Bengaluru: ‘ಹಿಂದೂಗಳೇ ಮುಸ್ಲಿಂ ಹೋಟೆಲ್​ಗಳಿಗೆ ಹೋಗ್ಬೇಡಿ‘, ‘ಅವ್ರ ಅಂಗಡಿಯಲ್ಲಿ ಮಾಂಸ ಖರೀದಿಸಬೇಡಿ’; ಕಾಳಿ ಸ್ವಾಮೀಜಿ ಕರೆ

ಮುಸ್ಲಿಂ ಅಂಗಡಿಯಿಂದ ಹಿಂದೂಗಳು ವಸ್ತು ಖರೀದಿಸಬಾರದು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡುತ್ತಿವೆ. ಹಲಾಲ್ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಮುಂದಾಗುತ್ತಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.23): ಜಿಲ್ಲೆಗಳಲ್ಲಿ ನಡೆಯೋ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳ (Muslim shops) ವಸ್ತುಗಳ ಖರೀದಿ ನಿಷೇಧಿಸಿದ ವಿಷಯ ಚರ್ಚೆಯಲ್ಲಿರುವಾಗಲೇ  ರಾಜಧಾನಿ ಬೆಂಗಳೂರಿಗೆ (Bengaluru) ಇದು ವ್ಯಾಪಿಸುತ್ತಿದೆ. ಮುಸ್ಲಿಂ ಅಂಗಡಿಯಿಂದ ಹಿಂದೂಗಳು ವಸ್ತು ಖರೀದಿಸಬಾರದು ಎಂದು ಹಿಂದೂಪರ ಸಂಘಟನೆಗಳು (Hindu Organizations) ಕರೆ ನೀಡುತ್ತಿವೆ. ಹಲಾಲ್ (Halal) ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಮುಂದಾಗುತ್ತಿವೆ. ಕಾಲೇಜಿನಲ್ಲಿ ಹಿಜಾಬ್ ವಿವಾದ ಯಾವಾಗ ಶುರುವಾಯಿತೋ ಅಂದಿನಿಂದ  ಒಂದಲ್ಲ ಒಂದು ರೀತಿ ಎರಡೂ ಸಮುದಾಯಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇದೆ. 

ಬೆಂಗಳೂರಲ್ಲೂ ಕೇಳಿ ಬರ್ತಿದೆ ನಿಷೇಧದ ಕೂಗು

ಮುಸ್ಲಿಂ ಅಂಗಡಿಗಳ ವಸ್ತುಗಳ ಖರೀದಿ ನಿಷೇಧ ವಿಚಾರ ಇದೀಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಹಲಾಲ್ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಅಂಗಡಿಯಲ್ಲಿ ಖರೀದಿ ನಿಷೇಧವಾಗಿದೆ. ಜಾತ್ರೆ, ಮಹೋತ್ಸವ ಇತರೆ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧ ಮಾಡಲಾಗಿದೆ. ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಖರೀದಿ ಮಾಡಬಾರದು ಎಂದು ಹಿಂದು ಪರ ಸಂಘಟನೆಗಳು ಕರೆ ನೀಡಿವೆ.

ಮುಸ್ಲಿಂ ಅಂಗಡಿಗಳಿಂದ ತರಬೇಡಿ ಮಾಂಸ

ಮುಂದಿನ ತಿಂಗಳು ಯುಗಾದಿ ಹಬ್ಬ ಇದೆ. ಹಬ್ಬ ಮುಗಿದ ಮರು ದಿನ ಬಹುತೇಕ ಎಲ್ಲರ ಮನೆಯಲ್ಲಿ ನಾನ್ ವೆಜ್ ಊಟ ಇರುತ್ತೆ. ಇನ್ನೂ ಬಹುತೇಕ ಹಿಂದೂಗಳು ನಾನ್ ವೆಜ್ ಕೊಳ್ಳೋದಕ್ಕೆ ಮುಸ್ಲಿಂ ಅಂಗಡಿಗಳಿಗೆ ಹೋಗ್ತಾರೆ. ಈ ಬಾರಿ ಮುಸ್ಲಿಂ ಅಂಗಡಿಗಳಿಗೆ ಮಾಂಸ, ಕೋಳಿ ಖರೀದಿ ಮಾಡಬಾರದು ಎಂದು ಹಿಂದೂ ಕಾಳಿ ಸ್ವಾಮೀಜಿ ಹಿಂದೂಗಳಿಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ; ಸರ್ಕಾರ ಒಳಗೊಳಗೆ ಖುಷಿ ಪಡ್ತಿದೆ: UT Khader ಆರೋಪ

ಹಲಾಲ್ ವಸ್ತುಗಳನ್ನು ಖರೀದಿಸಬಾರದು

ಬೆಂಗಳೂರಿನ ಬಹುತೇಕ ಮಾಲ್, ಅಂಗಡಿಗಳಲ್ಲಿ ಮುಸ್ಲಿಂ ಸಿಂಬಲ್ ಇರೋ ಹಲಾಲ್ ವಸ್ತುಗಳನ್ನು ಖರೀದಿಸಬಾರದು. ಮುಖ್ಯವಾಗಿ ಮಾಂಸ, ಕೋಳಿ ಅಂಗಡಿಗಳಲ್ಲಿ ಖರೀದಿ ಮಾಡಬಾರದು‌. ಮುಸ್ಲಿಂ ವ್ಯಾಪಾರಿಗಳು ಕೋಳಿ ಅಥವಾ ಕುರಿ ಬಲಿ ಕೊಡುವಾಗ ಹಲಾಲ್ ಸೂತ್ರವನ್ನು ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಕೋಳಿ ಕೊಳ್ಳದಿರಲು ಹಿಂದುಗಳಿಗೆ ಕರೆ ನೀಡಿದೆ. ಇನ್ನೂ ಮುಸ್ಲಿಂ ಹೊಟೇಲ್ ಗಳ ಮುಂದೆ ಹಲಾಲ್ ಅಂತ ಬೋರ್ಡ್ ಹಾಕಿರುತ್ತಾರೆ. ಅಂತಹ ಹೋಟೆಲ್​ಗಳಿಗೆ ಹಿಂದುಗಳು ಹೋಗಬಾರದು ಅಂತ ಅಗ್ರಹಿಸಿದ್ದಾರೆ.

ಮುಸ್ಲಿಂರ ಹೋಟೆಲ್​ಗಳಿಗೂ ಹೋಗ್ಬೇಡಿ

ಮುಸ್ಲಿಮರು ಹಲಾಲ್ ಅಂತ ಹೋಟೆಲ್ ಮುಂದೆ ಬೋರ್ಡ್ ಇದ್ರೆ ಮಾತ್ರ ಹೋಟೆಲ್ ಗೆ ಹೋಗ್ತಾರೆ, ಇಲ್ಲವಾದರೆ ಹೋಗಲ್ಲ. ಇನ್ನೂ ಬಹುತೇಕ ಪ್ಯಾಕೇಜ್ ಪದಾರ್ಥಗಳ ಮೇಲೆ ಹಲಾಲ್ ಚಿತ್ರ ಇರುತ್ತೆ. ಚಾಕಲೇಟ್, ಗೋಧಿ, ಅಕ್ಕಿ ಮೂಟೆ,‌ ಅಡುಗೆ ಎಣ್ಣೆ, ಮ್ಯಾಗಿ ಸೇರಿದಂತೆ ಹಲವು ಪ್ಯಾಕೇಜ್ ವಸ್ತುಗಳ ಮೇಲೆ ಹಲಾಲ್ ಮುದ್ರೆ ಇರುತ್ತೋ ಅಂತಹ ವಸ್ತುಗಳ ಖರೀದಿಗೂ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳು ಮುಂದಾಗಿವೆ.

ಇದನ್ನೂ ಓದಿ: Economic Jihad: ಹೊಟೇಲ್​ಗೆ ಹಿಂದೂ ಹೆಸರಿಟ್ಟ ಮುಸ್ಲಿಂ ವ್ಯಕ್ತಿ; ಆರ್ಥಿಕ ಜಿಹಾದ್​ ಎಂದು ಅಂಗಡಿ ಧ್ವಂಸ

‘ವ್ಯಾಪಾರ ನಿಷೇಧ ಸರಿಯಲ್ಲ’

ಈ ಬಗ್ಗೆ  ಹಿಂದೂ, ಮುಸ್ಲಿಂ ವ್ಯಾಪಾರಿಗಳನ್ನ ಕೇಳಿದ್ರೆ ಅವ್ರು ಹೇಳೋದೆ ಬೇರೆ  ವ್ಯಾಪಾರ ಮಾಡೋದನ್ನು ನಿಷೇಧಿಸೋದು ಸರಿಯಲ್ಲ. ನಾವು ಬ್ರಾಹ್ಮಣರ ಹೋಟೆಲ್ ಟಿಫನ್ ಮಾಡ್ತೇವೆ. ಅವರು ನಮ್ಮ ಶಾಪ್ ಗಳಲ್ಲಿ ಕೆಲಸ ಮಾಡಿಸಿಕೊಳ್ತಾರೆ ಎಂದು ಮುಸ್ಲಿಂ ವ್ಯಾಪಾರಿಗಳ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಇದು ಇಂಡಿಯಾ ಪಾಕಿಸ್ತಾನ್ ಅಲ್ಲ. ಮುಸ್ಲಿಂ ಹಿಂದೂ ಇಬ್ಬರು ಜೊತೆ ಜೊತೆ ವ್ಯಾಪಾರ ಮಾಡುತ್ತಿದ್ದೇವೆ. ಯಾರೊ ಒಂದಿಬ್ಬರು ಮಾಡಿದ್ರೆ ಎಲ್ಲರೂ ಹಾಗೆ ಅಂತಲ್ಲ. ಕೆಲ ಮುಸ್ಲಿಂ ದಬ್ಬಾಳಿಕೆ ಮಾಡ್ತಾರೆ ಹಾಗಂತ ವ್ಯಾಪಾರ ಮಾಡಬೇಡಿ ಎಂದೇಳುವುದು ಸರಿಯಲ್ಲ ಎಂದು ಹಿಂದೂ ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
Published by:Pavana HS
First published: