆಯಲು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ನಾಯಕತ್ವದ ವಿರುದ್ಧ ಅಪಸ್ವರ ಹಾಡುತ್ತಿರುವ ನಾಯಕರು ಈಗಾಗಲೇ ಶಾಸಕಾಂಗ ಸಭೆಯನ್ನು ಕರೆದು ಅಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಅರುಣ್ ಸಿಂಗ್ ಜೂನ್ 16 ರಂದು ರಾಜ್ಯಕ್ಕೆ ಆಗಮಿಸಲಿದ್ದು ಮೂರು ದಿನ ಬೆಂಗಳೂರಿನಲ್ಲೇ ಉಳಿಯುವ ಹಿನ್ನಲೆ ಈಗಾಗಲೇ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈ ನಡುವೆ ಸಿಎಂ  ಪರ ಗುಂಪು ಕೂಡಿ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂಬ ಸಂದೇಶವನ್ನು ಹೈ ಕಮಾಂಡ್​ಗೆ ಮುಟ್ಟಿಸಲು ತಯಾರಿ ನಡೆಸಿದ್ದಾರೆ. ಯಡಿಯೂರಪ್ಪ ನಾಯಕತ್ವದ ವಿಚಾರದಲ್ಲಿ ಹೈ ಕಮಾಂಡ್​ ಅಭಿಪ್ರಾಯ ಸಂಗ್ರಹಿಸುವುದಿಲ್ಲ. ಅವರೇ ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಹೈ ಕಮಾಂಡ್​ನಿಂದ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದೆಯಾ ಎಂಬ ಅನುಮಾನಕ್ಕೆ ರಾಣೆ ಬೆನ್ನೂರು ಶಾಸಕ ಪುಷ್ಠಿ ನೀಡಿದ್ದಾರೆ.

ಅರುಣ್​ ಸಿಂಗ್​ ಆಗಮನಕ್ಕೂ ಮುನ್ನವೇ ಅರುಣ್​ ಕುಮಾರ್​ ಪೂಜಾರ್​, ಗೋಪಾಲಕೃಷ್ಣ , ಪರಣ್ಣ ಮನವಳ್ಳಿ, ನಾಗೇಂದ್ರ, ದೊಡ್ಡನಗೌಡ ಪಾಟೀಲ್​ ಸೇರಿದಂತೆ ಹಲವಾರು ನಾಯಕರು ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ  ಮಾತುಕತೆ ನಡೆಸಿದ್ದಾರೆ. ಈ ಮೂಲಕ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಆಗಮಿಸುವ ಮುನ್ನವೇ ಸಿಎಂ ಪರ ಬ್ಯಾಟಿಂಗ್​ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿರುವ ಅರುಣ್​ ಕುಮಾರ್​ ಪೂಜಾರ್​, ನಾವೆಲ್ಲರೂ ಯಡಿಯೂರಪ್ಪ ನಾಯಕತ್ವದಲ್ಲಿ ಗೆದ್ದು ಬಂದಿದ್ದೇವೆ. ನಾವು ಯಡಿಯೂರಪ್ಪ ಪರವಾಗಿಯೇ ಇರುತ್ತೇವೆ. ಅರುಣ್​ ಸಿಂಗ್​ ಶಾಸಕರ ಸಭೆ ಕರೆದಿರುವ ಬಗ್ಗೆ ತಿಳಿದಿಲ್ಲ. ಆದರೆ, ಸಭೆ ಇರಲಿ, ಇಲ್ಲದಿರಲಿ ನಾವಂತೂ ಯಡಿಯೂರಪ್ಪಗೆ ಬೆಂಬಲ ಸೂಚಿಸುತ್ತೇವೆ ಎಂದರು

"ಗಂಡೆದೆ ಮುಖ್ಯಮಂತ್ರಿ ಇದ್ರೆ ಯಡಿಯೂರಪ್ಪಾಜಿ ಮಾತ್ರ. ಇಂದು ಅವರು ಕೊವೀಡ್ ನಿಂದ ಮೃತಪಟ್ಟ ಕುಟುಂಬ ಗಳಿಗೆ ನೆರವು ನೀಡಿದ್ದಾರೆ. ದೇಶದಲ್ಲೇ ಇದು ಹೆಮ್ಮೆಯ ಕೆಲಸ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡಲು ಪರಿಹಾರ ಘೋಷಿಸಿದ ಸಿಎಂ ಯಡಿಯೂರಪ್ಪಾಜಿಯವರಿಗೆ ಧನ್ಯವಾದ ಹೇಳುತ್ತೇನೆ" ಎಂದು ಸಿಎಂ ಪರ ಬ್ಯಾಟಿಂಗ್​ ನಡೆಸಿದರು.

ಇದನ್ನು ಓದಿ: ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟ ಒಬ್ಬರಿಗೆ ₹1 ಲಕ್ಷ ಪರಿಹಾರ : ಸಿಎಂ ಯಡಿಯೂರಪ್ಪ ಘೋಷಣೆ

ರಾಜ್ಯಕ್ಕೆ ಆಗಮಿಸಲಿರುವ ಅರುಣ್​ ಸಿಂಗ್​ ಕ್ಯಾಬಿನೆಟ್​, ಕೋರ್​ ಕಮಿಟಿಯೊಂದಿಗೆ ಸಭೆ ನಡೆಸಲಿದ್ದುಮ ಶಾಸಕರ ಅಭಿಪ್ರಾಯವನ್ನು ಪಡೆಯಲಿದ್ದಾರೆ. ಈ ಮೂಲಕ ಬಿಜೆಪಿ ನಾಯಕತ್ವದಲ್ಲಿ ಮೂಡಿರುವ ಬಿಕ್ಕಟ್ಟು ಪರಿಹಾರಕ್ಕೆ ಅವರು ತಯಾರಿ ನಡೆಸಲಿದ್ದಾರೆ.

ಜೂನ್ 16ರಂದು ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು ಅಂದು ಸಚಿವರ ಸಭೆ ನಡೆಸಲಿದ್ದಾರೆ. ಇದಲ್ಲದೆ ಜೂನ್ 18ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಯಡಿಯೂರಪ್ಪ ವಿರೋಧಿ ಬಣ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸುತ್ತಿದೆ. ಯಡಿಯೂರಪ್ಪ ಕಡೆಯವರು ಕೊರೋನಾ ಕಾರಣ ಕೊಟ್ಟು ಶಾಸಕಾಂಗ ಪಕ್ಷದ ಸಭೆ ಬೇಡ ಎಂದು ಹೇಳುತ್ತಿದ್ದಾರೆ. ಹೀಗೆ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರದಲ್ಲಿ ಎರಡೂ ಕಡೆಯಿಂದ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎರಡೂ ಪಾಳೆಯವನ್ನು ತೃಪ್ತಿಗೊಳಿಸಲು ಜೂನ್ 17ರಂದು ಶಾಸಕಾಂಗ ಪಕ್ಷದ ಸಭೆಯ ಬದಲಿಗೆ 'ಶಾಸಕರ ಸಭೆ' ಕರೆಯಲು ನಿಶ್ಚಯಿಸಲಾಗಿದೆ ಎಂದು ತಿಳಿದುಬಂದಿದೆ
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 14, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories