• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • School Reopen: ಶೇ 2ಕ್ಕಿಂತ ಪಾಸಿಟಿವಿಟಿ ಕಡಿಮೆ ಇರುವ ಕಡೆ ಶಾಲೆ ತೆರೆಯಲು ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

School Reopen: ಶೇ 2ಕ್ಕಿಂತ ಪಾಸಿಟಿವಿಟಿ ಕಡಿಮೆ ಇರುವ ಕಡೆ ಶಾಲೆ ತೆರೆಯಲು ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ

ಸಿಎಂ

ಶಾಲೆಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಪೋಷಕರು ಕೂಡ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು

  • Share this:

    ಬೆಂಗಳೂರು (ಆ. 14): ಕೋವಿಡ್ ತಾಂತ್ರಿಕ ಸಭೆಯಲ್ಲಿ ಶಾಲೆಗಳ ತೆರೆಯುವ ಸಂಬಂದ ಚರ್ಚೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಎರಡಕ್ಕಿಂತ ಕಡಿಮೆ ಇರುವ ಸ್ಥಳಗಳಲ್ಲಿ ಶಾಲೆ ತೆರೆಯುವ ಕುರಿತು ಚರ್ಚೆ ನಡೆಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ತಜ್ಞರು, ಪಾಸಿಟಿವಿಟಿ ಎರಡಕ್ಕಿಂತ ಹೆಚ್ಚಿರುವ ಕಡೆ ಶಾಲೆ ತೆರೆಯುವುದು ಬೇಡ ಎಂದಿದ್ದು, ಕಡಿಮೆ ಇರುವ ಕಡೆ ಶಾಲೆ ಆರಂಭಿಸಲು ಸೂಚನೆ ನೀಡಿದ್ದಾರೆ. ಶಾಲೆ ಆರಂಭವಾದ ಬಳಿಕ ಮತ್ತೆ ಸೋಂಕು ಹೆಚ್ಚಾಗಿ, ಪಾಸಿಟಿವಿಟಿ ದರ ಎರಡರಷ್ಟು ಹೋದರೆ ಒಂದು ವಾರ ಶಾಲೆ ಕ್ಲೋಸ್​ ಮಾಡಲಾಗುವುದು. ಬಳಿಕ ಮತ್ತೆ ಶಾಲೆಯನ್ನು ಶುಚಿಗೊಳಿಸಿ, ಒಂದು ವಾರದ ಬಳಿಕ ಶಾಲೆ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.


    ಶಾಲೆಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಪೋಷಕರು ಕೂಡ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂದು ಅವರು ತಿಳಿಸಿದ್ದಾರೆ. ಈಗಾಗಲೇ 9 ರಿಂದ 12ನೇ ತರಗತಿವರೆಗೆ ಶಾಲೆ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ತಜ್ಞರು ಕೂಡ ಸೂಚನೆ ನೀಡಿದ್ದು, ಅದರಂತೆ ಶಾಲೆ ಆರಂಭಿಸಲಾಗುವುದು ಎಂದರು.


    ಬೆಂಗಳೂರು ನಗರ ಚಿಲ್ಡ್ರನ್ ಹಲ್ತ್ ಕೇರ್ ನಲ್ಲಿ ಬೆಡ್ ಸೇರಿದಂತೆ ಎಲ್ಲಾ ವ್ಯವಸ್ಥೆಗೆ ಸೂಚನೆ
    ಬಿಬಿಎಂಪಿ ಕಮಿಷನರ್ ಗೆ ಎಲ್ಲಾ ಅಧಿಕಾರ ನೀಡಲಾಗಿದೆ


    ಜೀನೋನ್ ಟೆಸ್ಟಿಂಗ್ ಲ್ಯಾಬ್ ತೆರೆಯಲು ಸೂಚನೆ


    ಸೋಂಕು ಪರೀಕ್ಷೆಯನ್ನು ಹೆಚ್ಚು ಮಾಡಬೇಕಿದೆ. ಅದರಲ್ಲೂ ಆರು ಟೆಸ್ಟ್ ಸೆಂಟರ್  ಜೀನೋನ್ ಟೆಸ್ಟಿಂಗ್ ಲ್ಯಾಬ್ ತೆರೆಯಲು ಸೂಚನೆ ನೀಡಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಆರಂಭ ಮಾಡಲಾಗುವುದು. ಡೆಲ್ಟ್ ಬಗ್ಗೆ ಎಚ್ಚರಿಕೆ ವಹಿಸಲು ಆದಷ್ಟು ಬೇಗ ಲ್ಯಾಬ್ ತೆರೆ ಮಾಡಬೇಕು. ಮಹಾರಾಷ್ಟ್ರ ಮತ್ತು ಕೇರಳ ಎರಡು ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಹತ್ತು ಕೀಮೀ ಅಂತರದಲ್ಲಿ ಇರುವ ಗ್ರಾಮಗಳಲ್ಲಿ ಕಡ್ಡಾಯ ಟೆಸ್ಟ್ ಮಾಡಬೇಕು ಎಂದು ಸೂಚಿಸಿದರು.


    ವಾಕ್ಸಿನ್​ಗೆ ವೇಗ 


    ಉಡುಪಿ, ಹಾಸನ,ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ ಮೈಸೂರು, ಕೊಡುಗು,ಚಿಕ್ಕಮಗಳೂರು ಶಿವಮೊಗ್ಗ ದಲ್ಲಿ ಟೆಸ್ಟ್ ಮತ್ತು ವ್ಯಾಕ್ಸಿನ್ ಜಾಸ್ತಿ ಆಗಬೇಕು ಎಂದು ಕೂಡ ಇದೇ ವೇಳೆ ತಿಳಿಸಿದರು


    ರಾಜ್ಯದಲ್ಲಿ ಇಂದು 1, 632 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 25 ಜನರು ಕೋವಿಡ್​ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 22, 698 ಪ್ರಕರಣಗಳಿವೆ.


    ಮಕ್ಕಳ ಅಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ‌ ಸೂಚನೆ ನೀಡಲಾಗಿತ್ತು. ಅನ್ಯ ರಾಜ್ಯಗಳ ಓಡಾಟದ ಮೇಲೆ ಹೆಚ್ಚಿನ‌ ನಿಗಾ ಇಡುವಂತೆ ತಿಳಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶದ ವೇಳೆ ಕೋವಿಡ್​​ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಸಿಎಂ ಸೂಚಿಸಿದರು. ಅಲ್ಲದೇ ಇದೇ ವೇಳೆ ಅವರು ಜಿಲ್ಲಾವಾರು ಕೋವಿಡ್ ನ ಅಂಕಿಅಂಶಗಳ ಮಾಹಿತಿಯನ್ನು ಪಡೆದರು. ಪಾಸಿಟಿವ್ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಸದ್ಯಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮ ಬೇಡ. ಅಗತ್ಯಬಿದ್ದರೆ ಮಾತ್ರ ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯೋಚಿಸೋಣ.





    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು