13 ಜಿಲ್ಲೆಯಲ್ಲಿ ಪ್ರವಾಹ, 13 ಸಾವು: ಪರಿಹಾರ ಕೊಟ್ಟಿಲ್ಲ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

Cm bommai : ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿದ್ದು, 463 ಗ್ರಾಮಗಳಿಗೆ ಹಾನಿ ಯಾಗಿವೆ. ಮಳೆ ಅವಾಂತರದಿಂದ ಈವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

  • Share this:
ಬೆಂಗಳೂರು: ದೆಹಲಿ ಪ್ರವಾಸದಿಂದ ಮರಳುತ್ತಲೇ ಫುಲ್​ ಆಕ್ಟೀವ್​ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಬಗ್ಗೆ ಸಿಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಡಿಸಿಗಳಿಂದ ವರದಿ ತರಿಸಿಕೊಳ್ತೀನಿ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಹಣಕಾಸು ಬಿಡುಗಡೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡ್ತೀನಿ. ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಆಗಿ ಸಮಸ್ಯೆ ಆಗಿದೆ ಎಂದರು.

ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿದ್ದು, 463 ಗ್ರಾಮಗಳಿಗೆ ಹಾನಿ ಯಾಗಿವೆ. ಮಳೆ ಅವಾಂತರದಿಂದ ಈವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು. ಪ್ರವಾಹದಿಂದ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪುನರ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಈ ನಿರ್ಮಾಣ ಕಾರ್ಯಗಳಿಗೆ  ಒಟ್ಟು 510 ಕೋಟಿ ಬಿಡುಗಡೆ ಗೆ ನಿರ್ಧಾರ ಮಾಡಿದ್ದೇವೆ. ಮಳೆ ಕಡಿಮೆ ಆದಮೇಲೆ ಸಂಪರ್ಕ ರಸ್ತೆ ಕಾಮಗಾರಿ ಶುರು ಮಾಡ್ತೇವೆ. 150 ಕೋಟಿ ಎನ್ ಡಿಆರ್ ನಿಂದ ಖರ್ಚು ಮಾಡಲಾಗುತ್ತೆ. ಒಟ್ಟು ತುರ್ತು ಕಾಮಗಾರಿಗಳಿಗೆ 660 ಕೋಟಿ ಬಿಡುಗಡೆ ಮಾಡಲಿದ್ದೇವೆ. ಈಗಾಗಲೇ 700 ಕೋಟಿಗೂ ಹೆಚ್ಚು ಹಣ ಡಿಸಿಗಳ ಅಕೌಂಟ್ ನಲ್ಲಿದೆ ಎಂದರು.

ಇದನ್ನೂ ಓದಿ: Karnataka Covid: ಕೋವಿಡ್​​ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಹೊರಡಿಸಿದ ಸರ್ಕಾರ

ಪ್ರವಾಹದಿಂದ ಬೆಳೆ ಹಾನಿ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ 15 ದಿನಗಳ ಒಳಗೆ ಆಗಬೇಕು. ಈ ಬಗ್ಗೆ ವರದಿ ಕೊಡುವಂತೆ ಅಧಿಕಾರಿಳಿಗೆ ಸೂಚಿಸಲಾಗಿದೆ. ಮನೆ ಬಿದ್ದ ವರಿಗೆ 10 ಸಾವಿರ ಕೊಡ್ತಿದ್ದೇವೆ, ಪೂರ್ತಿಯಾಗಿ ಮನೆ ನೆಲಸಮವಾದವರಿಗೆ 5 ಲಕ್ಷ ನೆರವು ನೀಡಲಾಗಿವುದು. ಈ ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಮಾಡಿದ್ದ ನಿಯಮಗಳಂತೆ ನೆರವು ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದೇನೆ.ಬೆಳೆ ಹಾನಿ ಪ್ರವಾಹ ಹಾನಿ ಸಮೀಕ್ಷೆ ಮಾಡಲು ತಂಡ ಕಳುಹಿಸಿ ಎಂದು ಮನವಿ ಮಾಡಿದ್ದೇನೆ. ಅವರು ಶೀಘ್ರವೇ ರಾಜ್ಯಕ್ಕೆ ಬಂದು ಹಾನಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ ಎಂದು ತಿಳಿಸಿದರು.

ಹಿಂದಿನ ಪರಿಹಾರದ ಹಣವೇ ಕೊಟ್ಟಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಪ್ರವಾಹ ಬಂದಾಗ ಕೂಡಲೇ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡ್ತಿದೆ. ಈ ಹಿಂದೆ ಅವರು ಯಾವ ರೀತಿ ಮಾಡಿದ್ದಾರೆ ಎಂದು ಗೊತ್ತಿದೆ. ಹೀಗಾಗಿ ಒಬ್ರು ಮಾಜಿ ಸಿಎಂ ಆಗಿದ್ದವರು ಸ್ವಲ್ಪ ಅರ್ಥ ಮಾಡಿಕೊಂಡು ಮಾತಾಡಬೇಕು ಎಂದು ಕಿಡಿಕಾರಿದರು.
Published by:Kavya V
First published: