CM Bommai: ನಮ್ಮ ತಾಯಿಗೆ ಕ್ಯಾನ್ಸರ್ ಆದಾಗ ಇಷ್ಟು ವೈದ್ಯಕೀಯ ಸೌಲಭ್ಯವಿರಲಿಲ್ಲ: ಸಿಎಂ ಬೊಮ್ಮಾಯಿ

ಸುಧಾಕ್ಕ ನಮ್ಮೂರಿನವರು ಜೊತೆಗೆ ನಮ್ಮ ಕಾಲೇಜಿನವರು. ನಾನು ಸಿಎಂ ಆದಾಗ ಅವರು ಕರೆ ಮಾಡಿ ಶುಭಾಶಯಕೋರಿದ್ದು ತುಂಬಾ ಭಾವನತ್ಮಾಕವಾಗಿತ್ತು.

ಮುಖ್ಯಮಂತ್ರಿಗಳು

ಮುಖ್ಯಮಂತ್ರಿಗಳು

 • Share this:
  ಬೆಂಗಳೂರು (ಆ. 23): ನಮ್ಮ ತಾಯಿಗೆ ಕ್ಯಾನ್ಸರ್​ ಆಗಿತ್ತು. ಆಗ ಇಷ್ಟು ಮಟ್ಟಿನ ತಂತ್ರಜ್ಞಾನದ ವ್ಯವಸ್ಥೆ ಇರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದರು. ಕಿದ್ವಾಯಿ ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ (Kidwai Memorial Institute of Oncology Cancer Research) ​  ವಿವಿಧ ಘಟಕಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಕ್ಯಾನ್ಸರ್​ ಬಂದರೆ ಸಾವು ಖಚಿತ ಎನ್ನಲಾಗುತ್ತಿತ್ತು. ಚಿಕಿತ್ಸೆ ಕೊಟ್ಟರೂ ಉಳಿಯುತ್ತಾರೋ ಇಲ್ಲ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಆದರೆ, ಈಗ ಆ ರೀತಿಯ ವ್ಯವಸ್ಥೆ ಇಲ್ಲ. ಕ್ಯಾನ್ಸರ್​ ಅನ್ನು ಮೊದಲ ಮತ್ತು ಎರಡನೇ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣ ಪಡಿಸಬಹುದಾಗಿದೆ ಎಂದು ತಿಳಿಸಿದರು.

  ನಮ್ಮಕ್ಕ ಸುಧಾಮೂರ್ತಿ ಕೊಡುಗೈ ದಾನಿ
  ಇನ್ಫೋಸಿಸ್ ಪ್ರತಿಷ್ಠಾಪನ (infosys foundation) ವತಿಯಿಂದ ನಿರ್ಮಾಣವಾದ ಈ ಘಟಕಗಳ ಉದ್ಘಾಟನೆ ವೇಳೆ ಹಾಜರಿದ್ದ ಸುಧಾಮೂರ್ತಿ (sudhamurthy) ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮಕ್ಕ ಸುಧಾಕ್ಕನಿಗೆ ದೊಡ್ಡ ನಮಸ್ಕಾರ ಮಾಡುತ್ತೇನೆ ಎಂದು ಮಾತು ಆರಂಭಿಸಿದರು. ಸುಧಾಕ್ಕ ನಮ್ಮೂರಿನವರು ಜೊತೆಗೆ ನಮ್ಮ ಕಾಲೇಜಿನವರು. ನಾನು ಸಿಎಂ ಆದಾಗ ಅವರು ಕರೆ ಮಾಡಿ ಶುಭಾಶಯಕೋರಿದ್ದು ತುಂಬಾ ಭಾವನತ್ಮಾಕವಾಗಿತ್ತು. ಅವರು ಕೊಡುಗೈದಾನಿ. ಅನೇಕರ ಬಳಿ ಐಶ್ವರ್ಯವಿರುತ್ತದೆ. ಆದರೆ, ಎಲ್ಲರಿಗೂ ದಾನ ಮಾಡುವ ಮನಸ್ಸು ಇರುವುದಿಲ್ಲ. ಆದರೆ, ಸುಧಾಕ್ಕನ ಹೃದಯ ನಿಜಕ್ಕೂ ಗ್ರೇಟ್ ಎಂದು ಸುಧಾಮೂರ್ತಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  ದಾನಿಗಳು ಇಲ್ಲದಿದ್ದರೆ ಇವತ್ತು ಜಗತ್ತು ಇರುತ್ತಿರಲಿಲ್ಲ. ಕೊಡಬೇಕು ಎನ್ನುವ ಗುಣ ದೇವರ ಕೊಟ್ಟಿರುವ ಗುಣಾತ್ಮಕವಾದ ಒಳ್ಳೆತನ. ಹೃದಯವುಳ್ಳ ಶ್ರೀಮಂತರು ಸುಧಾಮೂರ್ತಿಯವರು ಹಾಗೂ ಅನೇಕ ದಾನಿಗಳು ಎಂದರು.  ಕಿದ್ವಾಯಿ ಸಂಸ್ಥೆ ದೇಶದಲ್ಲೇ ನಂಬರ್ ಒನ್ ಚಿಕಿತ್ಸೆ

  ಕಿದ್ವಾಯಿ ಸಂಸ್ಥೆ ದೇಶದಲ್ಲೇ ನಂಬರ್ ಒನ್ ಚಿಕಿತ್ಸೆ ನೀಡಲಾಗುತ್ತಿದೆ. ಕಿದ್ವಾಯಿ ಸಂಸ್ಥೆಯಲ್ಲಿ ಇ-ಆಸ್ಪತ್ರೆ ಸಂವಹನ ವ್ಯವಸ್ಥೆ, ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ತಪಾಸಣಾ ವರದಿಗಳು ಅವರ ಫೋನ್​ಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇ ಹಾಸ್ಟಿಟಲ್ ತಂತ್ರಾಂಶ ಅಳವಡಿಕೆ ಮಾಡಲಾಗಿದೆ. ಇದರಿಂದ ರೋಗಿಗಳು ವರದಿಗಾಗಿ ತೊಂದರೆ ಪಡುವಂತೆ ಇಲ್ಲವಾಗಿದೆ ಎಂದು ಇದೇ ವೇಳೆ ಆಸ್ಪತ್ರೆ ವ್ಯವಸ್ಥೆ ಕುರಿತು ಹರ್ಷ ವ್ಯಕ್ತಪಡಿಸಿದರು.

  ಇದನ್ನು ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯ ಮೊದಲ ಪ್ರಯೋಗ ಕರ್ನಾಟಕದಲ್ಲಿ; ಎನ್ಇಪಿಗೆ ವಿದ್ಯುಕ್ತ ಚಾಲನೆ

  ಕ್ಯಾನ್ಸರ್ ಆಸ್ಪತ್ರೆಗಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಸರ್ಕಾರ ಜಮೀನು ಸೇರಿದಂತೆ ಎಲ್ಲವೂ ನೀಡಲಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಿ ಎಂದು ಸಚಿವ ಸುಧಾಕರ್ ಗೆ ಕೂಡ ತಿಳಿಸಲಾಗಿದೆ. ಜೊತೆಗೆ ರೋಗಿಗಳಿಗೆ ಕನಿಷ್ಠ ದರದಲ್ಲಿ ಔಷಧಿ ಕೊಡುವಂತಹ ವ್ಯವಸ್ಥೆಯನ್ನ ಮಾಡುತ್ತೇವೆ. ರೋಗಿಗಳ ಅಟೆಂಡರ್ಸ್ ಗೆ ಬೇಕಾಗಿರುವ ವ್ಯವಸ್ಥೆ ಕೂಡ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

  ಇದನ್ನು ಓದಿ: ರುಚಿಯಾಗಿ ಚಿಕನ್​ ಫ್ರೈ ಮಾಡಿಲ್ಲ ಎಂದು ಹೆಂಡತಿ ಕೊಲೆ ಮಾಡಿ ಕೆರೆಗೆ ಎಸೆದ ಗಂಡ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: