Film Award: ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಪ್ರಾರಂಭ : ಬಸವರಾಜ ಬೊಮ್ಮಾಯಿ

ಜೀವಿತಾವಧಿ ಸಾಧನೆಗಾಗಿ ಸುಪ್ರಸಿದ್ಧ ನಟಿ ಲಕ್ಷ್ಮೀ ಅವರಿಗೆ ಡಾ ರಾಜಕುಮಾರ್ ಪ್ರಶಸ್ತಿ ಹಾಗೂ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದ ಚಿತ್ರಣ

ಕಾರ್ಯಕ್ರಮದ ಚಿತ್ರಣ

 • Share this:
  ಬೆಂಗಳೂರು (ಎ. 24):  ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ  ನಟಸಾರ್ವಭೌಮ ಡಾ ರಾಜಕುಮಾರ್ (DR. Raj Kumar) ಅವರ 94 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೂ ಮನವಿ ಅಥವಾ ಬೇಡಿಕೆ ಸಲ್ಲಿಸದಿದ್ದರೂ ಪ್ರಸಕ್ತ 2022-23 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ತಾವು 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಬದಲಾಗಿ 200 ಚಲನಚಿತ್ರಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದರು.

  ಒಟಿಟಿಯಲ್ಲಿ ಸಿನಿಮಾಗಳು ವಿಶ್ವದಲ್ಲೆ ನೋಡುತ್ತಾರೆ. ಮೊನ್ನೆ ಕೆ ಜಿ ಏಫ್ ಸಿನಿಮಾವನ್ನು ವಿಶ್ವದಲ್ಲೆ ನೋಡಿದ್ದಾರೆ. ಉತ್ತಮ ಗುಣಮಟ್ಟದ  ಸಿನಿಮಾಗಳು ಕನ್ನಡದಲ್ಲಿ ಬರಲಿ. ಮೈಸೂರಿನಲ್ಲಿ ಚಿತ್ರನಗರಿ ಈ ವರ್ಷದಲ್ಲಿ ಶುರು ಮಾಡಲಿದ್ದೇವೆ ಎಂದರು

  ಕಾಡುಗಳ್ಳ ವೀರಪ್ಪನ್ ಅವರಿಂದ ಬಂಧ ಮುಕ್ತರಾದ ನಂತರ ಡಾ ರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಯಾವುದೇ ಕಹಿ ಘಟನೆಗಳನ್ನು ಸ್ಮರಿಸದೆಯೇ ಕೆಟ್ಟ ವಿಚಾರಗಳನ್ನು ಪ್ರಸ್ತಾಪಿಸದ ಡಾ ರಾಜ್ ಕುಮಾರ್ ಅವರ ಉದಾತ್ತ ಮನೋಭಾವವನ್ನು ಕೊಂಡಾಡಿದರು.

  ಇವರಿಗೆ ಪ್ರಶಸ್ತಿ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀವಿತಾವಧಿ ಸಾಧನೆಗಾಗಿ ಸುಪ್ರಸಿದ್ಧ ನಟಿ ಲಕ್ಷ್ಮೀ ಅವರಿಗೆ ಡಾ ರಾಜಕುಮಾರ್ ಪ್ರಶಸ್ತಿ ಹಾಗೂ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದರು.

  ಇದೇ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ಅವರ ಹೆಸರಿನ ಪ್ರಶಸ್ತಿ ತಮಗೆ ಲಭಿಸುತ್ತಿರುವುದು ರಾಜ್ ಅವರ ಆಶೀರ್ವಾದ ಲಭಿಸಿದಂತೆ ಎಂದು ನಟಿ ಲಕ್ಷ್ಮೀ ಅವರು ಭಾವುಕರಾಗಿ ನುಡಿದರು.

  ಇದನ್ನು ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡಬೇಡಿ; CM ಬೊಮ್ಮಾಯಿಗೆ ಪತ್ರ ಬರೆದ BSY

  ಧನ್ಯವಾದ ಅರ್ಪಿಸಿದ ಎಸ್​​ ನಾರಾಯಣ್​

  ಕೆಲಸ ಕಲಿಯಲು ಪುಟ್ಟಣ್ಣ ಕಣಗಾಲ್ ಅವರಲ್ಲಿ ತಾವು ಅವಕಾಶ ಕೋರಿದ ದಿನಗಳನ್ನು ಸ್ಮರಿಸಿದ ನಟ-ನಿರ್ದೇಶಕ ಎಸ್ ನಾರಾಯಣ್ ಅವರು ಪುಟ್ಟಣ್ಣ ಅವರ ಹೆಸರಿನ ಪ್ರಶಸ್ತಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಹಾಗೂ ಈ ದಿನ ತಮ್ಮ ಪಾಲಿನ ಸುದಿನ ಎಂದು ಬಣ್ಣಿಸಿದರು.

  ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಸದಭಿರುಚಿಯ ಚಿತ್ರಗಳ ಕೊಡುಗೆ ನೀಡಿದ ನಿರ್ಮಾಪಕ ಹಾಗೂ ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದ ಜಿ ಎನ್ ಲಕ್ಷ್ಮೀಪತಿ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪತಿ ಅವರ ಪುತ್ರ ರಾಮಪ್ರಸಾದ್ ಅವರು ತಮ್ಮ ತಂದೆಯ ಪರವಾಗಿ ಮುಖ್ಯಮಂತ್ರಿಯವರಿಂದ ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿದರು.

  ಇದನ್ನು ಓದಿ: ಇದು ಆರ್​ಸಿಬಿ ಕನ್ನಡಾಭಿಮಾನ! ವರನಟನ ಸ್ಮರಿಸಿದ ಬೆಂಗಳೂರು

  ವಿಜೇತರಿಗೆ ಪುರಸ್ಕರಿಸಿದ ಸಿಎಂ

  ಡಾ ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ವಿಜೇತರಿಗೆ ತಲಾ ಐದು ಲಕ್ಷ ರೂಪಾಯಿ ನಗದು, ಐವತ್ತು ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ, ಸ್ಮರಣಿಕೆ ಮತ್ತು ಫಲ ತಾಂಬೂಲ ನೀಡಿ ಮುಖ್ಯಮಂತ್ರಿ ಗೌರವಿಸಿದ್ದು ಗಮನಾರ್ಹ.

  ಉತ್ತಮ ನಟ, ಉತ್ತಮ ನಟಿ ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಗಳ ಹಾಗೂ ಇತರೆ ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ತಂದೆ ನೆನೆದ ರಾಘವೇಂದ್ರ ರಾಜ್​ಕುಮಾರ್​​

  ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಹಾಗೂ ಕಿರಿಯ ಸಹೋದರ ಪುನೀತ್ ರಾಜ್ ಕುಮಾರ್ ಅವರ ಸರಳತೆ ಮತ್ತು ಮಾನವೀಯತೆಯ ಗುಣಗಳನ್ನು ಅನಾವರಣ ಗೊಳಿಸಿದರು.
  Published by:Seema R
  First published: