Byadarahalli suicide case: ಒಂದೇ ಕುಟುಂಬದಲ್ಲಿ ಐವರ ಸಾವು ಪ್ರಕರಣ; 9 ತಿಂಗಳ ಮಗುವಿನ ಕತ್ತು ಹಿಸುಕಿದ್ದು ತಾಯಿಯೇ..!

ಇಷ್ಟು ದಿನ 9 ತಿಂಗಳ ಮಗು ಹಾಲಿಲ್ಲದೇ ಹಸಿವಿನಿಂದ ಸಾವನ್ನಪ್ಪಿತ್ತು ಎಂದು ತಿಳಿದಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ವರದಿ ಶಾಕ್ ಕೊಟ್ಟಿದೆ. ಅದು ಸಹಜ ಸಾವಲ್ಲ, ಕೊಲೆ ಎಂಬುದು ಈಗ ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ.

ಸಿಂಧೂರಾಣಿ ಗರ್ಭಿಣಿಯಾಗಿದ್ದಾಗ ಮಾಡಿದ್ದ ಸೀಮಂತದ ಫೋಟೋ

ಸಿಂಧೂರಾಣಿ ಗರ್ಭಿಣಿಯಾಗಿದ್ದಾಗ ಮಾಡಿದ್ದ ಸೀಮಂತದ ಫೋಟೋ

  • Share this:
    ಬೆಂಗಳೂರು(ಸೆ.29): ಸಿಲಿಕಾನ್ ಸಿಟಿ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ(Byadarahalli suicide case) ಮಾಡಿಕೊಂಡು ಸಾವನ್ನಪ್ಪಿದ ಪ್ರಕರಣ ಈಗ ಒಂದು ಹೊಸ ತಿರುವು ಪಡೆದುಕೊಂಡಿದೆ. ಮೃತರ ಮರಣೋತ್ತರ(Post mortem report) ಪರೀಕ್ಷೆಯ ವರದಿ ಸದ್ಯ ಪೊಲೀಸರ(byadarahalli police) ಕೈ ಸೇರಿದ್ದು, ಮಹತ್ತರವಾದ ವಿಷಯ ಬೆಳಕಿಗೆ ಬಂದಿದೆ. ಇಷ್ಟು ದಿನ 9 ತಿಂಗಳ ಮಗು ಹಾಲಿಲ್ಲದೇ ಹಸಿವಿನಿಂದ ಸಾವನ್ನಪ್ಪಿತ್ತು ಎಂದು ತಿಳಿದಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ವರದಿ ಶಾಕ್ ಕೊಟ್ಟಿದೆ. ಅದು ಸಹಜ ಸಾವಲ್ಲ, ಕೊಲೆ ಎಂಬುದು ಈಗ ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ.

    9 ತಿಂಗಳ ಗಂಡು ಮಗು ಸೇರಿ ಶಂಕರ್ ಕುಟುಂಬದ 5 ಮಂದಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿ ಮನೆಯ ಯಜಮಾನ ಶಂಕರ್ ಹಾಗೂ ಇಬ್ಬರು ಅಳಿಯಂದಿರನ್ನು ಕರೆದು ವಿಚಾರಣೆ ನಡೆಸಿದ್ದರು. ಈಗ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಅದರಲ್ಲಿ ಬೆಚ್ಚಿ ಬೀಳಿಸುವ ವಿಷಯ ಬಹಿರಂಗಗೊಂಡಿದೆ.

    ಮಗುವನ್ನು ಕೊಂದಿದ್ದು ಯಾರು?

    ತಾಯಿ ಸಿಂಧೂರಾಣಿಯೇ ತನ್ನ 9 ತಿಂಗಳ ಗಂಡು ಮಗುವನ್ನು ಹಸಿರು ಬಣ್ಣದ ಬಟ್ಟೆಯಿಂದ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂಬ ಆಘಾತಕಾರಿ ವಿಷಯ ತಿಳಿದಿದೆ. ಮಗುವಿನ ಕತ್ತಿನ ಭಾಗದಲ್ಲಿ ಹುಳ ಬಿದ್ದಿತ್ತು. ಜೊತೆಗೆ ಮಗುವಿನ ಮುಖವನ್ನ ಸಹ ಗಟ್ಟಿಯಾಗಿ ಹಿಡಿದ ಹಿನ್ನಲೆ ಮೂಳೆ ಪ್ರೆಸ್ ಆಗಿತ್ತು. ಇದು ಕೊಲೆ ಎಂಬ ಸಂಶಯ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿತ್ತು. ಆದರೆ ಈಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಗುವಿನ ಕೊಲೆಯಾಗಿರುವುದು ಖಚಿತವಾಗಿದೆ.

    ಇದನ್ನೂ ಓದಿ:Crime News: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?

    ಮತ್ತೊಂದು ಎಫ್​ಐಆರ್​

    ಮಗುವನ್ನು ಹತ್ಯೆ ಮಾಡಿದ ಬಳಿಕ ಸಿಂಧೂರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ. ಮಗುವಿನ ಕೊಲೆಯ ರಹಸ್ಯ ಕೊನೆಗೂ ಬೆಳಕಿಗೆ ಬಂದಿದ್ದು, ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ಮಗುವಿನ ಕೊಲೆ ರಿಪೋರ್ಟ್ ಬಂದ ಹಿನ್ನಲೆ ಮತ್ತೊಂದು ಎಫ್ ಐ ಆರ್ ದಾಖಲು ಮಾಡಿಕೊಳ್ಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

    ಕೊಲೆ ಎಂದು ತಿಳಿದದ್ದು ಹೇಗೆ?

    ‘‘ಮಗುವಿನ ಕತ್ತಿನ ಭಾಗದಲ್ಲಿ ಹುಳ ಬಿದ್ದಿತ್ತು. ಜೊತೆಗೆ ಮಗುವಿನ ಮುಖವನ್ನ ಸಹ ಗಟ್ಟಿಯಾಗಿ ಹಿಡಿದ ಹಿನ್ನಲೆ ಮೂಳೆ ಪ್ರೆಸ್ ಆಗಿತ್ತು.  ದು ಕೊಲೆ ಎಂಬ ಸಂಶಯ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿತ್ತು.  ಈಗ ರಿಪೋರ್ಟ್ ಬಂದಿದ್ದು ಮಗು ಕೊಲೆಯಾಗಿದೆ ಎಂದು ಸಾಬೀತಾಗಿದೆ‘‘ ಎಂದು ಪೊಲೀಸರು ಹೇಳಿದ್ದಾರೆ.

    ಲ್ಯಾಪ್​ಟಾಪ್​ & ಮೊಬೈಲ್ ಪೊಲೀಸರ ವಶ

    ಇನ್ನು ಶಂಕರ್ ಮೇಲೆ ಡೆತ್ ನೋಟ್​​ನಲ್ಲಿ ಹಲವು ಆರೋಪಗಳು ಉಲ್ಲೇಖವಾಗಿರುವ ಹಿನ್ನೆಲೆ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪದ ಬೆನ್ನಲ್ಲೇ ಶಂಕರ್​​ಗೆ ಸಂಬಂಧಿಸಿದ ಲ್ಯಾಪ್ ಟಾಪ್‌ ಪೊಲೀಸರ ವಶವಾಗಿದೆ. ಜೊತೆಗೆ ಅಳಿಯಂದಿರ ಮೊಬೈಲ್​​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲ್ಯಾಪ್ ಟಾಪ್ ಮತ್ತು ಮೊಬೈಲ್ ರಿಟ್ರಿವ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಐಡಿ ಸೈಬರ್ ಸೆಲ್ ಎಕ್ಸ್ ಪರ್ಟ್ ಮೂಲಕ ರಿಟ್ರಿವ್ ಗೆ ತಯಾರಿ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಲ್ಯಾಪ್ ಟಾಪ್ ಮತ್ತು ಮೊಬೈಲ್​​ನಲ್ಲಿ ಇರುವ ಸಾಕ್ಷಿಗಳನ್ನು ಕಲೆ ಹಾಕಲಿದ್ದಾರೆ. ಬ್ಯಾಡರಹಳ್ಳಿ ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರೆದಿದೆ.
    Published by:Latha CG
    First published: