Bengaluru: ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿ ಕೈದಿಗಳಿಗೆ ಚಿತ್ರಕಲಾ ಸುಗ್ಗಿ; ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗಿ

ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನೈಜೇರಿಯಾ ದೇಶದ ಪ್ರಜೆಗಳೂ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಇತರ ಸಜಾಬಂಧಿ ಕೈದಿಗಳ ಜತೆ ಜೈಲುವಾಸ ಅನುಭವಿಸುತ್ತಿರುವ ನೈಜೀರಿಯನ್ ಪ್ರಜೆಗಳೂ ಕೂಡ ಸಹಜವಾಗಿಯೇ ಭಾಗಿಯಾಗಿದ್ದರು.

ಸಜಾಬಂಧಿ ಕೈದಿಗಳಿಗೆ ಚಿತ್ರಕಲಾ ಸುಗ್ಗಿ

ಸಜಾಬಂಧಿ ಕೈದಿಗಳಿಗೆ ಚಿತ್ರಕಲಾ ಸುಗ್ಗಿ

  • Share this:
ಬೆಂಗಳೂರು(ಆ.23): ಶಾಲೆಗಳಲ್ಲಿ ಪ್ರತಿಭಾ ಕಾರಂಜಿ , ಚಿತ್ರಕಲಾ ಸ್ಪರ್ಧೆಗಳನ್ನ ನೋಡಿರ್ತೀರಿ. ಮಕ್ಕಳು ಹಾಡೋದನ್ನ, ಬರೆಯೋದನ್ನ ನೋಡಿ ಖುಷಿ ಪಟ್ಟಿರ್ತೀರಿ‌. ಆದ್ರೆ ಸೆಂಟ್ರಲ್ ಜೈಲಲ್ಲಿ ಇದೆಲ್ಲಾ ನಡೆದಿದೆ ಅಂದ್ರೆ ನೀವು ನಂಬ್ತೀರಾ? ಅದೂ ಸಜಾ ಬಂಧಿ ಕೈದಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ ಅಂದ್ರೆ ನೀವು ನಂಬಲೇ ಬೇಕು.

ಹೌದು 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿ ಕೈದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.. ಅಮೃತ ಮಹೋತ್ಸವದ ಸ್ಮರಣಾರ್ಥ ಜೈಲುಹಕ್ಕಿಗಳಿಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ‌ಪರಪ್ಪನ ಅಗ್ರಹಾರದ ಕೇಂದ್ರ ಜೈಲಿನ ಕೈದಿಗಳಿಗೆ ಜೈಲು ಅಧಿಕಾರಿಗಳು ಚಿತ್ರಕಲೆ, ಗಾಯನ ಸೇರಿದಂತೆ ಹಲವಾರು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.

ವಿವಿಧ ಪ್ರಕರಣಗಳಲ್ಲಿ ಕಾರಾಗೃಹ ಸೇರಿರುವ ಕೈದಿಗಳು ತಮಗಾಗಿಯೇ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೈಲುಹಕ್ಕಿಗಳು ಉತ್ಸಾಹದಿಂದ ಚಿತ್ರ ಬರೆದರು, ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಜತೆಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ಘೋಷಿಸಲಾಯಿತು.

ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ ನೋಡಿ..!

ಚಿತ್ರಕಲಾ ಸ್ಪರ್ಧೆಗಳಲ್ಲಿ ಒಟ್ಟು 42 ಕೈದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕೈದಿಗಳು ಬಿಡಿಸಿದ ವಿಭಿನ್ನ ಚಿತ್ರಗಳು ಜೈಲಿನ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿತು.

ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನೈಜೇರಿಯಾ ದೇಶದ ಪ್ರಜೆಗಳೂ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಇತರ ಸಜಾಬಂಧಿ ಕೈದಿಗಳ ಜತೆ ಜೈಲುವಾಸ ಅನುಭವಿಸುತ್ತಿರುವ ನೈಜೀರಿಯನ್ ಪ್ರಜೆಗಳೂ ಕೂಡ ಸಹಜವಾಗಿಯೇ ಭಾಗಿಯಾಗಿದ್ದರು.

ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಬಿಡಿಸಿ ಸಂವಿಧಾನದ ಬಗ್ಗೆ ಬರೆದಿದ್ದ ಮಹಿಳಾ ಕೈದಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು. ಐಜಿಪಿ ನಂಜುಂಡಸ್ವಾಮಿ ಚಿತ್ರಗಳನ್ನು ವೀಕ್ಷಿಸಿ ಬಹುಮಾನ ವಿತರಿಸಿದರು. ಭಾರತ ಮಾತೆ, ಡಾ.ಬಿ ಆರ್ ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ದ, ವಿಷ್ಣು, ಕೃಷ್ಣ , ಬಾಲಕೃಷ್ಣ, ಹಳ್ಳಿ ಪರಿಸರ ಸೇರಿದಂತೆ ಅನೇಕ ಸುಂದರ ಚಿತ್ರಗಳನ್ನು ಕೈದಿಗಳು ಚಿತ್ರಿಸಿದ್ದರು. ಕೋಲಾರದಲ್ಲಿ ಗಂಡನನ್ನ ಕೊಲೆ ಮಾಡಿದ್ದ ಅಜಂತಾ ಎಂಬ ಮಹಿಳಾ ಕೈದಿಗೆ ಫಸ್ಟ್ ಫ್ರೈಜ್ ಸಿಕ್ಕಿದೆ.

ಇದನ್ನೂ ಓದಿ:Explained: 20 ವರ್ಷಗಳ ತಾಲಿಬಾನ್ ಸಂಘರ್ಷದಲ್ಲಿ ಅಮೆರಿಕಾಗೆ ಆದ ನಷ್ಟವೇನು..? ಅಪ್ಘನ್ ಅಭಿವೃದ್ಧಿಯಲ್ಲಿ ಭಾರತದ ಪಾತ್ರವೇನು?

ಇನ್ನು ನೈಜೀರೀಯನ್ ಪ್ರಜೆಗೆ ಎರಡನೇ ಬಹುಮಾನ ಹಾಗೂ ಭಾರತಾಂಬೆ ಚಿತ್ರ ಬಿಡಿಸಿದ್ದ ಕೈದಿಗೆ ಮೂರನೇ ಬಹುಮಾನ ಸಿಕ್ಕಿದೆ. ಡ್ರಗ್ಸ್ ಕೇಸ್​ನಲ್ಲಿದ್ದ ನೈಜೀರಿಯನ್ಸ್ ಗೆ ಪ್ರತಿಭಾ ಕಾರಂಜಿ ಏರ್ಪಡಿಸಿದ್ದು, ಮೈಕ್ ಹಿಡಿದು ಹಾಡಿ ಕುಣಿದಾಡಿದ್ದಾರೆ. ಶಾಲೆಯ ರೀತಿಯಲ್ಲೇ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜೈಲಾಧಿಕಾರಿಗಳಿಗೆ ಪ್ರಶಂಶೆ ವ್ಯಕ್ತವಾಗಿದೆ.

ಇನ್ನು ಜೈಲಾಧಿಕಾರಿಗಳ ಕಾರ್ಯಕ್ರಮ ಆಯೋಜನೆಗೆ ಪ್ರಶಂಸೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಕೈದಿಗಳಲ್ಲಿ ಹೊಸ ಚೈತನ್ಯವನ್ನ ಹಾಗೂ ಮನಪರಿವರ್ತನೆ ತರಲು ಯೋಜನೆ ರೂಪಿಸಿಸುವಂತೆ ಸೂಚಿಸಿದ್ದಾರೆ. ಲಯನ್ಸ್ ಕ್ಲಬ್ ಕಡೆಯಿಂದ ಕಾರ್ಯಕ್ರಮ ಆಯೋಜಿಸಿದ್ದು, ವಿಶೇಷವಾಗಿ ನೈಜೀರಿಯನ್ಸ್ ಪ್ರಜೆಗಳು ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿತ್ತು. ಮುಂದಿನ ದಿನಗಳಲ್ಲಿ ಹೀಗೆ ಮತ್ತಷ್ಟು ಉಪಯುಕ್ತ ಕಾರ್ಯ ಕ್ರಮಗಳನ್ನ ತರಲು ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಮುಂದಾಗಿದ್ದಾರೆ.
Published by:Latha CG
First published: