• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shobha Karandlaje: ಮಹಿಳೆಯರು ಸಂಜೆ 7:30ರ ನಂತರವೂ ಹೊರಗೆ ಹೋಗಬಹುದು, ನಾನು 12 ಗಂಟೆವರೆಗೆ ಓಡಾಡುತ್ತೇನೆ: ಶೋಭಾ ಕರಂದ್ಲಾಜೆ

Shobha Karandlaje: ಮಹಿಳೆಯರು ಸಂಜೆ 7:30ರ ನಂತರವೂ ಹೊರಗೆ ಹೋಗಬಹುದು, ನಾನು 12 ಗಂಟೆವರೆಗೆ ಓಡಾಡುತ್ತೇನೆ: ಶೋಭಾ ಕರಂದ್ಲಾಜೆ

ಕೃಷಿ ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಸಚಿವೆ ಶೋಭಾ ಕರಂದ್ಲಾಜೆ

shobha karandlaje on mysore gang rape case: 7.30ರ ನಂತರವೂ ಮಹಿಳೆಯರು ಓಡಾಡಬಹುದು, ಜನಾಶೀರ್ವಾದ ಸಭೆಯಲ್ಲಿ ನಾನು 12 ಗಂಟೆ ತನಕವೂ ಕಾರ್ಯಕ್ರಮ ಮಾಡಿದ್ದೇನೆ.

  • Share this:

ಬೆಂಗಳೂರು: ‌ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದು ವಿಕಾಸಸೌಧಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಮೈಸೂರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ(mysore gang rape case) ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, 7:30ರ ವೇಳೆ ಯುವತಿ ಹೊರಗೆ ಏಕೆ ಓಡಾಡಿದ್ದಳು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ(home minister araga jnanendra) ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು. 7.30ರ ನಂತರವೂ ಮಹಿಳೆಯರು ಓಡಾಡಬಹುದು, ಜನಾಶೀರ್ವಾದ ಸಭೆಯಲ್ಲಿ ನಾನು 12 ಗಂಟೆ ತನಕವೂ ಕಾರ್ಯಕ್ರಮ ಮಾಡಿದ್ದೇನೆ. ಹೋಮ್ ಮಿನಿಸ್ಟರ್ ಪ್ರತಿಕ್ರಿಯೆಗೆ ಎಲ್ಲಾ ನನ್ನ ಯಾಕೆ ಉತ್ತರ ಕೇಳ್ತೀರಿ? ಸಂತ್ರಸ್ತ ಯುವತಿ ಪರ ನಾವು ಇದ್ದೇವೆ, ಆ ಯುವತಿ ದೂರು ಕೊಡಲಿ. ಯಾವುದೇ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದರು.


ಎರಡು ದಿನಗಳ ಹಿಂದೆಯೇ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಕಠಿಣವಾದ ಕಾನೂನು ಕ್ರಮಕ್ಕೆ ಸೂಚನೆ ಕೊಡಲಾಗಿದೆ. ತಕ್ಷಣ ಆರೋಪಿಗಳ ಬಂಧನಕ್ಕೂ ಸೂಚನೆ ಕೊಡಲಾಗಿದೆ. ಸಂಶಯ ಬಂದವರ ಬಂಧನ ಕೂಡ ಮಾಡಲಾಗಿದೆ. ಬಲವಾದ ಕಾನೂನು ಹೋರಾಟದಲ್ಲಿ ನಾವೆಲ್ಲರೂ ನಿಲ್ಲುತ್ತೇವೆ ಎಂದರು.


ಸಭೆ ಬಗ್ಗೆ  ಮಾತನಾಡಿದ ಅವರು ಪ್ರಧಾನಿ ಮೋದಿ ಕನಸು ರೈತರ ಆದಾಯ ದ್ವಿಗುಣ ಆಗಬೇಕು.ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ, ಹಲವು ಜನರು ಕೃಷಿ ಕೆಲಸ ಬಿಡುತ್ತಿದ್ದಾರೆ. ಲಾಭದಾಯಕ ಅಲ್ಲ ಅಂತ ಬಿಡುತ್ತಿದ್ದಾರೆ, ನಗರ ಪ್ರದೇಶ ಕ್ಕೆ ವಲಸೆ ಬರುತ್ತಿದ್ದಾರೆ. ಇದನ್ನು ತಡೆಯಬೇಕು ಅನ್ನುವುದು ನಮ್ಮ ಉದ್ದೇಶ. ಕೃಷಿಗೆ 23 ಸಾವಿರ ಕೋಟಿ ಬಜೆಟ್ ಇಡಲಾಗಿದೆ. ಮಿಶ್ರ  ಬೆಳೆ ಬೆಳದವರು ಲಾಭ ಮಾಡುತ್ತಿದ್ದಾರೆ. ಅಧ್ಯಯನ ‌ಮೂಲಕ ಕಂಡುಕೊಂಡ ಸತ್ಯ ಇದು. ಇದನ್ನು ಎಲ್ಲ ರಾಜ್ಯದಲ್ಲಿ ಜಾರಿ‌ ಮಾಡುತ್ತಿದ್ದೇವೆ ಎಂದ ತಿಳಿಸಿದರು.


ಇದನ್ನೂ ಓದಿ: Mysuru Gang Rape Case :ಸಚಿವರ ಹೇಳಿಕೆಯ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಪರ ಸಚಿವೆ ಪೂರ್ಣಿಮಾ ಶ್ರೀನಿವಾಸ್ ಬ್ಯಾಟಿಂಗ್


ಸಣ್ಣ ರೈತರ ಒಟ್ಟು ಗೂಡಿಸುವ ಕೆಲಸ‌ ಮಾಡುತ್ತಿದ್ದೇವೆ. ಸಂಘ ಮಾಡಿ ಸಂಘಟನೆ ‌ಮಾಡಬೇಕು. ಹತ್ತು ಸಾವಿರ ಸಂಘ ಮಾಡಬೇಕು ಅಂತಿದ್ದೇವೆ. ಈ ಸಂಘಗಳ‌ ಮೂಲಕ ಸ್ವಾವಲಂಬಿ ರೈತರಾಗಬೇಕು. ಜಿಲ್ಲವಾರು ಬೆಳೆಗೆ ಆದ್ಯತೆ ನೀಡವ ಕ್ರಮ ಕೈಗೊಳ್ಳುತ್ತಿದ್ದೇವೆ. ಬೆಳೆದ ಬೆಳೆ ಸಂಗ್ರಹಣೆ ಬಗ್ಗೆ ಚರ್ಚೆ ಮಾಡಿದ್ದೇವೆ.ರಾಜ್ಯದಲ್ಲಿ ಹೆಚ್ಚು ಕಬ್ಬು ಬೆಳೆಯುತ್ತೆವೆ. ಅತಿ ಹೆಚ್ಚು ಸಕ್ಕರೆ ತಯರಾಗುತ್ತೆ, ಹೆಚ್ಚುವರಿ ಸಕ್ಕರೆ ಎಥನಾಲ್ ‌ಮಾಡಬಹುದು. ಇದಕ್ಕೆ ಆದ್ಯತೆ ನೀಡಬೇಕು ಎಂಬ ಚಿಂತನೆ ಇದೆ. ಜೊತೆಗೆ ದ್ವಿದಳ ಧಾನ್ಯಗಳನ್ನು ಬೇಳೆಯುತ್ತಿದ್ದೇವೆ. ಸಿರಿಧಾನ್ಯ ಕೂಡ ಬೆಳೆಯುತ್ತೇವೆ, ಬೇರೆ ದೇಶಗಳಿಗೆ ಸಿರಿ ಧಾನ್ಯ ರಪ್ತು ಮಾಡಬೇಕು. 2023ಕ್ಕೆ ಕರ್ನಾಟಕ ಅತಿ ಹೆಚ್ಚು ರಪ್ತು‌ ಮಾಡಬೇಕು,ಈ ಗುರಿ ನಮ್ಮ ಮುಂದೆ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.


ಕೃಷಿ ಉತ್ಪಾದಕರ ಸಂಘಗಳನ್ನು ತೆರೆಯಲು ಮೋದಿಯವರು ಕರೆ ಕೊಟ್ಟಿದ್ದಾರೆ. ಮುಂದಿನ ಮೂರು ವರ್ಷದಲ್ಲಿ 750 ಇಂಥ ಸಂಘಗಳನ್ನು ತೆರೆಯು ಗುರಿ. ಒಂದು ವಿಧಾನಸಭೆ ಕ್ಷೇತ್ರಕ್ಕೆ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ ಮಾಡುವ ಗುರಿ ಇದೆ. ರಾಜ್ಯದಲ್ಲಿ ಹೆಚ್ಚುವರಿ ಸಕ್ಕರೆ ಉತ್ಪಾದನೆ ಆಗುತ್ತಿದೆ. ಸಕ್ಕರೆಯಿಂದ ಇಥೆನಾಲ್ ಉತ್ಪಾದನೆ ಮಾಡುವ ಗುರಿ‌ ಇದೆ, ಇದಕ್ಕೆ ಆದ್ಯತೆ ಕೊಡಲು ನಿರ್ಧಾರ. ಸಿರಿಧಾನ್ಯ ಬೆಳೆಯಲು ರಾಜ್ಯದಲ್ಲಿ ಹವಾಮಾನ ಉತ್ತಮವಾಗಿದೆ. 2023 ರ ವೇಳೆಗೆ ಕರ್ನಾಟಕ ಸಿರಿಧಾನ್ಯ ರಫ್ತು ಮಾಡುವ ರಾಜ್ಯ ಆಗಬೇಕು. ಈ ಮಟ್ಟಿಗೆ ಬರಲು ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.


ಕೊಯ್ಲಿನ ನಂತರ ಕೃಷಿ ಪದಾರ್ಥಗಳ ಸಂಸ್ಕರಣೆ, ಮಾರಾಟಕ್ಕೆ ಅನುದಾನ ಕೊಡಲಾಗ್ತಿದೆ. ಸಣ್ಣ ರೈತ ಕೃಷಿ ಜತೆ ಮಿಶ್ರ ಬೆಳೆ ಬೆಳೆದರೆ ಲಾಭ ಬರುತ್ತೆ. ಕೃಷಿ ಜತೆ ಡೈರಿ, ಪೌಲ್ಟ್ರಿ, ಜೇನು, ಕುರಿ ಸಾಕಣೆ, ಮೀನು ಸಾಕಣೆ ಮಾಡಿದರೆ ಲಾಭದಾಯಕವಾಗಿದೆ. ಈ‌ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಇಂಥ ರೈತರಿಗೆ ಆರ್ಥಿಕ ನೆರವು ಕೊಡಲು ಯೋಜನೆಗಳಿವೆ.


ಸೆ.22 ರಂದು ಬೆಂಗಳೂರಿನಲ್ಲಿ ತೋಟಗಾರಿಕಾ ಮೇಳಾ ನಡೆಯಲಿದೆ. ದೇಶ ವಿದೇಶಗಳ ರಫ್ತುದಾರರು ಬರಲಿದ್ದಾರೆ. ಕೃಷಿ ಪಂಪಸೆಟ್ ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಪ್ರಸ್ತಾವ ವಿಚಾರ ವಾಗಿ ಕೃಷಿ ಇಲಾಖೆಯ ನಿಲುವು ಏನು ಎಂಬ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಉತ್ತರ ಕೊಡಲಿಲ್ಲ. ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳು ಚರ್ಚೆ ಮಾಡ್ತಾರೆ  ಎಂದಷ್ಟೇ ಹೇಳಿದರು.

First published: