ಹೆಂಡತಿಯ ಹಠಕ್ಕೆ ಇಡೀ ಕುಟುಂಬವೇ ನಾಶವಾಯಿತು; ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಶಂಕರ್​

ಇಡೀ ಜೀವನ ಹೆಂಡತಿ ಮಕ್ಕಳು ಚೆನ್ನಾಗಿ ಇರಲಿ ಎಂದು ಕಷ್ಟ ಪಟ್ಟೆ. ಆದರೆ, ಈ ಸೌಧವನ್ನೇ ಹೆಂಡತಿ ಭಾರತಿ ಧ್ವಂಸ ಮಾಡಿದಳು.

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

 • Share this:
  ಬೆಂಗಳೂರು (ಸೆ. 18): ಮನೆ ಒಡತಿಯಯ ಹಠಕ್ಕೆ ಇಡೀ ಕುಟುಂಬವೇ ಹೇಗೆ ನಾಶವಾಯಿತು ಎಂಬುದಕ್ಕೆ ಉದಾಹರಣೆಯಾಗಿ ಬ್ಯಾಡರಹಳ್ಳಿ ಪ್ರಕರಣ ಇದೆ. ಮನೆಯ ಸದಸ್ಯರ ನಡುವಿನ ಹಠ, ಕೋಪಕ್ಕೆ ಎಳೆ ಕಂದ ಸೇರಿದಂತೆ ಕುಟುಂಬಸ್ಥರು ಇಂದು ಇಹಲೋಕ (byadarahalli family suicide case) ತ್ಯಜಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಆತ್ಮಹತ್ಯೆಗೆ ಶರಣಾದ ಕುಟುಂಬಸ್ಥರ ಅಂತ್ಯ ಸಂಸ್ಕಾರವನ್ನು ಕುಟುಂಬದ ಮಾಲೀಕ ಶಂಕರ್​ ಸುಮನಹಳ್ಳಿ ಚಿತಾಗಾರದಲ್ಲಿ ನಡೆಸಿದರು. ಈ ವೇಳೆ ಮನೆ ಮಾಲೀಕ ಶಂಕರ್​ ಹೆಂಡತಿಯ ಹಠದಿಂದ ಹೇಗೆ ಕುಟುಂಬವೇ ಹಾಳಾಯಿತು ಎಂದು ಕಣ್ಣೀರಿಟ್ಟ ಘಟನೆ ನಡೆಯಿತು.

  ಅದೃಷ್ಟದಿಂದ ಪಾರಾದ ಮೊಮ್ಮಗು ಹೊರತು ಪಡಿಸಿ ಇಡೀ ಕುಟುಂಬಸ್ಥರನ್ನೇ ಕಳೆದುಕೊಂಡ ಶಂಕರ್​ ರೋದನೆ ಮುಗಿಲು ಮುಟ್ಟಿತು. ಇಡೀ ಜೀವನ ಹೆಂಡತಿ ಮಕ್ಕಳು ಚೆನ್ನಾಗಿ ಇರಲಿ ಎಂದು ಕಷ್ಟ ಪಟ್ಟೆ. ಆದರೆ, ಈ ಸೌಧವನ್ನೇ ಹೆಂಡತಿ ಭಾರತಿ ಧ್ವಂಸ ಮಾಡಿದಳು. ನಿನ್ನ ಮಾನ ಮರ್ಯಾದೆ ಕಳಿತೀನಿ. ಸುಮ್ನೆ ಬಿಡಲ್ಲ ಅಂತಿದ್ದಳು ಸಂಸಾರ ಹಾಳು ಮಾಡಿ ಬಿಟ್ಟಳು. ಹಗಲು ರಾತ್ರಿ ಎನ್ನದೇ ದುಡಿದೆ. ಎಲ್ಲಾ ನಿರ್ನಾಮ ಮಾಡಿಬಿಟ್ಟರು ಎಂದು ಸಂಬಂಧಿಕರ ಬಳಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು.

  ಒಟ್ಟಿಗೆ ನೇಣಿಗೆ ಶರಣಾಗಿಲ್ಲ
  ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಕುಟುಂಬಸ್ಥರೆಲ್ಲಾ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಮೊದಲು ತಾಯಿ ಆ ಬಳಿಕ ಇಬ್ಬರು ಹೆಣ್ಣು ಮಕ್ಕಳು ಒಂದೆರಡು ದಿನದ ಬಳಿಕ ಮಗ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಕಾರಣ ಮೃತ ದೇಹಗಳಲ್ಲಿ ಅತಿ ಹೆಚ್ಚು ಕೊಳೆತಿರೋ ದೇಹ ಪತ್ನಿ ಭಾರತಿಯರದ್ದು. ಮೊದಲು ಮೃತ ಭಾರತಿಯವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಳಿಕ ತಡರಾತ್ರಿ ಇಬ್ಬರು ಹೆಣ್ಣು ಮಕ್ಕಳು ಪತ್ಯೇಕ ಕೋಣೆಗಳಲ್ಲಿ ನೇಣಿಗೆ ಶರಣಾಗಿದ್ದಾರೆ. ಒಂದೆರಡು ದಿನದ ಬಳಿಕ ಮಗ ಮಧು ಸಾಗರ್ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನ ವ್ಯಕ್ತವಾಗಿದೆ. ಇಬ್ಬರು ಹೆಣ್ಣು ಮಕ್ಕಳ ದೇಹ ಸ್ವಲ್ಪ ಕಡಿಮೆ ಕೊಳೆತಿದೆ. ಆದರೆ ಮಗನ ದೇಹ ಕೊಳೆತಿಲ್ಲ. ದೇಹ ಪೂರ್ತಿ ಕಪ್ಪು ವರ್ಣಕ್ಕೆ ತಿರುಗಿದ್ದು, ಕೊಳೆಯಲು ಪ್ರಾರಂಭದ ಸ್ಥಿತಿಯಲ್ಲಿತ್ತು.

  ಇದನ್ನು ಓದಿ: ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಗೆ ಸಿಕ್ತು ಸಾವಿಗೆ ಮುನ್ನ ಮಧುಸಾಗರ್​ ಬರೆದಿದ್ದ ಡೈರಿ

  ಶಂಕರ್​​ನನ್ನು ವಶಕ್ಕೆ ಪಡೆದ ಪೊಲೀಸರು
  ಕುಟುಂಬಸ್ಥರ ಅಂತ್ಯ ಸಂಸ್ಕಾರದ ಬಳಿಕ ಶಂಕರ್ ಹಾಗೂ ಅಳಿಯನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದರು. ಈ ಹಿಂದೆ ತಂದೆ-ಮಗನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಕೌಟುಂಬಿಕ ಕಲಹ ಎಂದು ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿದ್ದರು. ಈಗ ಸದ್ಯ ಈ ಹಳೆ ಡೈರಿಗೆ ಮರು ಜೀವ ಬಂದಿದೆ. ಮಧು ಸಾಗರ್​ ಯಾವುದೇ ಘಟನೆಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದ. ಈ ಹಿನ್ನೆಲೆ ಈಗ ಪೊಲೀಸರಿಗೆ ಈ ಡೈರಿ ಸುಳಿವು ಸಿಕ್ಕಿದೆ. ಸಾಯುವ ಮುನ್ನವೂ ಮಧು ಸಾಗರ್​ ಈ ಡೈರಿಯಲ್ಲಿ ತಮ್ಮ ಈ ನಿರ್ಧಾರ ಕುರಿತು ಪ್ರಸ್ತಾಪಿಸಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಸಿದ್ದಾರೆ.

  ಕಳೆದ ಒಂದು ಗಂಟೆಯಿಂದ ಶಂಕರ್ ವಿಚಾರಣೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳೋ ಮುಂಚೆ ಅವರ ಪತ್ನಿ, ಮಕ್ಕಳ ಜೊತೆ ಏನೆಲ್ಲಾ ಮಾತುಕತೆ-ಜಗಳ ಆಗಿತ್ತು ಎನ್ನುವ ಮುನ್ನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
  Published by:Seema R
  First published: