HOME » NEWS » State » BENGALURU URBAN CM BS YEDDYURAPPA RESIDENT ROAD BLOCKED AFTER INFECTED COMING FOR HELP SESR

ಬೆಡ್​ಗಾಗಿ ಸಿಎಂ ಬಳಿಯೇ ಆಗಮಿಸುತ್ತಿರುವ ಸೋಂಕಿತರು; ಮುಖ್ಯಮಂತ್ರಿ ನಿವಾಸದ ರಸ್ತೆಯೇ ಬಂದ್​​

ಮತ್ತಷ್ಟು ಜನ ಸಹಾಯಕ್ಕಾಗಿ ನೇರವಾಗಿ ಸಿಎಂ ಬಳಿಯೇ ಧಾವಿಸುತ್ತಿರುವುದು ಸರ್ಕಾರಕ್ಕೆ ಮುಜುಗರದ ಜೊತೆಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಇದೇ ಹಿನ್ನಲೆ ಈಗ ಮುಖ್ಯಮಂತ್ರಿ ನಿವಾಸದ ಮುಂದಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.

news18-kannada
Updated:May 8, 2021, 3:03 PM IST
ಬೆಡ್​ಗಾಗಿ ಸಿಎಂ ಬಳಿಯೇ ಆಗಮಿಸುತ್ತಿರುವ ಸೋಂಕಿತರು; ಮುಖ್ಯಮಂತ್ರಿ ನಿವಾಸದ ರಸ್ತೆಯೇ ಬಂದ್​​
ಸಿಎಂ ಬಿ.ಎಸ್.​ಯಡಿಯೂರಪ್ಪ.
  • Share this:
ಬೆಂಗಳೂರು (ಮೇ. 8) ಎರಡನೇ ಅಲೆ ಕೊರೋನಾ ಸೋಂಕಿಗೆ ಜನರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿದರೂ ಸೋಂಕು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಅದರಲ್ಲಿಯೂ ಸಿಲಿಕಾನ್​ ಸಿಟಿಯಲ್ಲಿಯಂತೂ ಸೋಂಕು ನಿಯಂತ್ರಣ ಮೀರಿದ್ದು ಅದನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಬೆಡ್​, ಆಕ್ಸಿಜನ್​ ಸಮಸ್ಯೆ ಹೆಚ್ಚಾಗ ತೊಡಗಿದೆ. ರಾಜಧಾನಿಯ ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಬೆಡ್​ಗಾಗಿ ಜನರು ಪರಾದಾಡುತ್ತಿದ್ದಾರೆ. ಆಸ್ಪತ್ರೆಗಳು ಸುತ್ತಿದ ಬಳಿಕ ಬೆಡ್​ ಸಿಗದ ಹಿನ್ನಲೆ ಕೆಲವರು ಸಿಎಂ ಮನೆ ಬಾಗಿಲು ಹೋಗಿ ತಟ್ಟುತ್ತಿದ್ದಾರೆ. ದಿನಂದಿಂದ ದಿನಕ್ಕೆ ರಾಜ್ಯದ ಮುಖ್ಯಮಂತ್ರಿಗಳನ್ನು ಸಹಾಯ ಕೇಳಿಕೊಂಡು ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ಮತ್ತಷ್ಟು ಜನ ಸಹಾಯಕ್ಕಾಗಿ ನೇರವಾಗಿ ಸಿಎಂ ಬಳಿಯೇ ಧಾವಿಸುತ್ತಿರುವುದು ಸರ್ಕಾರಕ್ಕೆ ಮುಜುಗರದ ಜೊತೆಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಇದೇ ಹಿನ್ನಲೆ ಈಗ ಮುಖ್ಯಮಂತ್ರಿ ನಿವಾಸದ ಮುಂದಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.

ಸಿಎಂ ನಿವಾಸದ ಕುಮಾರ ಕೃಪಾ ರಸ್ತೆಯನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ. ಸಿಎಂ ನಿವಾಸವಿರುವ ವಿಂಡ್ಸರ್​ ಮ್ಯಾನ್​ ರಸ್ತೆಯಿಂದ ಚಿತ್ರಕಲಾ ಪರಿಷತ್​ವರೆಗೆ ಸಂಪೂರ್ಣ ರಸ್ತೆಯನ್ನು ಬಂದ್​ ಮಾಡಿದ್ದು, ಸಾರ್ವಜನಿಕರ ಓಡಾಟಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈ ಮೂಲಕ ಸಿಎಂ ಭೇಟಿ ಮಾಡುವುದರಿರಲಿ, ಅವರ ನಿವಾಸದ ರಸ್ತೆ ಪ್ರವೇಶಕ್ಕೂ ಅವಕಾಶವನ್ನು ನಿರಾಕರಿಸಲಾಗಿದೆ. ಈ ಮೂಲಕ ಸಿಎಂ ಜನರ ಕಷ್ಟಕ್ಕೆ ಸಿಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಲಾಗಿದೆ.

ಮೊನ್ನೆ ಆಟೋ ಚಾಲಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಬಿಬಿಎಂಪಿಯಿಂದ ಕರೆ ಬಂದರೂ ಆತನಿಗೆ ಬೆಡ್​ ಸಿಕ್ಕಿಲ್ಲ. ಹೀಗಾಗಿ ಕೊನೆಗೆ ಆತ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ನೇರವಾಗಿ ಆಗಮಿಸಿ, ಸಹಾಯ ಮಾಡಿ ಎಂದು ಸಿಎಂ ಮನೆ ಬಳಿ ಮನವಿ ಮಾಡಿದ್ದ. ಈ ಘಟನೆ ಬೆನ್ನಲ್ಲೇ ಆಂಬ್ಯಲೆನ್ಸ್​ ಮೂಲಕ ಕೆಸಿ ಜನರಲ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಆಂಬುಲೆನ್ಸ್​ನಲ್ಲಿ ಸೋಂಕಿತರು ಸಿಎಂ ನಿವಾಸದ ಬಳಿ ಧಾವಿಸಿದ್ದರು.

ಈ ಘಟನೆ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಲಾಗಿದೆ. ಸೋಂಕಿತರು ನೇರವಾಗಿ ಸಿಎಂ  ಯಡಿಯೂರಪ್ಪ ನಿವಾಸದ ಎದುರು ಆಗಮಿಸುತ್ತಿರುವ ಹಿನ್ನಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸೋಂಕು ಹಬ್ಬುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ರೀತಿ ಮಾಡಲಾಗಿದೆ. ಜನರ ಕಷ್ಟ ಆಲಿಸಬಾರದು ಎಂಬ ಉದ್ದೇಶದ ಜೊತೆಗೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲು ರಸ್ತೆ ಬಂದ್​ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.

ಇದನ್ನು ಓದಿ: ಕೊರೋನಾಗೆ ಒಂದೇ ದಿನದಲ್ಲಿ 592 ಬಲಿ; ಬೆಂಗಳೂರಿನಲ್ಲಿ ನಿಯಂತ್ರಣ ಮೀರಿದ ಸೋಂಕು

ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಎರಡು ಬಾರಿ ಸೋಂಕಿಗೆ ತುತ್ತಾಗಿ ಚೇತರಿಕೆ ಕಂಡಿದ್ದಾರೆ. ಎರಡನೇ ಅಲೆ ಸೋಂಕು ತೀವ್ರ ಸ್ವರೂಪದಾಗಿದ್ದು, ಹೆಚ್ಚಿನ ಹಾನಿ ಸಂಭಿಸುತ್ತಿದೆ. ಗಾಳಿಯಿಂದಲೂ ಸೋಂಕು ಹಬ್ಬುತ್ತಿರುವ ಬಗ್ಗೆ ಕೂಡ ಕಳವಳ ವ್ಯಕ್ತವಾಗುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಜನರ ಸಂಕಷ್ಟಕ್ಕೆ ಆಗಮಿಸಿ, ಅವರ ನೆರವಿಗೆ ಧಾವಿಸಬೇಕಾದ ಸಿಎಂಗೆ ಸೋಂಕಿನ ಭಯ ಜೊತೆಗೆ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚು ಆಗಮಿಸುತ್ತಿರುವ ಹಿನ್ನಲೆ ರಸ್ತೆಯನ್ನೇ ಬಂದ್​ ಮಾಡಿಸಿದ್ದಾರೆ. ಈ ಮೂಲಕ ಜನರ ಕಷ್ಟಕ್ಕೆ ಧಾವಿಸಬೇಕಾದ ರಾಜ್ಯದ ಮುಖ್ಯಮಂತ್ರಿಗಳು ಜನರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಅವರ ಜನಸಾಮಾನ್ಯರ ಕಷ್ಟಕ್ಕೆ ಕಿವಿಗೊಡಲು ಹಿಂದೇಟು ಹಾಕಿದ್ದಾರೆ.
Published by: Seema R
First published: May 8, 2021, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories