Crypto Currency; ಬೆಂಗಳೂರಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಬಹುಕೋಟಿ ವಂಚನೆ, CCB ಪೊಲೀಸರಿಂದ ನಾಲ್ವರ ಬಂಧನ

ಶೇರ್ ಶಾ ಅಪ್ಲಿಕೇಷನ್ ಹೆಸರಿನಲ್ಲಿ ಆರೋಪಿಗಳು ವಂಚನೆ ಮಾಡಿದ್ದಾರೆ. ಕ್ರಿಪ್ಟೋ ಮೈನಿಂಗ್ ಯಂತ್ರ ನೀಡೋದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ.18): ಕ್ರಿಪ್ಟೋ ಕರೆನ್ಸಿ (Crypto Currency) ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು (CCB Police) ಭೇದಿಸಿದ್ದಾರೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ (Bengaluru) ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಬಹುಕೋಟಿ ವಂಚನೆ ನಡೆದಿದ್ದು, ಈ ಸಂಬಂಧ ನಾಲ್ಚರು ಆರೋಪಿಗಳನ್ನು (Arrest) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೇರ್ ಶಾ ಅಪ್ಲಿಕೇಷನ್ ಹೆಸರಿನಲ್ಲಿ ಆರೋಪಿಗಳು ವಂಚನೆ ಮಾಡಿದ್ದಾರೆ. ಕ್ರಿಪ್ಟೋ ಮೈನಿಂಗ್ ಯಂತ್ರ ನೀಡೋದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬರೊಬ್ಬರಿ 44 ಬ್ಯಾಂಕ್ ಅಕೌಂಟ್ ನಲ್ಲಿದ್ದ 15 ಕೋಟಿ ಹಣ 1 ಕೆ.ಜಿ 650 ಗ್ರಾಂ ಚಿನ್ನ 78 ‌ಲಕ್ಷ ನಗದು ಸೇರಿ 17 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ

ಕೋವಿಡ್  2ನೇ ಲಾಕ್ ಡೌನ್ ವೇಳೆ ಸಾಮಾಜಿಕ ಜಾಲತಾಣ ಮೂಲಕ HNT (HELIEAM CRIPTO TOKEN)  ನೀಡೋದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಬೆಂಗಳೂರು ಸೇರಿ ವಿವಿಧ ರಾಜ್ಯಗಳಲ್ಲಿ ನೊಂದಾಯಿತ ಕಂಪನಿಗಳ ಮೂಲಕ ಹಣ ಹೂಡಿಕೆ ಮಾಡಲಾಗಿದೆ. 2022ರ ಜನವರಿಯಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ  ಅದನ್ನ ಅಪ್ಡೇಟ್ ಮಾಡಿ ಎಂದು ಸಂದೇಶ ರವಾನೆ ಮಾಡಿದ್ದಾರೆ.

ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತಿವಿ ಎಂದು ನಂಬಿಸಿದ್ದರು. ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್ಡೇಟ್​ ಆಗಿಲ್ಲ ಹೂಡಿಕೆದಾರರಿಗೆ ಯಾವುದೇ ರಿಟರ್ನ್​ ನೀಡದೆ ಆದಾಯವನ್ಣೂ ನೀಡದೆ ಕ್ರಿಪ್ಟೋ ಮೈನಿಂಗ್​ ಯಂತ್ರವೂ ನೀಡದೆ ವಂಚನೆ ಮಾಡಿದ್ದಾರೆ. 1 ಕೆ.ಜಿ  650 ಗ್ರಾಂ ಗೋಲ್ಡ್​, 78 ಲಕ್ಷ ಹಣ, 44 ಡಿಎಸ್ಸಿ ಕಂಪನಿಯ ಸೀಲ್, ಮೊಬೈಲ್​ ಫೋನ್​ , ಲ್ಯಾಪ್​ಟಾಪ್​ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Kalaburagi: PSI ನೇಮಕಾತಿ ಅಕ್ರಮ ಪ್ರಕರಣ: ಬಿಜೆಪಿ ನಾಯಕಿಯ ಪತಿ ಅರೆಸ್ಟ್

ಚೈನೀಸ್ ಆಪ್ ಮೂಲಕ ವಂಚನೆ

ಚೈನೀಸ್ ಆಪ್ ಮೂಲಕ ವಂಚನೆ ಮಾಡಿರೋದಾಗಿ ಸಿಸಿಬಿ ಮಾಹಿತ ನೀಡಿದೆ. ಕ್ರಿಪ್ಟೋ ಕರೆನ್ಸಿ ಮೈನಿಂಗ್ ಪ್ಲಾಂಟ್ ಅನ್ನು ಇಟ್ಟುಕೊಂಡು ಮೈನಿಂಗ್ ಮಾಡ್ತಾರೆ. ಇನ್ವೇಸ್ಟ್ಮೆಂಟ್ ಮಾಡಿದ್ರೆ 1 ಪರ್ಸೆಂಟ್ ಹಣ ನೀಡುವುದಾಗಿ ಹೇಳಿ ಅಕೌಂಟ್ ಗೆ ಹಣ ನೀಡ್ತಿದ್ದರು. ಮೊದಲಿಗೆ ನಂಬಿಕೆ ಗಳಿಸಲು ಪಕ್ಕಾ ಪ್ಲಾನ್ ಮಾಡಿದ್ರು . ಬರೋಬ್ಬರಿ 900 ವ್ಯಾಟ್ಸ್ ಅಪ್ ಗ್ರೂಪ್ ಮೂಲಕ ವಿಚಾರ ವಿನಿಮಯ ಮಾಡಿದ್ದಾರೆ. 256 ಜನರ ವ್ಯಾಟ್ಸಾಪ್ ಗ್ರೂಪ್ ಮೂಲಕ ಚಾಟ್ ಮಾಡಲಾಗಿದೆ. ನೆಬ್ರಾ ಕಂಪನಿ ಮೂಲಕ ಹೀಲಿಯಂ ಕ್ರಿಪ್ಟೋ ಟೋಕನ್ ನೀಡುವುದಾಗಿ ಭರವಸೆ ನೀಡಿದ್ರು

ಬರೋಬ್ಬರಿ 40 ಕೋಟಿ ಹಣ ವಂಚನೆ

ಕೋವಿಡ್ ಸಮಯದಲ್ಲಿ ಕಂಪನಿಯಲ್ಲಿ ನಾಲ್ವರನ್ನು ಡೈರೆಕ್ಟರ್ ಆಗಿ ನೇಮಕ ಮಾಡಿಕೊಂಡಿದ್ದರು. ಬಿಕಾಂ ಪದವೀಧರ ಯುವಕ ಕೆಲಸಕ್ಕಾಗಿ ಹುಡುಕುತ್ತಿದ್ದ. ಆತನನ್ನು ಅನ್ ಲೈನ್ ಮೂಲಕ ಸರ್ಚ್ ಮಾಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಈ ನಾಲ್ವರ ಅಕೌಂಟ್ ಗಳಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಸಾರ್ವಜನಿಕರಿಗೆ ಬರೋಬ್ಬರಿ 40 ಕೋಟಿ ಹಣವನ್ನು ವಂಚಿಸಿದ್ದಾರೆ.

ಇದನ್ನೂ ಓದಿ:  Cabinet Reshuffle: ಮುಂದಿನ ತಿಂಗಳ ಮೊದಲ ವಾರದೊಳಗೆ ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ; ಇಂದು ಜೆ.ಪಿ.ನಡ್ಡಾ ಆಗಮನ

ವಂಚನೆಗೊಳಗಾದವರು ದೂರು ನೀಡಿ

ಅಕೌಂಟ್ ಗೆ ಬಂದ ಹಣವನ್ನು ಇತರೆ ಅಕೌಂಟ್ ಗಳಿಗೆ ವರ್ಗಾಯಿಸ್ತಿದ್ದರು. ಓರ್ವ ಡೈರೆಕ್ಟರ್ ಅಕೌಂಟ್ ನಲ್ಲಿ 1 ಕೋಟಿ ಹಣ, ಮತ್ತೋರ್ವನ ಅಕೌಂಟ್ ನಲ್ಲಿ 2 ಕೋಟಿ 20 ಲಕ್ಷ ಹಣ ಜಮೆಯಾಗಿತ್ತು. ಕೂಡಲೇ ಅಲರ್ಟ್ ಆದ ಸಿಸಿಬಿ ಪೊಲೀಸರು ಅಕೌಂಟ್ ಜಪ್ತಿ ಮಾಡಿದ್ದಾರೆ.ಈ ಕಂಪನಿಯಿಂದ ವಂಚನೆಗೊಳಾಗದವರು ದೂರು ನೀಡಲು ಕಮಿಷನರ್ ಮನವಿ ಮಾಡಿದ್ದಾರೆ

ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರಿಗೆ ಬಹುಮಾನ

ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರಿಗೆ 70 ಸಾವಿರ ನಗದು ಬಹುಮಾನ ಘೋಷಣೆ ಮಾಡಲಾಗಿದೆ. 3 ಸಾವಿರ, 5 ಸಾವಿರ ಹಣ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡು ಮೊದಲು ನಂಬಿಕೆ ಗಿಟ್ಟಿಸಿಕೊಳ್ತಿದ್ರು. ಪೇಂಟರ್, ಮ್ಯಾಕಾನಿಕ್ ಮಾಡುವ  ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡ್ತಿದ್ರು. ಪ್ರಕರಣ ಕಿಂಗ್ ಪಿನ್ ವಿದೇಶಿಗರಾಗಿರೋ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಕರಣ ತನಿಖೆ ಮುಂದುವರೆದಿದೆ, ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಕಮಿಷನರ್ ಕಮಲ್ ಪಂಥ್  ತಿಳಿಸಿದ್ದಾರೆ.
Published by:Pavana HS
First published: