ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿ ಜೊತೆ ₹5 ಲಕ್ಷ; ಮಹತ್ವದ ಬದಲಾವಣೆಗಳನ್ನು ಘೋಷಿಸಿದ ಸಿಎಂ

rajyotsava award 2021: ಪ್ರಶಸ್ತಿ ಹಣವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿರುವುದಾಗಿ ಘೋಷಿಸಿದರು. ಜೊತೆಗೆ ಮುಂದಿನ ಬಾರಿ ಅರ್ಜಿ ತೆಗೆದುಕೊಂಡು ಪ್ರಶಸ್ತಿ ಕೊಡುವುದಿಲ್ಲ. ಯಾರು ಬಯೋಡೇಟವನ್ನು ತೆಗೆದುಕೊಳ್ಳುವುದಿಲ್ಲ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವ (kannada rajyotsava) ಸಂಭ್ರಮದ ಅಂಗವಾಗಿ ನಾಡಿನ 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ (rajyotsava award) ನೀಡಿ ಗೌರವಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai), ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿ ಸಂಬಂಧ ಮಹತ್ವದ ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸಿದರು. ಈ ಸಲ ಪ್ರಶಸ್ತಿಯೊಂದಿಗೆ ₹1 ಲಕ್ಷ ನೀಡಲಾಗಿದೆ, ಮುಂದಿನ ವರ್ಷ ಪ್ರಶಸ್ತಿ ಜೊತೆ ₹5 ಲಕ್ಷ ನೀಡಲಾಗುವುದು. ಪ್ರಶಸ್ತಿ ಹಣವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿರುವುದಾಗಿ ಘೋಷಿಸಿದರು. ಜೊತೆಗೆ ಮುಂದಿನ ಬಾರಿ ಅರ್ಜಿ ತೆಗೆದುಕೊಂಡು ಪ್ರಶಸ್ತಿ ಕೊಡುವುದಿಲ್ಲ. ಯಾರು ಬಯೋಡೇಟವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮತ್ತು ಆಯ್ಕೆ ಸಮಿತಿ ಎರಡು ತಿಂಗಳ ‌ಮುಂಚೆ ಆಯ್ಕೆ ಮಾಡುತ್ತೆ. ಪ್ರಶಸ್ತಿಗೆ ಸಾಧಕರ ಆಯ್ಕೆ ಶೋಧನೆಯಿಂದ ಮಾಡುತ್ತೇವೆ ಎಂದು ತಿಳಿಸಿದರು.

ಸಾಧಕರನ್ನು ಹಾಡಿ ಹೊಗಳಿದ ಸಿಎಂ

ಮುಂದಿವರಿದು ಮಾತನಾಡಿದ ಸಿಎಂ, ಇಂದು ಬಹಳ ಸಂತೋಷವಾಗ್ತಿದೆ. ಕನ್ನಡದಲ್ಲಿ ಇಷ್ಟೊಂದು ದೊಡ್ಡ ಸಾಧಕರ ಪಟ್ಟಿ ಇದೆ. ಇವರ ಬದುಕಲ್ಲಿ ಹಲವಾರು ಆಯ್ಕೆ ಇತ್ತು, ಆದರೆ ಸಮಾಜಮುಖಿ ಕೆಲಸಕ್ಕೆ ಮಾನ್ಯತೆ ನೀಡಿದ್ರು. ಸಾಹಿತ್ಯ ಕಲಾ ಸಂಗೀತ ಸಂಸ್ಕೃತಿ ಹಾಡುಗಾರಿಕೆ‌ ಎಲ್ಲಾ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಸಾಧಕರನ್ನು ಹಾಡಿ ಹೊಗಳಿದರು. ಆಯ್ಕೆ ಸಮಿತಿ ಸಮುದ್ರ ಆಳದಲ್ಲಿ ಇರುವ ಮುತ್ತು, ಭೂಮಿ ಆಳದಲ್ಲಿರುವ ರತ್ನವನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದ ಎಂದರು.

ಮೊದಲ ಸ್ಥಾನ ಕನ್ನಡಿಗನಿಗೆ ಇರಬೇಕು

ಪರೋಪಕಾರಿ ಗುಣಗಳು ಮನುಷ್ಯನಲ್ಲಿ ಬರಬೇಕು. ಬದುಕಿನಲ್ಲಿ ಒಂದು ಬ್ಯಾಲೆನ್ಸಿಂಗ್ ಇದೆ. ಇಡೀ ಜಗತ್ತಿನಲ್ಲಿ ಕನ್ನಡ ನಾಡು ವಿಶೇಷವಾದ ಭಾಗ, ಮನುಷ್ಯನಿಗೆ ಹಲವಾರು ಆಸೆ ಅಭಿಲಾಷೆ ಇರುತ್ತೆ. ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗಿರುತ್ತೆ. ಅದರಂತೆ ನಮ್ಮ ಆಸೆ ಅಭಿಲಾಸೆ ಕೂಡ ಬದಲಾಗುತ್ತಿರುತ್ತೆ. ಅದು ಬಂದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಪ್ರಾರಂಭ ಆಗಬೇಕು. ಪರ್ವ ಅಂದರೆ ಎಲ್ಲಾ ರಂಗದಲ್ಲಿ ಮೊದಲೇ ಸ್ಥಾನ ಕನ್ನಡಕ್ಕೆ ಇರಬೇಕು. ಮೊದಲ ಸ್ಥಾನ ಕನ್ನಡಿಗನಿಗೆ ಇರಬೇಕು ಎಂದು ಕರೆ ನೀಡಿದರು.

ಜನ ಶ್ರೀಮಂತವಾಗಬೇಕು

ನಮ್ಮ‌ 8 ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಾರೆ. ಮೊದಲು ವಿದೇಶಿಯರು ದೆಹಲಿಗೆ ಬರ್ತಿದ್ರು, ಇಂದು ಬೆಂಗಳೂರಿಗೆ ಬರ್ತಿದ್ದಾರೆ. ನಮ್ಮ ವಿಶೇಷವಾದ ಕೃಷಿ ಉತ್ಪನ್ನ ಇದೆ. ಮಲ್ನಾಡಿನ ಕಾಫಿ, ನಮ್ಮ ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ವಿದೇಶಕ್ಕೆ ಗೊತ್ತು. ಚೈನಾ ರೇಷ್ಮೆ ಜೊತೆಗೆ ನಮ್ಮ ಕರ್ನಾಟಕ ರೇಷ್ಮೆ ಪೈಪೋಟಿ ‌ಕೊಡ್ತಿದೆ. ನಾಡನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕನ್ನಡದ ಅಂತರಂಗದ ಶಕ್ತಿ ಪ್ರೀತಿ ಮತ್ತು ವಿಶ್ವಾಸ, ಬೇರೆ ಭಾಷೆ ಬಗ್ಗೆ ವಿಶ್ಲೇಷಣೆ ಬೇಡ. ಆದರೆ ನಮ್ಮ ಕನ್ನಡದ ವಿಶ್ಲೇಷಣೆ ಬೇಕು. ಹೃದಯ ವೈಶಾಲತೆ ನಮ್ಮ ಕನ್ನಡಿಗರಿಗಿದೆ. ನಾಡು ಶ್ರೀಮಂತವಾಗಬೇಕಾದರೇ ಜನ ಶ್ರೀಮಂತವಾಗಬೇಕು. ಜನ ಶ್ರೀಮಂತರಾದರೇ ಎಲ್ಲಾ ರಂಗಗಳೂ ಶ್ರೀಮಂತವಾಗುತ್ತೆ, ಆ ನಾಡು ಶ್ರೀಮಂತವಾಗುತ್ತೆ ಎಂದರು.

ಇದನ್ನೂ ಓದಿ: Good News to Bengalureans: ಇನ್ಮುಂದೆ ಬೆಂಗಳೂರಿಗರ ಮನೆ ಬಾಗಿಲಿಗೇ ಸರ್ಕಾರದ ಎಲ್ಲ ಸೌಲಭ್ಯ; ಇಲ್ಲಿದೆ ಸಂಪೂರ್ಣ ಮಾಹಿತಿ

ನಾಡನ್ನ ಕಟ್ಟಲು ಬರೀ ಸರ್ಕಾರಕ್ಕೆ ಸಾಲದು, ಕನ್ನಡಿಗರು ಬೇಕು ಇಂಥ ಸಾಧಕರು ಬೇಕು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​ಗೆ 7-8 ಬಾರಿ ಪ್ರಶಸ್ತಿ ನಿಲ್ಲಿಸಿದ್ವಿ, ನಾನು ಹಿಂದೆ ಶಿಫಾರಸು ಮಾಡಿದ್ದೆ. ಆದ್ರೆ ವಯಸ್ಸಾಗಿಲ್ಲ ಅಂತ ನೀಡೋಕೆ ಆಗಲ್ಲ ಅಂದ್ರು. ವಯಸ್ಸಿಗೆ ಆದ್ಯತೆ ಕೂಡದೇ ಸಾಧನೆಗೆ ಪ್ರಶಸ್ತಿ ನೀಡಬೇಕು ಎಂದರು.
Published by:Kavya V
First published: