CM City Rounds: ಬೆಂಗಳೂರಲ್ಲಿ ಸಿಎಂ ನಗರ ಪ್ರದಕ್ಷಿಣೆ; ಮೃತರ ಕುಟುಂಬಕ್ಕೆ 5 ಲಕ್ಷ, ಮಳೆ ಸಂತ್ರಸ್ತರಿಗೆ 25 ಸಾವಿರ ರೂಪಾಯಿ ಪರಿಹಾರ

ಇಂದು ನಗರ ಪ್ರದಕ್ಷಿಣೆ (City Rounds) ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ನೀರು ನುಗ್ಗಿ ಹಾನಿಗೆ ಒಳಗಾದ ಮನೆಗಳ ಮಾಲೀಕರಿಗೆ (Owners) 25 ಸಾವಿರ ರೂಪಾಯಿ ಪರಿಹಾರ (Composition) ಘೋಷಿಸಿದ್ದಾರೆ.

ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ಮಳೆ (Rain) ಅಬ್ಬರ ಮತ್ತೆ ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದಲೇ (Afternoon) ಬಿಟ್ಟೂ ಬಿಡದೇ ಸುರಿದ ಭಾರೀ ಮಳೆಗೆ ಅನಾಹುತವೇ ಸೃಷ್ಟಿಯಾಗಿದೆ. ಉಲ್ಲಾಳ (Ullala) ಉಪನಗರ ವ್ಯಾಪ್ತಿಯಲ್ಲಿ ಕಾಮಗಾರಿ ವೇಳೆ ನೀರು ನುಗ್ಗಿ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿದ್ದಾರೆ. ಇತ್ತ ರಾಜರಾಜೇಶ್ವರಿ ನಗರ (RR Nagar), ಯಲಹಂಕ (Yalahanka) ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು (Rain Water) ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಇನ್ನು ನಗರ ಪ್ರದಕ್ಷಿಣೆ (City Rounds) ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ನೀರು ನುಗ್ಗಿ ಹಾನಿಗೆ ಒಳಗಾದ ಮನೆಗಳ ಮಾಲೀಕರಿಗೆ (Owners) 25 ಸಾವಿರ ರೂಪಾಯಿ ಪರಿಹಾರ (Composition) ಘೋಷಿಸಿದ್ದಾರೆ.

ಸಿಎಂ ಬೊಮ್ಮಾಯಿ ನಗರ ಪ್ರದಕ್ಷಿಣೆ

ಬೆಂಗಳೂರಿನಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆಯೇ ಸಿಟಿ ರೌಂಡ್ಸ್ ಹೊಡೆದರು. ಭಾರೀ ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಆರ್‌.ಆರ್. ನಗರ ಸಹಿತ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಹಲವರು ಈ ವೇಳೆ ಸಿಎಂಗೆ ಸಾಥ್ ನೀಡಿದ್ದರು.

ಮೃತ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಇನ್ನು ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5 ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಕಾಮಗಾರಿ ಸ್ಥಳದಲ್ಲಿ ನೀರು ತುಂಬಿದ್ದರಿಂದ ಅಲ್ಲಿಂದ ಹೊರಕ್ಕೆ ಬರಲಾಗದೇ, ಉಸಿರು ಕಟ್ಟಿ ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಎಂಬ ಇಬ್ಬರು ಕಾರ್ಮಿಕರು ಮೃತಪಟ್ಟಿದ್ಗರು. ಇದೀಗ ಅವರ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

ಮಳೆ ಸಂತ್ರಸ್ತರಿಗೆ 25 ಸಾವಿರ ರೂಪಾಯಿ ಪರಿಹಾರ

ಈ ವೇಳೆ ಮಳೆ ಸಂತ್ರಸ್ತರ ಕಷ್ಟವನ್ನು ಕಣ್ಣಾರೆ ಕಂಡ ಸಿಎಂ, ಸ್ಥಳದಲ್ಲೇ ಪರಿಹಾರ ಘೋಷಿಸಿದರು. ಇನ್ನು ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುತ್ತೇವೆ. ಜೊತೆಗೆ ಮನೆ ಸ್ವಚ್ಛಮಾಡಿಸಿ ಕೊಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.



ಸಿಎಂ ಮುಂದೆ ಮಹಿಳೆಯರ ಕಣ್ಣೀರು

ಮಳೆ ಹಾನಿ ಪ್ರದೇಶಗಳ ಸಿಎಂ ಭೇಟಿ ನೀಡಿದ್ದ ವೇಳೆ ಸ್ಥಳೀಯರು ತಮ್ಮ ಸಮಸ್ಯೆ ಹೇಳಿಕೊಂಡರು. ಈ ವೇಳೆ ಮಹಿಳೆಯರು ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಪ್ರತಿ ವರ್ಷವೂ ಇದೇ ರೀತಿ ಸಮಸ್ಯೆ ಇದೆ. ಇಲ್ಲಿನ ಜನಪ್ರತಿನಿಧಿಗಳು ಭರವಸೆ ನೀಡಿ, ಆಮೇಲೆ ಮರೆಯುತ್ತಾರೆ. ಇದುವರೆಗೂ ಯಾವುದೇ ಪರಿಹಾರ ಆಗುತ್ತಿಲ್ಲ. ಮನೆಯಲ್ಲಿ ಹಿರಿಯರು, ಮಕ್ಕಳು ಇದ್ದಾರೆ. ಮಳೆ ಬಂದಾಗ ನಾವು ಎಲ್ಲಿಗೆ ಹೋಗಬೇಕು ಅಂತ ಅತ್ತರು. ಅವರನ್ನು ಸಮಾಧಾನಿಸಿದ ಸಿಎಂ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ನೆರವಾಗುತ್ತದೆ ಅಂತ ಭರವಸೆ ನೀಡಿದ್ರು.

ರಾಜಧಾನಿಯಲ್ಲಿ ನಿನ್ನೆಯಿಂದಲೇ ಭಾರೀ ಮಳೆ

ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ.

ಇದನ್ನೂ ಓದಿ: Bengaluru Rain: ಮಹಾಮಳೆಗೆ ಮುಳುಗಿದ ಮಹಾನಗರಿ! ಬೆಂಗಳೂರಿನ ಮಳೆ ಅವಾಂತರದ ಚಿತ್ರಗಳು ಇಲ್ಲಿವೆ

ವಿದ್ಯಾಪೀಠ 113 mm ಮಳೆ, ಸಂಪಂಗಿರಾಮನಗರ 100.3 mm ಮಳೆ, ನಾಗಪುರ 100 mm ಮಳೆ, ಅಗ್ರಹಾರ ದಾಸರಹಳ್ಳಿ 97.5 mm ಮಳೆ, ಹಂಪಿ ನಗರ 93.5 mm ಮಳೆ, ರಾಜಮಹಲ್ ಗುಟ್ಟಹಳ್ಳಿ 95 mm ಮಳೆ, ದಯಾನಂದ ನಗರ 82 mm ಮಳೆ, ಹೊರಮಾವು 12.5 ಸೆ.ಮೀ ಮಳೆ,ಸಂಪಂಗಿರಾಮನಗರ 11.85 ಸೆ.ಮೀ ಮಳೆ,ಕೆ.ನಾರಾಯಣಪುರ 11.75 ಸೆ.ಮೀ, ವಿದ್ಯಾಪೀಠ 11.05 ಸೆ.ಮೀ ಮಳೆ, ಅಗ್ರಹಾರ ದಾಸರಹಳ್ಳಿ 10.2 ಸೆ.ಮೀ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.
Published by:Annappa Achari
First published: