Bengaluru: ಬೀದಿ ನಾಯಿ ಮೇಲೆ ಕಾರ್ ಹತ್ತಿಸಿದ್ದ ಕೇಸ್; ಆದಿಕೇಶವಲು ಮೊಮ್ಮಗನ ಬಂಧನ, ಬಿಡುಗಡೆ

ಜನವರಿ 26ರಂದು ಸಂಜೆ 6.15ಕ್ಕೆ ಜಯನಗರ 1ನೇ ಬ್ಲಾಕ್ 10ನೇ ಬಿ ಮುಖ್ಯರಸ್ತೆ ಮನೆಯೊಂದರ ಮುಂಭಾಗದಲ್ಲಿ ಬೀದಿ ನಾಯಿಯೊಂದು ಮಲಗಿತ್ತು. ಅಲ್ಲಿಗೆ ಬಂದ ಬಿಳಿ ಬಣ್ಣದ ಆಡಿ ಕಾರ್ ವೇಗವಾಗಿ ಬಂದು ನಾಯಿ ಮೇಲೆ ಹತ್ತಿಸಲು ಪ್ರಯತ್ನಿಸಲಾಗಿತ್ತು. ಈ ವೇಳೆ ಕಾರ್ ತಗುಲಿದ್ದರಿಂದ ನಾಯಿ ಗಾಯಗೊಂಡಿತ್ತು.

ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ

ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ

  • Share this:
ಬೀದಿ ನಾಯಿ (Street Dog) ಮೇಲೆ ಕಾರ್ (Car) ಹತ್ತಿಸಲು ಯತ್ನಿಸಿದ್ದ ಉದ್ಯಮಿ ದಿ.ಆದಿಕೇಶವಲು (Adikeshavalu) ಮೊಮ್ಮಗನ ಆದಿಯ ಬಂಧನ ಮತ್ತು ಬಿಡುಗಡೆಯಾಗಿದೆ. ಬಂಧನವಾದ ಕೆಲವೇ ಗಂಟೆಗಳಲ್ಲಿ ಠಾಣಾ ಬೇಲ್ (Station Bail) ಮೇಲೆ ಆರೋಪಿ ಆದಿ(Adi)ಯನ್ನು ಬಿಡುಗಡೆ ಮಾಡಲಾಗಿದೆ. ಬೀದಿ ಮಲಗಿದ್ದ ನಾಯಿ ಮೇಲೆ ಕಾರ್ ಹತ್ತಿಸಲು ಪ್ರಯತ್ನಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral) ಆಗಿತ್ತು. ಸಾರ್ವಜನಿಕ ವಲಯದಲ್ಲಿ ಆದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯರ ದೂರು ನೀಡಿದ ಹಿನ್ನೆಲೆ ಆರೋಪಿ ಆದಿಯನ್ನು ಪೊಲೀಸರು ಬಂಧಿಸಿದ್ದರು. ಕಾರ್ ಹತ್ತಿಸಲು ಯತ್ನಿಸಿದ್ದ ಎಲ್ಲ ದೃಶ್ಯಗಳು ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಏನಿದು ಪ್ರಕರಣ?

ಜನವರಿ 26ರಂದು ಸಂಜೆ 6.15ಕ್ಕೆ ಜಯನಗರ 1ನೇ ಬ್ಲಾಕ್ 10ನೇ ಬಿ ಮುಖ್ಯರಸ್ತೆ ಮನೆಯೊಂದರ ಮುಂಭಾಗದಲ್ಲಿ ಬೀದಿ ನಾಯಿಯೊಂದು ಮಲಗಿತ್ತು. ಅಲ್ಲಿಗೆ ಬಂದ ಬಿಳಿ ಬಣ್ಣದ ಆಡಿ ಕಾರ್ ವೇಗವಾಗಿ ಬಂದು ನಾಯಿ ಮೇಲೆ ಹತ್ತಿಸಲು ಪ್ರಯತ್ನಿಸಲಾಗಿತ್ತು. ಈ ವೇಳೆ ಕಾರ್ ತಗುಲಿದ್ದರಿಂದ ನಾಯಿ ಗಾಯಗೊಂಡಿತ್ತು. ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ವಿಚಾರಣೆಗೆ ಹಾಜರಾಗದ ಆದಿ!

ಈ ಸಂಬಂಧ ಜಯನಗರದ ನಿವಾಸಿ ಎಂ.ಎಸ್.ಭದ್ರಿ ಪ್ರಸಾದ್ ಎಂಬವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆದಿ ಬಂಧನಕ್ಕೆ ಆತನ ಮನೆಗೆ ತೆರಳಿದ್ದರು. ಆದ್ರೆ ಆದಿ ಮನೆಯಲ್ಲಿರದ ಕಾರಣ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪೊಲೀಸರು ಹಿಂದಿರುಗಿದ್ದರು. ನೋಟಿಸ್ ನೀಡಿದ್ದರೂ ಆದಿ ಪೊಲೀಸರ ಮುಂದೆ ಹಾಜರು ಆಗಿರಲಿಲ್ಲ.

ಇದನ್ನೂ ಓದಿ:  Mohammed Nalapad ಈಗ ಯೂತ್ ಕಾಂಗ್ರೆಸ್ ಅಧ್ಯಕ್ಷ, ನಿಟ್ಟುಸಿರು ಬಿಟ್ಟ ಬೆಂಬಲಿಗರು

ಠಾಣಾ ಬೇಲ್ ಮೇಲೆ ಬಿಡುಗಡೆ

ಕೊನೆಗೆ ಆದಿ ಕಗ್ಗಲಿಪುರದಲ್ಲಿ ಅವಿತುಕೊಂಡಿರುವ ವಿಷಯ ತಿಳಿದ ಸಿದ್ದಾಪುರ ಠಾಣೆಯ ಪೊಲೀಸರು ಸೋಮವಾರ ಆತನನ್ನು ಬಂಧಿಸಿದ್ದರು. ಬಂಧನದ ಬಳಿಕ ಆರೋಪಿ ಹೇಳಿಕೆ ದಾಖಲಿಸಿಕೊಂಡು ಠಾಣಾ ಬೇಲ್ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆರೋಪಿ ಆದಿ ಪೊಲೀಸರ ಮುಂದೆ ಹೇಳಿದ್ದೇನು?

ಕಾರ್ ಚಾಲನೆ ವೇಳೆ ಮೊಬೈಲ್ ನೋಡುತ್ತಿರುವಾಗ ಈ ಅವಘಡ ಸಂಭವಿಸಿದೆ. ಇದು ಉದ್ದೇಶಪೂರ್ವಕವಾದ ಘಟನೆ ಅಲ್ಲ ಎಂದು ವರದಿಯಾಗಿದೆ.

Vijay Mallya ಯುಬಿ ಸಮೂಹದ ಅಧ್ಯಕ್ಷರಾಗಿದ್ದ ರವಿ ನೆಡುಂಗಾಡಿ ಅನಾರೋಗ್ಯದಿಂದ ನಿಧನ

ಈ ಹಿಂದಿನ ವಿಜಯ್ ಮಲ್ಯ (Vijay Mallya) ಮಾಲೀಕತ್ವದ ಯುಬಿ ಸಮೂಹದ ಅಧ್ಯಕ್ಷ ಹಾಗೂ ಸಮೂಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರವಿ ನೆಡುಂಗಾಡಿ (Ravi Nedungadi)  ಶನಿವಾರ (Saturday) ಸಂಜೆ ನಿಧನರಾಗಿದ್ದಾರೆ. ಅವರು ಕೆಲವು ವಾರಗಳಿಂದ ಅನಾರೋಗ್ಯಪೀಡಿತರಾಗಿ ದಕ್ಷಿಣ ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರ ಕುಟುಂಬದ ಸದಸ್ಯರು, ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ರವಿ ನೆಡುಂಗಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಮತ್ತು ಅವರ ಕೈಬೆರಳ ತುದಿಯಲ್ಲೇ ಅಂಕಿ ಸಂಖ್ಯೆಗಳಿರುತ್ತಿದ್ದವು.

ಇದನ್ನೂ ಓದಿ:  "ನನ್ನ ಹೆಂಡ್ತಿಗೆ ಹೆಣ್ಣೇ ಹುಟ್ಟಲಿ" ಎಂದು ಆಂಜನೇಯನಿಗೆ ಪತ್ರ! ಹನುಮನ ಬಾಲದಷ್ಟು ದೊಡ್ಡದು ಭಕ್ತರ ಬೇಡಿಕೆ

ತಮ್ಮ ಮೊನಚಾದ ಒಳನೋಟಗಳಿಗೆ ಹೆಸರಾಗಿದ್ದ ರವಿ ನೆಡುಂಗಾಡಿ, ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‍ಫಿಶರ್ ಏರ್‍ಲೈನ್ಸ್‌ನ ಬೆಳವಣಿಗೆ ಮತ್ತು ಪತನಗಳೆರಡಕ್ಕೂ ಸಾಕ್ಷಿಯಾಗಿದ್ದರು. ಕಳೆದ ದಶಕದಲ್ಲಿ ಏರ್‍ಲೈನ್ಸ್‌ ಸಮೂಹವು ಕ್ಲಿಷ್ಟಕರ ವಾತಾವರಣದಲ್ಲಿ ಹಾದು ಹೋಗುವಾಗ ವಿಜಯ್ ಮಲ್ಯರ ಸ್ಫೂರ್ತಿಯಂತೆ ಅವರ ಬೆನ್ನ ಹಿಂದೆ ಬಂಡೆಯಂತೆ ನಿಂತಿದ್ದರು.

ಟಿ.ವಿ. ಮೋಹನ್ ದಾಸ್ ಪೈ ಸಂತಾಪ

ರವಿ ನೆಡುಂಗಾಡಿ ನಿಧನದ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಣಿಪಾಲ್ ಶಿಕ್ಷಣ ಸೇವೆಗಳ ಅಧ್ಯಕ್ಷ ಟಿ.ವಿ. ಮೋಹನ್ ದಾಸ್ ಪೈ, “ರವಿ ಅವರು ತುಂಬಾ ಬೆಚ್ಚಗಿನ, ದಯಾಪರ ವ್ಯಕ್ತಿತ್ವದ ಅದ್ಭುತ ವೃತ್ತಿಪರರಾಗಿದ್ದರು. ಅವರು ಸದಾ ಉಲ್ಲಾಸದ, ನೆರವು ನೀಡುವ ಆತ್ಮೀಯ ಗೆಳೆಯರಾಗಿದ್ದರು. ನಾವು ಅವರನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಬದುಕಿನಲ್ಲಿ ಶೂನ್ಯ ಸೃಷ್ಟಿಸಿ ಹೊರಟು ಹೋಗಿದ್ದಾರೆ” ಎಂದು ಕಂಬನಿಗೆರೆದಿದ್ದಾರೆ.
Published by:Mahmadrafik K
First published: