ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳ್ತಾರೆ: Bommai ಸರ್ಕಾರದ 6 ತಿಂಗಳ ಆಡಳಿತಕ್ಕೆ Siddaramaiah ವ್ಯಂಗ್ಯ

ಬಣ್ಣ ಬಣ್ಣದ ಜಾಹಿರಾತು ಕೊಟ್ಟು ಸುಳ್ಳು ಹೇಳ್ತಾರೆ. ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಅವರು ಹೇಳಬೇಕಿತ್ತು, ಹೇಳಿಲ್ಲ. ಕೋವಿಡ್ ಬಗ್ಗೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ.  ಎರಡನೇ ಅಲೆಯಲ್ಲಿ ಏನು ಕೊಟ್ರು ಎಂದು ಪ್ರಶ್ನೆ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಶುಕ್ರವಾರ ಮುಖ್ಯಮಂತ್ರಿಗಳು (CM Basavaraj Bommai) ಸಾಧನೆಯ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ. ಸಾಧನೆಯ ಬಗ್ಗೆ ಪುಸ್ತಕದಲ್ಲಿ ಇರಬೇಕಲ್ಲ. ಸಾಧನೆ ಬಿಟ್ಟು ಭರವಸೆಗಳನ್ನ ತೋರಿಸಿದ್ದಾರೆ. 6,300 ಕೋಟಿ ರೂಪಾಯಿ ನೀರಾವರಿಗೆ (Irrigation) ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಇನ್ನು 1 ಲಕ್ಷ ಕೋಟಿ ಖರ್ಚು ಮಾಡೋದಾಗಿ ಹೇಳಿದ್ದಾರೆ. ಪ್ರತಿ ವರ್ಷ 30 ಸಾವಿರ ಕೋಟಿ ಖರ್ಚು ಮಾಡಬೇಕು. ಆದ್ರೆ ಸರ್ಕಾರ ಕೇವಲ 6300 ಕೋಟಿ ಖರ್ಚು ಮಾಡಿದೆ. ಈ ಹಿಂದೆ ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್ (Former Minister HK Patil) ಅವರು ಸೇವಾಕೇಂದ್ರ ಆರಂಭ ಮಾಡಿದ್ದು, ಅದರ ಹೆಸರು ಬದಲಾಯಿಸಿರುವ ಬೊಮ್ಮಾಯಿ ಸರ್ಕಾರ ಗ್ರಾಮ-1 (Grama-1) ಮಾಡಿದ್ದಾರೆ. ಇದೇನಾ ಇವರ ಸಾಧನೆನಾ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ವ್ಯಂಗ್ಯ ಮಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂ. ಕೊಡ್ತೀವಿ ಎಂದು ಹೇಳಿದ್ದರು. ಆದರೆ ಕೊಟ್ಟಿದ್ದು ಒಂದು ಸಾವಿರ ಕೋಟಿ. ಈ ವರ್ಷ ಒಂದೇ ಒಂದು ರೂಪಾಯಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಡುಗಡೆಯಾಗಿಲ್ಲ. ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದು ಇವರ ಸಾಧನೆ. ಎಲ್ ಕೆ ಅಡ್ವಾಣಿ ಅವರು 371 ಜೆ ಕೊಡಲು ಎಸ್.ಎಂ.ಕೃಷ್ಣ ಮನವಿ ಮಾಡಿದರೂ ನೀಡಿರಲಿಲ್ಲ. ಈಗ 371 ಜೆ ಬಗ್ಗೆ ಮತನಾಡುತ್ತಾರೆ. ಇವರಿಗೆ ಕಲ್ಯಾಣಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.

ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳ್ತಾರೆ

ಬಣ್ಣ ಬಣ್ಣದ ಜಾಹಿರಾತು ಕೊಟ್ಟು ಸುಳ್ಳು ಹೇಳ್ತಾರೆ.  ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಅವರು ಹೇಳಬೇಕಿತ್ತು, ಹೇಳಿಲ್ಲ. ಕೋವಿಡ್ ಬಗ್ಗೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ. ಎರಡನೇ ಅಲೆಯಲ್ಲಿ ಏನು ಕೊಟ್ರು ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  ನೋ ಬಾಲ್ ಗೆ ರನೌಟ್ ಆಗಿದ್ದೇನೆ, ಈ ಬಾರಿ ಮ್ಯಾಚ್ ಆಡೋಕೆ ಹೋಗಿಲ್ಲ: MLA Raju Gowda ಹೇಳಿಕೆ

ವೆಂಟಿಲೇಟರ್, ಆಕ್ಸಿಜನ್, ಮೆಡಿಸಿನ್ ಯಾವುದೂ ಕೊಡಲಿಲ್ಲ. ವೆಂಟಿಲೇಟರ್ ನೋಡಿಕೊಳ್ಳುವವರಿಲ್ಲ. ಖರೀದಿ ಮಾಡಿದ ವೆಂಟಿಲೇಟರ್ ಧೂಳು ಹಿಡಿದಿವೆ. ಮೂರೂವರೆ ಲಕ್ಷ ಜನ ಕೋವಿಡ್ ನಿಂದ ಸಾವನ್ನಪ್ಪಿದರು. ಇವರು ಸತ್ತವರ ಸಂಖ್ಯೆ ಹೇಳಿದ್ದು 38 ಸಾವಿರ ಮಾತ್ರ. ಇದೊಂದು ಸುಳ್ಳಿನ ಸರ್ಕಾರ ಎಂದು ಕಿಡಿಕಾರಿದರು.ಒಂದು ಕಡೆ ಕೋವಿಡ್ ಅಂತಾರೆ. ಮತ್ತೊಂದು‌ ಕಡೆ ಬಣ್ಣ ಬಣ್ಣದ ಜಾಹೀರಾತು ನೀಡಿದ್ದಾರೆ. ಕೋವಿಡ್ ಬಗ್ಗೆ ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತದೆ. ಎರಡನೇ ಅಲೆ ಬಂತು ಎಷ್ಟು ಜನ ಸತ್ತರು. ಆಕ್ಸಿಜೆನ್, ವೆಂಟಿಲೇಟರ್, ಆಂಬ್ಯುಲೆನ್ಸ್ ಕೊಡೋಕ್ಕೆ ಆಗಿಲ್ಲ. ಕೇಂದ್ರ 50 ಸಾವಿರ, ರಾಜ್ಯ ಸರ್ಕಾರ 1 ಲಕ್ಷ ಕೊಡ್ತೀವಿ ಅಂತ ಹೇಳಿದ್ದರು. ಬಿಪಿಎಲ್ ಕಾರ್ಡ್ ಇದ್ದವರಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿದರು. ಆದರೆ ಯಾರಿಗೂ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

1 ಲಕ್ಷ 53 ಸಾವಿರ ಜನ ಆತ್ಮಹತ್ಯೆ

ಕೋವಿಡ್ ವೇಳೆ ಸತ್ತವರ ಅಂತ್ಯಸಂಸ್ಕಾರ ಸರಿಯಾಗಿ ಮಾಡಲಿಲ್ಲ. ನದಿಗಳಿಗೆ, ಎಲ್ಲೆಂದರಲ್ಲಿ ಶವ ಎಸೆದ್ರು. ಇವರಿಗೆ ಅದನ್ನೂ ಮಾಡೋಕೆ ಆಗಲಿಲ್ಲ. ಸತ್ತವರು ಅರ್ಜಿ ಹಾಕೋಕೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1 ಲಕ್ಷ 53 ಸಾವಿರ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Belagavi Politics: ಸಚಿವ ಕತ್ತಿ ಟೀಂಗೆ ಇಂದು ಕೈಕೊಟ್ಟ ಬೆಳಗಾವಿ ಜಿಲ್ಲೆಯ ಹಲವು ಶಾಸಕರು; ಜಾರಕಿಹೊಳಿ ಸಹೋದರರ ವಿರುದ್ಧ ಸಿಎಂಗೆ ದೂರು

ಸರ್ವವ್ಯಾಪಿ, ಸರ್ವ ಅಂತ ಹೊಸ ಪದ ಹುಡುಕಿದ್ದಾರೆ. ಹೊಸಪದ ಬಿಟ್ಟರೆ ಬೇರೇನೂ ಮಾಡಿಲ್ಲ ಸಿದ್ದರಾಮಯ್ಯ ಪದಗಳನ್ನೇ ಬಳಸಿಕೊಂಡಿದ್ದೇವೆ ಅಂತ ಹೇಳಲಿ. ಬಡವರಿಗೆ ಅನುಕಂಪ ಬೇಕಿಲ್ಲ, ಅವರ ಅಭಿವೃದ್ಧಿ ಬೇಕು. ರೈತರ ಮಕ್ಕಳಿಗೆ ವಿದ್ಯಾನಿದಿ ಅಂತ ಹೇಳಿದ್ರು. ಇದರಿಂದ ಯಾವ ರೈತ ಮಕ್ಕಳಿಗೆ ಅನುಕೂಲವಾಗಿದೆ. ನಾವು ವಿದ್ಯಾಸಿರಿ ಅಂತ ತಂದಿದ್ದೇವು, ಅದು ಇವತ್ತಿಗೂ ಚಾಲನೆಯಲ್ಲಿದೆ. ಇವರು ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
Published by:Mahmadrafik K
First published: