ಬೆಂಗಳೂರು (ಜು. 5): ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಿ ನಡೆಸಿದ ಮಾಜಿ ಪ್ರಧಾನಿಗಳ ಮಗ ಎಚ್ ಡಿ ಕುಮಾರಸ್ವಾಮಿ ಈ ರೀತಿ ಮಹಿಳೆಯರ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಮಹಿಳೆಯರ ಬಗ್ಗೆ ಮಾತಾನಾಡುವಾಗ ಎಚ್ಚರಿಕೆ ಇರಬೇಕು. ಪಂಚಾಯತಿ ಮೆಂಬರ್ ಆಗಲಿ, ಸಂಸದರಾಗಲಿ. ಮೊದಲು ಅವರಿಗೆ ನಾವು ಗೌರವ ಕೊಡಬೇಕು. ಅವರ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆ. ದೇವೇಗೌಡರು ಮಹಿಳೆಯರ ಮೇಲಿನ ಗೌರವಕ್ಕೆ ಚಿಹ್ನೆ ಮಾಡಿದ್ದಾರೆ. ಅವರ ಮಗ ಇವರು, ಗೌರವಯುತವಾಗಿ ಮಾತನಾಡಲಿ ಎಂದು ಎಚ್ಚರಿಸಿದರು
ಈ ಹಿಂದೆ ಸಿಎಂ ಆಗಿದ್ದಾಗ ಬೆಳಗಾವಿ ಮಹಿಳೆಗೆ ಹೇಳಿದ್ದರು. ಎಲ್ಲಲ್ಲೊ ಮಲಗಿ ಬರ್ತಾರೆ ಎಂದು ಹೇಳಿ ಟೀಕೆಗೆ ಒಳಗಾದರು. ಮಹಿಳೆಯರಿಗೆ ಮೊದಲು ಗೌರವ ನೀಡಬೇಕು. ಕುಮಾರಸ್ವಾಮಿ ಎಲ್ಲರನ್ನೂ ಲಘುವಾಗಿ ಮಾತನಾಡ್ತಾರೆ. ಸಾರ್ವಜನಿಕವಾಗಿ ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ. ನಾನು ಏನು ಬೇಕಿದ್ರು ಮಾತನಾಡಬಹುದು ಎಂದು ಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಬೇರೆಯವರಿಗೆ ಗೌರವ ಕೊಟ್ಟರೆ, ಬೇರೆಯವರು ಅವರಿಗೆ ಗೌರವ ಕೊಡುತ್ತಾರೆ ಎಂಬುದನ್ನು ಮರೆಯಬಾರದು ಎಂದರು.
ಇದನ್ನು ಓದಿ: ತಮಿಳುನಾಡು ಸಿಎಂಗೆ ಬಿಎಸ್ವೈ ಪತ್ರ ಬರೆದಿದ್ದು ತಪ್ಪು; ಸಿದ್ದರಾಮಯ್ಯ
ಮಂಡ್ಯ ಕೆಆರ್ಎಸ್ ಡ್ಯಾಂ ಬಿರುಕು ವಿಚಾರ ಕೇವಲ ಸುಮಲತಾ, ಹೆಚ್ಡಿಕೆಗೆ ಮಾತ್ರ ಸೇರಿದ್ದಲ್ಲ. ಡ್ಯಾಂ ನಾಡಿನ ಆಸ್ತಿ ಅದನ್ನು ಉಳಿಸಿಕೊಳ್ಳಬೇಕು. ಅಣೆಕಟ್ಟಿನಿಂದ 20 ಕಿ.ಮೀ ದೂರದಲ್ಲಿ ಗಣಿಗಾರಿಕೆ ನಿಲ್ಲಿಸಿದ್ದಾರೆ. ಆದರೂ ಕದ್ದು ಮುಚ್ಚಿ ಅಲ್ಲಲ್ಲಿ ನಡೆಯುತ್ತಲೇ ಇದೆ. ಅಲ್ಲಿ ಕ್ರಷರ್ ನಡೆಯುತ್ತಿದೆ.ಅದು ನಡೆಯಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲಿ ಪೊಲೀಸರನ್ನ ಹಾಕಿದ್ದಾರೆ. ಸರ್ಕಾರಕ್ಕೆ ಇದು ಗೌರವ ತರುತ್ತಾ.. ಅದನ್ನ ಕಾವಲು ಕಾಯಬೇಕಾ.. ಎಂದು ಪ್ರಶ್ನಿಸಿದರು.
ಇದನ್ನು ಓದಿ: ಕೆಆರ್ಎಸ್ ಡ್ಯಾಂ ಗೇಟಿಗೆ ಮಲಗಿಸಿದ್ರೆ ಬಿಗಿಯಾಗುತ್ತೆ ಎಂದ ಹೆಚ್ಡಿಕೆಗೆ ಸುಮಲತಾ ಅಂಬರೀಶ್ ತಿರುಗೇಟು
ಆಪ್ತರ ರಕ್ಷಣೆಗೆ ಸಿಎಂ -ಎಚ್ಡಿಕೆ ಭೇಟಿ
ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಎಚ್ಡಿಕೆ ಭೇಟಿ ಮಾಡಿರುವ ವಿಚಾರ ಕುರಿತು ಮಾತನಾಡಿದ ಅವರು, ಮನ್ಮೂಲ್ ವಿಚಾರದಲ್ಲಿ ತನಿಖೆ ನಿಧಾನ ಮಾಡಿ ಎಂದು ಮನವಿ ಮಾಡಲು ಸಿಎಂ ಭೇಟಿ ಮಾಡಿರಬಹುದು.ಇದು ಸಿಬಿಐ ಇಂದ ತನಿಖೆ ಮಾಡಿಸುವ ಪ್ರಕರಣ. ಎಚ್ಡಿಕೆ ಆಪ್ತರು ಮತ್ತು ಪಿಎ ರಘು ಮಾಡಿದ ಕೆಲಸವಿದು. ಅವರನ್ನ ಕಾಪಾಡುವುದಕ್ಕೆ ಇವರು ಹೋಗಬಹುದು. ಸೂಪರ್ ಸೀಡ್ ಮಾಡುವುದು ಬೇಡ ಎಂದು ಹೇಳಿದ್ದಾರೆ.70-80 ಕೋಟಿ ಆರೋಪ ಬಂದಾಗ ಸೂಪರ್ ಸೀಡ್ ಮಾಡಿದ್ದರು. 500-600 ಕೋಟಿ ಹಗರಣ ಆಗಿದೆ ಈಗ ಸೂಪರ್ ಸೀಡ್ ಬೇಡ ಎನ್ನುತ್ತಿದ್ದಾರೆ. ಯಾರ ರಕ್ಷಣೆಗೆ ಇವರು ನಿಂತಿದ್ದಾರೆ ಅನ್ನೋದು ಇದರಿಂದ ಗೊತ್ತಾಗುತ್ತೆ ಎಂದರು.
ಕೆಆರ್ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಧ್ವನಿ ಎತ್ತುತ್ತಿದ್ದ ಸುಮಲತಾ ಅಂಬರೀಷ್ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಕೆಆರ್ಎಸ್ ಡ್ಯಾಮ್ ಬಾಗಿಲಿಗೆ ಅವರನ್ನ ಮಲಗಿಸಿಬಿಟ್ಟರೆ ಬಿಗಿಯಾಗಿ ಬಿಡುತ್ತೆ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಮಹಿಳೆಯರ ಬಗ್ಗೆ ಹೀಗೆ ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಕಳೆದ ಚುನಾವಣೆಯಲ್ಲಿ ಆದ ಅನುಭವದ ಪಾಠವನ್ನು ಇವರು ಕಲಿತಿಲ್ಲ ಎಂದು ಎಚ್ಚರಿಸಿದ್ದಾರೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ