ಬೆಂಗಳೂರು ನಗರದ ಬ್ಯಾಟರಾಯನಪುರ (Byatarayanapur) ಪೊಲೀಸ್ ಠಾಣೆ(Police Station)ಯಲ್ಲಿ ಯುವಕನ ಗಡ್ಡ ಕತ್ತರಿಸಿ, ಬ್ಯಾಟ್ ನಿಂದ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, PSI ಹರೀಶ್ ಕುಮಾರ್ ನ ಒಂದೊಂದೇ ಕರ್ಮಕಾಂಡಗಳು ಮುನ್ನಲೆಗೆ ಬರುತ್ತಿವೆ, ಪೊಲೀಸ್ ಠಾಣೆಯಲ್ಲಿ ಕೆಳ ಸಿಬ್ಬಂದಿ ವರ್ಗದ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿರುವ ಬಗ್ಗೆ ವರದಿಗಳು ಪ್ರಕಟವಾಗುತ್ತಿವೆ, ಯುವಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಹರೀಶ್ ಕುಮಾರ್ ಅಮಾನತು(Suspend)ಗೊಳಿಸಲಾಗಿದೆ, ಇದೀಗ ತನ್ನ ಕೆಳಗಿರುವ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ವಿಷಯವನ್ನು ಠಾಣೆಯ ಹೆಡ್ ಕಾನ್ಸಟೇಬಲ್ (Head Constable) ಮಂಜುನಾಥ್ ಎಂಬವರು ಆಡಿಯೀ ಮೂಲಕ ಹಂಚಿಕೊಂಡಿದ್ದಾರೆ.
ಕೆಳ ಹಂತದ ಸಿಬ್ಬಂದಿಗಳಿಂದ ಗರ್ಭಪಾತದ ಕಿಟ್ ಹಾಗೂ ಪ್ರೆಗ್ನೆಸಿ ಕಿಟ್ ತರಿಸಿಕೊಳ್ಳುತ್ತಿದ್ದರು ಎಂದು ಹೆಡ್ ಕಾನ್ಸಟೇಬಲ್ ಮಂಜುನಾಥ್ ಆರೋಪಿಸುತ್ತಾರೆ, ಕೆಲ ತಿಂಗಳ ಹಿಂದೆ ಕರ್ತವ್ಯದ ವೇಳೆ ಮದ್ಯ ಸೇವನೆ ಆರೋಪದಡಿ ಮಂಜುನಾಥ್ ಅವರನ್ನು PSI ಹರೀಶ್ ಕುಮಾರ್ ಅಮಾನತುಗೊಳಿಸಿದ್ದರು.
ಅಮಾನತುಗೊಂಡಿರುವ ಮಂಜುನಾಥ್ಮ ಹೊಯ್ಸಳ್ ಬೀಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಮಾನತುಗೊಂಡ ಬಳಿಕ ಖಿನ್ನತೆಗೆ ಒಳಗಾಗಿರುವ ಮಂಜುನಾಥ್ ಆಡಿಯೋ ಮೂಲಕ PSI ಹರೀಶ್ ಕುಮಾರ್ ದೌರ್ಜನ್ಯವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಈ ಆಡಿಯೋ ವೈರಲ್ ಆಗುತ್ತಿದೆ.
ಕೆಳ ಹಂತದ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಆದ್ರೆ ಹರೀಶ್ ಕುಮಾರ್ ತುಂಬಾನೇ ಕೀಳುಮಟ್ಟಕ್ಕೆ ಬಳಸಿಕೊಳ್ಳುವುದು ಅಸಹ್ಯಕರವಾಗಿದೆ. ನೀನು ಸಹ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡಿದವನು. ಕಾನ್ಸ್ ಟೇಬಲ್ ಗಳ ಸಮಸ್ಯೆ ಏನು ಎಂಬುವುದು ನಿನಗೂ ತಿಳಿದಿರುತ್ತೆ. ಆದ್ರೆ ಈ ರೀತಿ ನಮಗೆ ಅನ್ಯಾಯ ಮಾಡಬಾರದಿತ್ತು.
ಹಿರಿಯ ಅಧಿಕಾರಿಗಳ ಬಗ್ಗೆ ನಿಮ್ಮ ಕುರಿತು ಹೇಳಿದ್ದಕ್ಕೆ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನಮ್ಮನ್ನು ಅಮಾನತುಗೊಳಿಸಲಾಗಿದೆ. ನಮ್ಮಂಥಹ ಬಡವರ ಹೊಟ್ಟೆಯ ಮೇಲೆ ಹೊಡೆದ್ರೆ, ನಿನಗೆ ದೇವರು ಒಳ್ಳೆಯದು ಮಾಡಲ್ಲ. ಕಿರುಕುಳ ನೀಡಿದ ಅಮಾನತು ಮಾಡಿದ್ದೀಯಾ ಅನ್ನೋ ಹೇಳಿಕೆಯ ಆಡಿಯೋ ಹೊರ ಬಂದಿದೆ.
ಹಿರಿಯ ಅಧಿಕಾರಿಗಳ ಸ್ಪಷ್ಟನೆ
ಹರೀಶ್ ಕುಮಾರ್ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ನಮ್ಮ ಬಳಿಯಲ್ಲಿಯೇ ಹೇಳಿಕೊಳ್ಳಬಹುದಿತ್ತು, ಆದ್ರೆ ಈ ಆಡಿಯೋ ವೈರಲ್ ಮಾಡಿರೋದು ಯಾಕೆ ಎಂಬುವುದು ಗೊತ್ತಿಲ್ಲ. ದೂರು ನೀಡಿದ್ರೆ ಕಾನೂನಿನ ಪ್ರಕಾರ ತೆಗೆದುಕೊಳ್ಳಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
23 ವರ್ಷದ ಯುವಕನನ್ನು ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನೆರೆಹೊರೆಯವರೊಂದಿಗೆ ಜಗಳ ಮಾಡಿದ ಆರೋಪದ ಮೇಲೆ ಠಾಣೆಗೆ ಕರೆದೊಯ್ದಿದ್ದರು. ನಂತರ ಯುವಕನ ಬಿಡುಗಡೆಗೆ ಪೊಲೀಸರು ಹಣ ಕೇಳಿದರು ಎಂದು ಅವರ ತಂದೆ ಆರೋಪಿಸಿದ್ದಾರೆ. ಆದರೆ ಬಿಡುಗಡೆ ಮಾಡುವವರೆಗೂ ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸಿರುವುದು ನಮಗೆ ತಿಳಿದಿರಲಿಲ್ಲ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.
ಹರೀಶ್ ಮತ್ತು ಇತರ ಇಬ್ಬರು ಪೊಲೀಸ್ ಪೇದೆಗಳು, ಕ್ರೈಂ ಟೀಮ್ನ ಒಬ್ಬರು ಹೊಟ್ಟೆಗೆ ಬ್ಯಾಟ್ನಿಂದ ಹೊಡೆದರು. ಬಲವಂತವಾಗಿ ಗಡ್ಡವನ್ನು ಕತ್ತರಿಸಿ ಮೂತ್ರ ಕುಡಿಸಿದರು ಎಂದು ಯುವಕ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನಗೆ ಕನಿಷ್ಠ 30 ಬಾರಿ ಕ್ರಿಕೆಟ್ ಬ್ಯಾಟ್ನಿಂದ ಹೊಡೆದರು.
ಕುಡಿಯಲು ನೀರು ಕೇಳಿದಾಗ, ಅವರು ನನಗೆ ಮೂತ್ರ ಕುಡಿಯುವಂತೆ ಮಾಡಿದರು. ನನ್ನ ಗಡ್ಡವನ್ನೂ ಕತ್ತರಿಸಿದರು. ಇದು ನನ್ನ ನಂಬಿಕೆಯ ಭಾಗವಾಗಿರುವುದರಿಂದ ಹಾಗೆ ಮಾಡಬೇಡಿ ಎಂದು ನಾನು ಅವರನ್ನು ಬೇಡಿಕೊಂಡೆ. ಆದರೆ ಇದು ಪೊಲೀಸ್ ಠಾಣೆ ಧಾರ್ಮಿಕ ಕೇಂದ್ರವಲ್ಲ ಎಂದು ಅವರು ಹೇಳಿದರು. ನಂತರ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವಂತೆ ಮಾಡಿದರು ಎಂದು ಯುವಕ ಆರೋಪಿಸಿದ್ದಾರೆ.