Weekend Curfew ಇರುತ್ತಾ? ಇರಲ್ವಾ?: ಎಲ್ಲರ ಚಿತ್ತ ಸಿಎಂ ಸಭೆಯತ್ತ!

ಇಂದು ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ನೇತೃತ್ವದಲ್ಲಿ ಕಠಿಣ ನಿಯಮಗಳು ಮತ್ತು ವೀಕೆಂಡ್ ಕರ್ಫ್ಯೂ ಕುರಿತು ಚರ್ಚಿಸಲಿದ್ದಾರೆ. ಮಧ್ಯಾಹ್ನದ ನಂತರ ವೀಕೆಂಡ್ ಕರ್ಫ್ಯೂ ಇರುತ್ತಾ ಅಥವಾ ಇರಲ್ವಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗಲಿದೆ.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ರಾಜ್ಯದಲ್ಲಿ ನಿನ್ನೆ ಒಂದೇ ದಿನ 47 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು (Corona Cases) ವರದಿಯಾಗಿದ್ರೂ, ಹೋಟೆಲ್ ಮಾಲೀಕರು (Hotel Owners) ಸೇರಿದಂತೆ ಸಾರ್ವಜನಿಕ ವಲಯದ ಬಹುತೇಕ ಭಾಗದ ಜನರು ವೀಕೆಂಡ್ ಕರ್ಫ್ಯೂ (Weekend Curfew) ಮತ್ತು ನೈಟ್ ಕರ್ಫ್ಯೂ (Night Curfew) ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇತ್ತ ಬಿಜೆಪಿ ಸಚಿವರು, ನಾಯಕರು ಸಹ ವೀಕೆಂಡ್ ಕರ್ಫ್ಯೂಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ನೇತೃತ್ವದಲ್ಲಿ ಕಠಿಣ ನಿಯಮಗಳು ಮತ್ತು ವೀಕೆಂಡ್ ಕರ್ಫ್ಯೂ ಕುರಿತು ಚರ್ಚಿಸಲಿದ್ದಾರೆ. ಮಧ್ಯಾಹ್ನದ ನಂತರ ವೀಕೆಂಡ್ ಕರ್ಫ್ಯೂ ಇರುತ್ತಾ ಅಥವಾ ಇರಲ್ವಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗಲಿದೆ.

ದಿನನಿತ್ಯ ಸಾವಿರಾರು ಕೇಸ್‌ಗಳು ರಾಜ್ಯದಲ್ಲಿ ಬರುತ್ತಿವೆ. ಮುಂದಿನ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಕೇಸ್‌ಗಳು ಬರೋ ಮುನ್ಸೂಚನೆ ಇದೆ. ಹೀಗಾಗಿ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ,ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೂ ಸೋಂಕು ತಗಲುತ್ತಿದೆ.

ಬೆಂಗಳೂರು ಸೇರಿದಂತೆ ಪಾಸಿಟಿವಿಟಿ ದರ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗುತ್ತಿದೆ. ಜನವರಿ 26ರಿಂದ ಫೆಬ್ರವರಿಯ ಅಂತ್ಯದವರೆಗೂ ಕೊರೋನಾ ಹೆಚ್ಚಳವಾಗುತ್ತೆ, ಕೇಸ್‌ಗಳ ಸಂಖ್ಯೆ ಅತ್ಯಧಿಕವಾಗಿ ಬರಲಿದೆ ಅಂತ ತಜ್ಙರು ವರದಿಯನ್ನು ನೀಡಿದ್ದಾರೆ. ಹೀಗಾಗಿ ಇದನ್ನು ತಡೆಯಲು ಪ್ರಮುಖವಾಗಿ ಜನರ ಗುಂಪನ್ನು ಕಡಿಮೆ ಮಾಡಲು ಕರ್ಫ್ಯೂ ಜಾರಿ ಮಾಡಿ ಭವಿಷ್ಯದ ಅಪಾಯ ತಡೆಯಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ:  Crime Story ಕಾರ್ಯಕ್ರಮ ನೋಡಿ ಸ್ಪೂರ್ತಿ ಪಡೆದು ಕನ್ನ ಹಾಕಿದ; ಈತ ಸಿಕ್ಕಿಬಿದ್ದ ಕಥೆಯೇ ರೋಚಕ

ಶಾಲೆಗಳ ಆರಂಭದ ಭವಿಷ್ಯ ?

ಆದರೆ ಖಾಸಗಿ ಶಾಲೆಗಳ ಒಕ್ಕೂಟ ವೀಕೆಂಡ್‌ ಕರ್ಫ್ಯೂಗೆ ರಿಲೀಫ್‌ ಕೊಟ್ಟರೆ ಶಾಲೆಗಳನ್ನು ಕೂಡಾ ತೆರೆಯಲು ಅವಕಾಶ ನೀಡಬೇಕು ಅಂತಾ ಸರ್ಕಾರದ ಮೇಲೆ ಒತ್ತಡವನ್ನು ಹಾಕುತ್ತಿದೆ. ಸಭೆಯಲ್ಲಿ ಕರ್ಫ್ಯೂ ಹಿಂಪಡೆಯುವ ತೀರ್ಮಾನದ ಜತೆ ಜತೆಗೆ ಶಾಲೆಗಳ ಆರಂಭದ ಭವಿಷ್ಯ ಕೂಡ ಹೊರಬೀಳಲಿದೆ.

ಶಾಲೆ ಆರಂಭದ ಸುಳಿವು!

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ವಿಶ್ಲೇಷನೆ ಮಾಡಲಾಗಿದೆ. 0 ರಿಂದ 5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ಇದೆ. ಆದರೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ನಾವು ಶೈಕ್ಷಣಿಕ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಎಂದು ಹೇಳುವ ಶಾಲೆ ಆರಂಭದ ಸುಳಿವು ನೀಡಿದ್ದಾರೆ.ತಜ್ಞರ ವರದಿಯ ಆಧಾರದ ಮೇಲೆ ನಿರ್ಧಾರ

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕೋವಿಡ್ ಹೊಸ ಗೈಡ್ ಲೈನ್ ಸಂಬಂಧಿಸಿದಂತೆ ಸಿಎಂ ಸಭೆ ಕರೆದಿದ್ದಾರೆ. ಕೋವಿಡ್ ನಿರ್ವಹಣೆ ಸಮಿತಿ ಸದಸ್ಯರು ಸಚಿವರು ಸಭೆಯಲ್ಲಿ ಇರಲಿದ್ದಾರೆ.  ಇದುವರೆಗೆ ಮೂರು ಪಕ್ಷಗಳ ನಾಯಕರು ಅವರ ವೈಯಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ಕೆಲವರು ನಿರ್ಬಂಧ ತೆಗಿಬೇಕು ಅಂದಿದ್ದಾರೆ.  ಕೇಂದ್ರ ಸರ್ಕಾರ ಕೂಡ ವಿದೇಶಿ ವಿಮಾನಯಾನ ಓಡಾಟ ರದ್ದು ಮಾಡಿದೆ.  ಸಂಘ ಸಂಸ್ಥೆಗಳ ಹೇಳಿಕೆಗಳನ್ನು ಕೂಡ ನಾವು ಗಮನಿಸಿದ್ದೇವೆ. ತಜ್ಞರ ವರದಿ ಕೂಡ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡ್ತೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಹೇಳಿದ್ದಾರೆ,

ಇದನ್ನೂ ಓದಿ:  Weekend Curfew ವಿರುದ್ಧ ತಿರುಗಿಬಿದ್ದ ಮಾಲೀಕರು: ವಾರಂತ್ಯದಲ್ಲಿ ಹೋಟೆಲ್ಸ್, ಬಾರ್​ಗಳು ಓಪನ್?

ಸರ್ಕಾರದ ವಿರುದ್ಧ ಉದ್ಯಮಿಗಳ ಆಕ್ರೋಶ

ಉದ್ಯಮಿಗಳು ಸರ್ಕಾರದ ವೀಕೆಂಡ್ ಕರ್ಫ್ಯೂ ವಿರುದ್ಧ ಸಿಡಿದೆದ್ದಿದ್ದಾರೆ. ವಿಕೇಂಡ್ ಕರ್ಫ್ಯೂ ವಿರುದ್ಧ ಸಿಡಿದೆದ್ದ ಹೋಟೆಲ್ ಮತ್ತು ಮಾಲೀಕರ ಸಂಘಟನೆಗಳು, ಮುಂದಿನ ವಾರದಿಂದ ವಿಕೇಂಡ್ ಕರ್ಫ್ಯೂವನ್ನು ಲೆಕ್ಕಿಸದೆ ಹೋಟೆಲ್, ಬಾರ್ ಗಳನ್ನು ತೆರೆಯಲು ಮುಂದಾಗಿದ್ದಾರೆ.
Published by:Mahmadrafik K
First published: