Assembly: ಇಂಧನದ ಬೆಲೆ ಕಡಿತಗೊಳಿಸಿ ಎಂಬ ನೈತಿಕತೆ ಕಾಂಗ್ರೆಸ್​ಗೆ ಇಲ್ಲ; ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಸಿದ್ದರಾಮಯ್ಯ   ಸರ್ಕಾರ ಅವಧಿಯಲ್ಲಿ ಬೆಲೆ ಏರಿಕೆ ಆದಾಗ ಮಧ್ಯ ಪ್ರದೇಶದಲ್ಲಿ ಸೆಸ್ ಕಡಿಮೆ ಮಾಡಿತ್ತು. ಆಗ ಕಡಿಮೆ ಮಾಡಿ, ಅಂದ್ರೇ ನೀವು ಮಾಡಿಲ್ಲ. ಈಗ ನಾವು ಸೆಸ್ ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತೀರಾ. ಇದು ಯಾವ ನೈತಿಕತೆ

ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

 • Share this:
  ಬೆಂಗಳೂರು (ಸೆ. 20): ಪೆಟ್ರೋಲ್​, ಡಿಸೇಲ್​ ಮತ್ತು ಅಡುಗೆ ಏಣ್ಣೆ (petrol diesel Price) ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್​ ಮಂಡಿಸಿದ್ದ ಪ್ರಸ್ತಾಪ ಕುರಿತು ಇಂದು ಸದನದಲ್ಲಿ (Karnataka Assembly) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು. ಈ ವೇಳೆ ಇಂಧನದ ಬೆಲೆಯಿಂದ ಸಾಮಾನ್ಯ ಜನರು ತತ್ತರಿಸಿದ್ದು, ತಮಿಳುನಾಡು ರೀತಿಯೇ ರಾಜ್ಯದಲ್ಲಿ ಕೂಡ ಸೆಸ್​ ಕಡಿತಕ್ಕೆ ಸಿಎಂ ಮುಂದಾಗಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಲಹೆ ನೀಡಿದ್ದರು. ಬೆಲೆ ಏರಿಕೆ ಕುರಿತ ವಿಪಕ್ಷಗಳ ಪ್ರಶ್ನೆಗೆ ಇಂದು ಸದನದಲ್ಲಿ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಲೆ ಇಳಿಕೆ ಕುರಿತು ಸರ್ಕಾರದ ನೈತಿಕತೆ ಪ್ರಶ್ನೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ. ಸಿದ್ದರಾಮಯ್ಯ   ಸರ್ಕಾರ ಅವಧಿಯಲ್ಲಿ ಬೆಲೆ ಏರಿಕೆ ಆದಾಗ ಮಧ್ಯ ಪ್ರದೇಶದಲ್ಲಿ ಸೆಸ್ ಕಡಿಮೆ ಮಾಡಿತ್ತು. ಆಗ ಕಡಿಮೆ ಮಾಡಿ, ಅಂದ್ರೇ ನೀವು ಮಾಡಿಲ್ಲ. ಈಗ ನಾವು ಸೆಸ್ ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತೀರಾ. ಇದು ಯಾವ   ನೈತಿಕತೆ ಎಂದು ಪ್ರಶ್ನಿಸಿದರು.

  ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ, ನಮ್ಮ ಮೈತ್ರಿ ಸರ್ಕಾರ ಇದ್ದಾಗ 3 ರೂ ಸೆಸ್ ಕಡಿಮೆ ಮಾಡಿದ್ದೇನೆ ಎಂದು ಸಮಾಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೌದು ನಿಮ್ಮ ಕಾಲದಲ್ಲಿ ಕಡಿಮೆ ಆಗಿದೆ ಎಂಬುದನ್ನು ಹೇಳಿದ್ದೇನೆ ಎಂದರು.

  ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ, ಎಲ್ಲ ಮಾರಾಟ ಮಾಡಿ ಬಿಡುತ್ತಾರೆ ಎಂದು ಮಾತಾಡಿದ್ದೀರಿ. ಆಸ್ತಿ ನಗದೀಕರಣ ಮಾಡುವುದು ಎಂದರೆ ಮಾರಾಟ ಅಲ್ಲ, ವ್ಯಾಲ್ಯೂವೇಶನ್ ಅದು. ಬಾಂಬೆ ಪೂನಾ ಹೈವೇ ನಗರೀಕರಣ ಮಾಡಿ ಆ ಕಾಲದಲ್ಲೇ 80 ಸಾವಿರ ಕೋಟಿ ತೆಗೆದುಕೊಂಡಿದ್ದು ಯಾರು..!? ಈ ಹಿಂದೆಯೂ ನಗದೀಕರಣ ನಡೆದಿದೆ, ಇದೇನು ಹೊಸದಲ್ಲ ಎಂದು ಉತ್ತರಿಸಿದರು.

  ಇದನ್ನು ಓದಿ: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

  ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಇಂಧನದ ದರ ಹೆಚ್ಚಳದಿಂದ ಎಲ್ಲ ಬೆಲೆ ಏರಿಕೆಗೆ ಅದೇ ಕಾರಣ ಅಂತ ಆರೋಪಿಸಲಾಗುತ್ತಿದೆ. ಯಾವ ವಿಚಾರದಲ್ಲಿ ಮಾತನಾಡಬೇಕು ಅದನ್ನು ಮಾಡುತ್ತಿಲ್ಲ. ಸುಮ್ಮನೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್​ ಸದಸ್ಯರಯ ಸಭಾತ್ಯಾಗ ಮಾಡಲು ಮುಂದಾದಾಗ, ನಾನು ಹತ್ತು ನಿಮಿಷ ಮಾತನಾಡುತ್ತೇನೆ. ಆಮೇಲೆ ಸಭಾತ್ಯಾಗ ಮಾಡಿ. ಉತ್ತರ ಕೊಡಲಾಗದೇ ನೀವು ಪಲಾಯನ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು.

  ಇದನ್ನು ಓದಿ: ಬೆಲೆ ಏರಿಕೆ ವಿರುದ್ಧ ಈ ಹಿಂದೆ ಇದ್ದ ಜನರ ಆಕ್ರೋಶ ಈಗ ಕಾಣಿಸುತ್ತಿಲ್ಲ; ರಮೇಶ್ ಕುಮಾರ್ ಅಸಮಾಧಾನ

  ಈಗಿನ ಸರ್ಕಾರದಿಂದಷ್ಟೇ ಬೆಲೆ ಏರಿಕೆ ಆಗಿದ್ದಲ್ಲ. ಬೆಲೆ ಏರಿಸಿದವರೆಲ್ಲಾ ಕ್ರಿಮಿನಲ್​ ಲೂಟ್​ ಅಲ್ಲ. ವಾಜಪೇಯಿ ಯಾವ ಅರ್ಥದಲ್ಲಿ ಹೇಳಿದ್ದು ಗೊತ್ತಿಲ್ಲ ಎಂಬ ಬಸವರಾಜ ಬೊಮ್ಮಾಯಿ ಮಾತಿಗೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ವಾಜಪೇಯಿ ಕ್ರಿಮಿನಲ್​ ಲೂಟ್​ ಎಂದಿದ್ದಾರೆ. ಕ್ರಿಮಿನಲ್​ ಲೂಟ್ ಮಾಡ್ತಿರೋರು ನೀವು ಎಂದರು. ಈ ವೇಳೆ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಸದಸ್ಯರ ಗರಂ ಆಗಿದ್ದ ಸದನದಲ್ಲಿ ವಾಗ್ವಾದಗಳು ನಡೆದವು.

  ಈ ವೇಳೆ ಬಿಜೆಪಿ- ಕಾಂಗ್ರೆಸ್​ ನಾಯಕರು ಪರಸ್ಪರ ಆರೋಪ -ಪ್ರತ್ಯಾರೋಪ ನಡೆಸಿದರು. ಜನರುನ್ನು ನೀ ವು ಲೂಟ್ ಮಾಡಿದವರು ಬಿಜೆಪಿಯವರು ಎಂಬ ಸಿದ್ದರಾಮಯ್ಯ ಮಾತಿಗೆ ಉತ್ತರಿಸಿದ ಬೊಮ್ಮಾಯಿ, ಕಾಂಗ್ರೆಸ್​ನವರು 60 ಶೇ. ಲೂಟ್ ಮಾಡಿದ್ರು. 30 ಶೇ. ಲೂಟ್​ ಹೆಚ್ಚೋ 60 ಶೇ. ಲೂಟ್ ಹೆಚ್ಚೋ ಎಂದು ಪ್ರಶ್ನಿಸಿದರು.
  Published by:Seema R
  First published: